Zodiac Sign: ಮೇಲ್ನೋಟಕ್ಕೆ ಮೃದುವಾಗಿ ಕಂಡರೂ ಕಷ್ಟಕ್ಕೆ ಹೆದರೋಲ್ಲ ಈ ಜನ

By Suvarna News  |  First Published Jun 20, 2023, 5:24 PM IST

ಕಷ್ಟದ ಸಮಯದಲ್ಲಿ ಧೃತಿಗೆಡುವ ಜನರೇ ಅಧಿಕ. ಸಂಕಷ್ಟಗಳಲ್ಲಿ ದೃಢವಾಗಿ ನಿಲ್ಲುವ ಸ್ಥಿರವಾದ ಚಿತ್ತ ಎಲ್ಲರಲ್ಲೂ ಇರುವುದಿಲ್ಲ. ಸಂಘರ್ಷಗಳಿಗೆ ಹೆದರದ, ಸಂಬಂಧಗಳು ಹದಗೆಟ್ಟಾಗ ಸೋಲದ, ಯಾವುದೇ ರೀತಿಯ ಬಿಕ್ಕಟ್ಟಿಗೆ ಹಿಂಜರಿಯದ ಗುಣ ಕೆಲವೇ ರಾಶಿಗಳ ಜನರಲ್ಲಿ ಕಂಡುಬರುತ್ತದೆ. 
 


ಕಷ್ಟದ ಸನ್ನಿವೇಶಗಳನ್ನು ದೃಢವಾಗಿ ಎದುರಿಸುವ ಛಾತಿ ಕೆಲವೇ ಜನರಲ್ಲಿ ಕಂಡುಬರುತ್ತದೆ. ಪ್ರತಿಕೂಲವೆನಿಸುವ ಸಮಯವನ್ನು ಎದುರಿಸಲು ಸಹಕಾರಿಯಾಗಬಲ್ಲ ಪರಿಹಾರಗಳು ಇವರಲ್ಲಿ ಸದಾ ಲಭ್ಯವಿರುತ್ತದೆ. ಹೀಗಾಗಿ, ಎಂಥದ್ದೇ ಕಷ್ಟವನ್ನೂ ಇವರು ದೃಢವಾಗಿ ಎದುರಿಸುತ್ತಾರೆ. ಇಂತಹ ಗುಣವನ್ನು ಕೆಲವೇ ರಾಶಿಗಳ ಜನರಲ್ಲಿ ಕಾಣಬಹುದು. ಕಷ್ಟಗಳಿಗೆ ಪ್ರತಿಯೊಬ್ಬರೂ ವಿಭಿನ್ನವಾಗಿ ವರ್ತಿಸುತ್ತಾರೆ. ಕೆಲವರು ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾದಷ್ಟೂ ಪ್ರಯತ್ನ ಮಾಡುತ್ತಾರೆ. ಸಂಘರ್ಷಗಳನ್ನು ಎದುರಿಸಲು ಹಿಂದೇಟು ಹಾಕುತ್ತಾರೆ. ಆದರೆ, ದ್ವಾದಶ ರಾಶಿಗಳ ಪೈಕಿ ನಾಲ್ಕು ರಾಶಿಗಳ ಜನ ಮಾತ್ರ ಎಂದಿಗೂ ಈ ಗುಣವನ್ನು ಪ್ರದರ್ಶಿಸುವುದಿಲ್ಲ. ಯಾವುದೇ ಸನ್ನಿವೇಶಗಳು ಅವರನ್ನು ಕಳೆಗುಂದಿಸಲು ಸಾಧ್ಯವಿಲ್ಲ. ಯಾವತ್ತೂ ಅವರು ಧೈರ್ಯ ಕಳೆದುಕೊಳ್ಳುವುದಿಲ್ಲ ಹಾಗೂ ಎಂಥದ್ದೇ ಬಿಕ್ಕಟ್ಟನ್ನು ಎದುರಿಸುವ ಛಾತಿ ಅವರಲ್ಲಿ ಇರುತ್ತದೆ. ತಾವೇ ಕೈಯಾರೆ ಸೃಷ್ಟಿ ಮಾಡಿರುವ ಬಿಕ್ಕಟ್ಟಾದರೂ ಸರಿ, ಅವುಗಳನ್ನು ಸಕಾರಾತ್ಮಕವಾಗಿ ಪರಿಹಾರ ಮಾಡಿಕೊಳ್ಳುತ್ತಾರೆ. ಇವರ ಸಂಘರ್ಷಗಳ ಬಗ್ಗೆ ಬೇರೆಯವರು ಆರೋಪ ಮಾಡುತ್ತಿದ್ದರೂ ಎಲ್ಲರನ್ನೂ ನೇರವಾಗಿ ಎದುರಿಸುತ್ತಾರೆ. ಸಮಸ್ಯೆಗಳಿಗೆ ಖಚಿತವಾದ ಪರಿಹಾರ ಪಡೆದುಕೊಳ್ಳುತ್ತಾರೆ. ವಿವಿಧ ತಂತ್ರಗಳ ಮೂಲಕ ದೃಢವಾಗಿ ಸಮಸ್ಯೆಗಳಿಂದ ಹೊರಬರುತ್ತಾರೆ.

