
ದೇಶಾದ್ಯಂತ ನವರಾತ್ರಿ ಸಂಭ್ರಮ ಜೋರಾಗಿದೆ. ನವರಾತ್ರಿ ಹಬ್ಬದಲ್ಲಿ ಒಂಭತ್ತು ದಿನಗಳ ಕಾಲ ಉಪವಾಸ ಮಾಡಲಾಗುತ್ತದೆ. ಅಲ್ಲದೆ ಈ ಹಬ್ಬ ಮುಗಿಯುವವರೆಗೆ ಮಾಂಸ ಸೇವನೆ ತಿನ್ನುವುದಿಲ್ಲ. ಇದರ ಪರಿಣಾಮವಾಗಿ ರೆಸ್ಟೋರೆಂಟ್ಗಳು, ಚಿಕನ್ ಕಬಾಬ್ ಅಂಗಡಿಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ನವರಾತ್ರಿ ಹಬ್ಬದಲ್ಲಿ ಹಸಿವು ತಾಳದೆ ರೆಸ್ಟೋರೆಂಟ್ಗೆ ಹೋಗುವ ಮ್ಯಾನೇಜರ್ ಒಬ್ಬರು ಲಕ್ನೋದಲ್ಲಿ ತಮಗಾದ ಅನುಭವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಲಕ್ನೋಗೆ ಅಧಿಕೃತವಾಗಿ ಭೇಟಿ ನೀಡಿದ್ದೆ. ಅಲ್ಲಿನ ಅತ್ಯುತ್ತಮ ಫೈವ್ ಸ್ಟಾರ್ ಹೋಟೆಲ್ನ ರೆಸ್ಟೊರೆಂಟ್ನಲ್ಲಿ ರಾತ್ರಿ ಊಟದ ಸಮಯದಲ್ಲಿ ಸುತ್ತಲು ನೋಡಿದಾಗ ಗೆಸ್ಟ್ಗಳು ಕಡಿಮೆ ಇರುವುದು ಕಾಣಿಸಿತು. ತುಂಬಿ ತುಳುಕುತ್ತಿದ್ದ ರೆಸ್ಟೋರೆಂಟ್ನಲ್ಲಿ ಜನರೇ ಕಾಣ್ತಿಲ್ಲವಲ್ಲ ಎಂದು ಕೇಳಿದಾಗ ಇದು ನವರಾತ್ರಿ ಸಮಯವಾದ್ದರಿಂದ ಹೀಗಾಗಿದೆ ಎಂದು ಸಿಬ್ಬಂದಿ ವಿವರಿಸಿದರು.
ಅವಧ್ನಲ್ಲಿ ಜನರು ಹೆಚ್ಚಾಗಿ ಕಬಾಬ್, ಸುವಾಸನೆಯ ಬಿರಿಯಾನಿ ತಿನ್ನಲು ಇಷ್ಟಪಡ್ತಾರೆ. ಆದರೆ ಇದು ನವರಾತ್ರಿ ಸಮಯವಾದ್ದರಿಂದ ಅನೇಕರು ಉಪವಾಸ ಮತ್ತು ಹಬ್ಬಗಳ ಸಮಯದಲ್ಲಿ ಮಾಂಸ ಸೇವನೆ ನಿಷಿದ್ಧವಾಗಿರುವುದರಿಂದ ಕಬಾಬ್ ಅಥವಾ ಯಾವುದೇ ಮಾಂಸದಿಂದ ಮಾಡಿದ ಖಾದ್ಯ ತಿನ್ನುವುದಿಲ್ಲ.
ನಾನು ಹೋಟೆಲ್ಗೆ ಹೋದಾಗ ಮಾಂಸಾಹಾರಿ ಖಾದ್ಯ ಇಲ್ಲದೆ ಹೋಗಿದ್ದರಿಂದ ಬೇಸರದಲ್ಲಿದ್ದ ಮತ್ತೊಬ್ಬ ಹಿರಿಯ ಸರ್ಕಾರಿ ಅಧಿಕಾರಿ ನನ್ನೊಂದಿಗೆ ಇದ್ದರು. ಅವರು ಲಕ್ನೋದ ಗಲೂಟಿ ಮತ್ತು ಶಾಮಿ ಕಬಾಬ್ಗಳ ಬಗ್ಗೆ ವಿವರಿಸಿದರು.
ನುಣ್ಣಗೆ ಕೊಚ್ಚಿದ ಮಟನ್, ಮಸಾಲೆಗಳೊಂದಿಗೆ ಘಮಘಮಿಸುವಂತೆ ಸೌದೆ ಅಥವಾ ಇದ್ದಿಲು ಮೇಲೆ ಬೇಯಿಸಲಾಗುತ್ತೆ. ಗಲೂಟಿ ಇದು ಬಾಯಲ್ಲಿ ಹಲ್ಲುಗಳನ್ನು ಕಳೆದುಕೊಂಡ ನವಾಬನಿಗಾಗಿ ಕಂಡುಹಿಡಿದ ವಿಶೇಷ ರೆಸಿಪಿಯಾಗಿದೆ ಎಂದು ಅವರು ನನಗೆ ತಿಳಿಸಿದರು. ಅಡುಗೆಮನೆಯು ರಾಜಮನೆತನದ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಇದು ಮೊದಲ ಉದಾಹರಣೆಯಾಗಿದೆ ಎಂದರು. ಅವರ ಮಾತು ಕೇಳಿ ನನಗೆ ಅಚ್ಚರಿಯಾಯ್ತು.
