Kitchen Hacks: ಫಾಸ್ಟ್ ಆಗಿ ಅಡುಗೆ ಕೆಲಸ ಮುಗಿಸ್ಬೇಕೆನ್ನುವವರು ಇದನ್ನೋದಿ

By Suvarna NewsFirst Published Dec 13, 2021, 3:36 PM IST
Highlights

ಇಂಗು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ ಎಂಬ ಮಾತಿದೆ. ದಿನ ಪೂರ್ತಿ ಅಡುಗೆ(Cooking) ಕೆಲಸವನ್ನೇ ಮಾಡುವ ಕಾಲ ಈಗಿಲ್ಲ. ಅಡುಗೆ ಜೊತೆ ಬೇರೆ ಕೆಲಸಗಳಿರುವ ಕಾರಣ ಸ್ಮಾರ್ಟ್ ಕುಕ್ಕಿಂಗ್ ಸ್ಟೈಲ್ ಮಹಿಳೆಯರಿಗೆ(Women) ಇಷ್ಟವಾಗುತ್ತದೆ. 

ಅಡುಗೆ (Cooking ) ಒಂದು ಕಲೆ. ಎಲ್ಲ ಮಸಾಲೆ (Spice) ಪದಾರ್ಥಗಳು ಸರಿ ಪ್ರಮಾಣದಲ್ಲಿ ಬಿದ್ದರೆ ಮಾತ್ರ ರುಚಿಕಟ್ಟಾದ ಅಡುಗೆ ಸಿದ್ಧವಾಗುತ್ತದೆ. ಅಡುಗೆ ಮಾಡುವುದು ಏನು ಮಹಾ ಎನ್ನುವವರಿದ್ದಾರೆ. ಆದರೆ ಅಡುಗೆ ಮಾಡುವುದು ನೋಡಿದಷ್ಟು,ಹೇಳಿದಷ್ಟು ಸುಲಭವಲ್ಲ. ಕೆಲವೊಂದು ಖಾದ್ಯ ತಯಾರಿಸಲು ತುಂಬಾ ಸಮಯ ಹಿಡಿಯುತ್ತದೆ. ಕೆಲವರು ಬಹುಬೇಗ ಅಡುಗೆ ಮಾಡುತ್ತಾರೆ. ಮತ್ತೆ ಕೆಲವರ ಸಮಯ ಅನವಶ್ಯಕವಾಗಿ ವ್ಯರ್ಥವಾಗುತ್ತದೆ. ಕೊರೊನಾ (corona )ನಂತರ ಬಹುತೇಕರು ಮನೆ ಕೆಲಸಕ್ಕೆ ಯಾರನ್ನೂ ನೇಮಿಸಿಕೊಳ್ಳುತ್ತಿಲ್ಲ. ಕೆಲಸವನ್ನು ಅವರೇ ಮಾಡಿಕೊಳ್ಳುತ್ತಿದ್ದಾರೆ. ಮನೆ,ಮಕ್ಕಳ ಜೊತೆ ಅಡುಗೆ ಕೆಲಸ ಮಾಡುವುದು ಕಷ್ಟ. ಅಡುಗೆ ಮನೆಯಲ್ಲಿಯೇ ಬಹುತೇಕ ಸಮಯ ಕಳೆಯುತ್ತದೆ ಎನ್ನುವವರಿಗೆ ಕೆಲವೊಂದು ಕಿವಿ ಮಾತು ಇಲ್ಲಿದೆ. ಅಡುಗೆ ಮಾಡುವ ವೇಳೆ ಸಣ್ಣಪುಟ್ಟ ಟ್ರಿಕ್ಸ್ ಉಪಯೋಗಿಸಿದರೆ ನಿಮ್ಮ ಕೆಲಸ ಸುಲಭವಾಗುವ ಜೊತೆಗೆ ಬೇಗ ಅಡುಗೆ ಮುಗಿಯುತ್ತದೆ.

