ಸ್ವಿಗ್ಗಿ-ಝೊಮಾಟೊ ಕಮಿಷನ್ ಕಾಟಕ್ಕೆ ಕ್ಲೌಡ್ ಕಿಚನ್ ಕ್ಲೋಸ್, ₹4 ಲಕ್ಷ ನಷ್ಟ ಈಗ ₹2 ಕೋಟಿ ಗಳಿಸ್ತಿರೋ ಬೆಂಗಳೂರು ಜೋಡಿ!

Published : Sep 02, 2026, 05:29 PM IST
Kreade JP Nagar Bengaluru

ಸಾರಾಂಶ

ಬೆಂಗಳೂರಿನ ಉದ್ಯಮಿಗಳಾದ ಕುಶಾಲ್ ರೆಡ್ಡಿ ಮತ್ತು ಚಾಹಕ್ ಜೈನ್, ಕ್ಲೌಡ್ ಕಿಚನ್‌ನಲ್ಲಿ ₹4 ಲಕ್ಷ ನಷ್ಟ ಅನುಭವಿಸಿದರು. ನಂತರ, ಅವರು 'ಕ್ರೀಡ್' ಎಂಬ ಫ್ರೈಡ್-ಫುಡ್ ಟ್ರಕ್ ಆರಂಭಿಸಿ, ಇನ್‌ಸ್ಟಾಗ್ರಾಮ್ ಮಾರ್ಕೆಟಿಂಗ್ ಮೂಲಕ ಕೇವಲ 10 ತಿಂಗಳಲ್ಲಿ ₹2 ಕೋಟಿ ಆದಾಯ ಗಳಿಸಿ ಯಶಸ್ವಿಯಾದರು. ಈ ಕಥೆಯು ಅವರ ವ್ಯಾಪಾರ ಮಾದರಿಯ ಬದಲಾವಣೆ ಮತ್ತು ಸಾಮಾಜಿಕ ಜಾಲತಾಣದ ಶಕ್ತಿಯನ್ನು ವಿವರಿಸುತ್ತದೆ.

ಬೆಂಗಳೂರಿನ ಉದ್ಯಮಿಗಳಾದ ಕುಶಾಲ್ ರೆಡ್ಡಿ ಮತ್ತು ಚಾಹಕ್ ಜೈನ್ ಅವರು ಕ್ಲೌಡ್ ಕಿಚನ್ ಬಿಸಿನೆಸ್ ಆರಂಭಿಸಿದರು. ಆದರೆ ಅದರಲ್ಲಿ ನಷ್ಟ ಅನುಭವಿಸಿದರು. ಆದರೆ ಇದಾಗಿ ಕೇವಲ 10 ತಿಂಗಳಲ್ಲಿ ₹2 ಕೋಟಿ ಆದಾಯ ಗಳಿಸುವ ಯಶಸ್ವಿ ಉದ್ಯಮ ಆರಂಭಿಸಿದ್ದಾರೆ. ಸರಿಯಾದ ವ್ಯಾಪಾರ ಮಾದರಿ ಮತ್ತು ಇನ್‌ಸ್ಟಾಗ್ರಾಮ್ (Instagram) ನಲ್ಲಿ ಮಾಹಿತಿ ನೀಡುವ ಮೂಲಕ ಕ್ರೀಡ್ (Kreade) ಫ್ರೈಡ್-ಫುಡ್ ಬ್ರ್ಯಾಂಡ್ ಅನ್ನು ಕಟ್ಟಿ ಬೆಳೆಸಿದ ಅವರ ರೋಚಕ ಕಥೆ ಇಲ್ಲಿದೆ.

