ರುಚಿಯಾದ ಪ್ರಾನ್ ಖಾದ್ಯ ಮಾಡುವ ಮುನ್ನ 2 ವಿಚಾರ ಗೊತ್ತಿರಲಿ, ತಪ್ಪಿದರೆ ಅನಾಹುತ ಖಚಿತ

Published : Jun 23, 2025, 01:20 PM ISTUpdated : Jun 23, 2025, 01:21 PM IST
monsoon special kerala style prawns ghee roast to evening snacks

ಸಾರಾಂಶ

ಸೀ ಫುಡ್‌ಗಳ್ಲಲಿ ಪ್ರಾನ್ಸ್‌ ಬಹುತೇಕರು ಇಷ್ಟಪಡುತ್ತಾರೆ. ಪ್ರಾನ್ ಕರಿ, ಪ್ರಾನ್ ಫ್ರೈ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ಮಾಡಲಾಗುತ್ತದೆ. ಸುಲಭವಾಗಿ ಮನೆಯಲ್ಲಿ ಮಾಡಬಹುದಾದ ಪ್ರಾನ್ ಕರಿ ಅಥವಾ ಪ್ರಾನ್ ಖಾದ್ಯ ತಯಾರಿಸುವ ಮುನ್ನ 2 ವಿಚಾರ ನಿಮಗೆ ಗೊತ್ತಿರಲಿ.

ಬೆಂಗಳೂರು (ಜೂ.23) ನಾನ್ ವೆಜ್ ಆಹಾರಗಳ ಪೈಕಿ ಸೀ ಫುಡ್‌ಗೆ ಭಾರಿ ಬೇಡಿಕೆ. ರುಚಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲು ಸಮುದ್ರಾಹರಗಳಿಗೆ ಹೆಚ್ಚಿನ ಮಹತ್ವವಿದೆ. ಈ ಪೈಕಿ ಮಕ್ಕಳಿಂದ ಹಿಡಿದು ಎಲ್ಲರೂ ಪ್ರಾನ್ ಖಾದ್ಯಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಪ್ರಾನ್ ಕರಿ, ಪ್ರಾನ್ ಮಸಾಲಾ ಫ್ರೈ ಸೇರಿದಂತೆ ಹಲವು ಖಾದ್ಯಗಳು ಬಾಯಲ್ಲಿ ನಿರೂರಿಸುವಷ್ಟು ರುಚಿಯಾಗುತ್ತದೆ. ಪ್ರಾನ್ ಖಾದ್ಯಗಳನ್ನು ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು. ಅವರವರ ರುಚಿ ಹಾಗೂ ಶೈಲಿಗೆ ತಕ್ಕಂತ ಪ್ರಾನ್ ಖಾದ್ಯಗಳನ್ನು ತಯಾರಿಸಲು ಸಾಧ್ಯವಿದೆ. ಆದರೆ ಹೀಗೆ ಪ್ರಾನ್ ಖಾದ್ಯ ತಯಾರಿಸುವ ಮುನ್ನ ಸಜ್ಜುಗೊಳಿಸುವ ವಿಚಾರದಲ್ಲಿ ಅತೀವ ಎಚ್ಚರಿಕೆ ಅಗತ್ಯ.

ಮಾರುಕಟ್ಟೆಯಿಂದ ಅಥವಾ ಆನ್‌ಲೈನ್ ಮೂಲಕ ಪ್ರಾನ್ ಖರೀದಿಸಿ ರುಚಿಯಾದ ಅಡುಗೆ ಮಾಡಲು ಬಯಸುವವರು 2 ಅಂಶಗಳ ಬಗ್ಗೆ ಗಮನದಲ್ಲಿಡಬೇಕು. ಒಂದು ವೇಳೆ ನೀವು ಖರೀದಿಸಿದ ಪ್ರಾನ್ಸ್ ಸಜ್ಜುಗೊಳಿಸದೆ ಇದ್ದರೆ ಅಥವಾ ಸರಿಯಾಗಿ ಸಜ್ಜುಗೊಳಿಸದಿದ್ದರೆ, ಪ್ರತಿ ಪ್ರಾನ್ಸ್ ಸರಿಯಾಗಿ ತೊಳೆದು ಸಜ್ಜುಗೊಳಿಸಬೇಕು.

