ಕೆಲವು ವ್ಯಕ್ತಿಗಳು ತಮ್ಮ ಜನ್ಮರಾಶಿಯಿಂದ ದತ್ತವಾಗಿ ಬಂದಿರುವ ಸ್ವಭಾವದಿಂದಲೇ ಉದ್ಧಟ (ಅರೋಗೆಂಟ್) ಆಗಿರುತ್ತಾರೆ. ಯಾರವರು ತಿಳಿಯೋಣ.
ತಾವು ಇತರರಿಗಿಂತ ಶ್ರೇಷ್ಠ ಎಂದು ಭಾವಿಸುವ ತುಂಬಾ ಜನರಿರುತ್ತಾರೆ. ವಾಸ್ತವದಲ್ಲಿ ಅವರು ಹಾಗಿರುವುದಿಲ್ಲ. ಆದರೆ ಹಾಗೆ ಕಾಣುತ್ತಾರೆ ಅಥವಾ ಹಾಗೆ ಕಾಣಿಸಿಕೊಳ್ಳಲು ಬಯಸುತ್ತಾರೆ. ಇಲ್ಲಿ 4 ರಾಶಿಚಕ್ರ ಚಿಹ್ನೆಯಲ್ಲಿ ಜನಿಸಿದವರು ಇದ್ದಾರೆ. ಇವರು ಸ್ವಭಾವತಃ ಉದ್ಧಟರು (Arrogant), ಇನ್ನೊಬ್ಬರ ಮಾರು ಕೇಳಲು ನಿರಾಕರಿಸುವವರು, ಸ್ವಲ್ಪ ಅಹಂಕಾರಿಗಳು ಮತ್ತು ಸ್ವಯಂ ದ್ರಿತ ಸ್ವಭಾವ ಹೊಂದಿರುವವರು ಆಗಿರುತ್ತಾರೆ. ನೀವು ಇವರಲ್ಲಿ ಒಬ್ಬರೋ ಅಂತ ಕಂಡುಹಿಡಿಯಲು ಸ್ಕ್ರಾಲ್ ಮಾಡಿ!
ಸಿಂಹ ರಾಶಿ (Leo)
ಇವರು ಎಲ್ಲರಿಗಿಂತ ಹೆಚ್ಚಾಗಿ ತಮ್ಮನ್ನು ಪ್ರೀತಿಸಿಕೊಳ್ಳುತ್ತಾರೆ. ತಮಗಿರುವ ಸ್ವಯಂ ಗೀಳಿಗೆ ಇವರು ಕುಖ್ಯಾತರು. ಸಿಂಹ ರಾಶಿಯ ಜನರು ಸಾಮಾನ್ಯವಾಗಿ ಸ್ವಾರ್ಥಿಗಳಾಗಿರುತ್ತಾರೆ. ತಾವು ಇತರರಿಗಿಂತ ಶ್ರೇಷ್ಠರು ಎಂಬ ರಹಸ್ಯ ಅಥವಾ ಬಹಿರಂಗ ಕಲ್ಪನೆಯನ್ನು ಹೊಂದಿರುತ್ತಾರೆ. ಮುಂದಿನ ಬಾರಿ ನೀವು ಸಿಂಹ ರಾಶಿಯವರೊಂದಿಗೆ ಮಾತನಾಡುವಾಗ ಈ ಬಗ್ಗೆ ಗಮನ ಕೊಡಿ. ಜನರು ತಮ್ಮಂತೆಯೇ ಇರಬೇಕೆಂದು ಅವರು ಬಯಸುತ್ತಾರೆ. ಒತ್ತಾಯಿಸುತ್ತಾರೆ. ಇವರು ಅಹಂಕಾರದ ರಾಶಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತಾರೆ. ಆದರೆ ಇವರಿಗೆ ಹೆಚ್ಚು ಸ್ನೇಹಿತರು ಮತ್ತು ಬೆಂಬಲಿಗರು ಇರಲು ಕಾರಣ ವರ್ಚಸ್ವಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ತಮಗೆ ತಿಳಿಯದ ವಿಷಯದ ಬಗ್ಗೆ ಎಲ್ಲ ತಿಳಿದವರಂತೆ ಮಾತಾಡಬಲ್ಲರು.
ಧನು ರಾಶಿ (Sagittarius)
ಧನು ರಾಶಿಯ ವ್ಯಕ್ತಿಗಳ ಪ್ರಕಾರ, ಅವರೇ ಜಗತ್ತಿನ ಎಲ್ಲ ವಿಷಯಗಳ ಕೇಂದ್ರಬಿಂದು. ಪ್ರಪಂಚವು ಅವರ ಸುತ್ತ ಸುತ್ತುತ್ತದೆ. ಇವರು ತುಂಬಾ ನಾರ್ಸಿಸಿಸ್ಟಿಕ್ ಆಗಿರಬಹುದು. ಇವರು ತಮ್ಮ ನ್ಯೂನತೆಗಳನ್ನು ಸಹ ರೊಮ್ಯಾಂಟಿಸೈಸ್ ಮಾಡುತ್ತಾರೆ. ಇವರು ತಮ್ಮ ಹಾಸ್ಯದ ವ್ಯಕ್ತಿತ್ವವನ್ನು ಎಲ್ಲರೂ ಇಷ್ಟಪಡುತ್ತಾರೆ ಮತ್ತು ಅವರ ಸುತ್ತಲಿರುವ ಪ್ರತಿಯೊಬ್ಬರೂ ಅವರನ್ನು ಪ್ರೀತಿಸುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಅವರ ಆಕರ್ಷಕ ವ್ಯಕ್ತಿತ್ವವೇ ಅವರನ್ನು ಇಷ್ಟವಾಗದಂತೆ ಕಾಪಾಡುತ್ತದೆ ಎಂಬುದು ಸುಳ್ಳಲ್ಲ.
