Strong spirits: ಈ ರಾಶಿಯವರು ಗಟ್ಟಿ ಮನೋಬಲದ ಜಗಜಟ್ಟಿಗಳು ..

By Suvarna NewsFirst Published Dec 21, 2021, 10:46 AM IST
Highlights

ಕೆಲವರ ಮನೋಬಲ ಅಚ್ಚರಿ ಹುಟ್ಟಿಸುವಂತಿರುತ್ತದೆ. ಸೈಲೆಂಟಾಗಿದ್ದು ಸ್ಟ್ರಾಂಗೆನಿಸಿಕೊಳ್ಳುವವರು ಕೆಲವರಾದರೆ, ವೈಲೆಂಟಾಗಿ ಸ್ಟ್ರಾಂಗ್ ಎನಿಸುವವರು ಮತ್ತೆ ಕೆಲವರು. ಒಟ್ಟಾರೆ, ಯಾವೆಲ್ಲ ರಾಶಿಯವರು ಹೆಚ್ಚು ಸ್ಟ್ರಾಂಗ್ ಇರುತ್ತಾರೆ ಗೊತ್ತಾ? 

ಯಾರು ಮುನ್ನುಗ್ಗುವರೋ, ಕಸಿದುಕೊಳ್ಳುತ್ತಾರೋ ಅವರಿಗಷ್ಟೇ ಅಧಿಕಾರ. ಅದಕ್ಕೆ ಅಪಾರ ಧೈರ್ಯ ಬೇಕು. ಮನಸ್ಸು, ದೇಹಗಳೆರಡೂ ಬಲವಾಗಿದ್ದಾಗ ಮಾತ್ರ ಅಂಥದೊಂದು ಧೈರ್ಯ ಬರಲು ಸಾಧ್ಯ. ಇಂಥ ಗಟ್ಟಿ ಮನೋಬಲವು ಎಲ್ಲರಿಗೂ ಸಿದ್ಧಿಸುವುದಿಲ್ಲ. ಹಾಗೆ ಸಿದ್ಧಿಸಿದವರು ತಂಡವೊಂದನ್ನು ಮುನ್ನಡೆಸುವ, ಇನ್ನೊಬ್ಬರಿಗಾಗಿ ಹೋರಾಡುವ, ಮತ್ತೊಬ್ಬರು ತಮ್ಮ ಮಾತಿನಂತೆ ನಡೆವಂತೆ ಮಾಡಬಲ್ಲರು. 

ಇಂಥ ಮನೋಬಲ ಹೆಚ್ಚಿನವರಿಗೆ ಹುಟ್ಟಿನಿಂದಲೇ ಬರುತ್ತದೆ. ಎಲ್ಲೋ ಕೆಲವೊಬ್ಬರು ಮಾತ್ರ ಶ್ರಮ, ಹಟದಿಂದ ಗಳಿಸುತ್ತಾರೆ. ಯಾವೆಲ್ಲ ರಾಶಿಯವರಿಗೆ ಈ ಗುಣಗಳು ಹುಟ್ಟಿನಿಂದಲೇ ಬರುತ್ತವೆ, ನೀವು ಆ ರಾಶಿಗೆ ಸೇರಿದ್ದೀರಾ ನೋಡಿಕೊಳ್ಳಿ.

ಜ್ಯೋತಿಷಿಗಳ ಪ್ರಕಾರ, ವೃಶ್ಚಿಕ, ಮೇಷ, ಸಿಂಹ, ಕುಂಭ ಹಾಗೂ ಧನು ರಾಶಿಯವರು ಜೀವನವೊಂದೇ, ಅದನ್ನು ಸಂಪೂರ್ಣ ಅನುಭವಿಸಬೇಕು ಎಂದು ನಂಬುವವರು. ಸ್ವಂತದ ಜೊತೆಗೆ ತಂಡವನ್ನೂ ಬೆಳೆಸುವ ಆಸೆ, ಆಕಾಂಕ್ಷೆಗಳನ್ನು ಹೊಂದಿದವರು. ಬಹಳ ನೇರ ನಡೆ ನುಡಿಯವರು. ಅದರಲ್ಲೂ ತಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿದ್ದು, ಧೈರ್ಯವಾಗಿ ಜೀವನದ ಎಲ್ಲ ಸಮಸ್ಯೆಗಳಿಗೆ ಎದೆಯೊಡ್ಡುವವರು. ಈ ಬಗ್ಗೆ ವಿವರವಾಗಿ ನೋಡೋಣ. 