ಕುಕ್ಕರ್ (Cooker ) ಮುಚ್ಚಳಕ್ಕೆ ಬೇಳೆ ನೀರು ಅಂಟದಿರಲು ಹೀಗೆ ಮಾಡಿ : ದಾಲ್ (dal) ತಯಾರಿಸಲು ನಾವು ಸಾಮಾನ್ಯವಾಗಿ ಕುಕ್ಕರ್ ನಲ್ಲಿ ಬೇಳೆ ಹಾಕಿ ಸೀಟಿ ಹೊಡೆಸುತ್ತೇವೆ. ಕುಕ್ಕರ್ ಸೀಟಿ ಹೊಡೆಯುವಾಗ ಬೇಳೆಯ ನೀರು ಹೊರಗೆ ಚೆಲ್ಲುತ್ತದೆ. ಇದ್ರಿಂದ ಕುಕ್ಕರ್ ಜೊತೆಗೆ ಗ್ಯಾಸ್ ಒಲೆ ಸ್ವಚ್ಛಗೊಳಿಸುವ ಹೆಚ್ಚಿನ ಕೆಲಸ ಮೈಮೇಲೆ ಬರುತ್ತದೆ. ಬೇಳೆ ಬೇಯಿಸುವ ವೇಳೆ ಕುಕ್ಕರ್ ಒಳಗೆ ಸಣ್ಣ ಸ್ಟೀಲ್ ಬೌಲ್ (steel bowl) ಹಾಕಿದರೆ,ಬೇಳೆ ನೀರು ಹೊರಗೆ ಬರುವುದಿಲ್ಲ. 

ನುಗ್ಗಿ ಕಾಯಿ(drumstick )ಕೆಡದಂತೆ ಹೀಗಿಡಿ : ಸಾಮಾನ್ಯವಾಗಿ ನುಗ್ಗೆ ಕಾಯಿಗಳನ್ನು ಬಹುದಿನ ಇಡಲು ಸಾಧ್ಯವಿಲ್ಲವೆಂದುಕೊಂಡಿದ್ದೇವೆ. ಫ್ರಿಜ್ ಇಲ್ಲದೆ ಹೋದ್ರೆ ಮೂರು ದಿನ ನುಗ್ಗೆ ಕಾಯಿ ಇಡುವುದು ಕಷ್ಟ. ಫ್ರಿಜ್ ನಲ್ಲಿ ಅಂತೂ ಇಂತೂ ಒಂದು ವಾರ ಇಡಬಹುದು. ಆದ್ರೆ ನುಗ್ಗೆ ಕಾಯಿಯನ್ನು ಒಂದುವರೆ ತಿಂಗಳುಗಳವರೆಗೆ ಇಡಬಹುದು ಗೊತ್ತಾ? ಯಸ್. ನುಗ್ಗೆ ಕಾಯಿಯನ್ನು ನೀವು ಸಣ್ಣ ತುಂಟುಗಳಾಗಿ ಕತ್ತರಿಸಿ,ಏರ್ ಟೈಟ್ ಕವರ್ ನಲ್ಲಿ ಹಾಕಿ ಫ್ರೀಜರ್ (freezer )ನಲ್ಲಿ ಇಟ್ಟರೆ,ಅದನ್ನು ಒಂದುವರೆ ತಿಂಗಳುಗಳ ಕಾಲ ಬಳಸಬಹುದು.

ಸ್ಪೂನ್ ಬಳಸಿ ಶುಂಠಿ ಸಿಪ್ಪೆ ಹೀಗೆ ತೆಗೆಯಿರಿ

ಅಡುಗೆ ಕತ್ತರಿ (scissors )ಹರಿತಗೊಳಿಸುವುದು ಸುಲಭ : ಅಡುಗೆ ಮನೆಯಲ್ಲೊಂದು ಕತ್ತರಿ ಇದ್ದೇ ಇರುತ್ತದೆ. ದೀರ್ಘ ಕಾಲದ ಬಳಕೆಯಿಂದ ಕತ್ತರಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಅನೇಕರು,ಸತ್ತವರ ಮೂಗು ಕತ್ತರಿಸಲೂ ಈ ಕತ್ತರಿ ಬರುವುದಿಲ್ಲವೆಂದು ತಮಾಷೆ ಮಾಡುವುದನ್ನು ನಾವು ಕೇಳಿರುತ್ತೇವೆ. ಕತ್ತರಿ ಹರಿತ(sharp)ವಾಗಬೇಕೆಂದ್ರೆ ಮನೆಯಲ್ಲಿರುವ ಉಪ್ಪು ನಿಮ್ಮ ನೆರವಿಗೆ ಬರುತ್ತದೆ. ಉಪ್ಪಿನ ಡಬ್ಬದಲ್ಲಿ ಕತ್ತರಿಯನ್ನು ಉಜ್ಜಿದರ ಕತ್ತರಿ ಹರಿತವಾಗುತ್ತದೆ.

