ಕೂದಲುದುರುವುದು, ಶುಷ್ಕವಾಗುವುದು, ಬೋಳಾಗುವುದು, ತೆಳ್ಳಗಾಗುವುದು- ಎಲ್ಲ ಕೂದಲ ಸಮಸ್ಯೆಗೂ ನಿರ್ದಿಷ್ಟ ಗ್ರಹ ದುರ್ಬಲವಾಗಿರುವುದು ಕಾರಣವಾಗುತ್ತದೆ. ಇಂಥ ಸಂದರ್ಭದಲ್ಲಿ ಏನು ಪರಿಹಾರ ಕೈಗೊಂಡರೆ ಸಮಸ್ಯೆ ಸರಿಯಾಗುತ್ತದೆ ನೋಡಿ..
ಕೂದಲೆಂದರೆ(Hair) ಕೇವಲ ಸೌಂದರ್ಯಕ್ಕಾಗಿ ಎಂದುಕೊಳ್ಳುವವರು ಹಲವರು. ಆದರೆ, ನಿಮ್ಮ ರೇಶ್ಮೆಯಂಥ ಕೂದಲು ಇಲ್ಲವೇ ಹಕ್ಕಿಯ ಗೂಡಿನಂತ ಗುಂಗುರು ಕೂದಲು- ನಿಮ್ಮ ಆರೋಗ್ಯ(Health)ದ ಬಗ್ಗೆಯಷ್ಟೇ ಅಲ್ಲ, ನಿಮ್ಮ ಅದೃಷ್ಟ, ಗ್ರಹದೋಷ(malefic planets)ಗಳ ಬಗ್ಗೆಯೂ ಹೇಳುತ್ತದೆ. ಕೂದಲನ್ನು ನೋಡಿ ಭವಿಷ್ಯವನ್ನು ಕೂಡಾ ಹೇಳಲು ಸಾಧ್ಯವಿದೆ.
ಹೌದು, ಜ್ಯೋತಿಷ್ಯ(Astrology)ದ ಪ್ರಕಾರ, ಯಾವ ವ್ಯಕ್ತಿಯ ಕೂದಲು ಬೇರಿನಿಂದ ಕಿತ್ತು ಬರುತ್ತದೋ ಅದು ಶುಭ ಸೂಚನೆಯಾಗಿದೆ. ಹೀಗೆ ಕೂದಲು ಹೊರ ಬಂದರೆ ಆತ ಅದೃಷ್ಟವಂತ ಎಂದು ತಿಳಿಯಬಹುದು. ಅದೇ ಒಂದು ಕೂದಲಿನ ಜೊತೆ ಹಲವಾರು ಕೂದಲು ಹೊರ ಬಂದರೆ, ಆಗ ವ್ಯಕ್ತಿಯ ಶಕ್ತಿ ಕುಗ್ಗುತ್ತದೆ. ಅಂಥವರು ಎರಡು ರೀತಿಯ ಸಿದ್ಧಾಂತಗಳ ನಡುವೆ ಸಿಕ್ಕಿ ಒದ್ದಾಡುತ್ತಾರೆ. ಇಂಥವರು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮೊದಲು ಇತರರ ಸಲಹೆ ಪಡೆಯಬೇಕು.
ಒಂದು ವೇಳೆ ನಿಮ್ಮ ಕೂದಲು ತುಂಬಾ ತೆಳ್ಳಗಿದ್ದರೆ, ಅದು ನಿಮ್ಮ ಅದೃಷ್ಟ(luck)ವನ್ನು ಬೆಳಗಿಸಲು ಕೆಲಸ ಮಾಡುತ್ತದೆ. ಇಂಥ ವ್ಯಕ್ತಿಗಳು ಬಹಳ ಕರುಣಾಮಯಿಗಳೂ, ಅದೃಷ್ಟವಂತರೂ ಹಾಗೂ ಸ್ಥಿತಿವಂತರೂ ಆಗಿರುತ್ತಾರೆ. ಇನ್ನು ನಿಮ್ಮ ಕೂದಲು ದಪ್ಪವಾಗಿ, ದಟ್ಟವಾಗಿದ್ದರೆ ನಿಮಗೆ ಆಪ್ತರಿಂದಲೇ ವಂಚನೆಗೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಗೆಳೆಯರೆಂದು ನಂಬಿಕೊಂಡವರು, ಕುಟುಂಬ ಸದಸ್ಯರು ಬೆನ್ನಿಗೆ ಚೂರಿ ಹಾಕುವ ಸಂದರ್ಭಗಳು ಹೆಚ್ಚಿರುತ್ತವೆ. ಆದರೆ, ಇವರಿಗೆ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಚೈತನ್ಯವೂ ಹೆಚ್ಚಿರುತ್ತದೆ.
