ಈ ನಾಲ್ಕು ಪದಾರ್ಥಗಳಿಂದಲೇ ರಾಜಸ್ಥಾನದ ಪ್ರಸಿದ್ಧ ಚುರ್ಮಾ ಲಡ್ಡು ತಯಾರಿಸಿ, ಇಲ್ಲಿದೆ ಹೊಸ ರೆಸಿಪಿ, ಇಂದೇ ಟ್ರೈ ಮಾಡಿ!

Published : Oct 21, 2026, 02:25 PM IST
Rajasthani churma laddu recipe

ಸಾರಾಂಶ

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯ ಕಲಬೆರಕೆ ಸಿಹಿ ತಿಂಡಿಗಳ ಬದಲು, ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಪ್ರಸಿದ್ಧ ರಾಜಸ್ಥಾನಿ ಚುರ್ಮಾ ಲಡ್ಡು ಮಾಡುವ ವಿಧಾನ ಇಲ್ಲಿ ವಿವರಿಸಲಾಗಿದೆ. ಗೋಧಿ ಹಿಟ್ಟು, ರವೆ, ಕಡಲೆ ಹಿಟ್ಟು ಮತ್ತು ತುಪ್ಪ ಬಳಸಿ ಮೃದುವಾದ ಲಡ್ಡು ಆರೋಗ್ಯಕರ ಹಾಗೂ ಅತ್ಯಂತ ರುಚಿಕರ

Rajasthani churma laddu recipe: ನವರಾತ್ರಿ ಹಬ್ಬಕ್ಕೆ ಹೇಳಿ ಮಾಡಿಸಿದ ಸಿಹಿ ತಿಂಡಿ ಇದು. ರಾಜಸ್ಥಾನದಲ್ಲಿ ಈ ಸಿಹಿ ತಿಂಡಿ ತುಂಬಾ ಪ್ರಸಿದ್ಧವಾಗಿದೆ, ಮೈಸೂರಿನ ಮೈಸೂರು ಪಾಕ ಎಷ್ಟು ಪ್ರಸಿದ್ಧವೋ ರಾಜಸ್ಥಾನದಲ್ಲೂ ಈ ಚುರ್ಮಾ ಲಡ್ಡು ಅಷ್ಟೇ ಪ್ರಸಿದ್ಧಿ. ಬಾಯಲಿಟ್ಟರೆ ಕರಗುವಂಥ ಮೃದು, ಅದರ ರುಚಿಗೆ ಮನಸೋಲದವರೇ ಇಲ್ಲ ಎನ್ನಬಹುದು.

ಈಗ ಹಬ್ಬಗಳ ಸೀಸನ್. ಕೆಲವರಿಗೆ ಸಿಹಿ ತಿಂಡಿ ಮಾಡುವಷ್ಟು ಸಮಯವಿಲ್ಲ. ಇನ್ನು ಕೆಲವರಿಗೆ ಹೇಗೆ ಮಾಡಬೇಕು ಎಂಬ ಪಾಕ ವಿಧಾನವೇ ಗೊತ್ತಿರಲ್ಲ. ಇದರಿಂದಾಗಿ ಹಬ್ಬ ಬಂದಾಗ ಪಕ್ಕದ ಸ್ವೀಟ್‌ ಶಾಪ್‌ನಲ್ಲಿ ಹೋಳಿಗೆಯಿಂದ ಹಿಡಿದು ಲಡ್ಡುವರೆಗೆ ಎಲ್ಲವನ್ನೂ ಖರೀದಿಸಿ ತರುತ್ತಾರೆ. ಆದರೆ ಇತ್ತೀಚಿನ ಆಹಾರ ಇಲಾಖೆಯವರ ದಾಳಿಯಲ್ಲಿ ಪತ್ತೆಯಾದ ಕಲಬೆರಕೆ, ಕಳಪೆ ಎಣ್ಣೆ, ಅತಿಯಾದ ಸಕ್ಕರೆ ಇವೆಲ್ಲವೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಅದರ ಬದಲು ಅಡುಗೆ ಮನೆಯಲ್ಲೇ ಇರುವ ಆಹಾರ ಪದಾರ್ಥಗಳಿಂದ ಸುಲಭವಾಗಿ ಸಿದ್ಧಪಡಿಸಬಹುದಾದ ಚುರ್ಮಾ ಲಡ್ಡು ಮಾಡುವುದು ಬೆಸ್ಟ್.

