ಪ್ರಯಾಣ ಬೆಳೆಸಬೇಕೆಂಬ ತರಾತುರಿಯಲ್ಲಿ ನಾವು ಏನನ್ನೂ ಗಮನಿಸುವುದಿಲ್ಲ. ಅಗತ್ಯವಿರುವ ಬಟ್ಟೆ ಪ್ಯಾಕ್ ಮಾಡಿ ಮನೆ ಬಿಡ್ತೇವೆ. ಆದ್ರೆ ನಮ್ಮ ನಿರೀಕ್ಷೆಯಂತೆ ಪ್ರಯಾಣ ಸುಖಕರವಾಗಿರುವುದಿಲ್ಲ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕಾರಣ ಹಾಗೂ ಪರಿಹಾರ ಎರಡನ್ನೂ ಹೇಳಲಾಗಿದೆ.
ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಪ್ರಯಾಣ (Travel) ಬೆಳೆಸ್ತಾರೆ. ವ್ಯಾಪಾರ (Business)ಕ್ಕಾಗಿ, ಸಂಬಂಧಿಕರ ಮನೆಗೆ, ಮನಸ್ಸಿಗೆ ಉಲ್ಲಾಸ ನೀಡಲು, ದೇವಸ್ಥಾನ (Temple)ಕ್ಕೆ ಹೀಗೆ ಅನೇಕ ಕಾರಣಗಳಿಗೆ ನಾವು ಮನೆ ಬಿಡ್ತೇವೆ. ಕೆಲವು ಪ್ರಯಾಣಗಳು ಆಹ್ಲಾದಕರ ಮತ್ತು ಆರಾಮದಾಯಕವಾಗಿದ್ದರೆ ಮತ್ತೆ ಕೆಲವೊಮ್ಮೆ ಅಡ್ಡಿ-ಆತಂಕ ಎದುರಿಸಬೇಕಾಗುತ್ತದೆ. ಪ್ರಯಾಣದ ವೇಳೆ ಅಪಘಾತ ಇಲ್ಲವೆ ಹೋದ ಕೆಲಸ ಆಗದೆ ಇರುವುದು ಹೀಗೆ ಅನೇಕ ಸಮಸ್ಯೆ ಎದುರಾಗುತ್ತದೆ. ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಪ್ರಯಾಣದ ಬಗ್ಗೆಯೂ ಅನೇಕ ಸಲಹೆಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಅನುಸರಿಸಿದರೆ, ಪ್ರಯಾಣವು ಆಹ್ಲಾದಕರವಾಗಿರುತ್ತದೆ ಮತ್ತು ನೀವು ಬೆಳೆಸಿದ ಪ್ರಯಾಣದ ಉದ್ದೇಶ ಈಡೇರುತ್ತದೆ. ಜ್ಯೋತಿಷ್ಯದ ಪ್ರಕಾರ ಯಾವುದೇ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಮುಹೂರ್ತ ನೋಡುವುದು ಒಳ್ಳೆಯದು. ಹಾಗೆ ಪ್ರಯಾಣದ ದಿಕ್ಕು ಹಾಗೂ ವಾರಕ್ಕೂ ಸಂಬಂಧವಿದೆ. ಯಾವ ದಿನ,ಯಾವ ದಿಕ್ಕಿನಲ್ಲಿ ಹೋಗುವುದು ಒಳ್ಳೆಯದಲ್ಲ, ಪ್ರಯಾಣದ ವೇಳೆ ಏನೆಲ್ಲ ಕಾಳಜಿ ವಹಿಸಬೇಕು ನೋಡಿ..
ಇಂದಿನ ಜಂಜಾಟದ ಜೀವನದಲ್ಲಿ ಪ್ರತಿದಿನ ಪ್ರಯಾಣದ ಮುಹೂರ್ತವನ್ನು ಅನುಸರಿಸುವುದು ಕಷ್ಟ. ಹಾಗಾಗಿ ಜನರು ದೂರದ ಪ್ರಯಾಣ, ಮಂಗಳಕರ ಕೆಲಸ ಅಥವಾ ತೀರ್ಥಯಾತ್ರೆಗೆ ಹೋಗಲು ಮುಹೂರ್ತ ಮತ್ತು ದಿಕ್ಕನ್ನು ಅನುಸರಿಸುವುದು ಒಳ್ಳೆಯದು.