ದುರ್ಬಲ ಸೂರ್ಯ(Sun)
ಒಂದು ವೇಳೆ ನಿಮ್ಮ ಕೂದಲು ಜೀವ ಕಳೆದುಕೊಂಡಿದ್ದರೆ, ಸತ್ವಹೀನವಾಗಿ ಕಾಣುತ್ತಿದ್ದರೆ, ಅದರರ್ಥ ಸೂರ್ಯ ದೇವರ ಕೃಪೆ ನಿಮಗೆ ಇಲ್ಲ ಎಂದು. ಇಂಥ ಸಂದರ್ಭದಲ್ಲಿ ಪ್ರತಿ ಬೆಳಗ್ಗೆ ಸೂರ್ಯ ದೇವನಿಗೆ ಅರ್ಘ್ಯ ನೀಡುವ ಅಭ್ಯಾಸ ಮಾಡಿಕೊಂಡರೆ ಅದರಿಂದ ಕೂದಲು ಸತ್ವ ಪಡೆಯಬಹುದು. ಒಂದು ವೇಳೆ ನಿಮಗೆ ಅಕಾಲಿಕವಾಗಿ ಬೋಳು ತಲೆ ಕಾಡುತ್ತಿದ್ದರೆ, ಅದೂ ಕೂಡಾ ಸೂರ್ಯನ ಅವಕೃಪೆ ತೋರುತ್ತದೆ. ಇಂಥ ಸಂದರ್ಭದಲ್ಲಿ ಕೂಡಾ ದಿನ ಬೆಳಗ್ಗೆ ಆದಿತ್ಯ ಹೃದಯ ಪಠಣ ಮಾಡುವುದರಿಂದ ಒಳಿತಾಗುವುದು.
ದುರ್ಬಲ ಬುಧ(mercury)
ಬುಧ ಗ್ರಹದ ಅವಕೃಪೆ ಇದ್ದರೆ, ಆಗ ಕೂದಲು ಗಂಭೀರವಾಗಿ ಹಾಳಾಗುತ್ತದೆ. ಬುಧ ದುರ್ಬಲನಾಗಿದ್ದರೆ ಅಥವಾ ಬುಧ ದೋಷವಿದ್ದರೆ, ಆಗ ತಲೆಯಲ್ಲಿ ವಿಪರೀತ ಹೊಟ್ಟಾ(dandruff)ಗುತ್ತದೆ. ಕೂದಲು ಜೀವ ಕಳೆದುಕೊಂಡಂತೆ ಕಾಣುತ್ತದೆ. ಬುಧನಿಗೆ ಹಸಿರು ಬಣ್ಣ ಇಷ್ಟ. ಹಾಗಾಗಿ, ಇಂಥ ಸಂದರ್ಭದಲ್ಲಿ ಪ್ರತಿ ಬುಧವಾರ ತಲೆಯನ್ನು ನೆಲ್ಲಿಕಾಯಿ ಎಣ್ಣೆಯಲ್ಲಿ ಮಸಾಜ್ ಮಾಡುವುದು, ಬೇವಿನ ಸೊಪ್ಪಿನ ಪೇಸ್ಟ್ ಹಚ್ಚುವುದು ಫಲ ಕೊಡುತ್ತದೆ.
ಚಂದ್ರ(moon) ದೋಷ
ಚಂದ್ರನಿಂದ ಕೂದಲ ಸಮಸ್ಯೆಯಾದಾಗ ಕೂದಲು ತೆಳ್ಳಗೆ ಮತ್ತು ದುರ್ಬಲವಾಗುತ್ತದೆ. ಇಂಥ ಸಂದರ್ಭದಲ್ಲಿ ಸಾವನ್ ಮಾಸದಲ್ಲಿ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡುವುದು, ಅನ್ನದ ಪಾಯಸ ನೈವೇದ್ಯ ಮಾಡುವುದರಿಂದ ದೋಷ ಪರಿಹರಿಸಿಕೊಳ್ಳಬಹುದು.
Astrology Prediction: ರಸ್ತೆಯಲ್ಲಿ ದುಡ್ಡು ಸಿಕ್ಕರೆ ಏನರ್ಥ?! ಇದರಿಂದ ಒಳ್ಳೇದಾಗತ್ತಾ ಅಥವಾ ಕೆಟ್ಟದ್ದಾ?
