Hindu Ritual: ಪ್ರತಿ ನಿತ್ಯ ಸಂಧ್ಯಾವಂದನೆ ಮಾಡುವುದ್ರಿಂದ ಇದೆ ಎಷ್ಟೊಂದು ಲಾಭ!

By Suvarna News  |  First Published Feb 2, 2022, 5:02 PM IST

ಇತ್ತೀಚಿನ ದಿನಗಳಲ್ಲಿ ಸಂಧ್ಯಾವಂದನೆ ಕಣ್ಮರೆಯಾಗ್ತಿದೆ. ಕೆಲವೇ ಕೆಲವು ಮಂದಿ ಇದನ್ನು ರೂಢಿಸಿಕೊಂಡು ಬರ್ತಿದ್ದಾರೆ. ಸಂಧ್ಯಾವಂದನೆಯಿಂದ ಸಾಕಷ್ಟು ಲಾಭವಿದೆ. ಹಿಂದೂ ಧರ್ಮದಲ್ಲಿ ಅದಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ.
 


ಸಂಧ್ಯಾ ವಂದನೆ(Sandhya Vandana)ಯ ಸಂಪ್ರದಾಯ (Tradition) ಬಹಳ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸಂಧಿ (Sandhi) ಕಾಲದಲ್ಲಿ ಇದನ್ನು ಮಾಡಲಾಗುತ್ತದೆ.  ಸೂರ್ಯೋದಯ(Sunrise)ಕ್ಕೆ ಮುಂಚಿನ ಒಂದೂವರೆ ಗಂಟೆಯಿಂದ ಸೂರ್ಯೋದಯದವರೆಗಿನ ಅವಧಿಯನ್ನು ಬ್ರಹ್ಮ ಮುಹೂರ್ತ ಎಂದು ಕರೆಯಲಾಗುತ್ತದೆ. ಸೂರ್ಯಾಸ್ತದ ಒಂದೂವರೆ ಗಂಟೆಗಳವರೆಗಿನ ಸಮಯವನ್ನು ಮುಸ್ಸಂಜೆ ಎಂದು ಕರೆಯಲಾಗುತ್ತದೆ. ಅದೇ ರೀತಿ ಬ್ರಹ್ಮ ಮುಹೂರ್ತದಿಂದ ಸೂರ್ಯಾಸ್ತದವರೆಗೆ ನಾಲ್ಕು ಪಹರಗಳಿವೆ. ಈ ಹಂತಗಳ ನಡುವೆ ಸಂಭವಿಸುವ ಅವಧಿಯನ್ನು ಸಂಧಿ ಕಾಲ ಎಂದು ಕರೆಯಲಾಗುತ್ತದೆ. ಏಕಕಾಲದಲ್ಲಿ ಸಂಧ್ಯಾ ವಂದನೆಯು ಈ ಸಂಧಿ ಕಾಲದಲ್ಲಿ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಸಂಧ್ಯಾವಂದನೆ ನಿಯಮವನ್ನು ಪ್ರತಿಯೊಬ್ಬರೂ ಪಾಲಿಸುತ್ತಿದ್ದರು. ಆದ್ರೀಗ ಜೀವನಶೈಲಿ ಬದಲಾದಂತೆ ಸಂಧ್ಯಾವಂದನೆ ಮರೆತು ಹೋಗಿದೆ.

ಪುರಾಣ ಕಾಲದಿಂದಲೂ ಸಂಜೆ ಪೂಜೆ ನಡೆಯುತ್ತಿದೆ : ಸಂಧ್ಯಾವಂದನೆ ಈಗಿನದಲ್ಲ. ಪುರಾಣ ಕಾಲದಿಂದಲೂ ಸಂಧ್ಯಾವಂದನೆ ಇತ್ತು ಎಂಬುದನ್ನು ನಾವು ಗ್ರಂಥಗಳಿಂದ ತಿಳಿದುಕೊಳ್ಳಬಹುದು. ಹಿಂದಿನ ಕಾಲದಲ್ಲಿ ಎಂಟರಲ್ಲಿ ಐದು ಮಂದಿ ಸಂಧ್ಯಾವಂದನೆಯನ್ನು ಕಡ್ಡಾಯವಾಗಿ ಮಾಡ್ತಿದ್ರು.ಸಾಮಾನ್ಯ ಜನರು ದಿನದಲ್ಲಿ ಎರಡು ಬಾರಿ ಸಂಧ್ಯಾವಂದನೆಯನ್ನು ಮಾಡಬೇಕಾಗಿತ್ತು. 

