Best Quotes: ಬುದ್ಧ ಹೇಳುವುದನ್ನ ಫಾಲೋ ಮಾಡಿದರೆ ಲೈಫ್ ಬಿಂದಾಸ್!

By Suvarna NewsFirst Published Aug 18, 2022, 1:36 PM IST
Highlights

ಸಣ್ಣ ಪುಟ್ಟ ವಿಚಾರಕ್ಕೆ ಮನಸ್ಸು ಕೊರಗುತ್ತದೆ. ಯಾವುದು ಸರಿ, ಯಾವುದು ತಪ್ಪು ಎಂಬ ಗೊಂದಲದಲ್ಲಿ ಮನಸ್ಸು ಒದ್ದಾಡುತ್ತದೆ. ಸನ್ಮಾರ್ಗದಲ್ಲಿ ನಡೆದ, ಸಂತೋಷಕರ ಜೀವನ ನಡೆಸಬೇಕೆಂದ್ರೆ ಗೌತಮ ಬುದ್ಧ ತೋರಿಸಿಕೊಟ್ಟ ದಾರಿಯಲ್ಲಿ ನಡೆಯಬೇಕು. 
 

ಬೌದ್ಧ ಧರ್ಮವನ್ನು ವಿಶ್ವದ ನಾಲ್ಕನೇ ಅತಿದೊಡ್ಡ ಧರ್ಮವೆಂದು ಪರಿಗಣಿಸಲಾಗಿದೆ. ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬೌದ್ಧ ಧರ್ಮದ ಜನರು ವಾಸಿಸುತ್ತಿದ್ದಾರೆ. ಗೌತಮ ಬುದ್ಧನ ನಿಜವಾದ ಹೆಸರು ಸಿದ್ಧಾರ್ಥ. ಗೌತಮ ಬುದ್ಧನ ಅಮೂಲ್ಯವಾದ ಆಲೋಚನೆಗಳು ಜೀವನದಲ್ಲಿ ಯಶಸ್ವಿಯಾಗಲು ಮತ್ತು ಮುನ್ನಡೆಯಲು ಪ್ರೇರೇಪಿಸುತ್ತದೆ. ಬುದ್ಧನ ಆಲೋಚನೆಗಳು ಸುತ್ತಲೂ ಬೆಳಕನ್ನು ಹರಡುವ ಕೆಲಸ ಮಾಡುತ್ತವೆ. ಗೌತಮ ಬುದ್ಧನ ಅನೇಕ ಆಲೋಚನೆಗಳು ವ್ಯಕ್ತಿಯನ್ನು ಮುನ್ನಡೆಸಲು  ಮತ್ತು ಜೀವನದಲ್ಲಿ ಬದಲಾವಣೆಯನ್ನು ತರಲು ಪ್ರೇರೇಪಿಸುತ್ತವೆ. ನಿಮ್ಮ ಜೀವನಕ್ಕೆ ಅತ್ಯಂತ ಅಗತ್ಯವಾದ  ಗೌತಮ ಬುದ್ಧನ ಬೋಧನೆಗಳನ್ನು ನಾವಿಂದು ಹೇಳ್ತೇವೆ. 

