ಇಂಟರ್ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ ದಾಲ್ ವಿಸ್ಕಿ, ರೆಸ್ಟೋರೆಂಟ್‌ನ ಸ್ಪೆಷಲ್ ರೆಸಿಪಿ ಈಗ ಫೇಮಸ್

Published : Oct 02, 2026, 03:34 PM IST
Dal Whisky Becomes Internet Sensation

ಸಾರಾಂಶ

ದಾಲ್ ತಡ್ಕಾ ದಾಲ್ ಮಖಾನಿ, ದಾಲ್ ಫ್ರೈ ಸೇರಿದಂತೆ ಹಲವು ದಾಲ್ ರೆಸೆಪಿಗಳ ಬಗ್ಗೆ ತಿಳಿದಿರುತ್ತೆ. ಆದರೆ ದಾಲ್ ವಿಸ್ಕಿ ಕೇಳಿದ್ದೀರಾ? ಸವಿದಿದ್ದೀರಾ? ರೆಸ್ಟೋರೆಂಟ್ ಒಂದರ ದಾಲ್ ವಿಸ್ಕಿ ಭಾರಿ ಬೇಡಿಕೆ ಪಡೆದುಕೊಂಡಿದೆ

ಹೈದರಾಬಾದ್ (ಅ.02) ಭಾರತೀಯರ ಆಹಾರಗಳಲ್ಲಿ ದಾಲ್‌ಗೆ ವಿಶೇಷ ಸ್ಥಾನವಿದೆ. ದಾಲ್‌ನಿಂದ ಹಲವು ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಇದಕ್ಕೆ ಹೊಸ ರೆಸಿಪಿ ಸೇರಿಕೊಂಡಿದೆ. ದಾಲ್ ವಿಸ್ಕಿ. ಹೌದು, ಹೊಸ ರೆಸಿಪಿ ದಾಲ್ ವಿಸ್ಕಿ. ದಾಲ್ ಹಾಗೂ ವಿಸ್ಕಿಯಲ್ಲಿ ತಯಾರಿಸುವ ಈ ರೆಸಿಪಿ ಇದೀಗ ಭಾರಿ ಜನಪ್ರಿಯವಾಗಿದೆ, ಅಷ್ಟೇ ಬೇಡಿಕೆ ಪಡೆದುಕೊಂಡಿದೆ. ಈ ಕುರಿತು ವಿಡಿಯೋಗಳು ಭಾರಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಇದೀಗ ರೆಸ್ಟೋರೆಂಟ್‌ಗೆ ದಾಲ್ ವಿಸ್ಕಿ ಸವಿಯಲು ಆಗಮಿಸುತ್ತಿರುವ ಸಂಖ್ಯೆ ಹೆಚ್ಚಾಗಿದೆ.

ವಿಸ್ಕಿ ಸಾಂಬಾ ಸ್ಪೆಷಲ್

ಹೈದರಾಬಾದ್‌ನಲ್ಲಿ ವಿಸ್ಕಿ ಸಾಂಬಾ ರೆಸ್ಟೋರೆಂಟ್ ಇದೀಗ ಜನಪ್ರಿಯವಾಗಿದೆ. ನಾರ್ತ್ ಇಂಡಿಯನ್ ಫುಡ್ ದಾಲ್ ಮಖಾನಿಗೆ ಟ್ವಿಸ್ಟ್ ಕೊಟ್ಟು ದಾಲ್ ವಿಸ್ಕಿ ರೆಸೆಪಿ ಸಿದ್ಧಪಡಿಸಿದೆ. ಅಷ್ಟೇ ವೇಗದಲ್ಲಿ ಜನರಿಗೂ ಇಷ್ಟವಾಗಿದೆ. ಇದರ ಮಿಕ್ಸಿಂಗ್ ಅದ್ಭುತ ಹಾಗೂ ಊಹೆಗೂ ನಿಲುಕದ್ದು, ಕಾರಣ ದಾಲ್ ಮಖಾನಿಗೆ ತುಪ್ಪ ಹಾಕುತ್ತಾರೆ, ಜೊತೆಗೆ ವಿಸ್ಕಿಯನ್ನು ತಡ್ಕಾ ಮಾಡಿ ಹಾಕಲಾಗುತ್ತದೆ. ಇದುವೇ ದಾಲ್ ವಿಸ್ಕಿಯ ಸ್ಪೆಷಾಲಿಟಿ.