ಸಂಧ್ಯಾವಂದನೆಯಲ್ಲಿ ಏನು ಮಾಡ್ತಾರೆ? : 
ಬೆಳಿಗ್ಗೆ,ಮಧ್ಯಾಹ್ನ ಮತ್ತು ಸಂಜೆ ಸಂಧ್ಯಾವಂದನೆ ಮಾಡಬೇಕು. ಸಮಯಕ್ಕೆ ತಕ್ಕಂತೆ ಮಂತ್ರಗಳಿವೆ. ಆದ್ರೆ ಬೆಳಿಗ್ಗೆ ಮತ್ತು ಮಧ್ಯಾಹ್ನವನ್ನು ಒಟ್ಟಿಗೆ ಸೇರಿಸಲಾಗಿದೆ. ಹಾಗಾಗಿ ಬೆಳಿಗ್ಗೆ ಅಥವಾ ಮಧ್ಯಾಹ್ನ ಯಾವಾಗ ಬೇಕಾದರೂ ಸಂಧ್ಯಾವಂದನೆ ಮಾಡಬಹುದು. ಇದಾದ ನಂತ್ರ ಸೂರ್ಯಾಸ್ತದ ಸಮಯದಲ್ಲಿ ಮತ್ತೊಮ್ಮೆ ಸಂಧ್ಯಾವಂದನೆ ಮಾಡಬೇಕಾಗುತ್ತದೆ.

ಸಂಧ್ಯಾ ವಂದನೆಯ ಸಮಯದಲ್ಲಿ, ಗಾಯತ್ರಿ ಮಂತ್ರವನ್ನು ಪಠಿಸಲಾಗುತ್ತದೆ.ಪ್ರಾರ್ಥನೆ,ಪ್ರಾಣಾಯಾಮ ಇತ್ಯಾದಿಗಳನ್ನು ಮಾಡಲಾಗುತ್ತದೆ.ಸಂಜೆಯ ಪೂಜೆಯಲ್ಲಿ ನಿರಾಕಾರ ದೇವರನ್ನು ಪೂಜಿಸಲಾಗುತ್ತದೆ. ಗಾಯತ್ರಿ ಮಂತ್ರ ಹೇಳುವಾಗ ತಪ್ಪಾಗದಂತೆ ಎಚ್ಚರ ವಹಿಸಬೇಕು. ಹಾಗಾಗಿ ಸಂಧ್ಯಾವಂದನೆ ಸಮಯದಲ್ಲಿ ಗಾಯತ್ರಿ ಮಂತ್ರ ಹೇಳಲು ಬಯಸುವವರು ಸರಿಯಾದ ಮಾರ್ಗದರ್ಶನ ಪಡೆದಿರಬೇಕೆಂದು ಹೇಳಲಾಗಿದೆ. ಆಧುನಿಕ ಯುಗದಲ್ಲಿ ಜನರು ಪೂಜೆ, ಯಾಗ, ಆರತಿ ಮತ್ತು ಹವನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ದೇವಸ್ಥಾನಗಳಲ್ಲಿ ಅರ್ಚನೆ, ಆರಾಧನೆ, ಪೂಜೆ ನಡೆಯುತ್ತದೆ. ಆದ್ರೆ ಈ ಪೂಜೆ,ಹೋಮಕ್ಕಿಂತ  ಹಿಂದೂ ಧರ್ಮದಲ್ಲಿ  ಸಂಧ್ಯಾ ವಂದನೆ ಮಾಡುವುದು ಕಡ್ಡಾಯ ಹಾಗೂ ಉತ್ತಮ ಎನ್ನಲಾಗುತ್ತದೆ.

Tap to resize

Latest Videos

undefined

Aksharabhyasam: ನಿಮ್ಮ ಪುಟ್ಟ ಕಂದನಿಗೆ ಅಕ್ಷರಾಭ್ಯಾಸ ಮಾಡಿಸಿದ್ರಾ?

