Parenting Mistakes: ಈ ರಾಶಿಯವರು ಮುದ್ದಿನ ಹೆಸರಲ್ಲಿ ಮಕ್ಕಳನ್ನು ಹಾಳು ಮಾಡುತ್ತಾರೆ!

By Suvarna News  |  First Published Jan 22, 2022, 6:04 PM IST

ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಬಗ್ಗೆ ಯಾವುದೇ ರೂಲ್ ಬುಕ್ ಇಲ್ಲ. ಆದರೂ, ಪೋಷಕರು ಮಾಡುವ ಕೆಲ ತಪ್ಪುಗಳು ಅವರ ಮಕ್ಕಳನ್ನು ಹಾಳು ಮಾಡುತ್ತವೆ. ಈ 5 ರಾಶಿಯ ಪೋಷಕರು ಇಂಥ ತಪ್ಪುಗಳನ್ನು ಮಾಡುವುದು ಹೆಚ್ಚು. 


ಪೇರೆಂಟಿಂಗ್ ಎಂಬುದು ಪ್ರತಿ ಪೋಷಕರಿಗೂ ಹೊಸತೇ. ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದು ಯಾರಿಗೂ ತಿಳಿದಿರುವುದಿಲ್ಲ. ತಾವು ನಂಬಿದಂತೆ, ತಮಗೆ ಸರಿ ಎನಿಸಿದಂತೆ, ಅಲ್ಲಿ ಇಲ್ಲಿ ಅರ್ಧಂಬರ್ಧ ಓದಿ ತಿಳಿದಂತೆ ಎಲ್ಲರೂ ಮಕ್ಕಳನ್ನು ಬೆಳೆಸುತ್ತಾರೆ. ಕೆಲವರು ಅತಿಯಾದ ಶಿಸ್ತು ಹೇರಿದರೆ, ಮತ್ತೆ ಕೆಲವರು ಅತಿಯಾಗಿ ಮುದ್ದು ಮಾಡುತ್ತಾರೆ. ಈಗೀಗಂತೂ ಮಕ್ಕಳಿಗೆ ಅತಿಯಾದ ಕಂಫರ್ಟ್ ಕೊಡುವ ಚಟ ಪೋಷಕರಿಗೆ. ಅವರು ಕೇಳಿಸಿದ್ದೆಲ್ಲ ಕೊಡಿಸಿ, ಅವರ ತಾಳಕ್ಕೆ ತಕ್ಕ ಹಾಗೆ ಕುಣಿಯುವುದೇ ಅಪ್ಪ ಅಮ್ಮಂದಿರ ಕೆಲಸ. ಯಾವುದೇ ಆದರೂ ಅತಿಯಾದರೆ ಅದು ಸರಿಯಲ್ಲ. ಮಕ್ಕಳ ವಿಷಯಕ್ಕೂ ಹಾಗೆಯೇ. ಎಲ್ಲ ಅತಿಗಳೂ ಮಕ್ಕಳನ್ನು ಹಾಳು ಮಾಡುತ್ತವೆ. ಪ್ರೀತಿ, ನೀತಿ, ಶಾಂತಿ ಎಲ್ಲವೂ ಹಿತಮಿತವಾಗಿದ್ದರೇ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಸಾಧ್ಯ. 

ಈ ಕೆಳಗಿನ ರಾಶಿಯವರು ಮಕ್ಕಳನ್ನು ಅತಿ ಮುದ್ದು ಮಾಡಿ ಹಾಳು ಮಾಡುವವರು. 