ಗೌತಮ ಬುದ್ಧ (Gautama Buddha) ನ ಅಮೂಲ್ಯ ವಿಚಾರಗಳು : 
1. ಹಂಚುವುದ್ರಲ್ಲಿ ಸಂತೋಷ (Happiness) ವಿದೆ : ಒಂದು ಉರಿಯುವ ದೀಪದಿಂದ ಸಾವಿರಾರು ದೀಪಗಳನ್ನು ಬೆಳಗಿಸಬಹುದು, ಆದರೆ ಆ ದೀಪದ ಬೆಳಕು ಕಡಿಮೆಯಾಗುವುದಿಲ್ಲ. ಅದೇ ರೀತಿ ಹಂಚುವುದರಿಂದ ಸಂತೋಷವೂ ಹೆಚ್ಚುತ್ತದೆ, ಕಡಿಮೆಯಾಗುವುದಿಲ್ಲ. ಸಂತೋಷವೆಂದರೆ ಅತಿಯಾಗಿರುವುದಲ್ಲ, ಸಂತೋಷ ಎಂದರೆ ಅತಿಯಾಗಿ ನೀಡುವುದು. 
2.  ಶಾಂತಿ ನಿಮ್ಮೊಳಗಿದೆ : ಒಬ್ಬ ವ್ಯಕ್ತಿಯೊಳಗೆ ಶಾಂತಿ ನೆಲೆಸಿದೆ. ಅದನ್ನು ಹೊರಗೆ ಹುಡುಕಬೇಡಿ ಎಂದು ಬುದ್ಧ ಹೇಳಿದ್ದಾರೆ.
3. ಆರೋಗ್ಯ ಮುಖ್ಯ : ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ ನಮ್ಮ ಮನಸ್ಸನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು ಸಾಧ್ಯವಾಗುವುದಿಲ್ಲ. ಆರೋಗ್ಯವೇ ಶ್ರೇಷ್ಠ ಕೊಡುಗೆ. ನೆಮ್ಮದಿಯೇ ಶ್ರೇಷ್ಠ ಸಂಪತ್ತು. ನಿಷ್ಠೆಯೇ ಶ್ರೇಷ್ಠ ಸಂಬಂಧ.
4. ಬೆಳಕಿನ ಮಹತ್ವ : ಒಂದು ಸಣ್ಣ ದೀಪದ ಬೆಳಕನ್ನು ಅಳಿಸುವಷ್ಟು ಅಂಧಕಾರ ಈ ಇಡೀ ಜಗತ್ತಿನಲ್ಲಿ ಇಲ್ಲ.
5. ಪ್ರೀತಿಯಿಂದ ದ್ವೇಷ ಕೊನೆ : ದ್ವೇಷವು ದ್ವೇಷದಿಂದ ಎಂದಿಗೂ ಕೊನೆಗೊಳ್ಳುವುದಿಲ್ಲ. ದ್ವೇಷವನ್ನು ಪ್ರೀತಿಯಿಂದ ಮಾತ್ರ ಕೊನೆಗೊಳಿಸಬಹುದು. ಇದು ಸಹಜ ಸತ್ಯ.
6. ನಿಮ್ಮನ್ನು ನೀವು ಪ್ರೀತಿಸಿ : ನೀವು ನಿಜವಾಗಿಯೂ ನಿಮ್ಮನ್ನು ಪ್ರೀತಿಸಿದರೆ, ನೀವು ಎಂದಿಗೂ ಇತರರನ್ನು ನೋಯಿಸಲು ಸಾಧ್ಯವಿಲ್ಲ. ಐವತ್ತು ಜನರನ್ನು ಪ್ರೀತಿಸುವವನಿಗೆ ಐವತ್ತು ತೊಂದರೆಗಳಿವೆ, ಯಾರನ್ನೂ ಪ್ರೀತಿಸದವನಿಗೆ ತೊಂದರೆಯಿಲ್ಲ.
7. ಸಂತೋಷದ ದಾರಿ : ಸಂತೋಷಕ್ಕೆ ಬೇರೆ ದಾರಿಯಿಲ್ಲ, ಸಂತೋಷವಾಗಿರುವುದು ಒಂದೇ ದಾರಿ. 

ಅಬ್ಬಬ್ಬಾ! ಮನೆಯಂಗಳದಲ್ಲೇ ತೆಂಗಿನಮರವಿದ್ದರೆ ಎಷ್ಟೆಲ್ಲ ಲಾಭಗಳು!

