ಸ್ಟ್ರಾಬೆರ್ರಿ ಚೊಕೊಲೇಟ್​ ಕೇಕ್​ ಮಾಡುವುದನ್ನು ಕಲಿಸಿಕೊಡುತ್ತಿದ್ದಾರೆ ಸ್ಯಾಂಡಲ್​ವುಡ್​​ ನಟಿ ಮೇಘನಾ ರಾಜ್​

By Suvarna News  |  First Published Dec 24, 2023, 5:01 PM IST

ಕ್ರಿಸ್​ಮಸ್​ ಹಿನ್ನೆಲೆಯಲ್ಲಿ ಸ್ಯಾಂಡಲ್​ವುಡ್​ ನಟಿ ಮೇಘನಾ ರಾಜ್​ ಅವರು ಸ್ಟ್ರಾಬೆರ್ರಿ ಚೊಕೊಲೇಟ್​ ಕೇಕ್​ ಮಾಡುವುದನ್ನು ಕಲಿಸಿಕೊಟ್ಟಿದ್ದಾರೆ. 
 


ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ನಟಿ. ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಇವರ ಬದುಕಿನಲ್ಲಿ ಬರಸಿಡಿಲು ಬಡಿದಿತ್ತು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ  ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.  ವರ್ಷಗಳ ಬಳಿಕ  ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ ಮೇಘನಾ ರಾಜ್‌. ಕೆಲ ದಿನಗಳ ಹಿಂದಷ್ಟೇ ಹೊಸ  ಹೇರ್ ಸ್ಟೈಲ್ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಸಕತ್‌ ಸ್ಮಾರ್ಟ್‌ ಕಾಣಿಸುತ್ತಿದ್ದ ನಟಿಯರನ್ನು ಫ್ಯಾನ್ಸ್‌ ಹಾಡಿ ಹೊಗಳಿದರು. ತಮ್ಮ ಯೂಟ್ಯೂಬ್​ ಹೊಂದಿರೋ ನಟಿ ಮೇಘನಾ ಕೆಲವೊಂದು ವಿಷಯಗಳನ್ನು ಅದರಲ್ಲಿ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಅದರಲ್ಲಿಯೂ ಬ್ಯೂಟಿಗೆ ಸಂಬಂಧಿಸಿದ ಸುದ್ದಿಗಳು ಹಾಗೂ ತಾವು ಬಳಸುವ ಕೆಲವೊಂದು ಪ್ರಾಡಕ್ಟ್​ಗಳ ಬಗ್ಗೆಯೂ ತಿಳಿಸಿಕೊಡುತ್ತಾರೆ.

ಕೆಲವೊಂದು ಅಡುಗೆಗಳ ಬಗ್ಗೆ ನಟಿ ಮೇಘನಾ ತಿಳಿಸಿಕೊಡುತ್ತಾರೆ, ನಾಳೆ ಕ್ರಿಸ್​ಮಸ್​. ಕ್ರಿಸ್​ಮಸ್​ ಎಂದರೆ ಎಲ್ಲೆಡೆ ಕೇಕ್​ಗಳದ್ದೇ ಸಂಭ್ರಮ. ಇದೇ ಕಾರಣಕ್ಕೆ ನಟಿ ಮೇಘನಾ ಕೇರ್​ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಮನೆಯಲ್ಲಿಯೇ ಸುಲಭದಲ್ಲಿ ಹೇಗೆ ಕೇಕ್​ ಮಾಡಬಹುದು ಎಂದು ಅವರು ತಿಳಿಸಿಕೊಟ್ಟಿದ್ದಾರೆ. 

Tap to resize

Latest Videos

undefined

ವಂದನೆ ವಂದನೆ 'ಪುನೀತ ಕನ್ನಡಿಗರೇ' ನಿಮಗೆ ವಂದನೆ: 'ಕ್ವಾ' ಅವಾರ್ಡ್​ ಖುಷಿಯಲ್ಲಿ ನಟಿ ಅನುಶ್ರೀ ಮಾತಿದು...