Tap to resize

Latest Videos

ವೃಷಭ(Taurus)
ವೃಷಭ ರಾಶಿಯವರು ಮಕ್ಕಳು ಬಯಸಿದ್ದೆಲ್ಲ ಮರು ಮಾತಿಲ್ಲದೆ ಕೊಡಿಸುವವರು, ಮಕ್ಕಳ ಬದುಕಿನಲ್ಲಿ ಕೊಂಚವೂ ಬಿಡುವು ಕೊಡದೆ ಜೊತೆ ಇರುವವರು. ಇದರಿಂದ ಮಕ್ಕಳಿಗೆ ಸ್ವಂತಿಕೆ ಬೆಳೆಯಲು ಅಡ್ಡಿಯಾಗುವ ಜೊತೆಗೆ ಹಟವೂ ಜಾಸ್ತಿಯಾಗುತ್ತದೆ. ಬದುಕಲ್ಲಿ ಎಲ್ಲವೂ ಸುಲಭ ಎಂದೇ ತಿಳಿದು ಬೆಳೆಯುತ್ತಾರೆ. ನಂತರ ಸಣ್ಣ ಪುಟ್ಟ ಕಷ್ಟ ಎದುರಿಸಲೂ ಆಗದೆ ಒದ್ದಾಡುತ್ತಾರೆ. 

ಕಟಕ(Cancer)
ಚಂದ್ರ ಈ ರಾಶಿಯ ಅಧಿಪತಿ. ಪ್ರೀತಿ ಹಾಗೂ ಭಾವನೆಗಳು ಈ ರಾಶಿಯವರಲ್ಲಿ ಹೆಚ್ಚು. ಹಾಗಾಗಿ ಇವರು ಮಕ್ಕಳನ್ನು ಬಹಳವಾಗಿ ಹಚ್ಚಿಕೊಳ್ಳುತ್ತಾರೆ, ಅತಿಯಾಗಿ ಪ್ರೀತಿಸುತ್ತಾರೆ, ಅಷ್ಟೇ ಪೊಸೆಸಿವ್ ಆಗುತ್ತಾರೆ. ಮಕ್ಕಳು ಕೇಳದೆಯೇ ಅವರಿಗೆ ಎಲ್ಲವನ್ನೂ ತಂದು ಹಾಕಿ, ಬಾಲ್ಯದಲ್ಲಿ ಬದುಕನ್ನು ಸುಲಭ ಮಾಡಿ ಕೊಟ್ಟು, ದೊಡ್ಡವಾದ ಮೇಲೆ ಬೇಕೆಂದಿದ್ದು ಸಿಗದಾಗ ಒದ್ದಾಡುವ ಮಕ್ಕಳಾಗಿ ಬಿಡುತ್ತಾರೆ ಇವರು.

Love And Money: ಈ ರಾಶಿಗಳಿಗೆ ಹಣಕ್ಕೇನೋ ಕೊರತೆ ಇಲ್ಲ, ಆದರೆ, ಪ್ರೇಮ ಬದುಕು ಮಾತ್ರ ಅಷ್ಟಕ್ಕಷ್ಟೇ

ಸಿಂಹ(Leo)
ಇವರ ಹೃದಯ ದೊಡ್ಡದು. ದೊಡ್ಡ ತರದಲ್ಲಿ ಬದುಕಬೇಕು ಎಂದು ಬಯಸುವವರು ಇವರು. ಆಸೆಗಳು, ಗುರಿಗಳನ್ನೆಲ್ಲ ಸಾಧಿಸುವವರು. ಇವರ ಇದೇ ಮನಸ್ಥಿತಿ ಪೇರೆಂಟ್ ಆಗಿಯೂ ಮುಂದುವರಿಯುತ್ತದೆ. ಮಕ್ಕಳ ಜೀವನದಲ್ಲಿ ಅತಿಯಾಗಿ ತೊಡಗಿಸಿಕೊಳ್ಳುವುದಲ್ಲದೆ ಅವರಿಂದಲೂ ಎಲ್ಲ ಸಾಧನೆಗಳನ್ನು ನಿರೀಕ್ಷಿಸುತ್ತಾರೆ. ಅವನ್ನೆಲ್ಲ ಸಾಧಿಸಲು ತಾವು ಜೊತೆಗಿದ್ದೇವೆ ಎನ್ನುತ್ತಲೇ ಒತ್ತಡ ಹೇರುತ್ತಾರೆ. ಇದರಿಂದ ಪೋಷಕರ ಕನಸನ್ನು ಸಾಧಿಸಲಾಗದ ಮಕ್ಕಳು ತಾವು ಸೋತೆವೆಂದು ಕುಗ್ಗುತ್ತಾರೆ. 