ಸಂಧಿ ಕಾಲದಲ್ಲಿ ಸಂಧ್ಯಾವಂದನೆ ಏಕೆ ಅನಿವಾರ್ಯ: 
ನಂಬಿಕೆಯ ಪ್ರಕಾರ, ಸಂಧಿಯ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚು ಸಕ್ರಿಯವಾಗುತ್ತವೆ. ಈ ಕಾರಣಕ್ಕಾಗಿ, ಈ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗಿದೆ. ಸಂಧಿ ಕಾಲದಲ್ಲಿ ಆಹಾರ ಸೇವನೆ ಮಾಡಬಾರದು. ನಿದ್ರೆ ಮಾಡುವುದನ್ನು ತಪ್ಪಿಸಬೇಕು. ಈ ಸಮಯದಲ್ಲಿ ಮಲವಿಸರ್ಜನೆ ಮಾಡಬಾರದು. ಲೈಂಗಿಕ ಕ್ರಿಯೆಯನ್ನು ತಪ್ಪಿಸಬೇಕೆಂದು ಹೇಳಲಾಗಿದೆ. ಕೋಪ ಮಾಡಿಕೊಳ್ಳಬಾರದು.ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಯಾವುದೇ ವಹಿವಾಟು, ವ್ಯವಹಾರ ಮಾಡಬಾರದು. ಹೊರಗೆ ಪ್ರಮಾಣ ಬೆಳೆಸುವ ಜೊತೆಗೆ ಮಂಗಳ ಕಾರ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.

ZODIAC SIGN AND ILLNESS: ಯಾವ ರಾಶಿಗೆ ಯಾವ ಅನಾರೋಗ್ಯ ಹೆಚ್ಚಾಗಿ ಕಾಡುವುದು ನೋಡಿ..

ಸಂಧ್ಯಾ ವಂದನೆ ಏಕೆ ಮುಖ್ಯ?
ವಿವಿಧ ಧರ್ಮಗಳಲ್ಲಿ ಪೂಜೆಯ ವಿವಿಧ ವಿಧಾನಗಳನ್ನು ಹೇಳಲಾಗಿದೆ. ಹಾಗೆಯೇ ಹಿಂದೂ ಧರ್ಮದಲ್ಲಿ ಸಂಧ್ಯಾ ವಂದನೆಯನ್ನು ಮುಖ್ಯ ಮತ್ತು ಕಡ್ಡಾಯ ಎಂದು ಹೇಳಲಾಗುತ್ತದೆ. ನಂಬಿಕೆಯ ಪ್ರಕಾರ, ಸಂಜೆ ಪೂಜೆಯ ನಂತರ, ಎಲ್ಲಾ ರೋಗಗಳು ಮತ್ತು ದುಃಖಗಳು ಕೊನೆಗೊಳ್ಳುತ್ತವೆ. ಇದರೊಂದಿಗೆ, ಹೃದಯವು ತುಂಬಾ ಶುದ್ಧವಾಗುತ್ತದೆ ಮತ್ತು ಮನಸ್ಸು ಮತ್ತು ಮೆದುಳಿನಲ್ಲಿ ಧನಾತ್ಮಕ ಶಕ್ತಿ ಹರಿಯಲು ಪ್ರಾರಂಭವಾಗುತ್ತದೆ. ಸಂಧ್ಯಾವಂದನೆಯಿಂದ ಯಾವುದೇ ಪುಣ್ಯ ಪ್ರಾಪ್ತಿಯಾಗುವುದಿಲ್ಲ. ಅಥವಾ ಮಾಡಿದ ಪಾಪ ಕಳೆಯುವುದಿಲ್ಲ. ಸಂಧ್ಯಾವಂದನೆ ಎಂದರೆ ಭಗವಂತನಿಗೆ ಧನ್ಯವಾದ ಸಲ್ಲಿಸಲು ಒಂದು ಕೆಲಸ ಎನ್ನಬಹುದು. ಇದನ್ನು ಪ್ರತಿನಿತ್ಯ ತಪ್ಪದೆ ಮಾಡಿದಲ್ಲಿ ಮನಸ್ಸು ಶಾಂತಗೊಳ್ಳುತ್ತದೆ. ಮುಂಜಾನೆ ಹಾಗೂ ಸಂಜೆ ಇದನ್ನು ಮಾಡುವುದ್ರಿಂದ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ನಂಬಲಾಗಿದೆ. ಎರಡೂ ಸಮಯದಲ್ಲಿ ಸಂಧ್ಯಾವಂದನೆ ಸಾಧ್ಯವಿಲ್ಲ ಎನ್ನುವವರು ದಿನದಲ್ಲಿ ಒಮ್ಮೆಯಾದ್ರೂ ಇದನ್ನು ಮಾಡಬೇಕು.

click me!