ತಂದೆಗೆ ತಕ್ಕ ಮಗ, ಅಪ್ಪನ ಹೆಸರುಳಿಸುವವನು, ಮನೆತನದ ಹೆಸರನ್ನು ಬೆಳಗುವವನು ಹೀಗೆಲ್ಲಾ ಮಾತಾಡಿಕೊಳ್ಳುವುದನ್ನು ನಾವು ಕೇಳಿದ್ದೇವೆ. ಹೀಗೆ ತಂದೆ ಹಾಕಿಕೊಟ್ಟ ಮಾರ್ಗದಲ್ಲಿ ಅಥವಾ ತಂದೆಗೆ ಶ್ರೇಯಸ್ಸು ಬರುವ ಮಾರ್ಗದಲ್ಲಿ ನಡೆದುಕೊಳ್ಳುವ ಮಕ್ಕಳು ಇರುತ್ತಾರೆ. ಇಂತಹ ಗುಣ ಹಾಗೂ ಸಾಧನೆಯು ರಾಶಿಗಳ ಅನುಸಾರವಾಗಿಯೂ ಬರುತ್ತದೆ. ಹಾಗಾದರೆ ಇಂತಹ ರಾಶಿಗಳು ಯಾವುವು? ಅವರ ಸಾಧನೆಗಳು ಏನು ಎಂಬ ಬಗ್ಗೆ ನೋಡೋಣ ಬನ್ನಿ....
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) 27 ನಕ್ಷತ್ರಗಳು, 12 ರಾಶಿಗಳು (Zodiac sign) ಮತ್ತು 9 ಗ್ರಹಗಳಿಂದ (Planet) ವ್ಯಕ್ತಿಯ ಭವಿಷ್ಯದ ವಿಚಾರಗಳನ್ನು ತಿಳಿಯಬಹುದಾಗಿದೆ. ಹಾಗೆಯೇ ಹನ್ನೆರಡು ರಾಶಿಗಳ ಬಗ್ಗೆ ಹೇಳುವುದಾದರೆ, ಪ್ರತಿ ರಾಶಿಗೂ ಒಂದೊಂದು ವಿಶೇಷತೆ ಇದೆ. ರಾಶಿಯನುಸಾರ ಕೆಲವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ, ಅಷ್ಟೇ ಅಲ್ಲದೆ ವಿನಯದಿಂದ ಎಲ್ಲರೊಂದಿಗೆ ನಡೆದುಕೊಳ್ಳುತ್ತಾರೆ.
ರಾಶಿ ಚಕ್ರದಲ್ಲಿ ಅಂಥಹ ಮೂರು ರಾಶಿಯ ಹುಡುಗರು (Boys) ಅಪ್ಪನಿಗೆ (Father) ಹೆಮ್ಮೆ ತರವಂಥಹ ಕೆಲಸಗಳನ್ನು ಮಾಡುವವರಾಗಿರುತ್ತಾರೆ. ವೃತ್ತಿ ಕ್ಷೇತ್ರದಲ್ಲಿ (Career) ಉತ್ತಮ ಹೆಸರು ಮತ್ತು ಗೌರವವನ್ನು ಗಳಿಸುತ್ತಾರೆ. ಸಮಾಜದಲ್ಲಿ (Society) ಉತ್ತಮ ಗೌರವವನ್ನು ಹೊಂದಿರುವ ಈ ವ್ಯಕ್ತಿಗಳು, ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಈ ವ್ಯಕ್ತಿಗಳು ಹೋದ ಕಡೆಗಳಲ್ಲೇಲ್ಲಾ ತಮ್ಮ ಛಾಪು ಮೂಡಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ಅಷ್ಟೇ ಅಲ್ಲದೆ ತಂದೆಗೆ ಗೌರವ ಮತ್ತು ಪ್ರತಿಷ್ಟೆ ತರವಂಥ ಕೆಲಸಗಳನ್ನು ಈ ಮೂರು ರಾಶಿಯ ಹುಡುಗರು ಮಾಡುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ...
ಮೇಷ ರಾಶಿ (Aries)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯ ಹುಡುಗರು ಬುದ್ಧಿವಂತರು (Intelligent) ಮತ್ತು ಸಾಹಸ (Adventure) ಪ್ರವೃತ್ತಿ ಉಳ್ಳವರಾಗಿರುತ್ತಾರೆ. ಈ ರಾಶಿಯ ವ್ಯಕ್ತಿಗಳು ಹೆಚ್ಚಿನ ಆತ್ಮವಿಶ್ವಾಸವನ್ನು (Confidence) ಹೊಂದಿರುತ್ತಾರೆ. ಈ ರಾಶಿಯ ಹುಡುಗರು ಯಾವುದೇ ಸವಾಲುಗಳನ್ನು (Challenge) ಎದುರಿಸಲು ಭಯ ಪಡುವುದಿಲ್ಲ. ಬದಲಾಗಿ ಅದರಿಂದ ಹೊರಬರುವ ಬಗ್ಗೆ ಯೋಚಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಈ ವ್ಯಕ್ತಿಗಳ ಬುದ್ಧಿವಂತಿಕೆಯಿಂದ ವ್ಯಾಪಾರ – ವ್ಯವಹಾರಗಳು (Business) ಹೆಚ್ಚು ಲಾಭ ಗಳಿಸುವಂತಾಗುತ್ತದೆ. ಅಷ್ಟೇ ಅಲ್ಲದೇ ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಹೆಸರುಗಳಿಸುವ ಮೇಷ ರಾಶಿಯ ವ್ಯಕ್ತಿಗಳು ತಂದೆಗೆ ಹೆಸರು ತಂದುಕೊಡುವುದಲ್ಲದೇ. ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುವಂತೆ ಮಾಡುತ್ತಾರೆ. ಮೇಷ ರಾಶಿಯ ಅಧಿಪತಿ ಗ್ರಹ ಮಂಗಳವಾಗಿದೆ. ಹಾಗಾಗಿ ಮಂಗಳ ಗ್ರಹವು (Mars) ಈ ರಾಶಿಯವರಿಗೆ ಉತ್ತಮ ಗುಣಗಳನ್ನು ಪ್ರಧಾನ ಮಾಡುತ್ತದೆ.
