Love And Money: ಈ ರಾಶಿಗಳಿಗೆ ಹಣಕ್ಕೇನೋ ಕೊರತೆ ಇಲ್ಲ, ಆದರೆ, ಪ್ರೇಮ ಬದುಕು ಮಾತ್ರ ಅಷ್ಟಕ್ಕಷ್ಟೇ

By Suvarna News  |  First Published Jan 22, 2022, 11:02 AM IST

ಜೀವನವೇ ಹಾಗೆ, ಅದು ಎಲ್ಲ ರೀತಿಯಲ್ಲೂ ಸುಖದ ಹಾದಿಯಾಗುವುದು ಸಾಧ್ಯವಿಲ್ಲ. ಒಂದಿದ್ದರೆ ಒಂದಿರುವುದಿಲ್ಲ. ಈ ರಾಶಿಗಳನ್ನೇ ನೋಡಿ, ಇವರಿಗೆ ಹಣದ ಸಮಸ್ಯೆ ಹೆಚ್ಚಾಗಿ ಉದ್ಭವಿಸುವುದಿಲ್ಲ, ಆದರೆ, ಪ್ರೇಮಜೀವನ ಮಾತ್ರ ಸಮಸ್ಯೆಗಳಿಂದಲೇ ಕೂಡಿರುತ್ತದೆ. 


ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನಿಗೆ ಹಲ್ಲಿಲ್ಲ ಅನ್ನುತ್ತೇವಲ್ಲ- ಹಾಗೆ ಇದು. ಇದ್ದವರಿಗೆ ತಮ್ಮಲ್ಲಿ ಇರುವುದರ ಬೆಲೆ ಗೊತ್ತಿರುವುದಿಲ್ಲ. ಕೆಲವರಲ್ಲಿ ಹಣವಿರುತ್ತದೆ, ಹಾಗಂತ ನೆಮ್ಮದಿ ಇದೆ ಎಂದು ಹೇಳಲಾಗುವುದಿಲ್ಲ. ಮತ್ತೆ ಕೆಲವರ ಮನೆಯಲ್ಲಿ ಬಡತನವಿದ್ದರೂ ಮನಸ್ಸು ನೆಮ್ಮದಿಯಿಂದಿರುತ್ತದೆ. ಈ ಕೆಲ ರಾಶಿ(zodiac)ಗಳನ್ನೇ ನೋಡಿ, ಇವರಿಗೆ ಹಣದ ಕೊರತೆ ಬರುವುದಿಲ್ಲ. ಆದರೆ, ಪ್ರೇಮ ಜೀವನದಲ್ಲಿ, ಪತಿ ಪತ್ನಿ ಸಾಂಗತ್ಯದಲ್ಲಿ ಸಮಸ್ಯೆಗಳು ಏಳುತ್ತಲೇ ಇರುತ್ತವೆ. ಇದಕ್ಕೆ ಇವರ ಹುಟ್ಟು ಸ್ವಭಾವಗಳೇ ಕಾರಣವಾಗಿವೆ. 