ಈ ಕೆಲಸವನ್ನು ಮಾಡಲು ಸಂಕೋಚ ಪಟ್ಟರೆ ಜೀವನ ಪೂರ್ತಿ ನಿರಾಶರಾಗುವಿರಿ
ವೃಷಭ ರಾಶಿ (Taurus)
ಅವರು ತಮ್ಮ ಸ್ವಭಾವ ಮಗ್ನರು. ಮತ್ತು ಸೊಕ್ಕಿನವರು ಎಂದು ಪ್ರಸಿದ್ಧರಾಗಿದ್ದಾರೆ. ವೃಷಭ ರಾಶಿಯವರು ಸ್ವಯಂ ಹೆಚ್ಚು ಕೆಲಸ ಮಾಡುವವರು ಮತ್ತು ಹೆಚ್ಚು ಮಹತ್ವಾಕಾಂಕ್ಷೆಯುಳ್ಳವರಾಗಿದ್ದಾರೆ ಮತ್ತು ಇತರರೂ ಹಾಗೇ ಮಾಡಲಿ ಎಂದು ಒತ್ತಾಯಿಸುತ್ತಾರೆ. ಕೆಲವೊಮ್ಮೆ ಅವರು ಇತರರನ್ನು ಬದಿಗೊತ್ತಿ ಮುಂದುವರಿಯಬಹುದು. ಕಚೇರಿ ಪರಿಸರದಲ್ಲಿ ಇತರರ ಜೊತೆಗೆ ಕಡಿಮೆ ಸಂಬಂಧಿತ ಭಾವನೆಯನ್ನು ಉಂಟುಮಾಡಬಹುದು. ಇವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಏಕೆಂದರೆ ತಾವು ಯಾವಾಗಲೂ ಸರಿ ಎಂದು ಭಾವಿಸುತ್ತಾರೆ.
ಮೇಷ ರಾಶಿಯಲ್ಲಿ ಸೂರ್ಯ ಸಂಕ್ರಮಣ: ಈ ನಾಲ್ಕು ರಾಶಿಗಳಿಗೆ ಶುರುವಾಯ್ತು ಒಳ್ಳೆ ದಿನ
ಮೇಷ ರಾಶಿ (Aries)
ಈ ರಾಶಿಚಕ್ರ (Zodiac Sign) ಚಿಹ್ನೆಯಡಿಯಲ್ಲಿ ಜನಿಸಿದ ಜನರು ತಮ್ಮ ಬಗ್ಗೆ ಮಾತ್ರ ಯೋಚಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇವರು ತುಂಬಾ ಸಂವೇದನಾಶೀಲರಾಗಿರಬಹುದು ಮತ್ತು ಸ್ವಯಂ-ಕೇಂದ್ರಿತವಾಗಿರಬಹುದು. ಸನ್ನಿವೇಶಗಳಿಗೆ ಭಾವನಾತ್ಮಕ ಸ್ಪರ್ಶ ನೀಡುತ್ತಾರೆ. ಕಠಿಣ ಸನ್ನಿವೇಶಗಳಲ್ಲಿ ತಾಳ್ಮೆಗೆಡುತ್ತಾರೆ. ಇದರಿಂದ ಅವರು ಅಹಂಕಾರಿಗಳೆಂದು ಗುರುತಿಸಿಕೊಳ್ಳುತ್ತಾರೆ. ಆದರೆ, ಯಾವುದಾದರೂ ಸನ್ನಿವೇಶದಲ್ಲಿ ನೀವು ನೇರವಾಗಿ ಸಹಾಯಕ್ಕಾಗಿ ಮೇಷ ರಾಶಿಯವರನ್ನು ಕೇಳಿದರೆ, ಅವರು ಕೊಂಚವೂ ಯೋಚಿಸದೆ ನಿಮಗೆ ನೆರವಾಗುತ್ತಾರೆ. ಆದರೆ ಈ ಉಪಕಾರವನ್ನು ಕಿರಿಕಿರಿಯಾಗುವಷ್ಟು ಹೇಳಿಕೊಳ್ಳುತ್ತಾರೆ.
ಸ್ನಾನಗೃಹದ ಈ ವಾಸ್ತು ನಿಯಮ ಮುರಿದರೆ ಧನನಷ್ಟ ಗ್ಯಾರಂಟಿ
ಒಟ್ಟಿನಲ್ಲಿ ಮನುಷ್ಯನ ಗುಣ ಸ್ವಭಾವಗಳು, ಅವನು ನಡವಳಿಕೆ, ವ್ಯಕ್ತಿತ್ವ ಎಲ್ಲವೂ ಅವನು ಹುಟ್ಟಿರುವ ಜನ್ಮ ರಾಶಿಯ ಮೇಲೆಯೇ ಅವಲಂಬಿತವಾಗಿರುತ್ತದೆ ಎನ್ನುವುದನ್ನು ನಂಬಲೇ ಬೇಕು.