ರಾಶಿಗೆ ಅನುಗುಣವಾಗಿ ಯಾರ ಲೈಂಗಿಕಾಸಕ್ತಿ ಹೇಗಿರುತ್ತದೆ ತಿಳಿದುಕೊಳ್ಳಿ.
ಕೆಲವರಿಗೆ ಲೈಂಗಿಕಾಸಕ್ತಿ ಕಡಿಮೆ, ಮತ್ತೆ ಕೆಲವರಿಗೆ ತೀರಾ ಆಸಕ್ತಿ. ಇನ್ನು ಕೆಲವರ ಲೈಂಗಿಕಾಸಕ್ತಿ ವಿಭಿನ್ನವಾಗಿರುತ್ತದೆ. ರಾಶಿಯ ಆಧಾರದ ಮೇಲೆ ಆ ವ್ಯಕ್ತಿಯ ಲೈಂಗಿಕಾಸಕ್ತಿ(Sexual Appetite) ಬಗ್ಗೆ ತಿಳಿದುಕೊಳ್ಳಬಹುದು.
ಮೇಷ(Aries)
ಅಗ್ನಿಯ ಅಂಶವಾದ ಮೇಷ ರಾಶಿಯವರನ್ನು ಸೆಕ್ಸ್ ಗಾಡ್(sex Gods) ಎಂದೇ ಹೇಳಬಹುದು. ಇವರು ಯಾವುದೇ ಸಾಹಸಕ್ಕೂ ಹೆದರುವವರಲ್ಲ. ಲೈಂಗಿಕ ವಿಷಯವನ್ನು ಕೇವಲ ಮಲಗುವ ಕೋಣೆಗೆ ಸೀಮಿತವಾಗಿಡುವವರಲ್ಲ. ಇವರ ಸಂಗಾತಿಯಾಗುವವರು ಪ್ರತಿ ದಿನ ಸಾಕಷ್ಟು ಎನರ್ಜಿ ಬಾರ್ ತಿನ್ನಬೇಕು.
ವೃಷಭ(Taurus)
ಇವರಿಗೆ ಹಾಸಿಗೆ ಮೇಲೆ ಹೊಸ ಹೊಸ ಪ್ರಯೋಗ ಮಾಡುವುದಿಷ್ಟ ಇಲ್ಲ. ಸಾಮಾನ್ಯ ದೈನಂದಿನ ಜೀವನದ ಭಾಗವಾಗಿ ಲೈಂಗಿಕ ಜೀವನ ನಡೆದರಷ್ಟೇ ಸಾಕು ಎನ್ನುವವರಿವರು.
ಮಿಥುನ(Gemini)
ಖಾಸಗಿಯಾದ ಕೆರಳಿಸುವ ಅಸಭ್ಯ ಮಾತ(Dirty talking)ನ್ನು ಬಹುಷಃ ಸೃಷ್ಟಿಸಿದವರೇ ಮಿಥುನ ರಾಶಿಯವರು. ಆ ಮಾತುಗಳಲ್ಲೇ ಸಂಗಾತಿಯನ್ನು ಕೆರಳಿಸುವ ಸಾಮರ್ಥ್ಯ ಇವರದು. ಆದರೆ, ಮುಂದುವರೆಯಲು ನಾಚುವವರಿವರು. ಪ್ರೋತ್ಸಾಹ ಸಿಕ್ಕರೆ ಎಲ್ಲ ವಿಧದ ಖಾಸಗಿ ಮನರಂಜನೆಯೂ ಇವರಿಂದ ಲಭ್ಯ.
Strong spirits: ಈ ರಾಶಿಯವರು ಗಟ್ಟಿ ಮನೋಬಲದ ಜಗಜಟ್ಟಿಗಳು ..
undefined
ಕಟಕ(Cancer)
ಬಹಳ ಭಾವನಾಜೀವಿಗಳು. ಅಷ್ಟೇ ಪ್ರೀತಿ ತುಂಬಿದ ಲೈಂಗಿಕ ಜೀವನ ನಡೆಸಬಲ್ಲರು. ನಿಧಾನಗತಿಯ ಬಹಳ ಸೌಮ್ಯವಾದ ಪ್ರೇಮ ಇವರದು. ಬಹಳ ಸಮಯದವರೆಗೂ ಮುದ್ದಿಸುವುದು ಇವರಿಗಿಷ್ಟ.