ಸ್ಟ್ರಾಬೆರ್ರಿ ಚೊಕೊಲೇಟ್​ ಕೇಕ್​ ಮಾಡಲು ಬೇಕಾಗಿರುವ ಸಾಮಗ್ರಿ:
170 ಮೈದಾ ಹಿಟ್ಟು, 3 ಚಮಚ ಕೋಕೋ ಪೌಡರ್​, 2 ಚಮಚ ಬೇಕಿಂಗ್ ಪೌಡರ್​, 220 ಸಕ್ಕರೆ, 2 ವೆನಿಲಾ ಅಸೆನ್ಸ್​, ಮುಕ್ಕಾಲು ಕಪ್​ ಹಾಲು, ಮುಕ್ಕಾಲು ಕಪ್​ ಕರಗಿಸಿರುವ ಬೆಣ್ಣೆ, 2 ಮೊಟ್ಟೆ. 
ಫ್ರಾಸ್ಟಿಂಗ್​ಗೆ ಬೇಕಾಗುವ ಸಾಮಗ್ರಿ: 
150 ಗ್ರಾಮ್​ ಬೆಣ್ಣೆ, 3 ಕಪ್​ ಸಕ್ಕರೆ ಪೌಡರ್​, ಅರ್ಧ ಕಪ್​ ಕೋಕೋ ಪೌಡರ್​, ಒಂದೂವರೆ ಚಮಚ ವೆನಿಲಾ ಎಕ್​ಟ್ರ್ಯಾಕ್​ ಮತ್ತು 4-5 ಚಮಚ ಉಗುರು ಬೆಚ್ಚಗಿನ ಹಾಲು. 
ಮಾಡುವ ವಿಧಾನ: ಮೊದಲಿಗೆ ಡ್ರೈ ಸಾಮಗ್ರಿಗಳಾದ ಮೈದಾ, ಸಕ್ಕರೆ, ಕೋಕೋ ಪೌಡರ್​ ಮಿಕ್ಸ್​ ಮಾಡಬೇಕು. ನಂತರ ವೆಟ್ ಸಾಮಗ್ರಿಗಳನ್ನು ಎಗ್​ಬೀಟ್​ನಿಂದ ಎಲ್ಲಾ ಮಿಕ್ಸ್​ ಮಾಡಬೇಕು. ನಂತರ ವೆಟ್​ ಮತ್ತು ಡ್ರೈ ಎಲ್ಲವನ್ನೂ ಮಿಕ್ಸ್​ ಮಾಡಬೇಕು. ಚಾಕಲೇಟ್​ ಚಂಕ್​ ಮಿಕ್ಸ್​ ಮಾಡಬೇಕು. ಮೈಕ್ರೋವೇವ್​ನಲ್ಲಿ 5-10 ನಿಮಿಷ ಬಿಸಿ ಮಾಡಬೇಕು. ಅದನ್ನು ತೆಗೆದು ಫ್ರಾಸ್ಟಿಂಗ್​ಗೆ ಇಟ್ಟ ಸಾಮಗ್ರಿ ಮಿಕ್ಸ್ ಮಾಡಿ ಮೇಲೆ ಲೇಪಿಸಬೇಕು. ಇಷ್ಟು ಮಾಡಿದರೆ ಟೇಸ್ಟಿ ಟೇಸ್ಟಿ ಸ್ಟ್ರಾಬೆರ್ರಿ ಚೊಕೊಲೇಟ್​ ಕೇಕ್​ ರೆಡಿಯೆಂದಿದ್ದಾರೆ ನಟಿ. 

ಇದೇ ವೇಳೆ ತಮಗೂ ಡಿಸೆಂಬರ್​ ತಿಂಗಳಿಗೂ ಇರುವ ಸಂಬಂಧದ ಕುರಿತು ಮೇಘನಾ ರಾಜ್​ ಮಾತನಾಡಿದ್ದಾರೆ. ಚಿರು ತಮಗೆ ಲೆಟರ್​ ಕೊಟ್ಟಿರುವುದು, ಗಿಫ್ಟ್​ ಕೊಟ್ಟಿರುವ ಮೆಮೋರಿ ಕ್ರಿಸ್​ಮಸ್​ ಜೊತೆ ಸೇರಿದೆ. ತಮ್ಮ ಮನೆಯಲ್ಲಿಯೂ ಕ್ರಿಸ್​ಮಸ್​ ಆಚರಿಸುವುದಾಗಿ ಹೇಳಿದ್ದಾರೆ. ಅಂದಹಾಗೆ, ಚಿರಂಜೀವಿ ಸರ್ಜಾ ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳೇ ಕಳೆದಿವೆ. 2020ರ ಜೂನ್​ 7ರಂದು ಹೃದಯಾಘಾತದಿಂದ ಅಗಲಿದಾಗ ಇಡೀ ಚಿತ್ರರಂಗ ಶಾಕ್​ ಆಗಿತ್ತು. ಚಿರಂಜೀವಿ ಬದುಕಿರುತ್ತಿದ್ದರೆ, ಅಂದರೆ, ಕಳೆದ ಅಕ್ಟೋಬರ್​ 17ರಂದು 39ನೇ ವರ್ಷ  ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಇಂದು ಅವರ ಹುಟ್ಟುಹಬ್ಬದ ನಿಮಿತ್ತ ಅವರ ಅಭಿಮಾನಿಗಳು ಚಿರು ಅವರನ್ನು ನೆನಪಿಸಿಕೊಂಡು ಭಾವುಕರಾಗುತ್ತಿದ್ದರೆ, ಪತ್ನಿ ಮೇಘನಾ ರಾಜ್​ ಕೂಡ ಭಾವುಕ ಪೋಸ್ಟ್​ ಮಾಡಿದ್ದರು. ಹ್ಯಾಪ್ಪಿ ಬರ್ತಡೇ ಹಸ್​ಬಂಡ್​ ಎಂದು ಹಳೆಯ ಫೋಟೋ ಒಂದನ್ನು ಶೇರ್​ ಮಾಡಿಕೊಂಡು ಮೇಘನಾ ಅವರು ಬರೆದುಕೊಂಡಿದ್ದರು. ಇದೇ ವೇಳೆ ಚಿರಂಜೀವಿ ಅವರ ಸಹೋದರ ಧ್ರುವ ಸರ್ಜಾ ಕೂಡ ಅಣ್ಣನನ್ನು ನೆನಪಿಸಿಕೊಂಡು ಹುಟ್ಟುಹಬ್ಬಕ್ಕೆ ಶುಭಾಯ ಕೋರಿದ್ದರು. 

ನನ್ನ ಹೊಸ ಹೇರ್​ ಕಲರ್​ ನೋಡಿದ್ರಾ ಅಂತ ನಿವೇದಿತಾ ಕೇಳಿದ್ರೆ ನೋಡಿದ್ದೇ ಬೇರೆ ಅನ್ನೋದಾ ಟ್ರೋಲಿಗರು!
 

click me!