ವೃಶ್ಚಿಕ(Scorpio)
ಇವರು ಅತ್ಯುತ್ತಮ ನಾಯಕರು. ಬಹಳ ಗಟ್ಟಿ ಮನೆೋಬಲ. ಮುನ್ನುಗ್ಗುವ ಛಾತಿ ಹಾಗೂ ಮಾತನ್ನು ಹೇಗೆ ಬೇಕಾದರೂ ನಯವಾಗಿ ತಿರುಗಿಸುವ ಸ್ವಭಾವದವರು(manipulative). ಈ ಸ್ವಭಾವವೇ ಇವರನ್ನು ಹಚ್ಚು ಸ್ಟ್ರಾಂಗಾಗಿಸುವುದು. ತಾವು ನಂಬಿದ ವಿಷಯಗಳ ಬಗ್ಗೆ ಯಾರೇನಂದರೂ ಬದಲಾಗದೆ ಆ ನಂಬಿಕೆಗಳ ಪರ ನಿಂತು ಹೋರಾಡುವವರು. ತಮ್ಮ ನಂಬಿಕೆಯೇ ಸರಿ ಎಂದು ಸಾಧಿಸುತ್ತಾ ಅದರಂತೆಯೇ ನಡೆವವರು. ಇವರಿಗೆ ಕಷ್ಟ, ಸವಾಲು(challenge) ಎದುರಿಸುವುದು ಭಯವೇನು ಅಲ್ಲ, ಏಕೆಂದರೆ ಕಷ್ಟ ಎದುರಿಸಿದಷ್ಟೂ ಬಲವಾಗುತ್ತೇವೆ ಎಂಬುದು ಇವರಿಗೆ ಗೊತ್ತು. 

Dream Meanings: ಸ್ವಪ್ನದಲ್ಲಿ ಪತಿ ದರ್ಶನವಾದ್ರೆ ಏನು ಅರ್ಥ ಗೊತ್ತಾ? ಕನಸಿನಲ್ಲಿ ಬರುವ ಸಂಬಂಧಿಕರು ನೀಡ್ತಾರೆ ಈ ಸೂಚನೆ

ಮೇಷ(Aries)
ಇವರು ಮೊದಲೇ ಸಿಕ್ಕಾಪಟ್ಟೆ ಇಂಪಲ್ಸಿವ್(impulsive). ತಲೆಗೆ ಬಂದ ಕೂಡಲೇ ಪ್ರತಿಕ್ರಿಯಿಸುವವರು. ಜೊತೆಗೆ, ಅಗತ್ಯ ಬಿದ್ದಾಗೆಲ್ಲ ವಾಸ್ತವವನ್ನು ಬಹಳ ಪ್ರಾಕ್ಟಿಕಲ್ಲಾಗಿ ಒಪ್ಪಿಕೊಳ್ಳಬಲ್ಲರು. ಇದೇ ಅವರನ್ನು ಸ್ಟ್ರಾಂಗ್ ಆಗಿಸುವುದು. ಜೀವನದ ಎಲ್ಲ ವಿಷಯಗಳ ಕುರಿತೂ ಆಸಕ್ತಿ, ಪ್ರೀತಿ ಇವರದಾಗಿದ್ದು, ಎಲ್ಲೆಡೆ ಇವರ ಚೈತನ್ಯ ಹಬ್ಬುತ್ತದೆ. ಸುಮ್ಮನೆ ಕುಳಿತು ಬೇರೊಬ್ಬರು ತಾವು ಆಸೆ ಪಟ್ಟಿದ್ದನ್ನು ತೆಗೆದಕೊಳ್ಳುವುದನ್ನು ಇವರು ನೋಡಲಾರರು. 

ಸಿಂಹ(Leo)
ಇವರನ್ನು ಯಾರೂ ಕಡೆಗಣಿಸಲಾರರು. ಇವರ ಚೇತನವೇ ಅಂಥದ್ದು. ಜೀವನವನ್ನು ಕಿಂಗ್- ಸೈಜಾಗಿ ಅನುಭವಿಸಬಲ್ಲರು. ಪ್ರೀತಿ, ವಿಶ್ವಾಸ ಹಾಗೂ ಕರುಣೆಯಿಂದಲೇ ಸ್ಟ್ರಾಂಗ್ ಎನಿಸಿಕೊಳ್ಳುವವರು ಇವರು. ಬೇರೆಯವರು ಇವರ ಬಳಿ ಸುಳ್ಳು ಹೇಳಬಹುದು. ಆದರೆ, ಅವುಗಳಿಂದ ತನಗೇನೂ ಆಗಬೇಕಾಗಿಲ್ಲ ಎಂಬಂತೆ ನಂಬಿದಂತೆ ನಟಿಸಿ ಮುನ್ನಡೆಯುವವರು. ಪ್ರೀತಿಯಿಂದಲೇ ಸುತ್ತಲಿನೆಲ್ಲದರ ನಿಯಂತ್ರಣ(control) ತೆಗೆದುಕೊಳ್ಳಬಲ್ಲದ್ದು ಇವರ ಛಾತಿ. 

