ಝೋಮ್ಯಾಟೋದಲ್ಲಿ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ನಾಯಿ ಕಾಲು ಸಿಕ್ತು ಎಂದ ಗ್ರಾಹಕ: ವೀಡಿಯೋ ವೈರಲ್

Published : Mar 13, 2026, 11:50 AM IST
dog leg in biriyani

ಸಾರಾಂಶ

ಝೋಮ್ಯಾಟೋ ಮೂಲಕ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ನಾಯಿಯ ಕಾಲನ್ನು ಹೋಲುವ ಮಾಂಸದ ತುಂಡು ಪತ್ತೆಯಾಗಿದೆ ಎಂದು ಗ್ರಾಹಕನೋರ್ವ ಆರೋಪಿಸಿದ್ದಾನೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನ್‌ಲೈನ್ ಆಹಾರ ಪ್ರಿಯರಲ್ಲಿ ಆತಂಕ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.

ಬಿರಿಯಾನಿಯಲ್ಲಿ ನಾಯಿಯ ಕಾಲನ್ನು ಹೋಲುವ ಮಾಂಸ..!

ಆನ್‌ಲೈನ್ ಆಹಾರ ಪೂರೈಕೆ ಮಾಡುವ ಪ್ಲಾಟ್‌ಫಾರ್ಮ್ ಝೋಮ್ಯಾಟೋದಲ್ಲಿ ಮಾಡಿದ ಬಿರಿಯಾನಿಯಲ್ಲಿ ನಾಯಿಯ ಕಾಲನ್ನು ಹೋಲುವ ಮಾಂಸದ ಪೀಸೊಂದು ಸಿಕ್ಕಿದೆ ಎಂದು ಗ್ರಾಹಕನೋರ್ವ ವೀಡಿಯೋ ಮಾಡಿ ಹೇಳಿಕೊಂಡಿದ್ದಾನೆ. ಈ ವಿಚಾರ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿ ತಿನ್ನುವ ಸಾವಿರಾರು ಗ್ರಾಹಕರಿಗೆ ಆಘಾತ ನೀಡಿದ್ದು, ಆತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಒಂದೆಡೆ ಇಸ್ರೇಲ್ ಅಮೆರಿಕಾ ಇರಾನ್ ನಡುವಣ ಯುದ್ಧದ ನಂತರ ಸಿಲಿಂಡರ್ ಅಭಾವದಿಂದಾಗಿ ಹೊಟೇಲ್‌ಗಳು ಕೆಲವು ಕಡೆಗಳಲ್ಲಿ ಆಹಾರ ವಿತರಣೆಯನ್ನೇ ನಿಲ್ಲಿಸಿದ್ದರೆ ಇಲ್ಲೊಂದು ಕಡೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ನಾಯಿ ಕಾಲು ಪತ್ತೆಯಾಗಿದೆ ಎಂದು ಗ್ರಾಹಕನೋರ್ವ ಹೇಳಿಕೊಂಡಿದ್ದು, ಇದು ಅನೇಕ ಬಿರಿಯಾನಿ ಪ್ರಿಯರನ್ನು ಆಘಾತಕ್ಕೀಡು ಮಾಡಿದೆ.

void @wosgnn ಎಂಬ ಎಕ್ಸ್ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ಮಾಂಸದ ಒಂದು ತುಂಡನ್ನು ಎತ್ತಿ ತೋರಿಸುತ್ತಾ ಇದು ನಾಯಿಯ ಕಾಲನ್ನು ಹೋಲುವಂತಿದೆ. ಇದು ಕೋಳಿ ಅಥವಾ ಕುರಿಯ ಕಾಲುಗಳಿಗಿಂತ ನಾಯಿಯ ಪಾದವನ್ನು ಹೋಲುವಂತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿದೆ.

ಇದನ್ನೂ ಓದಿ:  ಅಪ್ಪ ಇಲ್ಲದ ಕಂದನಿಗೆ ಅಮ್ಮನ ಆಸೆಯಂತೆ ಹೆಸರಿಟ್ಟ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ

ಅನೇಕರು ಈ ವಿಚಾರದ ಬಗ್ಗೆ ಭಯ ವ್ಯಕ್ತಪಡಿಸಿದ್ದರೆ ಇನ್ನೂ ಅನೇಕರು ಡಾಗ್ ಬಿರಿಯಾನಿ ಬೌ ಬೌ ಬಿರಿಯಾನಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಮತ್ತೆ ಅನೇಕರು ಗ್ರಾಹಕನ ಈ ಆರೋಪದ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನು ಪತ್ತೆ ಮಾಡು ಮೊದಲು ಅವರು ಈಗಾಗಲೇ ಅರ್ಧದಷ್ಟು ಬಿರಿಯಾನಿ ತಿಂದಿರುವುದು ಕಂಡು ಬರುತ್ತಿದೆ ಎಂಬುದನ್ನು ಗಮನಿಸಿದರು. ಅನೇಕರು ಇದಕ್ಕೆ ಆಹಾರ ಪೂರೈಕೆ ಘಟಕ ಝೋಮ್ಯಾಟೋವನ್ನು ದೂರುವುದಕ್ಕಿಂತ ಅವರು ಎಲ್ಲಿಂದ ಆರ್ಡರ್ ಮಾಡಿದರೋ ಆ ಹೊಟೇಲ್ ಬಗ್ಗೆ ಮಾಹಿತಿ ನೀಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಆಪರೇಷನ್ ಕಮಲ ಭೀತಿ: ಬೆಂಗಳೂರಿನಲ್ಲಿ ಬೀಡು ಬಿಟ್ಟ ಅಸ್ಸಾಂನ 12 ಕಾಂಗ್ರೆಸ್ ಶಾಸಕರು

ಈ ವಿಡಿಯೋಗೆ ಸಂಬಂಧಿಸಿದಂತೆ ಆನ್‌ಲೈನ್ ಆಹಾರ ಪೂರೈಕೆ ಸಂಸ್ಥೆಯಾದ ಝೋಮ್ಯಾಟೋ ಪ್ರತಿಕ್ರಿಯೆ ನೀಡಿಲ್ಲ, ಈ ರೀತಿ ಆನ್ಲೈನ್‌ ನಲ್ಲಿ ಕೆಲವರು ಮಾಡುವ ಆರೋಗಳನ್ನು ನೇರವಾಗಿ ನಂಬುವ ಬದಲು ಇದಕ್ಕೆ ವಿಧಿವಿಜ್ಞಾನ ಅಥವಾ ಪ್ರಯೋಗಾಲಯ ಪರಿಶೀಲನೆ ಸೇರಿದಂತೆ ಸರಿಯಾದ ಪ್ರಕ್ರಿಯೆಯು ಅತ್ಯಗತ್ಯವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವ್ಯಕ್ತಿಯ ಆರೋಪಗಳು ಈಗ ಆನ್‌ಲೈನ್‌ನಲ್ಲಿ ಬಿರಿಯಾನಿ ಆರ್ಡರ್ ಮಾಡಿ ತಿನ್ನುವವರನ್ನು ಆತಂಕಕ್ಕೆ ದೂಡಿದೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಾಂಭಾರ್‌ಗಿಂತ ರುಚಿಯಾಗೋ ಆಲೂಗಡ್ಡೆ ಜಂಪು; ಒಂದೇ ಒಂದು ತರಕಾರಿ ಸಾಕು! ಬೇಗ ಕೆಡಲ್ಲ
Summer Drinks ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ ಪಾನೀಯ ಕುಡಿಯಿರಿ, ಖರ್ಚು ಕಡಿಮೆ