ಪ್ರಯಾಣದ ಸಂದರ್ಭದಲ್ಲಿ ದಿನದ ಮಹತ್ವ
ಜ್ಯೋತಿಷ್ಯ ಶಾಸ್ತ್ರದ ನಿಯಮಗಳ ಪ್ರಕಾರ ಸೋಮವಾರ ಮತ್ತು ಶನಿವಾರ ಪೂರ್ವ ದಿಕ್ಕಿಗೆ ಪ್ರಯಾಣಿಸುವುದು ಒಳ್ಳೆಯದಲ್ಲ. ಇದ್ರಿಂದ ಕೆಲಸದ ಅಡೆತಡೆಗಳು ಮತ್ತು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ಸೋಮವಾರ ಮತ್ತು ಶನಿವಾರದಂದು ಪೂರ್ವ ದಿಕ್ಕಿನಲ್ಲಿ ಪ್ರಯಾಣಿಸಬಾರದು. ಭಾನುವಾರ ಮತ್ತು ಶುಕ್ರವಾರದಂದು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸಬಾರದು. ಮಂಗಳವಾರ ಮತ್ತು ಬುಧವಾರದಂದು ಉತ್ತರ ದಿಕ್ಕಿನಲ್ಲಿ ಪ್ರಯಾಣ ಮಾಡುವುದು ಅನುಕೂಲಕರವಲ್ಲ. ಗುರುವಾರದಂದು ದಕ್ಷಿಣ ದಿಕ್ಕಿನಲ್ಲಿ ಪ್ರಯಾಣಿಸುವುದು ನೋವುಂಟುಮಾಡುತ್ತದೆ.
ಯಾವ ದಿಕ್ಕಿಗೆ ಯಾವ ವಾರ? :
ದಕ್ಷಿಣ ದಿಕ್ಕಿನಲ್ಲಿ ಪ್ರಯಾಣಿಸಲು ಸೋಮವಾರ ಉತ್ತಮವೆಂದು ಪರಿಗಣಿಸಲಾಗಿದೆ.
ಮಂಗಳವಾರ ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಪ್ರಯಾಣಿಸಲು ಮಂಗಳಕರವಾಗಿದೆ.
ಬುಧವಾರ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣ ಮಾಡುವುದು ಅನುಕೂಲಕರವಾಗಿದೆ.
ಗುರುವಾರದಂದು, ದಕ್ಷಿಣ ದಿಕ್ಕನ್ನು ಹೊರತುಪಡಿಸಿ, ಇತರ ಎಲ್ಲಾ ದಿಕ್ಕುಗಳ ಪ್ರಯಾಣವು ಆಹ್ಲಾದಕರವಾಗಿರುತ್ತದೆ.
ಶುಕ್ರವಾರ ಸಂಜೆ ಪ್ರಾರಂಭವಾದ ಪ್ರಯಾಣವು ಆಹ್ಲಾದಕರ ಮತ್ತು ಫಲಪ್ರದವಾಗಿರುತ್ತದೆ.
ಶನಿವಾರದಂದು ತಮ್ಮ ಮನೆಗೆ ಹೋಗುವುದನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳಕ್ಕೆ ಪ್ರಯಾಣಿಸುವುದು ಪ್ರಯೋಜನಕಾರಿಯಲ್ಲ ಎಂದು ಹೇಳಲಾಗಿದೆ. ಶನಿವಾರದ ಪ್ರಯಾಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಭಾನುವಾರ ಪೂರ್ವ ದಿಕ್ಕಿನಲ್ಲಿ ಮಾಡಿದ ಪ್ರಯಾಣವು ಒಳ್ಳೆಯ ಫಲ ನೀಡುತ್ತದೆ.
Navagraha And Health: ಆರೋಗ್ಯಕ್ಕೂ ನವಗ್ರಹಗಳಿಗೂ ಉಂಟು ಬಾದರಾಯಣ ಸಂಬಂಧ!
ಪ್ರಯಾಣಕ್ಕೆ ವಾರವನ್ನು ಮಾತ್ರವಲ್ಲ ಶುಭ ದಿನಾಂಕ ಹಾಗೂ ಮಾಸ,ಪಕ್ಷಗಳನ್ನು ನೋಡುವುದು ಒಳ್ಳೆಯದು.
