Hassan: ವಿಜೃಂಭಣೆಯಿಂದ ನಡೆದ ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವ

By Govindaraj S  |  First Published Apr 13, 2022, 7:21 PM IST

ಸರ್ವಧರ್ಮ ಸಮನ್ವಯ ಸಾರುವ ಹಾಗೂ ಹಲವು ವಿಷೇಷತೆಗಳನ್ನೊಳಗೊಂಡಿರೋ ಐತಿಹಾಸಿಕ ಬೇಲೂರಿನ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು.


ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್

ಹಾಸನ (ಏ.13): ಸರ್ವಧರ್ಮ ಸಮನ್ವಯ ಸಾರುವ ಹಾಗೂ ಹಲವು ವಿಷೇಷತೆಗಳನ್ನೊಳಗೊಂಡಿರೋ ಐತಿಹಾಸಿಕ ಬೇಲೂರಿನ (Beluru) ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ (Channakeshava Temple Rathotsava) ಇಂದು ವಿಜೃಂಭಣೆಯಿಂದ ಜರುಗಿತು. ಇಂದಿನ ಉತ್ಸವದಲ್ಲಿ ಸಾವಿರಾರು ಭಕ್ತರು (Devotees) ನೆರೆದು, ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಚನ್ನಕೇಶವ ರಥೋತ್ಸವದ ಮತ್ತೊಂದು ವಿಶೇಷತೆ ಅಂದರೆ ರಥೋತ್ಸವ ಆರಂಭಕ್ಕೂ ಮುನ್ನ ಮುಸ್ಲಿಂ ಸಮುದಾಯವರು (Muslim Community) ಖುರಾನ್ ಪಠಣ (Quran Recital) ಮಾಡೋದು.  ಹಿಂದೂಯೇತರರಿಗೆ ಅವಕಾಶ ನೀಡಬಾರದೆಂಬ ಕೂಗಿನ ಆತಂಕದ ನಡುವೆಯೂ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು.

Latest Videos

undefined

ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ರಥೋತ್ಸವ‌ ಅದ್ದೂರಿಯಾಗಿ ನಡೆಯಿತು. ನಿರಾಂತಕವಾಗಿ ಮುಸ್ಲಿಂ ಕುಟುಂಬ ಖುರಾನ್ ಪಠಣ ಮಾಡಿತು. ಹಿಂದೂ - ಮುಸ್ಲಿಂ ಬಾವೈಕ್ಯ ವನ್ನು ಚನ್ನಕೇಶವನ ರಥೋತ್ಸವ ಸಾರಿತು. ಕೊರೋನಾದಿಂದ ಎರಡು ವರ್ಷದಿಂದ ನಡೆಯದಿದ್ದ ಬೇಲೂರು ರಥೋತ್ಸವ, ಈ ವರ್ಷ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ 10.40 ಕ್ಕೆ ಶುರುವಾದ ರಥೋತ್ಸವಕ್ಕೆ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು. ಈ ವೇಳೆ ದೇವರಿಗೆ ಹರಕೆ ಹೊತ್ತವರು ಅಲಂಕೃತ ರಥಕ್ಕೆ ಹಣ್ಣು - ಜವನ ಎಸೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು‌. 

ಎಚ್‌ಡಿಕೆ- ರೇವಣ್ಣ ತವರಲ್ಲಿ ಧರ್ಮ ದಂಗಲ್: ಬೇಲೂರು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಕ್ಕೆ ಬಹಿಷ್ಕಾರ..?

ಚನ್ನಕೇಶವ ರಥೋತ್ಸವದ ಮತ್ತೊಂದು ವಿಶೇಷ ಅಂದ್ರೆ ಪ್ರತಿವರ್ಷ ಬ್ರಹ್ಮರಥೋತ್ಸವ ಚಾಲನೆಗೂ ಮುನ್ನ ಮುಸ್ಲಿಂರ ಪವಿತ್ರ ಗ್ರಂಥ ಖುರಾನ್ ಪಠಣ ಮಾಡಲಾಗುತ್ತದೆ. ದೊಡ್ಡ ಮೇದೂರಿನ ಖಾದ್ರಿ ವಂಶಸ್ಥರು ಖುರಾನ್ ಪಠಿಸಿದ ನಂತರವೇ ರಥವನ್ನ ಎಳೆಯಲಾಗಿತ್ತದೆ. ಸರ್ವಧರ್ಮಿಯರು ಸಹಬಾಳ್ವೆಯಿಂದ ಬಾಳಬೇಕು ಎಂಬ ಸಂದೇಶ ಸಾರಲು ಹೊಯ್ಸಳ ಅರಸರ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಇದೆ ವೇಳೆ ಅಲಂಕೃತ ರಥದ ಮೇಲೆ ಶುಭ ಸೂಚಕವಾದ ಹದ್ದು ಹಾರಲಿದೆ. ಈ ಸಂದರ್ಭ ಕಣ್ತುಂಬಿಕೊಂಡಂತೆ ಬೇಡಿದ್ದು, ಈಡೇರಲಿದೆ ಎಂಬ ನಂಬಿಕೆ ಇರುವುದರಿಂದ ಹೆಚ್ಚಿನ ಭಕ್ತರು ನೆರೆಯುತ್ತಾರೆ. ಮಾಜಿ‌ ಸಚಿವ ಹೆಚ್.ಡಿ. ರೇವಣ್ಣ (HD Revanna) ಕೂಡಾ ಭಾಗಿಯಾಗಿ ಚನ್ನಕೇಶವನ ದರ್ಶನ ಪಡೆದರು. 
 