•    ಕರ್ಕಾಟಕ (Cancer)
ಯಾವುದೇ ರೀತಿಯ ಚಂಡಮಾರುತ (Storm) ಎದುರಿಸಲು ಕರ್ಕಾಟಕ ರಾಶಿಯವರಲ್ಲಿ ಛಾತಿ (Strong) ಇರುತ್ತದೆ. ಇವರಲ್ಲಿ ಹೊಣೆಗಾರಿಕೆಯ (Responsibility) ಭಾವನೆ ಅತ್ಯಂತ ನಿಖರವಾಗಿರುವುದರಿಂದ ಕಷ್ಟದ (Tough) ಸನ್ನಿವೇಶಗಳಲ್ಲಿ ಯಶಸ್ಸು ಗಳಿಸುವ ಕುರಿತು ಯೋಚಿಸುತ್ತಾರೆ. ತಮಗೆ ಎದುರಾಗುವ ಅಗ್ನಿಪರೀಕ್ಷೆಗಳನ್ನು ಅತ್ಯಂತ ಶ್ರಮ ಹಾಕಿಯಾದರೂ ಬಗೆಹರಿಸಿಕೊಳ್ಳುತ್ತಾರೆ. ಪಶ್ಚಾತ್ತಾಪ ಪಡುತ್ತ ಸಮಯ ವ್ಯರ್ಥ ಮಾಡುವುದು ಇವರಿಂದ ಸಾಧ್ಯವಿಲ್ಲ. ಬದಲಿಗೆ, ಪರಿಹಾರಗಳ (Solutions) ಬಗ್ಗೆ ಯೋಚಿಸುತ್ತಾರೆ. ಸಂಕಷ್ಟಗಳಲ್ಲಿ ನಿಗೂಢವಾಗಿ ವರ್ತಿಸುತ್ತಾರೆ. ಸ್ಥಿರವಾಗಿರುತ್ತಾರೆ. ಸ್ವಯಂ ಶಿಸ್ತು ಇವರಲ್ಲಿ ಗಾಢವಾಗಿರುವುದರಿಂದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. 

Tap to resize

Latest Videos

ದುಡ್ಡು ಅಶಾಶ್ವತ, ಯಾವಾಗ ಬೇಕಿದ್ರೂ ದುಡೀಬಹ್ದು ಅನ್ನೋ ರಾಶಿಯವರು ಇವ್ರು!

•    ವೃಷಭ (Taurus)
ಬಿಕ್ಕಟ್ಟನ್ನು ಎದುರಿಸಲು ಪ್ರತಿಯೊಂದು ರಾಶಿಯ (Zodiac Sign) ಜನ ತಮ್ಮದೇ ವಿಧಾನಗಳನ್ನು ಅನುಸರಿಸುತ್ತಾರೆ. ವೃಷಭ ರಾಶಿಯ ಜನ ಅಪ್ಪಟ ಯೋಧರು. ಕಷ್ಟದ ಸಮಯದಲ್ಲಿ ಭರವಸೆ (Trust) ಕಳೆದುಕೊಳ್ಳುವುದಿಲ್ಲ. ಇತರರಲ್ಲೂ ಸ್ಫೂರ್ತಿ (Spirit) ತುಂಬುತ್ತಾರೆ. ಎಂಥದ್ದೇ ದುರಂತದ ಸಮಯದಲ್ಲೂ ಗೂಳಿಯ ಮೇಲೆ ನಂಬಿಕೆ ಇಡಬಹುದು. ಜೀವನದ ಉತ್ಕೃಷ್ಟ ಕ್ಷಣಗಳನ್ನು ನೋಡಬೇಕು ಎಂದಾದರೆ ಇವರ ಸಹವಾಸ ಮಾಡಬೇಕು. ಕ್ರಿಯೆ ಆಧಾರಿತ (Action Oriented) ರಾಶಿಯಾಗಿರುವುದರಿಂದ ಕೆಟ್ಟ ಸನ್ನಿವೇಶಗಳನ್ನು ಜೀವನದಲ್ಲಿ ಧನಾತ್ಮಕ (Positive) ಬದಲಾವಣೆ ತಂದುಕೊಳ್ಳಲು ಬಳಕೆ ಮಾಡಿಕೊಳ್ಳುತ್ತಾರೆ. ಸಂಗಾತಿ (Partner) ಅಥವಾ ಪಾಲಕರನ್ನು ಹಿನ್ನಡೆಯಿಂದ ಪ್ರಗತಿಯ ದಾರಿಗೆ ತರಲು ಇವರಿಂದ ಸಾಧ್ಯ. ಸವಾಲುಗಳನ್ನು ಎದುರಿಸಲು ಹಿಂಜರಿಯದೆ ತಾವು ನಂಬಿರುವ ಮೌಲ್ಯಗಳನ್ನು (Values) ಬಲವಾಗಿ ಪ್ರತಿಪಾದಿಸುತ್ತಾರೆ. 