Vastu colours: ಬದುಕನ್ನು ನಿರ್ಧರಿಸೋ ಬಣ್ಣಗಳು.. ನಿಮ್ಮ ಮನೆಗೆ ಯಾವುದು ಒಳ್ಳೆಯದು ನೋಡಿ..

ವೃಶ್ಚಿಕ(Scorpio)
ವೃಶ್ಚಿಕ ರಾಶಿಯವರು ಮಕ್ಕಳು ತಮ್ಮನ್ನು ಸಿಕ್ಕಾಪಟ್ಟೆ ಹಚ್ಚಿಕೊಳ್ಳಬೇಕು, ಒಮ್ಮೆ ಬಾಯಿ ಮಾತಿಗೂ ನೀನಿಷ್ಟವಿಲ್ಲ ಎಂದು ಹೇಳಬಾರದು ಎಂದುಕೊಳ್ಳುವವರು. ಬೈದರೆ, ಬುದ್ಧಿ ಹೇಳಿದರೆ ಮಕ್ಕಳ ದೃಷ್ಟಿಯಲ್ಲಿ ಎಲ್ಲಿ ಕೆಟ್ಟವರಾಗಿ ಬಿಡುತ್ತೇವೋ ಎಂಬ ಭಯದಲ್ಲಿ ಅವರನ್ನು ಅತಿಯಾಗಿ ಮುದ್ದು ಮಾಡುವವರು. ಜೊತೆಗೆ, ಮಕ್ಕಳು ಮಾಡಿದ್ದೆಲ್ಲ ಸರಿ ಎಂದು ಸಮರ್ಥಿಸುತ್ತಾ ಮಕ್ಕಳನ್ನು ಹಾಳು ಮಾಡುತ್ತಾರೆ. ತಮ್ಮಿಂದ ಮಕ್ಕಳಿಗೆ ಎಲ್ಲ ಸಿಗಬೇಕು ಎಂದು ಮೇಲಿನಿಂದ ಅಂದುಕೊಂಡರೂ, ಮಕ್ಕಳಿಂದ ತಮಗೂ ಅಷ್ಟೇ ಸಿಗಬೇಕು ಎಂಬ ನಿರೀಕ್ಷೆ ಇಟ್ಟು ನೋಡುವವರು ಇವರು. 

ಮೀನ (Pisces)
ಈ ರಾಶಿಯವರು ಕ್ಷಮಯಾಧರಿತ್ರಿ ಸ್ವಭಾವದವರು. ಮಕ್ಕಳು ಏನೇ ಮಾಡಿದರೂ ಮಕ್ಕಳಲ್ವಾ ಎಂದು ಕ್ಷಮಿಸುವ ಸ್ವಭಾವ ಇವರದು. ಇದರಿಂದ ಮಕ್ಕಳಿಗೆ ಸರಿ ತಪ್ಪುಗಳ ವ್ಯತ್ಯಾಸವೇ ಗೊತ್ತಾಗದೆ ಹೋಗಬಹುದು. ಮಕ್ಕಳ ಮಾತನ್ನೆಲ್ಲ ಸಂಭ್ರಮಿಸುತ್ತಾ, ಅವರು ಹೇಳಿದ್ದಕ್ಕೆಲ್ಲ ಚಪ್ಪಾಳೆ ತಟ್ಟುತ್ತಾ, ಮಕ್ಕಳ ತಪ್ಪನ್ನೂ ವಿಜೃಂಭಿಸಿ ಹೇಳುವ ಸ್ವಭಾವ ಮೀನ ರಾಶಿಯವರದು. ಇದರಿಂದ ಮಕ್ಕಳು ತಮ್ಮ ತಪ್ಪೇ ಸರಿ ಎಂದು ತಿಳಿದು ಅದನ್ನೇ ಮಾಡುತ್ತಾ ಹೋಗುತ್ತವೆ.  

click me!