₹4 ಲಕ್ಷ ನಷ್ಟದಿಂದ ಆರಂಭವಾದ ಪ್ರಯಾಣ

ಆರಂಭದಲ್ಲಿ ಕುಶಾಲ್ ಮತ್ತು ಚಾಹಕ್ ಬೆಂಗಳೂರಿನಲ್ಲಿ ಕ್ಲೌಡ್ ಕಿಚನ್ ಆರಂಭಿಸಲು ₹4 ಲಕ್ಷ ಹೂಡಿಕೆ ಮಾಡಿದ್ದರು. ಆದರೆ, ಕನಿಷ್ಠ ಆರ್ಡರ್‌ಗಳು, ಝೊಮಾಟೊ ಮತ್ತು ಸ್ವಿಗ್ಗಿಯಂತಹ ಆಹಾರ ವಿತರಣಾ ವೇದಿಕೆಗಳ ಅತಿಯಾದ ಕಮಿಷನ್ ದರಗಳು ಹಾಗೂ ದುಬಾರಿ ಜಾಹೀರಾತು ವೆಚ್ಚಗಳಿಂದಾಗಿ ಬಿಸಿನೆಸ್ ತೀವ್ರ ನಷ್ಟ ಅನುಭವಿಸಿತು. ಕೊನೆಗೆ ಬೇರೆ ದಾರಿಯಿಲ್ಲದೆ ಅಡುಗೆಮನೆಯನ್ನು ಮುಚ್ಚಬೇಕಾಯಿತು.

ಬಿಸಿನೆಸ್ ಮಾಡೆಲ್ ಬದಲಾವಣೆ,'ಕ್ರೀಡ್' ಹುಟ್ಟು!

ಸೋಲಿನ ಪಾಠ ಕಲಿತ ಈ ಜೋಡಿ ಧೃತಿಗೆಡದೆ ಹೊಸ ಹಾದಿ ತುಳಿದರು. ಬೆಂಗಳೂರಿನ ಜೆ.ಪಿ. ನಗರದಲ್ಲಿ 'ಕ್ರೀಡ್' (Kreade) ಹೆಸರಿನ ಫ್ರೈಡ್-ಫುಡ್ ಆಹಾರ ಟ್ರಕ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು.

ಸಾಮಾಜಿಕ ಜಾಲತಾಣದ ಮಾಸ್ಟರ್ ಪ್ಲಾನ್:

ಫುಡ್ ಟ್ರಕ್ ಸಿದ್ಧವಾಗುತ್ತಿದ್ದಂತೆಯೇ, ಅದರ ಪ್ರತಿಯೊಂದು ಹಂತವನ್ನು ದಾಖಲಿಸಲು ಪ್ರಾರಂಭಿಸಿದರು. ಬೆಂಗಳೂರಿನಲ್ಲಿ ಫುಡ್ ಟ್ರಕ್ ಕಟ್ಟುವ ಅವರ ಕಥೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸ್ಪಂದನೆ ಸಿಕ್ಕಿತು. ಪರಿಣಾಮವಾಗಿ, ಮೊದಲ ಬರ್ಗರ್ ಮಾರಾಟವಾಗುವ ಮುನ್ನವೇ ಕ್ರೀಡ್ ಇನ್‌ಸ್ಟಾಗ್ರಾಮ್‌ನಲ್ಲಿ 5,000ಕ್ಕೂ ಹೆಚ್ಚು ಅನುಯಾಯಿಗಳನ್ನು ಪಡೆದುಕೊಂಡಿತ್ತು!

ಆರಂಭದಲ್ಲೇ ಬಂಪರ್ ಯಶಸ್ಸು, ದಾಖಲೆಯ ಮಾರಾಟ!

ಸೆಪ್ಟೆಂಬರ್ 2025 ರಲ್ಲಿ 'ಕ್ರೀಡ್' ಪ್ರಥಮ ಬಾರಿಗೆ ಕಾರ್ಯಾರಂಭ ಮಾಡಿದಾಗ, ಮೊದಲ ದಿನವೇ 100ಕ್ಕೂ ಹೆಚ್ಚು ಗ್ರಾಹಕರು ಬಂದಿದ್ದರು. ಮೊದಲ ಮೂರು ದಿನಗಳಲ್ಲಿ ₹30,000ಕ್ಕೂ ಹೆಚ್ಚು ಮಾರಾಟ ದಾಖಲಿಸಿತು.

