
ನರಸಿಂಹ ಮೂರ್ತಿ ಕುಲಕರ್ಣಿ, ವಿಜಯನಗರ
ಯುಗಾದಿ(Ugadi)ಯ ದಿನದಿಂದು ನಡೆಯುವ ಐತಿಹಾಸಿಕ ಹೊಸಪೇಟೆ(Hospet)ಯ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವ(Veerabhadreshwara Ratotsava)ದ ವೇಳೆ ಅವಘಡವೊಂದು ಸಂಭವಿಸಿದೆ.. ರಥೋತ್ಸವ ವೇಳೆ ಹೊಸ ತೇರಿನ ಮೇಲೆ ಅಳವಡಿಸಿದ ಕಳಸ ಕಳಚಿ ಬಿದ್ದಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಯುಗಾದಿಯಂದು ನಡೆಯೋ ರಥೋತ್ಸವ
ಯುಗಾದಿ ಪಾಂಡ್ಯದಂದು ಜರುಗುವ ಹೊಸಪೇಟೆ ಪಟ್ಟಣದಲ್ಲಿನ ಸಣ್ಣಕ್ಕಿ ವೀರಭದ್ರೇಶ್ವರ ಜಾತ್ರೆಯು ಕೊರೊನಾ(Corona) ಹಿನ್ನೆಲೆಯಲ್ಲಿ ಕಳೆದೆರಡು ವರ್ಷದಿಂದ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ರಥೋತ್ಸವ ಅದ್ದೂರಿಯಾಗಿ ಮಾಡಬೇಕೆಂದು ಹೊಸ ತೇರನ್ನು ಇಲ್ಲಿಯ ಭಕ್ತರು ನಿರ್ಮಾಣ ಮಾಡಿದ್ರು. ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯೋ ವೇಳೆ ಅವಘಡ(Accident)ವೊಂದು ಸಂಭವಿಸಿದೆ. ರಥ ಎಳೆಯುವ ವೇಳೆ ತೇರಿನ ಮೇಲಿದ್ದ ಕಳಸ ಕಳಚಿ ಬಿದ್ದಿದೆ. ಆರಂಭದಲ್ಲಿ ಸುಸೂತ್ರವಾಗಿ ನಡೆದ ರಥೋತ್ಸವ 50 ಮೀಟರ್ ದೂರ ಸಾಗುತ್ತಿದ್ದಂತೆ ತೇರಿನ ಮೇಲಿದ್ದ ಕಳಸ ಕಳಚಿ ಬಿದ್ದಿದೆ. ಈ ವೇಳೆ ರಥದಲ್ಲಿದ್ದ ಕೆಲ ಯುವಕರು ರಥದ ಮೇಲೆ ಹತ್ತಿ ಕಳಸ ಸರಿಪಡಿಸಿ ಮರಳಿ ರಥವನ್ನ ಎಳೆದಿದ್ದಾರೆ.
ಹುಟ್ಟಿದ ರಾಶಿಗೂ ಲೈಂಗಿಕ ವಾಂಛೆಗೂ ಇದ್ಯಾ ನಂಟು? ಈ ರಾಶಿಯವರಲ್ಲಿ Sex Drive ಹೆಚ್ಚು
ಕಳಸ ಕಟ್ಟುವವರ ನಿರ್ಲಕ್ಷ್ಯ
ರಥೋತ್ಸವಕ್ಕೂ ಮುನ್ನ ತೇರಿನ ಕಳಸ ಕಟ್ಟುವವರ ನಿರ್ಲಕ್ಷ್ಯದಿಂದ ಅಚಾತುರ್ಯ ಸಂಭವಿಸಿದೆ ಎಂದು ದೇವಾಲಯದ ಸಮಿತಿ ಹೇಳಿದೆ. ಅಲ್ಲದೇ ಭಕ್ತರು ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ. ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂದು ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಾಥ ಶರ್ಮ ತಿಳಿಸಿದ್ದಾರೆ. ಆದ್ರೆ ರಥ ಎಳೆಯುವ ವೇಳೆ ಕಳಸ ಕೆಳಗೆ ಬಿದ್ರೆ ಅದೊಂದು ಅಪಶಕುನ(bad omen) ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಮುಳ್ಳುಕೊಂಪೆಯಲ್ಲಿ ಕುಣಿದಾಡುವ ಮಕ್ಕಳು, ಕೊಪ್ಪಳ ಜಿಲ್ಲೆಯಲ್ಲೊಂದು ವಿಶಿಷ್ಟ ಆಚರಣೆ
ಕೊಟ್ಟೂರುನಲ್ಲಿ ನಡೆದಿತ್ತು ಈ ರೀತಿಯ ಘಟನೆ
ಕಳೆದ ನಾಲ್ಕು ವರ್ಷಗಳ ಹಿಂದೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುರು ಬಸವೇಶ್ವರ ರಥೋತ್ಸವದ ವೇಳೆ ರಥವೇ ಮಗುಚಿ ಬಿದ್ದ ಘಟನೆ ಇನ್ನೂ ಜಿಲ್ಲೆಯ ಭಕ್ತರ ಮನಸ್ಸಿನಿಂದ ಮಾಸಿಲ್ಲ. ಈಗ ಸಣ್ಣಕ್ಕಿ ವೀರಭದ್ರೇಶ್ವರ ದೇವಾಲಯದ ರಥದ ಕಳಸ ಕಳಚಿ ಬಿದ್ದಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.