ಸಿಂಹ(Leo)
ಇವರು ಖಾಸಗಿ ಕೋಣೆಯಲ್ಲಿ ಬಹಳ ಸ್ಪರ್ಧಾತ್ಮಕ ಮನೋಭಾವ ತೋರುತ್ತಾರೆ. ಸಂಗಾತಿಯನ್ನು ಹುರಿದು ಮುಕ್ಕುವಂತ ಉತ್ಸಾಹ ಇವರದು. ಸಂಗಾತಿಯನ್ನು ಸಾಧ್ಯವಾದಷ್ಟು ಖುಷಿ ಪಡಿಸುವ ಹಂಬಲ ಇವರದು. ಅದಕ್ಕಾಗಿ ಏನು ಮಾಡಬೇಕೆಂಬುದು ಚೆನ್ನಾಗಿ ತಿಳಿದುಕೊಂಡಿರುತ್ತಾರೆ.
Success Mantras For Children: ಮಕ್ಕಳ ಯಶಸ್ಸಿಗೆ ಹೀಗ್ ಮಾಡಿ ಅನ್ನುತ್ತೆ ಜ್ಯೋತಿಷ್ಯ
ಕನ್ಯಾ(Virgo)
ಕನ್ಯಾ ರಾಶಿಗೆ ಖಾಸಗಿ ಸಮಯದಲ್ಲಿ ಯಾವುದೇ ನಿಯಮಗಳು ಅಡ್ಡಿಯಾಗುವುದಿಲ್ಲ. ಹೊರಗಿದ್ದಾಗ ಮುಗ್ಧರಂತೆ ಕಾಣಿಸುವ ಇವರು, ಕೋಣೆಯಲ್ಲಿ ಬೇರೆಯದೇ ವ್ಯಕ್ತಿಯಾಗಿ ಬಿಡಬಲ್ಲರು. ಅಪರಿಮಿತ ಲೈಂಗಿಕಾಸಕ್ತಿಯಿಂದಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡಬಲ್ಲರು.
ತುಲಾ(Libra)
ಏನೇ ಮಾಡಿದರೂ ಕ್ಲಾಸ್ ಆಗಿ ಮಾಡುವವರಿವರು. ಲೈಂಗಿಕ ಜೀವನದಲ್ಲೂ ಅಷ್ಟೇ, ಗಡಿಬಿಡಿಯಿಲ್ಲದೆ, ಪ್ರತಿ ಬಾರಿಯೂ ವಿಶೇಷ ಎನಿಸುವಂತೆ ನಡೆದುಕೊಳ್ಳುವರು. ಬಹಳ ರೊಮ್ಯಾಂಟಿಕ್ ಸ್ವಭಾವದ ಇವರಿಗೆ ಸುಗಂಧಯುಕ್ತ ಕ್ಯಾಂಡಲ್‌ಗಳು, ಹೂವಿನ ದಳಗಳು, ಶಾಂಪೇನ್(champagne), ಹಗುರ ಸಂಗೀತ ಎಲ್ಲವೂ ಬೇಕು. ಇವರೊಂದಿಗಿನ ಲೈಂಗಿಕ ಜೀವನ ಸಂಗಾತಿಗೆ ಬಹಳ ವಿಶೇಷವಾಗಿರಲಿದೆ.
ವೃಶ್ಚಿಕ(Scorpio)
ಇವರಿಗೆ ಲೈಂಗಿಕಾಸಕ್ತಿ ಬಹಳ. ಅದಿಲ್ಲದೆ ಇವರು ಬದುಕಲಾರರು. ಈ ವಿಷಯಕ್ಕೆ ಬಂದರೆ ಕೊಂಚ ನೈತಿಕತೆ ಕಡಿಮೆಯೇ. ಹೆಚ್ಚು ಸಮಯ ತೆಗೆದುಕೊಳ್ಳದೆ ರಫ್ ಆ್ಯಂಡ್ ಟಫ್ ಆಗಿ ಕಾರ್ಯ ಮುಗಿಸುವವರಿವರು.