Numerology: ನಿಮ್ಮ ಜನ್ಮದಿನ ಆಧರಿಸಿ 2022ರಲ್ಲಿ ನಿಮ್ಮ ಭವಿಷ್ಯ ಹೀಗಿರುತ್ತೆ!

ಧನು(Sagittarius)
ಇವರ ಬಳಿ ಇರುವ ಮನೋಬಲ, ಧೈರ್ಯ, ಛಾತಿಗಳನ್ನು ಇನ್ನೊಬ್ಬರೆದುರು ಪ್ರದರ್ಶಿಸಲಾರರು. ಇವರ ಭಾವನಾತ್ಮಕ ಗಟ್ಟಿತನವೇ ಅಚ್ಚರಿ ಹುಟ್ಟಿಸುವಂಥದ್ದು. ಎಷ್ಟೇ ಚಂಚಲಗೊಳಿಸುವ ವಿಷಯಗಳು ಸುತ್ತಲು ಸೆಳೆಯಲೀ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ, ತಮ್ಮ ಬೆಳವಣಿಗೆಗೆ ಏನು ಬೇಕೋ ಅದನ್ನು ತಮ್ಮ ಪಾಡಿಗೆ ಸಾಧಿಸುತ್ತಾ ಸಾಗುವವರು ಇವರು. ಸಣ್ಣ ಪುಟ್ಟ ಸೋಲಿಗೆ ಹೆದರಿ ಸುಮ್ಮನಾಗದೆ ಮರಳಿ ಯತ್ನವ ಮಾಡಿ ಮುಂದೆ ಹೋಗಬಲ್ಲರು. ಇದೇ ಕಾರಣಕ್ಕೆ ಇವರು ಉಳಿದವರಿಗಿಂತ ಸ್ಟ್ರಾಂಗ್ ಎನಿಸಿಕೊಳ್ಳುತ್ತಾರೆ. 

ಕುಂಭ(Aquarius)
ಇವರ ಸ್ವನಿಯಂತ್ರಣ ಅಚ್ಚರಿ ಹುಟ್ಟಿಸುವಂಥದ್ದು. ಯಾವುದೇ ಸನ್ನಿವೇಶಕ್ಕೆ ತಕ್ಷಣ ಪ್ರತಿಕ್ರಿಯಿಸುವವರಲ್ಲ. ಸಮಯ ತೆಗೆದುಕೊಂಡು ಏನು ಮಾಡಿದರೆ ಮುಂದೇನಾಗುತ್ತದೆ, ಯಾವೆಲ್ಲ ರೀತಿಯ ಸಮಸ್ಯೆಗಳು ಎದುರಾಗಬಹುದು ಎಂಬ ದೂರದೃಷ್ಟಿಯಲ್ಲಿ ಯೋಚಿಸಿ ಮುಂದುವರಿಯುವವರು. ವಿಶೇಷವಾಗಿ ಸಂಬಂಧಗಳಲ್ಲಿ ಇವರ ಈ ಗುಣ ಹೆಚ್ಚು ಪ್ರತಿಫಲನವಾಗುತ್ತದೆ. ಭಾವನೆಗಳನ್ನು ಮತ್ತೊಬ್ಬರೆದುರು ವ್ಯಕ್ತಪಡಿಸುವುದಿಲ್ಲ ಆದ್ದರಿಂದ ಇವರ ಮನಸ್ಸಲ್ಲೇನಾಗುತ್ತಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಮೋಸ, ವಂಚನೆ(betrayal), ನೋವುಗಳನ್ನು ಉಳಿದ ರಾಶಿಯವರಿಗಿಂತ ಚೆನ್ನಾಗಿ ಜೀರ್ಣಿಸಿಕೊಳ್ಳುವ ಛಾತಿ ಇವರದು. 

click me!