Numerology: ಪಾದಾಂಕ 4ರಲ್ಲಿ ಜನಿಸಿದವರ ಆರೋಗ್ಯ ಭವಿಷ್ಯ ಹೀಗಿದೆ..

By Suvarna News  |  First Published Jan 22, 2022, 8:29 PM IST

ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಸಂಖ್ಯಾಶಾಸ್ತ್ರದಲ್ಲಿ ಹುಟ್ಟಿದ ದಿನಾಂಕವನ್ನು ಆಧರಿಸಿ ವ್ಯಕ್ತಿಯ ಭವಿಷ್ಯವನ್ನು ತಿಳಿಯಬಹುದಾಗಿದೆ. ಪಾದಾಂಕದ ಆಧಾರದ ಮೇಲೆ ಭವಿಷ್ಯವನ್ನು ತಿಳಿಯಬಹುದಾಗಿದ್ದು, ಇಲ್ಲಿ ಪಾದಾಂಕ ನಾಲ್ಕರಲ್ಲಿ ಜನಿಸಿದವರ ವರ್ಷ ಭವಿಷ್ಯದ ಬಗ್ಗೆ ತಿಳಿಯೋಣ .... 


ಜ್ಯೋತಿಷ್ಯ ಶಾಸ್ತ್ರದಂತೆ (Astrology) ಸಂಖ್ಯಾ ಶಾಸ್ತ್ರದಲ್ಲಿ(Numerology) ವ್ಯಕ್ತಿಯ ಭವಿಷ್ಯ (Future), ವ್ಯಕ್ತಿತ್ವ, ಸ್ವಭಾವ, ಗುಣಗಳ ಬಗ್ಗೆ ತಿಳಿಯಬಹುದಾಗಿದೆ.ಪ್ರತಿ ವ್ಯಕ್ತಿಗೂ ಭವಿಷ್ಯದ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ (Interest) ಇರುತ್ತದೆ. ಹೊಸ ವರ್ಷ (New year ) ಬಂತೆಂದರೆ ಸಾಕು ಈ ವರ್ಷದ ಆಗುಹೋಗುಗಳ ಬಗ್ಗೆ  ಏನು ಒಳ್ಳೆಯದಾಗಲಿದೆ, ಯಾವ ವಿಷಯದಲ್ಲಿ ಜಾಗ್ರತೆ ವಹಿಸಬೇಕು ಜೊತೆಗೆ ಧನ, ಸಂಪತ್ತು, ಸಮೃದ್ಧಿ, ಆರೋಗ್ಯ ಹೀಗೆ ಇನ್ನಿತರ ವಿಚಾರಗಳ ಬಗ್ಗೆ ವರ್ಷದ ಭವಿಷ್ಯವನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಇಲ್ಲಿ ಪಾದಾಂಕ (Padanka) ನಾಲ್ಕರಲ್ಲಿ ಜನಿಸಿದ ವ್ಯಕ್ತಿಗಳ  2022ರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿಯೋಣ.... ಸಂಖ್ಯಾ ಶಾಸ್ತ್ರದ ಪ್ರಕಾರ ವ್ಯಕ್ತಿಯ ಪಾದಾಂಕದ ಆಧಾರದ ಮೇಲೆ ಭವಿಷ್ಯದ ವಿಚಾರಗಳನ್ನು ತಿಳಿಯಬಹುದಾಗಿದೆ. 

ಪಾದಾಂಕವನ್ನು ತಿಳಿಯುವುದು ಹೇಗೆ?
ಹುಟ್ಟಿದ ದಿನಾಂಕವನ್ನು ಕೂಡುವುದು ಅದರಿಂದ ಬಂದ ಸಂಖ್ಯೆಯನ್ನು ಪಾದಾಂಕವೆಂದು ಕರೆಯುತ್ತಾರೆ. ಹುಟ್ಟಿದ ದಿನಾಂಕ 3 ಎಂದಾದರೆ ಪಾದಾಂಕ 3 ಆಗುತ್ತದೆ. ಅದೇ ಜನಿಸಿದ ದಿನಾಂಕವು 13 ಆಗಿದ್ದರೆ ಒಂದು ಮತ್ತು ಮೂರನ್ನು ಕೂಡಿದಾಗ ಬರುವ ಸಂಖ್ಯೆ ನಾಲ್ಕು (1 + 3 = 4) ಇದು ಪಾದಾಂಕವಾಗಿರುತ್ತದೆ. ಪಾದಾಂಕದಿಂದ ವ್ಯಕ್ತಿ ಬಗೆಗಿನ ವಿಚಾರಗಳನ್ನು ತಿಳಿಯಬಹುದೆಂದು ಸಂಖ್ಯಾಶಾಸ್ತ್ರ ಹೇಳುತ್ತದೆ.  

ಇದನ್ನು ಓದಿ: Astrology tips: ಮಕ್ಕಳಾಗ್ತಿಲ್ವಾ? ಸಂತಾನ ಯೋಗ ಹೆಚ್ಚಿಸಲು ಹೀಗ್ಮಾಡಿ..