ರಾಜ್ಮಾ (rajma) ನೆನೆಸಲು ಮರೆತಿದ್ದೀರಾ? : ಬೆಳಿಗ್ಗೆ ರಾಜ್ಮಾ ಗ್ರೇವಿ ಅಥವಾ ಕರ್ರಿ ತಿನ್ನಬೇಕೆಂಬ ಬಯಕೆಯಾಗುತ್ತದೆ. ಆದ್ರೆ ರಾಜ್ಮಾ ನೆನಸಿಲ್ಲವೆಂಬ ಕಾರಣಕ್ಕೆ ಕರ್ರಿ ತಿನ್ನುವ ಆಸೆಯನ್ನು ಬದಿಗೊತ್ತುತ್ತೇವೆ. ಇನ್ಮುಂದೆ ರಾಜ್ಮಾ ನೆನೆಸದೆ ಇದ್ದರೂ ಈ ಟ್ರಿಕ್ ಉಪಯೋಗಿಸಿ ಕರ್ರಿ ತಯಾರಿಸಬಹುದು. ಮೊದಲು ರಾಜ್ಮಾವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ರಾಜ್ಮಾಕ್ಕೆ ಸ್ವಲ್ಪ ಉಪ್ಪು (salt) ಹಾಗೂ ನೀರ (water )ನ್ನು ಹಾಕಿ,ಕುಕ್ಕರ್ ನಲ್ಲಿ ಒಂದು ಸೀಟಿ ಹೊಡೆಸಬೇಕು. ತಣ್ಣಗಾದ ಮೇಲೆ ಅದನ್ನು ತೆಗೆದು ಅದಕ್ಕೆ ಒಂದಿಷ್ಟು ಐಸ್ ಕ್ಯೂಬ್ ಹಾಕಬೇಕು. ಉಪ್ಪಿನಂಶವಿರುವ ಕಾರಣ ಐಸ್ ಕ್ಯೂಬ್ (ice cubes) ಕರಗುತ್ತದೆ. ಮತ್ತೆ ಒಂದು ಸೀಟಿ ಹೊಡೆಯಿಸಿ. ಆ ನಂತ್ರ 5-7 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ರಾಜ್ಮಾ ಚೆನ್ನಾಗಿ ಬೆಂದಿರುತ್ತದೆ.

ಬಾಣಲೆ ತಳ ಫಳಫಳಿಸಬೇಕಾದ್ರೆ ಫಟಾಫಟ್ ಅಡುಗೆ ಮನೆಗೆ ಹೋಗಿ

ಸೇಬು  (Apple) ಕಪ್ಪಾಗ (black)ದಿರಲು ಹೀಗೆ ಮಾಡಿ:  ಸೇಬು ಹಣ್ಣು ಕತ್ತರಿಸಿದ ಕೆಲ ಸಮಯದಲ್ಲಿ ಬಣ್ಣ ಬದಲಿಸುತ್ತದೆ. ಕಪ್ಪಾದ ಸೇಬು ಹಣ್ಣನ್ನು ತಿನ್ನಲು ಮನಸ್ಸಾಗುವುದಿಲ್ಲ. ಕತ್ತರಿಸಿದ ಸೇಬಿನ ತುಂಡುಗಳಿಗೆ ಉಪ್ಪು ಮತ್ತು ನಿಂಬೆ ಸೇರಿಸಿ ತಣ್ಣೀರಿನಲ್ಲಿ ಹಾಕಿ ತೆಗೆಯಬೇಕು.

click me!