Recipe : ಪನೀರ್ ಮಾಡಿದಾಗ ಉಳಿಯುವ ನೀರನ್ನು ಎಸೆಯಬೇಡಿ, ಈ ರೆಸಿಪಿ ಒಮ್ಮೆ ಟ್ರೈ ಮಾಡಿ

Published : Sep 24, 2026, 09:37 PM IST
leftover Panneer Water Recipe

ಸಾರಾಂಶ

ಮಾರ್ಕೆಟ್‌ ನಲ್ಲಿ ಸಿಗುವ ಪನೀರ್‌ ಕಲಬೆರಿಕೆ ಎನ್ನುವ ಭಯಕ್ಕೆ ಅನೇಕರು ಮನೆಯಲ್ಲೇ ಪನೀರ್‌ ತಯಾರಿಸ್ತಾರೆ. ಮನೆಯಲ್ಲಿ ಪನೀರ್‌ ತಯಾರಿಸುವ ವೇಳೆ ಹಾಲು ಒಡೆದು ಗಟ್ಟಿಯಾದ ನಂತ್ರ ಉಳಿಯುವ ನೀರನ್ನು ಸಾಮಾನ್ಯವಾಗಿ ಎಸೆಯುತ್ತೇವೆ. ನೀವೂ ಹೀಗೆ ಮಾಡ್ತಿದ್ರೆ ಇನ್ಮುಂದೆ ಈ ನೀರನ್ನು ಎಸೆಯೋ ಬದಲು ರೆಸಿಪಿ ತಯಾರಿಸಿ.

ಪನೀರ್‌ ನಿಂದ ನಾನಾ ಬಗೆಯ ಖಾದ್ಯ ಸಿದ್ಧವಾಗುತ್ತೆ. ಅದೇ ಒಡೆದ ಹಾಲಿನಿಂದ ಬರುವ ನೀರು ಮಾತ್ರ ಸಿಂಕ್‌ ಸೇರುತ್ತೆ. ನೀವು ಈ ನೀರನ್ನು ಹಾಳು ಮಾಡ್ತಿದ್ರೆ ಇನ್ಮುಂದೆ ಚೆಲ್ಬೇಡಿ. ಅದ್ರಿಂದ ರುಚಿಯಾದ ಸೂಪ್‌ ತಯಾರಿಸಿ.

ಪನೀರ್‌ ನೀರಿನಿಂದ ಸೂಪ್

ಪನೀರ್ ತಯಾರಿಸಿದ ಬಳಿಕ ಉಳಿಯುವ ಈ ನೀರನ್ನು ರುಚಿಯಾದ ಸೂಪ್ ತಯಾರಿಸಬಹುದು. ಪನೀರ್ ನೀರಿನ ಸೂಪ್ ಮಾಡಲು ಬೇಕಾಗುವ ಸಾಮಗ್ರಿಗಳು, 2 ಕಪ್ ಪನೀರ್ ಉಳಿದ ನೀರು, 1 ಸಣ್ಣ ಗಜ್ಜರಿ (ಸಣ್ಣಗೆ ಹೆಚ್ಚಿದ್ದು), 1/4 ಕಪ್ ಎಲೆಕೋಸು (ಸಣ್ಣಗೆ ಹೆಚ್ಚಿದ್ದು), 1/4 ಕಪ್ ಕ್ಯಾಪ್ಸಿಕಂ (ಸಣ್ಣಗೆ ಹೆಚ್ಚಿದ್ದು), 1 ಸಣ್ಣ ಈರುಳ್ಳಿ (ಸಣ್ಣಗೆ ಹೆಚ್ಚಿದ್ದು), 2 ಬೆಳ್ಳುಳ್ಳಿ ಎಸಳು (ಸಣ್ಣಗೆ ಹೆಚ್ಚಿದ್ದು), 1/2 ಟೀ ಸ್ಪೂನ್ ಕಾಳುಮೆಣಸಿನ ಪುಡಿ, 1/2 ಟೀ ಸ್ಪೂನ್ ಜೀರಿಗೆ, 1 ಟೀ ಸ್ಪೂನ್ ಎಣ್ಣೆ ಅಥವಾ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು,1/2 ಟೀ ಸ್ಪೂನ್ ನಿಂಬೆ ರಸ,ಸ್ವಲ್ಪ ಕೊತ್ತಂಬರಿ ಸೊಪ್ಪು,ಅಗತ್ಯವಿದ್ದಷ್ಟು ನೀರು