ಇದನ್ನು ಓದಿ: Astrology and dreams: ಬೆಳಗಿನ ಜಾವ ಬೀಳೋ ಕನಸುಗಳು ನಿಜವಾಗ್ತಾವಾ?
ವೃಷಭ ರಾಶಿ (Taurus)
ಈ ರಾಶಿಯ ವ್ಯಕ್ತಿಗಳು ಕಲೆಯನ್ನು (Art) ಪ್ರೀತಿಸುವವರಾಗಿರುತ್ತಾರೆ. ಶುಕ್ರ ಗ್ರಹದ (Venus) ಪ್ರಭಾವದಿಂದ ಈ ವ್ಯಕ್ತಿಗಳದ್ದು ತುಂಬಾ ಪ್ರಭಾವಿ ವ್ಯಕ್ತಿತ್ವವಾಗಿರುತ್ತದೆ. ಸಮಾಜದಲ್ಲಿ ವಿಶೇಷವಾದ ಸ್ಥಾನಮಾನವನ್ನು ಹೊಂದಿರುತ್ತಾರೆ. ಈ ರಾಶಿಯ ಹುಡುಗರು ಕುಟುಂಬದ ವ್ಯಕ್ತಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಹಾಗಾಗಿ ಮನೆಯವರನ್ನು ಸಂತೋಷವಾಗಿಡುವ ಸಲುವಾಗಿ ಈ ವ್ಯಕ್ತಿಗಳು ಹೆಚ್ಚಿನ ಪ್ರಯತ್ನ ಮಾಡುತ್ತಾರೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳಿಗೆ ಐಷಾರಾಮಿ ಜೀವನವನ್ನು (Luxury Life) ನಡೆಸುವುದು ಇಷ್ಟವಾಗಿರುತ್ತದೆ. ಹಾಗಾಗಿ ಅಂತಹ ಜೀವನವನ್ನು ನಡೆಸಲು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ಮನೆಯವರ ಮತ್ತು ತಂದೆಯ ಹೆಸರು ಉಳಿಸುವಂತಹ ಉತ್ತಮ ಕಾರ್ಯಗಳನ್ನು ಮಾಡುತ್ತಾರೆ. ವೃಷಭ ರಾಶಿಯ ಹುಡುಗರಿಗೆ ಶುಕ್ರಗ್ರಹದಿಂದ ಈ ಗುಣಗಳು ಲಭಿಸಿರುತ್ತವೆ.
ಇದನ್ನು ಓದಿ: Vastu Tips: ದೇವರ ಕೋಣೆಯ ಈ ಬದಲಾವಣೆಗೆ ಸಿಗಲಿದೆ ಲಕ್ಷ್ಮೀ ಕೃಪೆ!
ಮಕರ ರಾಶಿ (Capricorn)
ಈ ರಾಶಿಯ ಹುಡುಗರು ಹೆಚ್ಚು ಪ್ರಯತ್ನಶೀಲರು ಮತ್ತು ಕೆಲಸದಲ್ಲಿ ಹೆಚ್ಚಿನ ಉತ್ಸಾಹವುಳ್ಳವರಾಗಿರುತ್ತಾರೆ. ಈ ವ್ಯಕ್ತಿಗಳು ಜೀವನದಲ್ಲಿ ಏನನ್ನು ಬಯಸುತ್ತಾರೋ ಅದನ್ನು ಪಡೆಯುವ ಶಕ್ತಿಯನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳ ಕುಟುಂಬದಲ್ಲಿ ಯಾವಾಗಲೂ ಸಂತೋಷ (Happiness) ಮತ್ತು ನೆಮ್ಮದಿ ನೆಲೆಸಿರುವಂತೆ ನೋಡಿಕೊಳ್ಳುತ್ತಾರೆ. ಈ ರಾಶಿಯ ಹುಡುಗರು ಜೀವನದಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆಯುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಪರಿಶ್ರಮವನ್ನು ಪಡುತ್ತಾರೆ ಮತ್ತು ಹಣವನ್ನು (Money) ಸಂಪಾದಿಸುತ್ತಾರೆ. ಮಕರ ರಾಶಿಯ ಅಧಿಪತಿ ದೇವರು ಶನಿ (Saturn) ಗ್ರಹವಾಗಿದೆ. ಹಾಗಾಗಿ ಈ ಗ್ರಹದ ಕೃಪೆಯಿಂದಾಗಿ ಈ ರಾಶಿಯ ಹುಡುಗರಿಗೆ ಉತ್ತಮ ಗುಣಗಳು ಪ್ರಾಪ್ತವಾಗಿರುತ್ತವೆ.