ನಮ್ಮ ಸಂಗಾತಿಯ ಸಾಧನೆಯೇ ನಮ್ಮ ಸಾಧನೆ ಎಂದು ಭಾವಿಸುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಅವರ ಗೆಲುವನ್ನು ಸಂಭ್ರಮಿಸುತ್ತಾರೆ. ಆದರೆ ಕೆಲವು ರಾಶಿಯವರು ಮಾತ್ರ ತಮ್ಮ ಸಂಗಾತಿಯು ಯಶಸ್ಸು ಕಂಡ್ರೆ ಅಸೂಯೆ ಪಟ್ಟುಕೊಳ್ಳುತ್ತಾರೆ.
ನಮ್ಮ ಸಂಗಾತಿಯ ಸಾಧನೆಯೇ ನಮ್ಮ ಸಾಧನೆ ಎಂದು ಭಾವಿಸುವ ಅನೇಕ ಜನರು ನಮ್ಮ ನಡುವೆ ಇದ್ದಾರೆ. ಅವರ ಗೆಲುವನ್ನು ಸಂಭ್ರಮಿಸುತ್ತಾರೆ. ಆದರೆ ಕೆಲವು ರಾಶಿಯವರು ಮಾತ್ರ ತಮ್ಮ ಸಂಗಾತಿಯು ಯಶಸ್ಸು (success) ಕಂಡ್ರೆ ಅಸೂಯೆ ಪಟ್ಟುಕೊಳ್ಳುತ್ತಾರೆ.
ಕೆಲವರು ತಮ್ಮ ಸಂಗಾತಿಗೆ ಬೆಂಬಲ ಕೊಡುವುದಿಲ್ಲ. ಹಾಗೂ ಅವರ ಬಗ್ಗೆ ಕಾಳಜಿಯನ್ನು ಹೊಂದಿರುವುದಿಲ್ಲ. ಅವರು ತಮ್ಮ ಸಂಗಾತಿ ಸಾಧನೆ (achievement) ಗಳ ಬಗ್ಗೆ ಅಸೂಯೆ ಪಡುತ್ತಾರೆ. ಅಂತಹ ಜನರು ಸಂಬಂಧದಲ್ಲಿ ಬಿರುಕು ಮೂಡುವುದು ಸಾಮಾನ್ಯ. ಜ್ಯೋತಿಷ್ಯ (Astrology) ವು ಪ್ರಕಾರ ಹನ್ನೆರಡು ರಾಶಿಚಕ್ರದ ಚಿಹ್ನೆಗಳಲ್ಲಿ ಕೆಲ ರಾಶಿಯವರಿಗೆ ಈ ಕೀಳು ಮಟ್ಟದ ಗುಣವಿರುತ್ತದೆ. ಈ ಕುರಿತು ಇಲ್ಲಿವೆ ಡಿಟೇಲ್ಸ್.
ವೃಷಭ ರಾಶಿ (Taurus)
ಇವರು ಸಾಮಾನ್ಯವಾಗಿ ತಮ್ಮ ಸಂಗಾತಿಯ ಜತೆ ನಿಷ್ಠಾವಂತ (faithful) ರಾಗಿ ಇರುತ್ತಾರೆ. ಆದರೆ ತಮ್ಮ ಸಂಗಾತಿಯ ಯಶಸ್ಸನ್ನು ಇವರು ಸಂಭ್ರಮಿಸಲ್ಲ. ಇದರಿಂದ ತಮ್ಮ ಭದ್ರತೆ ಅಥವಾ ಸೌಕರ್ಯಗಳಿಗೆ ಧಕ್ಕೆಯಾಗುತ್ತದೆ ಎಂದು ಅವರು ಅಸೂಯೆ ಪಡುತ್ತಾರೆ. ತಮ್ಮ ಸಂಗಾತಿಯ ಸಾಧನೆಗಳಿಂದ ತಮಗೆ ಗೌರವ (respect) ಸಿಗಲಿದೆ ಎಂದು ಇವರು ಭಾವಿಸಿದರೆ, ಅವರ ಅಸೂಹೆ ಭಾವನೆ ಹೋಗಲಾಡಿಬಹುದು.
ಕಟಕ (Cancer)
ಇವರು ಭಾವನಾತ್ಮಕ (Emotional) ಮತ್ತು ಸಂವೇದನಾಶೀಲರು. ತಮ್ಮ ಸಂಗಾತಿಯ ಸಾಧನೆಗಳು ಇವರಿಗೆ ಅಸುರಕ್ಷಿತ ಎಂದು ಅನಿಸಬಹುದು. ಅಥವಾ ಇವರನ್ನು ಸಂಗಾತಿಯು ಕಡೆಗಣಿಸಿದಾಗ ಅಸೂಯೆ ಭಾವನೆ ಮೂಡುತ್ತದೆ. ಕಟಕ ರಾಶಿಯವರು ಸಂಬಂಧ (relationship) ವನ್ನು ಗೌರವಿಸುವ ಜನ. ತಮ್ಮ ಪಾಲುದಾರರ ಯಶಸ್ಸಿನಿಂದ ಇವರಿಗೆ ನಿರ್ಲಕ್ಷ್ಯದ ಅನುಭವವಾದರೆ ಅವರ ಬಗ್ಗೆ ಹೊಟ್ಟೆ ಉರಿ ಬರುವುದ ಸಾಮಾನ್ಯ.