ಚುರ್ಮಾ ಲಡ್ಡು(Churma laddu recipe) ಹೇಗೆ ಮಾಡಬೇಕು ಎಂಬ ಪಾಕವಿಧಾನವನ್ನು ನಾವಿಲ್ಲಿ ಹೇಳಲಿದ್ದೇವೆ. ಈ ಪಾಕವಿಧಾನ ಹೆಚ್ಚಾfಗಿ ರಾಜಸ್ಥಾನದಲ್ಲಿ ತುಂಬಾ ಜನಪ್ರಿಯ. ಬಹುಬೇಗ ತಯಾರಿಸಿ ತಿನ್ನಬಹುದಾದ ಈ ಲಡ್ಡು ಮಾಡುವುದು ನೀವು ಕಲಿಯಿರಿ. ಇಂದೇ ಟ್ರೈ ಮಾಡಿ.

ಚುರ್ಮಾ ಲಡ್ಡು ಮಾಡಲು ಬೇಕಾಗುವ ಪದಾರ್ಥಗಳು

  • ಗೋಧಿ ಹಿಟ್ಟು - 2 ಕಪ್
  • ಉತ್ತಮ ರವೆ - 1 ಬಟ್ಟಲು
  • ಕಡಲೆ ಹಿಟ್ಟು - ಅರ್ಧ ಬಟ್ಟಲು
  • ಸಾದಾ ತುಪ್ಪ - 1 ಕಪ್ (ಅಗತ್ಯವಿದ್ದಷ್ಟು)
  • ಬೆಲ್ಲ - 1 ಕಪ್
  • ಗೋಡಂಬಿ - ಕೆಲವು
  • ಬಾದಾಮಿ - ಕೆಲವು
  • ಪಿಸ್ತಾ - ಕೆಲವು
  • ಗಸಗಸೆ ಬೀಜಗಳು - 2 ಟೀಸ್ಪೂನ್
  • ಏಲಕ್ಕಿ ಪುಡಿ - ಅರ್ಧ ಟೀ ಚಮಚ
  • ಬೆಚ್ಚಗಿನ ನೀರು - ಹಿಟ್ಟನ್ನು ಬೆರೆಸಲು

ಚುರ್ಮಾ ಲಡ್ಡು ಮಾಡುವ ವಿಧಾನ:

  • ಚುರ್ಮಾ ಲಡ್ಡು ಮಾಡಲು, ಮೊದಲು 2 ಕಪ್ ಗೋಧಿ ಹಿಟ್ಟು ತೆಗೆದುಕೊಳ್ಳಿ.
  • ಇದರಲ್ಲಿ 1 ಕಪ್ ರವೆ ಮಿಶ್ರಣ ಮಾಡಿ. ನೀವು ಈ ಗುಣಮಟ್ಟದ ರವೆ ಬಳಸಿ.
  • ಒಂದು ವೇಳೆ ರವೆ ದಪ್ಪವಾಗಿದ್ದರೆ, ಅದನ್ನು ಮಿಕ್ಸರ್‌ನಲ್ಲಿ ಪುಡಿಮಾಡಿ.
  • ಈಗ ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು, ಗೋಧಿ ಹಿಟ್ಟು ಮತ್ತು ರವೆ ತೆಗೆದುಕೊಂಡು ಅದಕ್ಕೆ 3 ಚಮಚ ತುಪ್ಪ ಸೇರಿಸಿ.
  • ಎಲ್ಲಾ ಒಣ ಪದಾರ್ಥಗಳನ್ನು ಕೈಯಿಂದ ಚೆನ್ನಾಗಿ ಕಲಸಿ.
  • ಈಗ ಬೆಚ್ಚಗಿನ ನೀರನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತಾ ಗಟ್ಟಿಯಾದ ಹಿಟ್ಟನ್ನು ಬೆರೆಸಿಕೊಳ್ಳಿ.
  • ಹಿಟ್ಟನ್ನು ಎರಡು ಭಾಗಗಳಾಗಿ ವಿಂಗಡಿಸಿ ಸಣ್ಣ ಉಂಡೆಗಳನ್ನು ಮಾಡಿ. ಈ ಉಂಡೆಗಳನ್ನು ಬಿಸಿ ಎಣ್ಣೆ ಅಥವಾ ತುಪ್ಪದಲ್ಲಿ ಹುರಿಯಿರಿ.
  • ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಸೇರಿಸಿ, ಬಾದಾಮಿ ಮತ್ತು ಗೋಡಂಬಿಯನ್ನು ಹುರಿದು, ತಟ್ಟೆಗೆ ತೆಗೆದುಕೊಳ್ಳಿ.
  • ನಂತರ ಈಗ, ತುಪ್ಪಕ್ಕೆ ಮಾವಾ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಹುರಿಯಿರಿ.
  • ಈಗ ಬಾಣಲೆಗೆ ಅರ್ಧ ಕಪ್ ತುಪ್ಪ ಸೇರಿಸಿ. ಹುರಿದ ಉಂಡೆಗಳನ್ನು ಪುಡಿ ರೂಪದಲ್ಲಿ ಸೇರಿಸಿ. ಪುಡಿಯು ತುಪ್ಪದಲ್ಲಿ ಚೆನ್ನಾಗಿ ಹುರಿದ ನಂತರ, ಸಕ್ಕರೆ ಪುಡಿ ಮತ್ತು ಹುರಿದ ಒಣ ಹಣ್ಣುಗಳ ತುಂಡುಗಳನ್ನು ಸೇರಿಸಿ ಮತ್ತು ಉರಿಯನ್ನು ಆಫ್ ಮಾಡಿ.
  • ತಯಾರಿಸಿದ ಮಿಶ್ರಣವು ತಣ್ಣಗಾದ ನಂತರ, ಅದನ್ನು ದುಂಡಗಿನ ಲಡ್ಡುಗಳಾಗಿ ಮಾಡಿಕೊಂಡು ಸವಿಯಬಹುದು.
  • ಗಾಳಿಯಾಡ, ಸ್ವಚ್ಛವಾದ ಗಾಜಿನ ಡಬ್ಬಿಯಲ್ಲಿ ಹಾಕಿಟ್ಟರೆ ಹಲವು ವಾರಗಳವರೆಗೂ ಚುರ್ಮಾ ಲಡ್ಡು ಸವಿಯಬಹುದು. ಮಕ್ಕಳಿಗೂ ಇಷ್ಟ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Food: ಕಪ್ಪಾಗಲ್ಲ, ಕೆಡಲ್ಲ, ಹುಣಸೆಹಣ್ಣನ್ನು 365 ದಿನಗಳ ಕಾಲ ಫ್ರೆಶ್ ಆಗಿ ಇಡಲು ಇಲ್ಲಿದೆ ಮ್ಯಾಜಿಕ್ ಟ್ರಿಕ್!
Food: ಮೈದಾ ಹಿಟ್ಟು ಯಾವುದರಿಂದ & ಹೇಗೆ ತಯಾರಾಗುತ್ತೆ? ಇಲ್ಲಿದೆ ಅಚ್ಚರಿಯ ಸತ್ಯ!