ಪ್ರೀತಿಯ ಬಗ್ಗೆ, ಪ್ರೀತಿಪಾತ್ರರ ಬಗ್ಗೆ ಎಲ್ಲರಿಗೂ ಒಂದಿಷ್ಟು ನಿರೀಕ್ಷೆಗಳಿರುವುದು ಸಹಜ. ಆದರೆ, ಬಹಳಷ್ಟು ಜನ ವಾಸ್ತವಕ್ಕೆ ಹತ್ತಿರವಾದ ಪ್ರೀತಿಯನ್ನು ಬಯಸುತ್ತಾರೆ. ಕೆಲವೇ ಜನ ಮಾತ್ರ ಅವಾಸ್ತವ ಮಾದರಿಯ ರೋಮ್ಯಾಂಟಿಕ್ ಪ್ರೀತಿಯನ್ನು ನಿರೀಕ್ಷಿಸುತ್ತಾರೆ. ಸಿನಿಮಾ ಮಾದರಿಯ ಪ್ರೀತಿಗಾಗಿ ಹಂಬಲಿಸುತ್ತಾರೆ. ಇಂತಹ ಜನರನ್ನು ಈ ಕೆಲವು ರಾಶಿಗಳಲ್ಲಿ ಕಾಣಬಹುದು.
ಪ್ರೀತಿ-ಪ್ರೇಮದ ಕುರಿತು ಒಂದಿಷ್ಟು ನಿರೀಕ್ಷೆಗಳು, ಕನಸುಗಳು ಎಲ್ಲರಿಗೂ ಇರುತ್ತವೆ. ತಮ್ಮ ಪ್ರೀತಿಪಾತ್ರರು ಹೀಗಿರಬೇಕು, ಹಾಗಿರಬೇಕು ಎಂದೆಲ್ಲ ಬಯಸುವುದು ಸಹಜ. ಕೆಲವರು ತಮ್ಮ ಪ್ರೀತಿ ಪ್ರಬುದ್ಧವಾಗಿರಬೇಕು, ಬದುಕಿನಲ್ಲಿ ಎಂದೆಂದೂ ಜತೆಯಾಗಿ ಸಾಗಬೇಕು ಎಂದು ಬಯಸಿದರೆ, ಕೆಲವರು ಜತೆಯಾಗಿ ಸಾಹಸಕೃತ್ಯಗಳನ್ನು ನಡೆಸುತ್ತ ರೋಮಾಂಚನಕಾರಿಯಾಗಿ ಬದುಕಬೇಕು ಎಂದುಕೊಳ್ಳುತ್ತಾರೆ. ಹಾಗೆಯೇ ಕೆಲವರು ಪ್ರೀತಿ-ಪ್ರೇಮಕ್ಕಾಗಿ ಕಷ್ಟದ ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜೀವನ ಸಂಗಾತಿಗಾಗಿ ಏನು ಬೇಕಿದ್ದರೂ ಮಾಡುವವರಿದ್ದಾರೆ. ಹವ್ಯಾಸಗಳಲ್ಲೂ ಒಂದೇ ರೀತಿಯ ಆಸಕ್ತಿ ಇರಿಸಿಕೊಂಡು ಜೀವನವನ್ನು ಖುಷಿಯಾಗಿ ಕಳೆಯುವವರಿದ್ದಾರೆ. ಕೆಲವರಿಗೆ ಪ್ರೀತಿಸಿಕೊಳ್ಳುವುದಷ್ಟೇ ಗೊತ್ತು, ತಾವು ಕೊಡುವುದು ಗೊತ್ತಿರುವುದಿಲ್ಲ. ಇನ್ನು ಕೆಲವರಿಗೆ ಪ್ರೀತಿಸಿ ಮಾತ್ರ ಗೊತ್ತು, ನಿಸ್ವಾರ್ಥವಾಗಿ ಪ್ರೀತಿಸುತ್ತಲೇ ಇರುತ್ತಾರೆ. ಒಟ್ಟಿನಲ್ಲಿ ಪ್ರೀತಿಯ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ಭಾವನೆ, ಅನುಭವ. ಕೆಲವು ಜನ ಪ್ರೀತಿಯ ಬಗ್ಗೆ ಭಾರೀ ರೋಚಕ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಸಿನಿಮಾಗಳಲ್ಲಿ ಕಾಣುವಂತಹ ಭ್ರಮಾತ್ಮಕ ಪ್ರೀತಿಯ ಬಯಕೆ ಹೊಂದಿರುತ್ತಾರೆ. ನೈಜವಾಗಿ ಕಾಣಸಿಗದ ಪ್ರೀತಿಯ ಪ್ರದರ್ಶನಕ್ಕಾಗಿ ಹಾತೊರೆಯುತ್ತಾರೆ. ಅಂತಹ ಜನ ಕೆಲವೇ ಕೆಲವು ರಾಶಿಗಳಲ್ಲಿ ಕಾಣಸಿಗುತ್ತಾರೆ. ಅವರಿಗೆ ಪ್ರೀತಿ ಎಂದರೆ ಒಂದು ರೀತಿ ಹೂವು ಮತ್ತು ಚಾಕೋಲೇಟ್ ಮಾದರಿಯಂಥದ್ದು. ಅವರ ಭಾವನೆಯಲ್ಲಿ ಪ್ರೀತಿ ಎಂದಿಗೂ ಸಿಹಿ ಮತ್ತು ಮಧುರ. ಅಂತಹ ರಾಶಿಗಳು ಯಾವುವು ಎಂದು ನೋಡಿಕೊಳ್ಳಿ.