ತಲೆ ಹಾಗೂ ನರದ ಬಗ್ಗೆ ಗಮನ ಇರಲಿ

ಪ್ರಾನ್ ಕ್ಲೀನ್ ಮಾಡುವಾಗ ಮೊದಲು ಇದರ ತಲೆಯನ್ನು ಕತ್ತರಿಸಿ ತೆಗೆಯಬೇಕು.ಬಳಿಕ ಮಾಂಸವನ್ನು ತೆಗೆಯಬೇಕು. ಇದಾದ ಬಳಿಕ ಮುಖ್ಯವಾಗಿ ಪ್ರಾನ್ಸ್ ಮೇಲ್ಬಾಗದಲ್ಲಿರುವ ಸಣ್ಣ ಗಾತ್ರದ ನರ ಒಂದನ್ನು ತೆಗೆಯಬೇಕು. ಪ್ರಾನ್ ಮೇಲ್ಬಾಗದಲ್ಲಿ ಸಣ್ಣ ನೂಲಿನಂತೆ ಇರುವ ಈ ನರವನ್ನು ತೆಗೆಯಬೇಕು. ತಲೆ ಹಾಗೂ ನರ ಎರಡು ವಿಷಕಾರಿಯಾಗಬಲ್ಲದು. ಹೀಗಾಗಿ ಇವರೆಡರ ಬಗ್ಗೆ ಅತೀವ ಗಮನವಹಿಸಬೇಕು. ಮಾರುಕಟ್ಟೆಯಲ್ಲಿ ಪರಿಣಿತರು ಶುಚಿ ಮಾಡಿಕೊಟ್ಟಿರುವ ಪ್ರಾನ್ ಆಗಿದ್ದರೂ ಈ ನರ ಇದೆಯಾ ಅನ್ನೋದನ್ನು ಪರಿಶೀಲಿಸಬೇಕು.

ಸಮುದ್ರಲ್ಲಿನ ಮೀನು ಸೇರಿದಂತೆ ಇತರ ಜಲಚರಗಳಲ್ಲಿ ಪ್ರಾನ್, ಕಪ್ಪೆ ಚಿಪ್ಪು ಸೇರಿದಂತೆ ಕೆಲ ಜಲಚರಗಳು ಸಮುದ್ರವನ್ನು ಶುಚಿಯಾಗಿಡುವ ಜೀವಿಗಳು. ಹೀಗಾಗಿ ಪ್ರಾನ್ ತಲೆ ಹಾಗೂ ಅದರ ಬೆನ್ನಿನ ಮೇಲಿರುವ ನರವೊಂದು ವಿಷಕಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಶುಚಿಗೊಳಿಸುವಾಗ ಅಥವಾ ಶುಚಿಗೊಳಿಸಿದ ಪ್ರಾನ್ ಮತ್ತೊಮ್ಮೆ ಪರಿಶೀಲಿಸುವುದು ಅಗತ್ಯ.

 

 

ಪ್ರಾನ್ ಖಾದ್ಯಗಳು ಹಲವು ಉತ್ತಮ ಆರೋಗ್ಯ ಪ್ರಯೋಜನ ನೀಡುತ್ತದೆ. ಪ್ರಾನ್ಸ್‌ನಲ್ಲಿ ಬಿ12 ವಿಟಮಿನ್ಸ್ ಸೇರಿದಂತೆ ಬಿ ಗ್ರೂಪ್ ವಿಟಮಿನ್‌ಗಳು ಯಥೇಚ್ಚವಾಗಿದೆ. ಪ್ರಾನ್ಸ್‌ನಲ್ಲಿ ಪ್ಯಾಟ್ ಅತೀ ಕಡಿಮೆ. 100 ಗ್ರಾಂ ಪ್ರಾನ್ಸ್ ಖಾದ್ಯದ ಕ್ಯಾಲೋರಿ ಕೇವಲ 115 ಮಾತ್ರ. ಚಿಕನ್ ಹಾಗೂ ಇಥರ ಮಾಂಸಾರಗಳಲ್ಲಿ ಡಬಲ್ ಅಥವಾ ತ್ರಿಬಲ್ ಕ್ಯಾಲೋರಿ ಹೊಂದಿದೆ. ಹೀಗಾಗಿ ತೂಕ ಕಳೆದುಕೊಳ್ಳಲು ಈ ಆಹಾರ ಉತ್ತಮವಾಗಿದೆ. ಹಾಗಂತ ಅತಿಯಾಗಿ ತಿನ್ನುವುದು ಉಚಿತವಲ್ಲ. ಪ್ರಾನ್ ಖಾದ್ಯದಲ್ಲಿ ಜಿಂಕ್ ಹಾಗೂ ಮಿನರಲ್ ಯಥೇಚ್ಚವಾಗಿದೆ. ಇದರಿಂದ ರೋಗ ನಿರೋಧಕ ಶಕ್ತಿಗಳು ಹೆಚ್ಚಾಗುತ್ತದೆ. ಥೈರಾಯ್ಡ್ ಸಮಸ್ಯೆಗೂ ಈ ಪ್ರಾನ್ ಆಹಾರ ಉತ್ತಮವಾಗಿದೆ. ಶೇಕಡಾ 11ರಷ್ಟು ಕ್ಯಾಲ್ಶಿಯಂ, ಶೇಕಾಡಾ 15ರಷ್ಟು ಕಬ್ಬಿಣಾಂಶ ಸೇರಿದಂತೆ ಹಲವು ಅಂಶಗಳನ್ನು ಹೊಂದಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಂಬೆಯಿಂದ ಮೊಟ್ಟೆ ಸಿಪ್ಪೆ ತೆಗೆಯೋದು, ಎಣ್ಣೆ ರಹಿತ ಕ್ರಿಸ್ಪಿ ಪೂರಿ.. 2025ರಲ್ಲಿ ಜನ ಮೆಚ್ಚಿದ Food Hacks
ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?