ಮಂಗಳ(mars) ದೋಷ
ಬಹಳ ಬಲಶಾಲಿಯಾದ ಕೂದಲಿರುವ ವ್ಯಕ್ತಿಗಳ ಮೇಲೆ ಮಂಗಳನ ಪ್ರಭಾವವಿರುತ್ತದೆ. ನಿಮ್ಮ ಕೂದಲು ಪದೇ ಪದೆ ಬಾಚಣಿಗೆಯ ತುಂಬಾ ಸಿಕ್ಕಿ ಬೀಳುತ್ತಿದ್ದರೆ, ಸಿಕ್ಕು ಹೆಚ್ಚಾಗಿದ್ದರೆ, ಆಗ ನೀವು ಕೆಂಪು ಬಣ್ಣದ ಎಣ್ಣೆಯನ್ನು ತಲೆಗೆ ಬಳಸಬೇಕು. ಇದರಿಂದ ಸಿಕ್ಕಷ್ಟೇ ಅಲ್ಲ, ಬದುಕಲ್ಲಿ ಯಶಸ್ಸಿನ ದಾರಿಯೂ ತೆಗೆದುಕೊಳ್ಳುತ್ತದೆ. ಮಂಗಳವಾರ ಬಡವರಿಗೆ ಆಹಾರ ನೀಡುವುದರಿಂದಲೂ ನೀವು ಪ್ರಯೋಜನ ಪಡೆದುಕೊಳ್ಳಬಹುದು.
ದುರ್ಬಲ ಶುಕ್ರ(venus)
ಶುಕ್ರ ದುರ್ಬಲನಾಗಿದ್ದರೆ, ಅದು ಕೂಡಾ ಕೂದಲ ಮೇಲೆ ಪರಿಣಾಮ ಬೀರುತ್ತದೆ. ಇಂಥ ಸಂದರ್ಭದಲ್ಲಿ ವ್ಯಕ್ತಿಯು ಬಹಳಷ್ಟು ಒತ್ತಡಕ್ಕೊಳಗಾಗುತ್ತಾನೆ ಮತ್ತು ಅವನ ಕೂದಲು ತುದಿ ಸೀಳುವುದು, ಉದುರುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಯಿಂದ ಮುಕ್ತರಾಗಲು ಶುಕ್ರವಾರದಂದು ದೇವಸ್ಥಾನಕ್ಕೆ ಅಕ್ಕಿ ಮತ್ತು ಹಾಲು ದಾನ ಮಾಡಬೇಕು.
ಸಂಖ್ಯೆ 9ರ ಸ್ವಾರಸ್ಯ; ಆಂಜನೇಯನನ್ನು ನಂಬಿದ್ರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ
ರಾಹುವಿನ ಕೆಟ್ಟ ದೃಷ್ಟಿ
23-27 ವರ್ಷ ವಯಸ್ಸಿನವರಲ್ಲಿ ವಿಪರೀತವಾಗಿ ಕೂದಲು ಉದುರುತ್ತಿದ್ದರೆ ಅದಕ್ಕೆ ರಾಹು(rahu)ವಿನ ಅವಕೃಪೆ ಕಾರಣವಾಗಿರಬಹುದು. ಇಂಥವರು ರಾಹುವಿಗೆ ಸಂಬಂಧಿಸಿದ ಪರಿಹಾರ ಕಾರ್ಯ ಕೈಗೊಳ್ಳಬೇಕು.
28-36 ವರ್ಷ ವಯೋಮಾನದವರಲ್ಲಿ ಕೂದಲು ಉದುರಲು ಆರಂಭಿಸಿದರೆ, ಮಂಗಳವಾರದಂದು ಮಕ್ಕಳಿಗೆ ಕಡ್ಲೆಹಿಟ್ಟು(gram flour) ದಾನ ಕೊಡುವುದರಿಂದ ಸಮಸ್ಯೆಗೆ ಪರಿಹಾರ ಪಡೆಯಬಹುದು.
37-45 ವರ್ಷ ವಯಸ್ಸಿನ ನಡುವೆ ಕೂದಲು ಉದುರಲು ಪ್ರಾರಂಭಿಸಿದವರು ಶನಿವಾರದಂದು "ಉನ್ ರಾ ರಾಹುವೇ ನಮಃ" ಎಂದು ಜಪಿಸಬೇಕು.