ಶನಿಯನ್ನು ಮನೆಯಲ್ಲಿ ಪೂಜಿಸೋಲ್ಲ.. ಏಕೆ ಕೇಳಿದ್ರಾ?

By Suvarna NewsFirst Published Jul 13, 2022, 4:57 PM IST
Highlights

ದೇವಾನು ದೇವತೆಗಳನ್ನು ಪ್ರಸನ್ನಗೊಳಿಸುವ ಸಲುವಾಗಿ ಮನೆಯಲ್ಲೇ ಹಲವಾರು ದೇವರ ಮೂರ್ತಿಗಳನ್ನು ಇಟ್ಟು ಪೂಜಿಸುತ್ತೇವೆ. ಹಾಗಂತ ಶನಿ ದೇವರ ಫೋಟೋ ಅಥವಾ ವಿಗ್ರಹವು ಮನೆಯ ದೇವರ ಕೋಣೆಯಲ್ಲಿ ಕಾಣುವುದು ಬಹಳ ವಿರಳವೇ ಆಗಿರುತ್ತದೆ. ಶನಿದೇವರ ಪೂಜೆಯನ್ನು ಹೆಚ್ಚಾಗಿ ಮಂದಿರಗಳಲ್ಲಿ ಮಾಡುವುದನ್ನು ಕಾಣುತ್ತೇವೆ. ಅದು ಏಕೆ? ಎಂಬುದರ ಬಗ್ಗೆ ಕಾರಣ ತಿಳಿಯೋಣ...

ಶನಿದೇವರೆಂದರೇ ಭಕ್ತಿಗಿಂತ ಭಯವೇ (Scare) ಹೆಚ್ಚಾಗಿರುತ್ತದೆ. ಶನಿಯ (Saturn) ವಕ್ರದೃಷ್ಟಿ ಬಿದ್ದರೆ ಎಂಬ ಭಯದಿಂದ ಶನಿದೇವರ ಆರಾಧನೆಯನ್ನು ಒತ್ತು ಕೊಟ್ಟು ಮಾಡುವವರೇ ಹೆಚ್ಚಾಗಿರುತ್ತಾರೆ. ಹಾಗಾಗಿ ಶನಿದೇವರ ಬಗ್ಗೆ ಇರುವ ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದು ಉತ್ತಮ. ಶನಿದೇವರ ಫೋಟೋ (Photo) ಇಲ್ಲವೇ ವಿಗ್ರಹಗಳನ್ನು ಮನೆಯ ದೇವರ ಕೋಣೆಗಳಲ್ಲಿ ಸಾಮಾನ್ಯವಾಗಿ ಇಟ್ಟಿರುವುದಿಲ್ಲ. ಹಾಗೆ ಇಡದೇ ಇರಲು ಕಾರಣವಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಒಂದೊಮ್ಮೆ ಇಟ್ಟರೆ ಕಷ್ಟಗಳೂ (Problem) ಎದುರಾಗುವ ಸಾಧ್ಯತೆಯೇ ಹೆಚ್ಚು.

ಪುರಾಣ ಸಮಯದಿಂದಲೂ ಪೂಜೆ, ಅನುಷ್ಟಾನಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ದೇವರ ಪೂಜೆಯನ್ನು ಅಭಿವೃದ್ಧಿ, ನೆಮ್ಮದಿ, ಸುಖ -ಶಾಂತಿ, ಸಕಾರಾತ್ಮಕತೆ ನೆಲೆಸಲು ಮಾಡುತ್ತಾರೆ. ನಮ್ಮ ಸಂಸ್ಕೃತಿಯ ಪ್ರಕಾರ ಕೆಲವು ದೇವರ ಕೃಪೆಗೆ ಪಾತ್ರರಾಗಬೇಕೆಂದರೆ ಹೆಚ್ಚಿನ ಅನುಷ್ಠಾನ (Worshipping) ಹಾಗೂ ಪೂಜೆಗಳನ್ನು ಮಾಡುವಾಗ ಜಾಗ್ರತೆ ಅಗತ್ಯವಿರುತ್ತದೆ. ಅದಕ್ಕೆ ಸರಿಯಾದ ನಿಯಮಗಳನ್ನು ಸಹ ಅನುಸರಿಸ ಬೇಕಾಗುತ್ತದೆ. ನಿಯಮಾನುಸಾರ ಮಾಡದಿದ್ದರೆ ಕಷ್ಟಗಳನ್ನು ಆಹ್ವಾನಿಸಿದಂತೆ ಆಗುತ್ತದೆ.