ಜಾತ್ರೆ ಆರಂಭಕ್ಕೆ ಹದಿನೈದು ದಿನ ಬಾಕಿ ಇರುವಾಗಲೇ ವಿಶ್ವಹಿಂದೂ ಪರಿಷತ್ ಮುಖಂಡರು ಹಿಂದೂಯೇತರರಿಗೆ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬಾರದೆಂದು‌ ಮನವಿ ಕೂಡಾ ಸಲ್ಲಿಸಿದರು. ಆದರೆ ತಾಲೂಕು ಆಡಳಿತ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ಪುರಸಭೆಯಿಂದ ವ್ಯಾಪಾರಕ್ಕೆ ಬಿಡ್ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ಧರ್ಮದವರೂ ಜಾತ್ರೆಯ ವ್ಯಾಪಾರದಲ್ಲಿ ಖುಷಿಯಾಗಿ ಭಾಗಿಯಾಗಿದರು. ಇನ್ನೂ ಜಾತ್ರೆ ಅರಂಭಕ್ಕೂ ಮುನ್ನ ಖುರಾನ್ ಪಠಣದ ವಿಚಾರದಲ್ಲಿಯೂ ಧಾರ್ಮಿಕ ದತ್ತಿ ಇಲಾಖೆಯ ಅನುಮತಿಯನ್ನು ಪಡೆದು ಅವಕಾಶ ಕಲ್ಪಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಲಿಂಗೇಶ್ ಮಾತನಾಡಿ, ಯಾವುದೇ ಸಣ್ಣ ಗೊಂದಲಗಳಿಲ್ಲದೇ, ಹಿಂದೂ ಮುಸ್ಲಿಂ ಎಂಬ ಭೇದವಿಲ್ಲದೇ ಎಲ್ಲರೂ ಒಂದೇ ಭಾವನೆಯಿಂದ ಜಾತ್ರೆಯಲ್ಲಿ ಭಾಗಿಯಾಗಿದ್ದಾರೆ, ಎಲ್ಲವೂ ಹಿಂದಿನ ಸಂಪ್ರದಾಯದಂತೆ ನಡೆದಿದೆ ಎಂದರು

Hassan Slave ಅರಸೀಕೆರೆಯಲ್ಲಿ ಕೂಲಿ ಅರಸಿ ಬಂದ 53 ಮಂದಿಯನ್ನು ಕೂಡಿ ಹಾಕಿ ಚಿತ್ರಹಿಂಸೆ!

ಬೇಲೂರಿನ ಚನ್ನಕೇಶವನ ರಥೋತ್ಸವದ ಮತ್ತೊಂದು ವಿಶೇಷವೆಂದ್ರೆ ಬಹುತೇಕ ಕಡೆಗಳಲ್ಲಿ ರಥೋತ್ಸವ ಒಂದೇ ದಿನಕ್ಕೆ ಮುಗಿದರೆ ಇಲ್ಲಿ ಎರಡು ದಿನ ನಡೆಯುತ್ತೆ. ಇಂದು ದೇವಾಲಯದ ಮುಂಭಾಗದಿಂದ ಹೊರಟ ರಥ, ದೇವಾಲಯದ ಉತ್ತರ ಮೂಲೆಯವರೆಗೂ ಸಾಗಿ ನಿಂತಿದೆ. ನಾಳೆ ಸುತ್ತಮುತ್ತಲ 18  ಹಳ್ಳಿಗಳ ಜನರು ದೇವಾಲಯದ ಆವರಣದ ಸುತ್ತ ಬ್ರಹ್ಮರಥ ಎಳೆದು ಮತ್ತೆ ಮೂಲಸ್ಥಾನಕ್ಕೆ ತಂದು ನಿಲ್ಲಿಸುತ್ತಾರೆ ಒಟ್ಟಿನಲ್ಲಿ ಚನ್ನಕೇಶವ ದೇವರ ಮಹಿಮೆಗೆ ಮಾರುಹೋಗಿ ರಥೋತ್ಸವದಲ್ಲಿ ಭಾಗಿಯಾದ ಭಕ್ತರು ಬಿಸಿಲನ್ನೂ ಲೆಕ್ಕಿಸದೇ ಸರದಿ ಸಾಲಲ್ಲಿ ನಿಂತು ದರ್ಶನ ಪಡೆದರು.

click me!