• ಮೀನ (Pisces)
ಮೀನ ರಾಶಿಯ ಜನ ತಮ್ಮ ಸಂಗಾತಿಯೊಂದಿಗೆ (Partner) ನಿರಂತರವಾಗಿ ಸಂಪರ್ಕದಲ್ಲಿ (Contact) ಇರಲು ಬಯಸುತ್ತಾರೆ. ಸದಾಕಾಲ ಸಂಗಾತಿಯ ಜತೆಗಿರಬೇಕು ಎನ್ನುವ ಬಯಕೆ ಹೊಂದಿರುತ್ತಾರೆ. ಇವರು ಖುಷಿಯಾಗಿ (Happy) ಮತ್ತು ಭರವಸೆಯಿಂದ ತುಂಬಿಕೊಂಡಿರಬೇಕು ಎಂದರೆ ಇವರ ಸಂಗಾತಿ ಇವರಿಗೆ ಪದೇ ಪದೆ ತಮ್ಮ ಸಂಬಂಧದ (Relationship) ಬಗ್ಗೆ, ಬದ್ಧತೆಯ ಬಗ್ಗೆ ಪುನರುಚ್ಚರಿಸುತ್ತಿರಬೇಕು. ಅಂದರೆ, “ಐ ಲವ್ ಯೂʼ ಎನ್ನುವ ಮಾತು ಪದೇ ಪದೆ ಬರುತ್ತಿರಬೇಕು. ಒಂದೊಮ್ಮೆ ತಮ್ಮ ಸಂಗಾತಿ ಅವರ ಖಾಸಗಿ (Private) ಸಮಸ್ಯೆ-ಬಿಕ್ಕಟ್ಟಿನಲ್ಲಿ ಮುಳುಗಿದ್ದರೆ ಇವರು ತಾಳ್ಮೆ ಕಳೆದುಕೊಳ್ಳುತ್ತಾರೆ. ಎಲ್ಲ ಕಾಲಕ್ಕೂ ತಮಗೇ ಆದ್ಯತೆ ನೀಡಬೇಕು ಎಂದು ಬೇಡಿಕೆ ಒಡ್ಡುತ್ತಾರೆ. ಇಂತಹ ಬೇಡಿಕೆ ಅಕಾರಣ ಎನ್ನುವ ಭಾವನೆ ಸಂಗಾತಿಗೆ ಬರುವಂತೆ ಮಾಡುತ್ತಾರೆ.