ಸಿಂಹ (Leo)
ಸಿಂಹ ರಾಶಿಯವರು ಇತರರಿಂದ ಮೆಚ್ಚುಗೆಯನ್ನು ಪಡೆಯುವತ್ತ ಗಮನ ಹರಿಸುತ್ತಾರೆ. ಇದರಿಂದ ತಮ್ಮ ಸಂಗಾತಿಯ ಸಾಧನೆಗಳನ್ನು ನೋಡಿ ಅಸೂಯೆ (Jealousy) ಪಡುತ್ತಾರೆ. ಯಾವಾಗಲೂ ಇತರರ ಜತೆ ಸ್ಪರ್ಧೆಯ ಭಾವನೆ ಹೊಂದಿರುತ್ತಾರೆ. ಇದು ಸಂಗಾತಿ ವಿಚಾರಕ್ಕೂ ಅನ್ವಯಿಸುತ್ತದೆ.
ನಿದ್ದೆಯಲ್ಲಿ ಕನವರಿಕೆಗೆ ಆಧ್ಯಾತ್ಮಿಕ ನಂಟು: ಸತ್ತ ಪೂರ್ವಜರ ಸಂಪರ್ಕ ಸಾಧನ
ಕನ್ಯಾ ರಾಶಿ (Virgo)
ಇವರು ತಮ್ಮನ್ನು ಇತರರ ಜೊತೆ ಹೋಲಿಕೆ (comparison) ಮಾಡಿಕೊಳ್ಳುತ್ತಾರೆ. ತಾವು ಯಾವಾಗಲೂ ಉನ್ನತವಾಗಿ ಇರಬೇಕೆಂದು ಬಯಸುತ್ತಾರೆ. ಇದರಿಂದ ಅವರ ಸಂಗಾತಿಯ ಸಾಧನೆಗಳು ಅವರಿಗೆ ಇಷ್ಟ ಆಗಲ್ಲ. ತಮ್ಮ ಪಾಲುದಾರರ ಸಕ್ಸಸ್ ಇವರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇದರಿಂದ ಅವರು ಅಸೂಯೆ ಹೊಂದಬಹುದು. ಅವರ ತಮ್ಮನ್ನು ತಮ್ಮ ಪಾಲುದಾರರೊಂದಿಗೆ ಹೋಲಿಸುತ್ತಾರೆ. ಇದೇ ಅಸೂಯೆಗೆ ಕಾರಣ.
ವೃಶ್ಚಿಕ ರಾಶಿ (Scorpio)
ಇವರು ಕೆಲವೊಮ್ಮೆ ಬಹಳ ಸ್ವಾಮ್ಯ ಸೂಚಕವಾಗಿ ಇರುತ್ತಾರೆ. ಸಂಗಾತಿಯ ಯಶಸ್ಸು ಅಥವಾ ಸಾಧನೆ ಮಾಡಿದರೆ, ಅವರು ಎಲ್ಲಿ ತಮ್ಮನ್ನು ಬಿಟ್ಟು ಹೋಗುತ್ತಾರೆ ಎಂಬ ಭಯ (fear) ಹೊಂದಿರುತ್ತಾರೆ. ಇದರಿಂದ ಅವರಲ್ಲಿ ಅಸೂಯೆ ಭಾವನೆ ಮೂಡುತ್ತದೆ.
ಇವರು ರೊಮ್ಯಾಂಟಿಕ್ ಹೆಸರಿನಲ್ಲಿ ತುಂಬಾ ಅಂಟಿಕೊಳ್ಳುತ್ತಾರೆ…
ಇವರು ಸಂಗಾತಿಗೆ ಬೆಂಬಲ ನೀಡುತ್ತಾರೆ
ಮೇಷ (Aries) , ಮಿಥುನ, ತುಲಾ, ಧನು ರಾಶಿ (Sagittarius) , ಮಕರ, ಕುಂಭ ಮತ್ತು ಮೀನ ರಾಶಿಯವರು ತಮ್ಮ ಸಂಗಾತಿಗೆ ತುಂಬಾ ಬೆಂಬಲ ನೀಡುತ್ತಾರೆ. ಅವರು ಯಾವಾಗಲೂ ಅವರೊಂದಿಗೆ ನಿಲ್ಲುತ್ತಾರೆ. ಮತ್ತು ಉತ್ತಮ ವ್ಯಕ್ತಿಯಾಗಲು ಅವರನ್ನು ಪ್ರೋತ್ಸಾಹಿಸುತ್ತಾರೆ. ಅವರು ತಮ್ಮ ಸಂಗಾತಿಯನ್ನು ಒಂಟಿತನ (Loneliness) ಅನುಭವಿಸಲು ಎಂದಿಗೂ ಬಿಡುವುದಿಲ್ಲ.