ಮೇಷ(Aries)
ಈ ರಾಶಿಯಲ್ಲಿ ಜನಿಸಿದವರಲ್ಲಿ ಶಕ್ತಿ ಅಗಾಧವಾಗಿರುತ್ತದೆ. ಇವರು ಆಳೋ ಗುಣದವರು, ನಾಯಕತ್ವ ಗುಣ ಇರುವ ಇವರು ಎಲ್ಲೇ ಹೋದರೂ ಮೇಲೇರುತ್ತಾರೆ. ಉದ್ಯಮ ಮನಸ್ಥಿತಿ ಇವರದು. ಹಾಗಾಗಿ, ದುಡಿಮೆ, ಹಣದ ವಿಷಯದಲ್ಲಿ ಬೇಗ ಏಣಿಯೇರುತ್ತಾರೆ. ಇವರ ಪ್ರಭಾವಿ ಹಾಗೂ ಅಧಿಕಾರಯುತ ಗುಣ ಉದ್ಯೋಗದಲ್ಲಿ ಏಳ್ಗೆ ತಂದರೂ ಅದೇ ಗುಣದಿಂದ ಸಂಬಂಧಗಳು ಹಾಳಾಗುತ್ತವೆ. ಯಾರು ತಾನೇ ಸಂಗಾತಿ ತಮ್ಮ ಮೇಲೆ ಅಧಿಕಾರ ಚಲಾಯಿಸುವುದನ್ನು ಇಷ್ಟ ಪಡುತ್ತಾರೆ? ಇವರು ಸಂಗಾತಿಯನ್ನು ನಿಯಂತ್ರಣದಲ್ಲಿಡಲು ಹೋಗುವುದು, ಸಂಬಂಧದಲ್ಲಿ ಸ್ವಾರ್ಥ ತೋರುವ ಕಾರಣದಿಂದಾಗಿ ವಿವಾಹ ಬದುಕಿನಲ್ಲಿ ನೆಮ್ಮದಿ ಇರುವುದಿಲ್ಲ.

Tap to resize

Latest Videos

ಸಿಂಹ (Leo)
ಈ ರಾಶಿಯಲ್ಲಿ ಜನಿಸಿದವರು ಹೆಚ್ಚು ನ್ಯಾಯಪರರು, ಸತ್ಯವಂತರು. ಈ ಪ್ರಾಮಾಣಿಕತೆ ಕಾರಣದಿಂದ ಜೀವನದಲ್ಲಿ ಸಾಕಷ್ಟು ಮುಂದೆ ಹೋಗುತ್ತಾರೆ. ಬಯಸಿದ ಗುರಿಗಳನ್ನು ಸಾಧಿಸುತ್ತಾರೆ. ಬೇಕೆಂದಿದ್ದೆಲ್ಲ ಕೊಳ್ಳುತ್ತಾರೆ. ಹಾಗಾಗಿ, ಹಣ ಇವರ ಸಮಸ್ಯೆಯಲ್ಲ. ಆದರೆ, ಇವರು ಆಗಾಗ ಮತ್ತೊಬ್ಬರ ಮೇಲೆ ಹಿಡಿತ ಸಾಧಿಸಲು ಬಯಸುತ್ತಾರೆ. ಎಲ್ಲವೂ ತಮ್ಮ ನಿಯಂತ್ರಣದಲ್ಲಿರಬೇಕು ಎಂದು ಬಯಸುತ್ತಾರೆ. ಈ ಗುಣದಿಂದಾಗಿ ಸಿಂಹ ರಾಶಿಯವರ ರೊಮ್ಯಾಂಟಿಕ್ ಜೀವನ(romantic connection) ದಲ್ಲಿ ಸಮಸ್ಯೆಗಳು ಏಳುತ್ತವೆ. 

love rejection: ಪ್ರೀತಿಯ ತಿರಸ್ಕಾರವನ್ನು ಯಾವ ರಾಶಿಯವರು ಹೇಗೆ ಎದುರಿಸುತ್ತಾರೆ?

ಕನ್ಯಾ(Virgo)
ಇವರು ಹಣ(money) ಗಳಿಸುವುದರಲ್ಲೂ, ಗಳಿಸಿದ್ದನ್ನು ಉಳಿಸುವುದರಲ್ಲೂ ನಿಸ್ಸೀಮರು. ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವವರಲ್ಲ. ಹಣ ಉಳಿಸಲು ಸಾಕಷ್ಟು ರೀತಿಯಲ್ಲಿ ತಲೆ ಖರ್ಚು ಮಾಡಬಲ್ಲರು. ಸಂಬಂಧದ ವಿಷಯದಲ್ಲೂ ಹಾಗೆ, ಸಂಗಾತಿಯೊಂದಿಗೆ ಬಹಳ ಜಾಗರೂಕತೆಯಿಂದ ನಡೆದುಕೊಳ್ಳುತ್ತಾರೆ. ಆದರೆ, ತಮ್ಮ ತಪ್ಪನ್ನು ಮಾತ್ರ ಎಂದಿಗೂ ಒಪ್ಪಿಕೊಳ್ಳುವ ಸ್ವಭಾವ ಇವರದಲ್ಲ. ತಪ್ಪು ಒಪ್ಪದೆ ತಾವು ಮಾಡಿದ್ದೇ ಸರಿ ಎಂದು ಸಾಧಿಸುವ ಗುಣದಿಂದಾಗಿ ಇವರ ಸಂಬಂಧದಲ್ಲಿ ಆಗಾಗ ಬಿರುಕು ಮೂಡುತ್ತಿರುತ್ತವೆ. 