  • ದೈನಂದಿನ ಗ್ರಾಹಕರು: 350 ರಿಂದ 450 ಜನರು
  • ದೈನಂದಿನ ಸರಾಸರಿ ಆಲಾಯ ಸುಮಾರು: ₹1 ಲಕ್ಷ
  • ಮೆನು ಪ್ರಮುಖ ಆಕರ್ಷಣೆ: ಫ್ರೈಡ್ ಚಿಕನ್, ಪನೀರ್ ಬರ್ಗರ್, ಚಿಕನ್ ಪಾಪ್‌ಕಾರ್ನ್, ಸ್ಟ್ರಿಪ್ಸ್ ಮತ್ತು ಫ್ರೈಸ್
  • 10 ತಿಂಗಳ ಆದಾಯದ ಬೆಳವಣಿಗೆ: ₹4 ಲಕ್ಷ ಹೂಡಿಕೆಯಿಂದ ₹2 ಕೋಟಿ ಆದಾಯ

ಸ್ಟಾರ್ಟ್‌ಅಪ್ ಜಗತ್ತಿಗೆ ಕೊಟ್ಟ ದೊಡ್ಡ ಪಾಠ

ಕ್ಯಾಪಿಟಲ್‌ಲೆನ್ಸ್‌ನ ಪ್ರಥಮ್ ಎಂಬುವವರು 'X' (ಟ್ವಿಟರ್) ನಲ್‌ನಲ್ಲಿ ಕುಶಾಲ್ ಮತ್ತು ಚಾಹಕ್ ಅವರ ಈ ಯಶಸ್ಸಿನ ಕಥೆಯನ್ನು ಹಂಚಿಕೊಂಡ ನಂತರ ಇದು ವ್ಯಾಪಕ ವೈರಲ್ ಆಗಿದೆ. ಕೇವಲ ಡೆಲಿವರಿ ಆಪ್‌ಗಳು ಮತ್ತು ಪಾವತಿಸಿದ ಜಾಹೀರಾತುಗಳ ಮೇಲೆಯೇ ಸಂಪೂರ್ಣ ನೆಚ್ಚಿಕೊಳ್ಳುವ ಬದಲು, ಬಿಸಿನೆಸ್ ಆರಂಭಕ್ಕೆ ಮುನ್ನವೇ ಸೋಷಿಯಲ್ ಮೀಡಿಯಾ ಮೂಲಕ ಗ್ರಾಹಕರನ್ನು ತಲುಪುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಕಥೆ ಉದಾಹರಣೆಯಾಗಿದೆ.

ಮುಂದಿನ ಯೋಜನೆ:

ಈಗ ದಂಪತಿ ಕೇವಲ ಫುಡ್ ಟ್ರಕ್‌ಗೆ ಸೀಮಿತವಾಗದೆ, ದೊಡ್ಡ ಸೆಂಟ್ರಲ್ ಕಿಚನ್ ಹಾಗೂ 'ಫಾಸ್ಟ್-ಕ್ಯಾಶುಯಲ್ ರೆಸ್ಟೋರೆಂಟ್' ಔಟ್‌ಲೆಟ್‌ಗಳನ್ನು ತೆರೆಯಲು ಯೋಜಿಸುತ್ತಿದ್ದಾರೆ. ಸರಿಯಾದ ಪ್ರಾಡಕ್ಟ್, ಹೊಸ ಆಲೋಚನೆ ಮತ್ತು ಬಿಡುಗಡೆಗೂ ಮುನ್ನವೇ ಗ್ರಾಹಕರ ಗಮನ ಸೆಳೆಯುವ ತಂತ್ರವಿದ್ದರೆ ಎಂತಹ ವಿಫಲತೆಯನ್ನೂ ಯಶಸ್ಸಾಗಿ ಪರಿವರ್ತಿಸಬಹುದು ಎಂಬುದನ್ನು ಈ ಬೆಂಗಳೂರು ಜೋಡಿ ಸಾಬೀತುಪಡಿಸಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಂಟಿಆರ್, ವಿದ್ಯಾರ್ಥಿ ಭವನ ಶೈಲಿಯ ಮಸಾಲೆ ದೋಸೆ ಮೇಲೆ ಹಚ್ಚುವ ಬೆಳ್ಳುಳ್ಳಿ ಕೆಂಪು ಚಟ್ನಿ ಮಾಡೋ ಸುಲಭ ವಿಧಾನ
ಈ ವಿಚಿತ್ರ ಬಾರ್‌ನಲ್ಲಿ ವಿಸ್ಕಿ ಕುಡಿಯಲು ಜನ ಕ್ಯೂ ನಿಲ್ಲುತ್ತಾರೆ, ಇಲ್ಲಿ ಸಿಗೋ ಮದ್ಯದಲ್ಲಿ ಅಂತಾದ್ದೇನಿದೆ?