ಈ ರಾಶಿಯವರಿಗೆ ಆರಂಭದಲ್ಲಿ ಇರೋ ಪ್ರೀತಿಯ ಉಮೇದು ದೀರ್ಘ ಕಾಲ ಉಳಿಯೋಲ್ಲ
• ವೃಷಭ (Taurus)
ತುಂಬ ಚಿಕ್ಕ ವಯಸ್ಸಿನಿಂದಲೇ ಪ್ರೀತಿಯ ಕುರಿತು ಕನಸು (Dream) ಕಾಣುವ ಮಂದಿ ಈ ರಾಶಿಯವರು. ತಮ್ಮ ಸಂಗಾತಿಯಿಂದ ಏನು ಬಯಸುತ್ತಿದ್ದೇವೆ ಎನ್ನುವುದರ ಕುರಿತು ಇವರಿಗೆ ಭಾರೀ ಸ್ಪಷ್ಟತೆ (Clear) ಇರುತ್ತದೆ. ಈ ನಿಟ್ಟಿನಲ್ಲಿ ಇವರು ಯಾವುದೇ ಗೊಂದಲ ಹೊಂದಿಲ್ಲದಿರುವುದು ಅದ್ಭುತ ಎನಿಸಬಲ್ಲದು. ಹಾಗೂ ಬದ್ಧತೆಯಲ್ಲೂ ಇವರಿಗೆ ಅನುಮಾನ ಇರುವುದಿಲ್ಲ. ಜವಾಬ್ದಾರಿ (Responsibility) ತೆಗೆದುಕೊಳ್ಳಲು ಹಿಂದೇಟೂ ಹಾಕುವುದಿಲ್ಲ. ಆದರೆ, ತಾವು ಬಾಯಿಬಿಟ್ಟು ಹೇಳದ ಹೊರತು, ಸರಿಯಾಗಿ ಸಂವಹನ ಮಾಡದ ಹೊರತು ತಮ್ಮ ಸಂಗಾತಿಗೆ ತಮಗೇನು ಬೇಕು ಎನ್ನುವುದು ತಿಳಿಯುವುದಿಲ್ಲ ಎನ್ನುವ ಸತ್ಯವನ್ನು ಮರೆತುಬಿಡುತ್ತಾರೆ. ತಮ್ಮ ಸಂಗಾತಿ ಸದಾಕಾಲ ವೀರಯೋಧನಂತೆ ಇರಬೇಕು ಎಂದು ಬಯಸುತ್ತಾರೆ. ಆದರೆ, ಇದು ವಾಸ್ತವಕ್ಕೆ ದೂರವಾಗಿರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ.
• ಮಿಥುನ (Gemini)
ಎಲ್ಲ ರಾಶಿಗಳ ಪೈಕಿ, ಅತ್ಯಂತ ರೋಮ್ಯಾಂಟಿಕ್ (Romantic) ಪ್ರೀತಿಯನ್ನು ಬಯಸುವವರು ಮಿಥುನ ರಾಶಿಯ ಜನ. ಸಿನಿಮಾಗಳಲ್ಲಿ (Cinema) ತೋರಿಸುವಂತಹ ಪ್ರೀತಿಯನ್ನು (Love) ನಿರೀಕ್ಷೆ ಮಾಡುತ್ತಾರೆ. ಪ್ರತಿ ಬಾರಿ ಭೇಟಿಯಾಗುವಾಗಲೂ ಚಾಕೋಲೇಟ್, ಕ್ಯಾಂಡಿ, ಹೂವುಗಳನ್ನು ನೀಡಬೇಕು, ಅವುಗಳಂತೆ ತಮ್ಮ ಪ್ರೀತಿ ಎಂದಿಗೂ ಮಧುರವಾಗಿ ಇರಬೇಕು ಎಂದು ಬಯಸುತ್ತಾರೆ. ಇವರ ನಿರೀಕ್ಷೆಯಂತಹ ಪ್ರೀತಿ ದೊರೆಯದೇ ಇದ್ದಾಗ ನಿರಾಶಾವಾದಿ (Pessimistic)ಯಾಗುತ್ತಾರೆ. ತಾಳ್ಮೆ (Temper) ಕಳೆದುಕೊಳ್ಳುತ್ತಾರೆ. ಪ್ರೀತಿಯ ವಿಚಾರದಲ್ಲಿ ವಾಸ್ತವವನ್ನು ಅರಿತುಕೊಳ್ಳಲು ವಿಫಲರಾಗುತ್ತಾರೆ. ನಿರಾಶರಾಗಿ ಪ್ರೀತಿಯ ವಿಚಾರವನ್ನೇ ಇಟ್ಟುಕೊಂಡು ಸಂಗಾತಿ ಜತೆ ಕೆಟ್ಟ ವರ್ತನೆ (Bad Attitude) ತೋರಬಹುದು.
ಭಾವನೆಗಳನ್ನು ಮುಚ್ಚಿಡುವುದರಲ್ಲಿ ಈ ರಾಶಿಗಳ ಎಕ್ಸ್‌ಪರ್ಟ್