8.ಕೋಪ ಮೊದಲು ನಿಮ್ಮನ್ನು ಸುಡುತ್ತದೆ : ಕೋಪವೆಂದ್ರೆ, ಉರಿಯುತ್ತಿರುವ ಕಲ್ಲಿದ್ದಲನ್ನು ಇನ್ನೊಬ್ಬರ ಮೇಲೆ ಎಸೆಯುವ ಆಸೆಯಿಂದ ಹಿಡಿದುಕೊಂಡಂತೆ. ಅದು ಮೊದಲು ನಿಮ್ಮನ್ನು ಸುಡುತ್ತದೆ.
9. ನಿಮ್ಮ ಆಲೋಚನೆಯಂತೆ ನಿಮ್ಮ ವ್ಯಕ್ತಿತ್ವ :  ನಾವು ಇಲ್ಲಿಯವರೆಗೆ ಏನು ಆಲೋಚನೆ ಮಾಡಿದ್ದೆವೋ ಅದೇ ನಾವು ಈಗ ಆಗಿದ್ದೇವೆ. ಒಬ್ಬ ವ್ಯಕ್ತಿಯು ಕೆಟ್ಟ ಆಲೋಚನೆಯೊಂದಿಗೆ ಮಾತನಾಡಿದರೆ ಅಥವಾ ವರ್ತಿಸಿದರೆ ಅವನು ದುಃಖಕ್ಕೆ ಒಳಗಾಗುತ್ತಾನೆ. ಒಬ್ಬ ವ್ಯಕ್ತಿಯು ಶುದ್ಧ ಆಲೋಚನೆಗಳೊಂದಿಗೆ ಮಾತನಾಡಿದರೆ ಅಥವಾ ವರ್ತಿಸಿದರೆ  ಸಂತೋಷವು ಅವನ ನೆರಳಿನಂತೆ ಎಂದಿಗೂ ಬಿಡುವುದಿಲ್ಲ. 
10. ಇಂಥವರ ಸ್ನೇಹ ಬೆಳೆಸಿ : ಪ್ರಾಣಿಗಿಂತ ಕಪಟಿ ಮತ್ತು ದುಷ್ಟ ಸ್ನೇಹಿತನಿಗೆ ಹೆಚ್ಚು ಭಯಪಡಬೇಕು.  ಪ್ರಾಣಿ ನಿಮ್ಮ ದೇಹಕ್ಕೆ ಮಾತ್ರ ಹಾನಿ ಮಾಡುತ್ತದೆ ಆದರೆ ಕೆಟ್ಟ ಸ್ನೇಹಿತ ನಿಮ್ಮ ಬುದ್ಧಿಗೆ ಹಾನಿ ಮಾಡಬಹುದು.
11. ಅಸೂಯೆ ಬೇಡ : ನಿಮ್ಮಲ್ಲಿರುವದನ್ನು ಉತ್ಪ್ರೇಕ್ಷೆ ಮಾಡಬೇಡಿ ಮತ್ತು ಇತರರ ಬಗ್ಗೆ ಅಸೂಯೆ ಪಡಬೇಡಿ.

ತುಲಾ ರಾಶಿಯಲ್ಲಾಗ್ತಿದೆ ಅಪರೂಪದ ಬದಲಾವಣೆ, ಯಾರಿಗೆ ಲಾಭ, ಯಾರಿಗೆ ನಷ್ಟ?

12. ಆಧ್ಯಾತ್ಮದ ಮಹತ್ವ: ಮೇಣದಬತ್ತಿಯು ಬೆಂಕಿಯಿಲ್ಲದೆ ಉರಿಯುವುದಿಲ್ಲವೋ ಹಾಗೆಯೇ ಮನುಷ್ಯನು ಆಧ್ಯಾತ್ಮಿಕ ಜೀವನವಿಲ್ಲದೆ ಬದುಕಲು ಸಾಧ್ಯವಿಲ್ಲ.
13. ಸೂರ್ಯ, ಚಂದ್ರ ಮತ್ತು ಸತ್ಯ ಎಂಬ ಮೂರು ವಿಷಯಗಳನ್ನು ದೀರ್ಘಕಾಲ ಮುಚ್ಚಿಡಲು ಸಾಧ್ಯವಿಲ್ಲ.

click me!