ಮುಂದೆ ಅವರು ದಮ್ ಬಿರಿಯಾನಿಯನ್ನು ಸಹ ವಿವರಿಸಿದರು. ಮ್ಯಾರಿನೇಡ್ ಮಾಂಸದೊಂದಿಗೆ ಪದರಗಳಲ್ಲಿ ಹಾಕಿದ ಬಾಸ್ಮತಿ ಅಕ್ಕಿ ಮತ್ತು ಕೇಸರಿ ಮತ್ತು ಮಸಾಲೆಗಳೊಂದಿಗೆ ನಿಧಾನವಾಗಿ ಬೇಯಿಸಲಾಗುತ್ತದೆ. ಅವರು ಎಷ್ಟು ಉತ್ಸಾಹದಿಂದ ಮಾತನಾಡಿದರು ಎಂದರೆ ಭಕ್ಷ್ಯಗಳು ನಮ್ಮ ಮುಂದೆಯೇ ಇದ್ದಂತನಿಸುತ್ತಿತ್ತು. ಆದರೂ ಅವರ ಕುಟುಂಬವು ನವರಾತ್ರಿಯ ಸಮಯದಲ್ಲಿ ಮಾಂಸಾಹಾರಿ ಆಹಾರ ತಿನ್ನಲಿಲ್ಲ. ಅವರು ಕಬಾಬ್ಗಳ ಬಗ್ಗೆ ಮಾತನಾಡುವಾಗ ತಮ್ಮ ದವಡೆಯನ್ನು ಸರಿಹೊಂದಿಸಿ ಪದೇ ಪದೇ ನುಂಗುವುದನ್ನು ನಾನು ಗಮನಿಸಿದೆ.
ಸಂಜೆ ಹಜರತ್ಗಂಜ್ನಲ್ಲಿ ವಾಕಿಂಗ್ ಮಾಡುವಾಗ, ಮಾಂಸಾಹಾರಿ ಖಾದ್ಯಗಳನ್ನು ಮಾರಾಟ ಮಾಡುವ ಅಂಗಡಿಗಳ ಸಿಬ್ಬಂದಿ ಯಾವುದೇ ಆತುರವಿಲ್ಲದೆ ನಿರಾಳವಾಗಿರುವುದನ್ನು ಗಮನಿಸಿದೆ. ಒಂದು ರೀತಿ ಲಕ್ನೋ ನಗರವು ನವರಾತ್ರಿ ಮುಗಿಯುವುದಕ್ಕಾಗಿ ಕಾಯುತ್ತಿತ್ತು. ನನ್ನ ಜೊತೆಗಿದ್ದವರು ಶುಕ್ಲಾ ಜಿ ಅವರು ಚಾಟ್, ರಟ್ಟಿ ಲಾಲ್ ಅವರ ಖಸ್ತಾ ಕಚೋರಿ ಸವಿದರೆ, ಪ್ರಕಾಶ್ ಅವರ ಕುಲ್ಫಿ ಮತ್ತು ಶರ್ಮಾ ಟೀ ಸ್ಟಾಲ್ನ ತಿಂಡಿಗಳನ್ನು ಸವಿದು ತೃಪ್ತಿಪಟ್ಟರು. ನಾನು ಉಪವಾಸವಿದ್ದಿದ್ದರಿಂದ ಹೋಟೆಲ್ ಸಿಬ್ಬಂದಿಯಲ್ಲಿ ನನಗೆ ಸೂಕ್ತವಾಗುವಂತಹ ಏನಾದರೂ ಅಡುಗೆ ಮಾಡಿ ಕೊಡುವಂತೆ ಕೇಳಿದೆ. ಆಲೂಗಡ್ಡೆ ಮತ್ತು ಮೊಸರು ಇದ್ದರೆ ಸಾಕು ಎಂದು ಹೇಳಿದ್ದೆ. ಆದರೆ ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ನಾವು ಹೇಳಿದ್ದನ್ನೇ ತಯಾರಿಸುವುದಿಲ್ಲವಲ್ಲ. ಹಾಗೆಯೇ ಆಯ್ತು, ಅರ್ಧ ಗಂಟೆಯ ನಂತರ, ಒಬ್ಬ ಸಿಬ್ಬಂದಿ ಪಳಪಳ ಹೊಳೆಯುವ ಹಿತ್ತಾಳೆಯ ತಟ್ಟೆ, ಅದರಲ್ಲಿ ಹಲವು ಬಟ್ಟಲುಗಳನ್ನು ಇಟ್ಟುಕೊಂಡು ಬಂದರು. ಅವುಗಳಲ್ಲಿ ಕುಟ್ಟು ಪೂರಿ, ರಾಜಗೀರ ರಾಯಿತ, ಸಾಮ ಅಕ್ಕಿಯ ಪುಲಾವ್, ಸಾಬೂದಾನ ಖಿಚಡಿ, ಉಪವಾಸಕ್ಕೆ ತಕ್ಕಂತೆ ತಯಾರಿಸಿದ ಆಲೂಗಡ್ಡೆ, ಕುಂಬಳಕಾಯಿ, ಸೋರೆಕಾಯಿ, ಬಾಳೆಕಾಯಿ ಚಿಪ್ಸ್, ಹಣ್ಣುಗಳು, ಹುಣಸೆಹಣ್ಣಿನ ಚಟ್ನಿ ಮತ್ತು ಮಖಾನ ಖೀರ್ ಇದ್ದವು.