ಉತ್ತರ ಭಾರತದ ದಾಲ್ ಮಖಾನಿಯನ್ನು ತಯಾರಿಸಲಾಗುತ್ತದೆ. ಈ ದಾಲ್ ಮಖಾನಿಯನ್ನು ಸಾಂಪ್ರದಾಯಿಕ ಶೈಲಿಯಲ್ಲೇ ತಯಾರಿಸಲಾಗುತ್ತದೆ. ದಾಲ್ ಮಖಾನಿ ರೆಡಿ ಮಾಡಿ ಮೇಲೆ ತುಪ್ಪ ಹಾಕಲಾಗುತ್ತದೆ. ಇಲ್ಲೀವರೆಗೆ ಇದು ದೇಸಿ ಶೈಲಿಯಲ್ಲೇ ಇದೆ. ಆದರೆ ಇನ್ನು ಮುಂದಿನ ವಿಧಾನವೇ ಭಿನ್ನ. ತಡ್ಕಾ ಪ್ಯಾನ್ ಮೂಲಕ ಎಣ್ಣೆ, ಒಣ ಮೆಣಸು, ಕರಿಬೇವು , ಸಾಸಿವೆ ಹಾಕಿ ತಡ್ಕಾ ರೆಡಿ ಮಾಡುತ್ತಾರೆ. ಈ ತಡ್ಕಾಗೆ ವಿಸ್ಕಿ ಸೇರಿಸಲಾಗುತ್ತದೆ. ಈ ವೇಳೆ ವಿಸ್ಕಿಗೆ ಬೆಂಕಿ ಬೇಕ ಹೊತ್ತಿಕೊಳ್ಳುವ ಕಾರಣ ತಡ್ಕಾ ಮೇಲೆ ಬೆಂಕಿ ಇರುವಂತೆ ದಾಲ್ ಮಖಾನಿಗೆ ಸೇರಿಸಲಾಗುತ್ತದೆ. ಫ್ಲಾಂಬೆ ಇರುವಂತೆ ಇದನ್ನು ಸರ್ವ್ ಮಾಡಲಾಗುತ್ತದೆ.

ಇದುವರೆಗೆ ಸವಿಯದ ದಾಲ್ ವಿಸ್ಕಿ ರೆಸಿಪಿ

ಕುಲ್ಚಾ, ನಾನ್, ರೋಟಿಗಳ ಜೊತೆ ಈ ದಾಲ್ ವಿಸ್ಕಿ ಸವಿಯಲಾಗುತ್ತದೆ. ಇದೀಗ ಈ ದಾಲ್ ವಿಸ್ಕಿ ರೆಸೆಪಿ ಜನಪ್ರಿಯವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಹಲವರು ವಿಡಿಯೋ ಹಂಚಿಕೊಂಡಿದ್ದಾರೆ. ದಾಲ್ ವಿಸ್ಕಿ ಇದು ಇದುವರೆಗೆ ಸವಿಯದ ದಾಲ್ ಮಖಾನಿ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಈ ವಿಸ್ಕಿಯನ್ನು ದಾಲ್‌ಗೆ ಹಾಕುವ ಬದಲು ಹಾಗೇ ಕೊಟ್ಟರೆ ಗುಟುಕು ಹಾಕಬಹುದು ಎಂದು ಕಮೆಂಟ್ಸ್ ಮಾಡಿದ್ದಾರೆ.

ವಿಸ್ಕಿ ಸೇರಿಸುವ ಕಾರಣ ಅಥೆಂಟಿಕ ದಾಲ್ ಮಖಾನಿ ರುಚಿ ಹಾಳುಮಾಡುವ ಸಾಧ್ಯತೆ ಇದೆ. ಇದು ದಾಲ್ ಮಖಾನಿಗೆ ವಿಸ್ಕಿ ಸೇರಿಸಿದ ರೆಸಿಪಿ, ಇದರಲ್ಲಿ ದಾಲ್ ವಿಸ್ಕಿ ರೆಸಿಪಿ ಏನೂ ಇಲ್ಲ ಎಂದು ಹಲವರು ಟೀಕಿಸಿದ್ದಾರೆ. ಇದೇ ವೇಳೆ ಹಲವರು ಉತ್ತಮ ಟೇಸ್ಟಿ ಎಂದು ಕಮೆಂಟ್ಸ್ ಮಾಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Pressure Cooker Tips: ಅನ್ನ, ಬೇಳೆ ಬೇಯಿಸುವಾಗ ಕುಕ್ಕರ್‌ ಉಕ್ಕಿ ಹರಿಯೋದು ಯಾಕೆ? ಈ 5 ಸಿಂಪಲ್‌ ಟಿಪ್ಸ್‌ ಗೊತ್ತಿದ್ರೆ ಸಮಸ್ಯೆಯೇ ಇರಲ್ಲ!
ದಸರಾಗೆ ಮೈಸೂರು ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಶತಮಾನದ ಇತಿಹಾಸವಿರುವ ಈ 4 ಫುಡ್ ಸ್ಪಾಟ್‌ ಮಿಸ್ ಮಾಡ್ಬೇಡಿ