Zodiac Signs: ನಿಮ್ಮ ಹುಡುಗನಿಗೆ ಸ್ವಲ್ಪವೂ ಸಹಿಸಲಾಗದ ವಿಷಯವಿದು..

ಕುಂಭ(Aquarius)
ಈ ರಾಶಿಯವರು ಕೂಡಾ ಹಣ ಉಳಿಸುವುದರಲ್ಲಿ ನಿಸ್ಸೀಮರು. ಹಣ ಇವರ ಹಾದಿಯಲ್ಲಿ ಕೊರತೆಯಾಗುವುದಿಲ್ಲ. ು.ಮತ್ತೊಬ್ಬರು ಮಾಡಿಟ್ಟಿದ್ದು ಕೂಡಾ ಇವರಿಗೆ ಸಿಗಬಹುದ ಆದರೆ ಸಂಬಂಧಗಳ ವಿಷಯಕ್ಕೆ ಬಂದಾಗ ಅತಿಯಾದ ಸ್ವಾಭಿಮಾನ ಇವರ ಬದುಕಿಗೆ ಮುಳ್ಳಾಗುತ್ತದೆ. ಮನಸ್ಸಿನಲ್ಲಿರುವುದನ್ನು ಹೇಳುವುದಕ್ಕೆ, ತಪ್ಪಾದಾಗ ಕ್ಷಮೆ ಕೇಳಲು ಎಲ್ಲದಕ್ಕೂ ನಾನೇ ಏಕೆ ಮಾಡಲಿ ಎಂದು ಯೋಚಿಸುವವರು ಇವರು. ಹಾಗಾಗಿ, ಸಂಗಾತಿಯೊಂದಿಗೆ ಆಗಾಗ ಜಗಳ, ಮುನಿಸು ಕಾಣಿಸಿಕೊಳ್ಳುತ್ತಲೇ ಇರುತ್ತದೆ.  

ಧನು(sagittarius)
ಇವರು ತುಂಬಾ ಸ್ವತಂತ್ರ ಪ್ರಿಯರು. ಈ ಸ್ವತಂತ್ರವಾಗಿರುವ ಬಯಕೆಯಿಂದಾಗಿ ಚೆನ್ನಾಗಿ ದುಡಿಯುತ್ತಾರೆ. ಆದರೆ, ಇದೇ ಸ್ವಾತಂತ್ರ್ಯ ಪ್ರಿಯತೆ ಕಾರಣದಿಂದ ಸಂಬಂಧಗಳು ಇರಿಗೆ ಉಸಿರುಗಟ್ಟಿಸುತ್ತವೆ. ಹಾಗಾಗಿ, ಸಂಗಾತಿ ತಮ್ಮನ್ನು ಕೊಂಚ ನಿಯಂತ್ರಿಸುವುದು ಕೂಡಾ ಇವರಿಗೆ ಇಷ್ಟವಾಗುವುದಿಲ್ಲ. ತಮಗೆ ಹೇಗೆ ಬೇಕೋ ಹಾಗೆ ಇರುವುದನ್ನು ಬಯಸುವವರಿವರು. ಈ ಕಾರಣದಿಂದ ಧನು ರಾಶಿಗೆ ಸಂಗಾತಿಯ ಜೊತೆ ಜೀವನ ಅಷ್ಟಕ್ಕಷ್ಟೇ ಆಗಿರುತ್ತದೆ.

click me!