ಪ್ರಯಾಣಕ್ಕೆ ಶುಭ ದಿನಾಂಕಗಳು : ಪ್ರತಿ ತಿಂಗಳ 2, 3, 5, 7, 10, 11, 13 ಪ್ರಯಾಣಕ್ಕೆ ಶುಭವೆಂದು ಪರಿಗಣಿಸಲಾಗಿದೆ.
ಶುಭ ನಕ್ಷತ್ರಗಳು: ಪುಷ್ಯ, ಹಸ್ತ, ಅನುರಾಧ, ಮೃಗಶಿರ, ಅಶ್ವಿನಿ, ಶ್ರಾವಣ, ರೇವತಿ ಮತ್ತು ಧನಿಷ್ಠ ನಕ್ಷತ್ರದಲ್ಲಿ ಪ್ರಯಾಣ ಬೆಳೆಸುವುದು ಒಳ್ಳೆಯದು.
ಮಧ್ಯ ನಕ್ಷತ್ರ: ರೋಹಿಣಿ, ಜ್ಯೇಷ್ಠ, ಶತಭಿಷ, ಪೂರ್ವ, ಉತ್ತರ ಈ ನಕ್ಷತ್ರದಲ್ಲಿ ಪ್ರಯಾಣ ಬೆಳೆಸಿದ್ರೆ ಮಧ್ಯಮ ಫಲ ಪ್ರಾಪ್ತಿಯಾಗುತ್ತದೆ.
Past Life: ಕನಸಿನ ಈ ಸೂಚನೆಗಳು ನಿಮ್ಮ ಪೂರ್ವ ಜನ್ಮದ ನೆನಪುಗಳಿರಬಹುದು..!
ಪ್ರಯಾಣ ದೋಷಗಳನ್ನು ಸರಿಪಡಿಸಲು ಪರಿಹಾರಗಳು :
ಹಲವು ಬಾರಿ ಫಲ ನೀಡದ ದಿಕ್ಕಿನಲ್ಲಿ ಪಯಣಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಗ ಈ ದೋಷವನ್ನು ಹೋಗಲಾಡಿಸಲು ಜ್ಯೋತಿಷ್ಯದಲ್ಲಿ ಸರಳವಾದ ಪರಿಹಾರವನ್ನು ಹೇಳಲಾಗಿದೆ.
ಕನ್ನಡಿಯಲ್ಲಿ ಮುಖ ನೋಡಿಕೊಂಡು, ಹಾಲು ಕುಡಿದು ಸೋಮವಾರ ಪ್ರಯಾಣ ಬೆಳೆಸಿದರೆ ಹೋದ ಕೆಲಸ ಯಶಸ್ವಿಯಾಗುತ್ತದೆ.
ಮಂಗಳವಾರ ಬೆಲ್ಲ ತಿಂದು ಪ್ರಯಾಣ ಬೆಳೆಸಬೇಕು.
ಬುಧವಾರ ಕೊತ್ತಂಬರಿ ಸೊಪ್ಪು ಅಥವಾ ಎಳ್ಳು ತಿಂದರೆ ಒಳ್ಳೆಯದು.
ಗುರುವಾರ ಮೊಸರು ಸೇವಿಸಿ ಮನೆಯಿಂದ ಹೊರಗೆ ಹೆಜ್ಜೆಯಿಡಬೇಕು.
ಶುಕ್ರವಾರ ಬಾರ್ಲಿ ಅಥವಾ ಹಾಲು ಕುಡಿದು ಪ್ರಯಾಣ ಬೆಳೆಸಬೇಕು.
ಶನಿವಾರದಂದು ಉದ್ದಿನ ಬೇಳೆ ಅಥವಾ ಶುಂಠಿ ತಿನ್ನಲು ಹೋಗಿ.
ಭಾನುವಾರದಂದು ತುಪ್ಪ ಅಥವಾ ಗಂಜಿ ತಿಂದ ನಂತರ ಪ್ರಯಾಣಿಸಬೇಕು. ಇವುಗಳು ತಲೆಮಾರುಗಳಿಂದ ಬಳಸಲ್ಪಡುವ ಪರಿಹಾರಗಳಾಗಿವೆ.