ಧನು(Sagittarius)
ಇವರ ಸ್ವಭಾವ ನೀವು ಗೆಸ್ ಮಾಡಲಾರಿರಿ. ಬೆಳಗ್ಗೆ ಬೇಗ ಎದ್ದು ಕೆಲಸಗಳಲ್ಲಿ ಪರಿಶ್ರಮ ಹಾಕುವವರು. ರಾತ್ರಿ ಎಷ್ಟು ಹೊತ್ತಾದರೂ ಸರಿ, ಯೋಚನೆಯಿಲ್ಲದೆ ಪೋರ್ನ್ ಸ್ಟಾರಾಗಿ ಬದಲಾಗಬಲ್ಲರು. ಹಾಸಿಗೆಯಲ್ಲಿ ಸಿಕ್ಕಾಪಟ್ಟೆ ಮನರಂಜನೆ(entertain) ನೀಡುವವರು.
ಮಕರ(Capricorn)
ಇವರು ತಮ್ಮ ಸಂಗಾತಿ ಹಾಸಿಗೆಯಲ್ಲಿ ಏನನ್ನು ಬಯಸುತ್ತಾರೆಂದು ಚೆನ್ನಾಗಿ ವಿಚಾರಿಸಿಕೊಂಡು ಅದರಂತೆ ಮುಂದುವರೆಯುವವರು. ಪ್ರೇಮಿಯನ್ನು ತೃಪ್ತಿಪಡಿಸುವುದರಲ್ಲೇ ಇವರ ತೃಪ್ತಿ ಇದೆ. ಲೈಂಗಿಕ ಚಟುವಟಿಕೆ ಇವರ ಪಾಲಿಗೆ ಕಾಮವಲ್ಲ, ಅದು ನಂಬಿಕೆ, ಪ್ರೀತಿ ಹಾಗೂ ಪ್ರಾಮಾಣಿಕತೆ.
ಕುಂಭ(Aquarius)
ಬೇರೆಲ್ಲ ರಾಶಿಯವರಿಗಿಂತ ಕುಂಭ ರಾಶಿಗೆ ಲೈಂಗಿಕಾಸಕ್ತಿ ಸ್ವಲ್ಪ ಕಡಿಮೆಯೇ. ಅವರ ಬದುಕಿನ ಬೇರೆಲ್ಲ ವಿಷಯಗಳಂತೆಯೇ ಸೆಕ್ಸ್ ಕೂಡಾ ಎಂದು ಭಾವಿಸಿದವರು. ಪ್ರೀತಿಯನ್ನು ಸಾಬೀತುಪಡಿಸಲು ಸೆಕ್ಸನ್ನು ಮಾನದಂಡವಾಗಿ ಬಳಸುವವರು ಇವರಲ್ಲ. ಭಾವನೆ(Emotion)ಗೆ ಹೆಚ್ಚು ಬೆಲೆ ನೀಡುವವರು. ಸಿಕ್ಕರೂ ಖುಷಿ, ಸಿಗದಿದ್ದರೂ ತೊಂದರೆ ಇಲ್ಲ ಎಂಬ ಸ್ವಭಾವ ಇವರದು.
ಮೀನ(Pisces)
ಇವರದು ಆಧ್ಯಾತ್ಮದ ಮನಸ್ಸು. ಇವರು ಸಂಗಾತಿಯನ್ನು ಅರಿಯಲು ಬಹಳ ಸಮಯ ತೆಗೆದುಕೊಳ್ಳುವವರು. ಸಂಗಾತಿಯೊಂದಿಗಿನ ಪ್ರತಿ ಸಮಯ ಕೂಡಾ ವಿಶೇಷವಾಗರಬೇಕೆಂದು ಬಯಸುವವರು. ವಿಷಯವನ್ನು ನಿಧಾನವಾಗಿ ತೆಗೆದುಕೊಂಡು ಹೋಗ ಬಯಸುವವರು ಇವರು.