ಪಾದಾಂಕ ನಾಲ್ಕರಲ್ಲಿ (Padanka Four) ಜನಿಸಿದವರಿಗೆ (Born) ಈ ವರ್ಷ ಅಂದರೆ 2022 ಅತ್ಯಂತ ಸುಖ (Happy) ಸಂತೋಷವನ್ನು ತರುತ್ತದೆ.  ಈ ವ್ಯಕ್ತಿಗಳಿಗೆ 2022 ಹೊಸ ಹೊಸ ಅವಕಾಶಗಳನ್ನು (Opportunity) ನೀಡುವುದಲ್ಲದೆ ಇವುಗಳಿಂದ ಉತ್ತಮ (Good) ಪರಿಣಾಮಗಳು (effects) ಉಂಟಾಗುತ್ತವೆ. ಕಾರ್ಯಸ್ಥಳಗಳಲ್ಲಿ ಈ ವ್ಯಕ್ತಿಗಳ ಕೆಲಸಗಳಿಗೆ (Work) ಹೆಚ್ಚಿನ ಪ್ರಶಂಸೆ ವ್ಯಕ್ತವಾಗುತ್ತದೆ. ಉದ್ಯೋಗದಲ್ಲಿ ಬಡ್ತಿ (Promotion) ಸಿಗುವುದಲ್ಲದೆ, ಆದಾಯವು (Income) ಮತ್ತಷ್ಟು ಹೆಚ್ಚಲಿದೆ. 

ವ್ಯಾಪಾರಸ್ಥರು ವ್ಯಾಪಾರದಲ್ಲಿ (Business) ಹೊಸ ಹೊಸ ತಂತ್ರಗಳನ್ನು (Trick) ಅಳವಡಿಸಿಕೊಳ್ಳುವುದರ ಮೂಲಕ ಸಫಲತೆಯನ್ನು (Success) ಕಾಣುತ್ತಾರೆ. ಇದರಿಂದ ಹೆಚ್ಚಿನ ಲಾಭವನ್ನು (Profit) ಸಹ ಗಳಿಸುತ್ತಾರೆ. ಆರ್ಥಿಕ (Economy) ಸ್ಥಿತಿಯ ಬಗ್ಗೆ ಹೇಳುವುದಾದರೆ ಈ ವರ್ಷದ ಆರ್ಥಿಕ  ಸ್ಥಿತಿ ಸಾಧಾರಣವಾಗಿರುತ್ತದೆ.

ವರ್ಷದ ಆರಂಭದಲ್ಲಿ ಆದಾಯವು ಉತ್ತಮವಾಗಿರುತ್ತದೆ. ಆದರೂ ಅದಕ್ಕೆ ತಕ್ಕಂತೆ ಖರ್ಚು (Spend) ಸಹ ಇರುತ್ತದೆ. ವರ್ಷದ ಮೂರನೇ ತ್ರೈಮಾಸಿಕ ಅವಧಿಯು ಮನೆ ಅಥವಾ ಸೈಟ್ (site) ಖರೀದಿಸಲು ಸಮಯ ಉತ್ತಮವಾಗಿದೆ.  

ಪ್ರೇಮ (Love) ಸಂಬಂಧಗಳಿಗೆ ವರ್ಷದ ಆರಂಭದಲ್ಲಿ (Start) ಸಮಯ ಕಷ್ಟಕರವಾಗಿರುತ್ತದೆ (Difficult). ವರ್ಷದ ಮಧ್ಯಭಾಗದಲ್ಲಿ ಸಂಬಂಧಗಳು ಸರಿಹೋಗುತ್ತವೆ. ಈ ವರ್ಷ ಸಂಬಂಧಿಗಳು ಮತ್ತು ಸ್ನೇಹಿತರೊಂದಿಗಿನ (Friend) ಬಾಂಧವ್ಯ ಉತ್ತಮವಾಗಿರಲಿದೆ. ಅಷ್ಟೇ ಅಲ್ಲದೇ ಸಂಗಾತಿಯೊಂದಿಗೆ ಸಹ ಉತ್ತಮ ಸಮಯವನ್ನು ಕಳೆಯಬಹುದಾಗಿದೆ. 

ಶಿಕ್ಷಣ ಕ್ಷೇತ್ರದಲ್ಲಿ (Education) ಹೊಸ ಹೊಸ ಅವಕಾಶಗಳು ಲಭಿಸುತ್ತವೆ. ವಿದ್ಯಾಭ್ಯಾಸದಲ್ಲೂ ಉತ್ತಮ ಪ್ರಗತಿ ಉಂಟಾಗುತ್ತದೆ. ಹೊಸತನ್ನು ಕಲಿಯಲು ಉತ್ತಮ ಅವಕಾಶಗಳು ಲಭ್ಯವಾಗುತ್ತವೆ. 

ಇದನ್ನು ಓದಿ: Numerology Prediction: ಪಾದಾಂಕ ಮೂರು, ಎದುರಿಸಬೇಕು ಹಲವು ಏರುಪೇರು

ಆರೋಗ್ಯದ (Health) ಬಗ್ಗೆ ಹೆಚ್ಚಿನ ಕಾಳಜಿ (Care) ವಹಿಸುವುದು ಉತ್ತಮ. ಈ ವರ್ಷ ಆರೋಗ್ಯದಲ್ಲಿ ಏರು ಪೇರುಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಉದರ ಸಂಬಂಧಿ ರೋಗಗಳು ಬಾಧಿಸುವ ಸಾಧ್ಯತೆ ಇರುವುದರಿಂದ ಎಣ್ಣೆ ಪದಾರ್ಥಗಳು (oil) ಮತ್ತು ಮಸಾಲೆ (Spice) ಪದಾರ್ಥಗಳನ್ನು ಹೆಚ್ಚು ಬಳಸದಿರುವುದು ಉತ್ತಮ. ಅಷ್ಟೇ ಅಲ್ಲದೆ ಈ ವರ್ಷ ಜ್ವರ (Fever), ತಲೆನೋವು (Headache) ಇತ್ಯಾದಿ ಸಮಸ್ಯೆಗಳು ಸಹ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಯೋಗ (Yoga) ಮತ್ತು ಪ್ರಾಣಾಯಾಮಗಳನ್ನು (Pranayama) ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.

click me!