ಪನೀರ್ ನೀರಿನ ಸೂಪ್ ಮಾಡುವ ವಿಧಾನ

ಮನೆಯಲ್ಲಿ ಪನೀರ್ ಮಾಡಿದ ಬಳಿಕ ಉಳಿದ ನೀರನ್ನು ಮೊದಲು ಸಣ್ಣ ಜಾಲರಿಯ ಅಥವಾ ಸ್ವಚ್ಛವಾದ ಬಟ್ಟೆಯ ಮೂಲಕ ಸೋಸಿ. ಇದರಿಂದ ನೀರಿನಲ್ಲಿ ಉಳಿದಿರುವ ಹಾಲಿನ ಸಣ್ಣ ಕಣಗಳು ಬೇರ್ಪಡುತ್ತವೆ. ಸೂಪ್ ಮಾಡಲು ತಾಜಾ ಪನೀರ್ ನೀರನ್ನೇ ಬಳಸಿ. ಅದನ್ನು ಹೆಚ್ಚು ಹೊತ್ತು ಹೊರಗಡೆ ಇಟ್ಟಿದ್ದರೆ ಅಥವಾ ಬಣ್ಣ, ವಾಸನೆ ಬದಲಾಗಿದ್ದರೆ ಬಳಸಬೇಡಿ. ಒಂದು ಪ್ಯಾನ್ಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ ಚಟಪಟಿಸಿದ ನಂತರ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ. ಈಗ ಗಜ್ಜರಿ, ಎಲೆಕೋಸು ಮತ್ತು ಕ್ಯಾಪ್ಸಿಕಂ ಹಾಕಿ 2–3 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಹುರಿಯಿರಿ. ತರಕಾರಿಗಳನ್ನು ತುಂಬಾ ಮೆತ್ತಗೆ ಬೇಯಿಸುವ ಅಗತ್ಯವಿಲ್ಲ. ಸ್ವಲ್ಪ ಕ್ರಂಚಿಯಾಗಿ ಇದ್ದರೆ ಸೂಪ್ ಇನ್ನಷ್ಟು ರುಚಿಯಾಗಿರುತ್ತದೆ. ತರಕಾರಿಗಳು ಸ್ವಲ್ಪ ಹುರಿದ ನಂತರ ಸೋಸಿಟ್ಟಿರುವ ಪನೀರ್ ನೀರನ್ನು ಹಾಕಿ. ಅಗತ್ಯವಿದ್ದರೆ ಸ್ವಲ್ಪ ಸಾಮಾನ್ಯ ನೀರನ್ನೂ ಸೇರಿಸಬಹುದು. ನಂತರ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ.

ಸೂಪ್ ಅನ್ನು ಮಧ್ಯಮ ಉರಿಯಲ್ಲಿ ಕೆಲವು ನಿಮಿಷಗಳ ಕಾಲ ಕುದಿಯಲು ಬಿಡಿ. ಇದರಿಂದ ತರಕಾರಿಗಳ ರುಚಿ ನೀರಿನಲ್ಲಿ ಚೆನ್ನಾಗಿ ಬೆರೆಯುತ್ತದೆ. ಖಾರ ಹೆಚ್ಚು ಬೇಕಿದ್ದರೆ ಸ್ವಲ್ಪ ಕಾಳುಮೆಣಸಿನ ಪುಡಿ ಹಾಕಿ. ಗ್ಯಾಸ್ ಆಫ್ ಮಾಡಿದ ನಂತರ ಸ್ವಲ್ಪ ನಿಂಬೆ ರಸ ಹಾಕಿ. ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಬಿಸಿಬಿಸಿಯಾಗಿ ಸರ್ವ್ ಮಾಡಿ.

ಯಾವಾಗ ಸೇವಿಸ್ಬೇಕು?

ಪನೀರ್ ನೀರಿನಿಂದ ತಯಾರಿಸಿದ ಈ ಸೂಪ್ ಅನ್ನು ಸಂಜೆ ವೇಳೆ ಲಘು ಸ್ನ್ಯಾಕ್ ಆಗಿ ಅಥವಾ ಊಟಕ್ಕೆ ಮೊದಲು ಸೇವಿಸಬಹುದು. ನಿಮಗೆ ಇಷ್ಟವಾದ ಇತರ ತರಕಾರಿಗಳನ್ನೂ ಇದಕ್ಕೆ ಸೇರಿಸಬಹುದು. ಆದರೆ ಮುಖ್ಯವಾಗಿ, ಪನೀರ್ನಿಂದ ಉಳಿದ ನೀರು ತಾಜಾ ಮತ್ತು ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಂಡು ಮಾತ್ರ ಬಳಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಹುತೇಕ ಭಾರತೀಯ ಮನೆಗಳಲ್ಲಿ ದಿನಾಂಕ ಮುಗಿದ್ರೂ ವರ್ಷಾನುಗಟ್ಟಲೆ ಬಳಕೆಯಾಗುತ್ತೆ ಈ ಆಹಾರ ಪದಾರ್ಥ
ರವೆ ಇದ್ರೆ ಸಾಕು ದಿಢೀರ್ ಅಂತ ಮಾಡಬಹುದು ಆರೋಗ್ಯಕರ ತರಕಾರಿ ಕಡುಬು