•    ಮೇಷ (Aries)
ಜೀವನವನ್ನು ಸುಗಮವಾಗಿ ಕಳೆಯುವುದು ಮೇಷ ರಾಶಿಯವರ ಬಯಕೆಯಾದರೂ ಸವಾಲುಗಳನ್ನು (Challenges) ಎದುರಿಸಲು ಹಿಂದೇಟು ಹಾಕುವುದಿಲ್ಲ. ಯಾವುದೇ ಕಷ್ಟ ಎದುರಾದರೂ ಅದನ್ನು ಭವಿಷ್ಯದ ಪಾಠವನ್ನಾಗಿ ಸ್ವೀಕಾರ ಮಾಡುತ್ತಾರೆ. ತಮ್ಮವರ ಸಾಮರ್ಥ್ಯವಾಗಿ (Strength) ಗುರುತಿಸಿಕೊಳ್ಳಬಲ್ಲರು. ದಣಿವಿಲ್ಲದ ಸ್ಫೂರ್ತಿ ಇವರದ್ದು. ಸೋಲುಗಳಿಂದ (Failures) ಬೇಗ ಚೇತರಿಸಿಕೊಳ್ಳುತ್ತಾರೆ. ವಿಸ್ತೃತವಾದ ದೃಷ್ಟಿಕೋನ ಇವರಲ್ಲಿರುವುದರಿಂದ ವಿಭಿನ್ನವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ತಮ್ಮ ವಿಚಾರಗಳಿಗೆ ತಿದ್ದುಪಡಿ ತಂದುಕೊಳ್ಳಲು ಸಿದ್ಧವಾಗಿರುತ್ತಾರೆ. ಪ್ರೀತಿಪಾತ್ರರ ತಪ್ಪುಗಳನ್ನು ತಲೆಗೆ ಹಾಕಿಕೊಳ್ಳುವುದಿಲ್ಲ. ಈ ಗುಣ ಇವರಿಗೆ ಸಾಕಷ್ಟು ಸಹಕಾರಿಯಾಗುತ್ತದೆ.

Ambitious Zodiacs: ಈ ರಾಶಿಯವರಲ್ಲಿ ಮಹತ್ವಾಕಾಂಕ್ಷೆ ಹೆಚ್ಚು, ಬಯಸಿದ್ದೆಲ್ಲ ಸಾಧಿಸುತ್ತಾರೆ!

•    ಕನ್ಯಾ (Virgo)
ಸಂಕಲ್ಪ ಶಕ್ತಿಯಲ್ಲಿ (Will Power) ಮೇಷ ರಾಶಿಯವರಿಗೆ ಸರಿಸಮನಾಗಿ ನಿಲ್ಲಬಲ್ಲ ಯಾವುದಾದರೂ ರಾಶಿ ಇದ್ದರೆ ಅದು ಕನ್ಯಾ ರಾಶಿ. ಭೂಮಿ ತತ್ವದ ಈ ರಾಶಿಯ ಜನ ಎಂಥದ್ದೇ ಸಂಕಷ್ಟದ (Difficult Situation) ಸನ್ನಿವೇಶದಲ್ಲೂ ಸ್ಥಿರವಾಗಿ ನಿಲ್ಲುತ್ತಾರೆ. ಬಿಸಿರಕ್ತದ ಮನೋಭಾವ ಹೊಂದಿರುತ್ತಾರೆ. ಇವರ ವರ್ಚಸ್ಸಿನ ಸ್ವಭಾವವೇ ಇವರ ಶಸ್ತ್ರವಾಗಿರುತ್ತದೆ. ಮಾಡಬೇಕಾದ ಕೆಲಸಗಳ ಬಹುದೊಡ್ಡ ಲಿಸ್ಟೇ ಇವರಲ್ಲಿರುತ್ತದೆ. ಸಾಮಾನ್ಯವಾಗಿ ಖುಷಿಖುಷಿಯಾಗಿರುವ (Happy) ಇವರು, ಕಷ್ಟದಲ್ಲಿ ಭರವಸೆಯಿಂದ ಶಕ್ತಿಯುತವಾಗಿ ವರ್ತಿಸುತ್ತಾರೆ. 

click me!