ಆ ಹೋಟೆಲ್ನಲ್ಲಿ ಉಪವಾಸವಿದ್ದ ಏಕೈಕ ವ್ಯಕ್ತಿ ನಾನಾಗಿದ್ದರಿಂದ, ಇತರ ಅತಿಥಿಗಳ ಗಮನ ನನ್ನತ್ತ ಸೆಳೆಯಲ್ಪಟ್ಟಿತು. ಬ್ರಾಂಡೆಡ್ ಬಟ್ಟೆಗಳನ್ನು ಧರಿಸಿರುವ ವ್ಯಕ್ತಿ, ನವರಾತ್ರಿ ಉಪವಾಸ ಇವೆರಡೂ ಹೇಗೆ ಒಟ್ಟಿಗೆ ಹೇಗೆ ಸಾಧ್ಯ ಎಂಬಂತೆ ನೋಡಿದರು.
ನಮ್ಮ ಕುಟುಂಬವು ನವರಾತ್ರಿಯ ಸಮಯದಲ್ಲಿ ಟೊಮೆಟೊ ತಿನ್ನುವುದಿಲ್ಲ. ಆದ್ದರಿಂದ ಟೊಮೆಟೋ ಇರುವ ತಿಂಡಿ ಪಕ್ಕಕ್ಕೆ ಇಡಲು ನಾನು ಸರ್ವರ್ಗೆ ಹೇಳಿದೆ. ಸರ್ವರ್ ನುಣ್ಣಗೆ ನಕ್ಕು ಹೇಳಿದಂತೆ ಮಾಡಿದರು ಮರುದಿನ ಬೆಳಗಿನ ಟಿಫೀನ್ಗೆ ತಾಜಾ ಮತ್ತು ಒಣಗಿದ ಹಣ್ಣುಗಳು ಮತ್ತು ಸಬುದಾನಾ ಖಿಚಡಿಯನ್ನು ತಂದರು. ಮಧ್ಯಾಹ್ನದ ಊಟದ ಹೊತ್ತಿಗೆ, ಹೋಟೆಲ್ ಮತ್ತೊಂದು ಟೊಮೆಟೊ ರಹಿತ ಸ್ಪ್ರೆಡ್ ಅನ್ನು ನೀಡಿದ್ರು.
ಅಲ್ಲಿಂದ ಮನೆಗೆ ವಾಪಸ್ ಆದನಂತರ ಪಂಚತಾರಾ ಹೋಟೆಲ್ನಲ್ಲಾದ ಅನುಭವದ ಬಗ್ಗೆ ವಿಮರ್ಶೆ ಬರೆಯಬೇಕು ಅನಿಸಿತು. ಬಹುಶಃ ಲಕ್ನೋ ಭೇಟಿ ನನಗೆ ಎರಡು ಪಾಠಗಳನ್ನು ಕಲಿಸಿದೆ: ಅಡುಗೆಯವನು ತನ್ನ ಕೆಲಸ ತಿಳಿದಿದ್ದರೆ ಹಲ್ಲುಗಳಿಲ್ಲದ ನವಾಬ್ ಕೂಡ ಕಬಾಬ್ ರುಚಿ ಸವಿಯಬಹುದು. ನವರಾತ್ರಿ ವೇಳೆ ನೀವು ಕಬಾಬ್ ತಿನ್ನದಿದ್ದರೆ, ಈ ಅದ್ಭುತ ನಗರವು ಬಿರಿಯಾನಿ ಹಂಡಿಯ ಬದಲಿಗೆ ಹಿತ್ತಾಳೆಯ ಥಾಲಿಯೊಂದಿಗೆ ನಿಮ್ಮನ್ನು ನವಾಬ್ನಂತೆ ಟ್ರೀಟ್ ಮಾಡುತ್ತೆ.
ಲೇಖಕರು ಮುಖ್ಯ ಜನರಲ್ ಮ್ಯಾನೇಜರ್, ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.