ಶನಿ ದೇವರ ಬಗ್ಗೆ ಭಕ್ತಿಯ ಜೊತೆಗೆ ಭಯದಲ್ಲಿಯೇ ಶನಿದೇವರ ಪೂಜೆಯನ್ನು ಮಾಡುತ್ತಾರೆ. ಪ್ರಮುಖವಾಗಿ ತಿಳಿದುಕೊಳ್ಳಬೇಕಾದ ವಿಷಯವೆಂದರೆ, ಹಿರಿಯರಿಗೆ ಗೌರವ (Respect) ಕೊಡುವುದು, ತಂದೆ-ತಾಯಿಯನ್ನು ಬಹಳ ಉತ್ತಮವಾಗಿ ನೋಡಿಕೊಳ್ಳುವುದು, ಧರ್ಮ ಮಾರ್ಗದಲ್ಲಿ ನಡೆಯುವುದನ್ನು ಮಾಡುತ್ತಾರೋ ಅಂಥವರ ಮೇಲೆ ಶನಿ ದೇವರು ಕೃಪೆ ತೋರಿಸುತ್ತಾನೆ. 

ಇದನ್ನು ಓದಿ: ಚಿತೆಯ ಪ್ರದಕ್ಷಿಣೆ - ಸಂಸ್ಕಾರದ ನಂತರ ಹಿಂದಿರುಗಿ ನೋಡಬಾರದು ಏಕೆ?

ಮನೆಯಲ್ಲಿ ಶನಿದೇವರ ವಿಗ್ರಹವನ್ನುಇಡುವುದಿಲ್ಲ (Saturn Idol)
ಶನಿ ದೇವರ ವಿಗ್ರಹವನ್ನು ಮನೆಯ ದೇವರ ಕೋಣೆಯಲ್ಲಿ (Home temple) ಇಡಬಾರದು. ಶಾಸ್ತ್ರ ಹಾಗೂ ಪುರಾಣಗಳ ಪ್ರಕಾರವೇ ಇದನ್ನು ಉಲ್ಲೇಖಿಸಿದ್ದಾರೆ. ಶನಿದೇವರಿಗೆ ಒಂದು ಶಾಪವಿರುವುದೇ ಇದಕ್ಕೆ ಕಾರಣವಾಗಿದೆ. ಶನಿದೇವರು ಯಾರ ಮೇಲೆ ದೃಷ್ಟಿ ಬೀರುತ್ತಾನೋ, ಅವರಿಗೆ ಕೆಟ್ಟದ್ದು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಆದ ಕಾರಣ ಮನೆಯಲ್ಲಿ ಶನಿಯ  ಮೂರ್ತಿ ಅಥವಾ ವಿಗ್ರಹವನ್ನು ಇಟ್ಟರೆ, ಶನಿಯ ದೃಷ್ಟಿ ನಿತ್ಯ ನಮ್ಮ ಮೇಲೆ ಬೀಳುತ್ತದೆ, ಹಾಗೇ ಮಾಡಿದರೆ ಸಮಸ್ಯೆಗಳನ್ನು ಆಹ್ವಾನಿಸಿದಂತೆ ಆಗುತ್ತದೆ. ಶನಿದೇವರ ಪೂಜೆ ಅಥವಾ ಕಥೆ ಮಾಡಿಸಬೇಕಿದ್ದಾಗ ಯಾವುದಾದರೂ ದೇವಸ್ಥಾನದಲ್ಲಿ ಮಾಡಿಸುವುದು ಒಳ್ಳೆಯದು ಎಂದು ಶಾಸ್ತ್ರ ಉಲ್ಲೇಖಿಸುತ್ತದೆ. 

ಮನೆಯನ್ನು ಬಿಟ್ಟು ಹೊರಗಡೆ ದೇವಾಲಯಗಳಲ್ಲೇ ಶನಿ ದೇವರ ಪೂಜೆಯನ್ನು ಏಕೆ ಮಾಡಬೇಕು?
ಶನಿ ದೇವಸ್ಥಾನಗಳಿಗೆ (Temple) ದರ್ಶನಕ್ಕೆಂದು ಹೋದಾಗ ಏನು ಮಾಡಬೇಕು ಎಂಬ ಬಗ್ಗೆ ಪುರಾಣ ಮತ್ತು ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ. ಹಾಗಾಗಿ ಇದರ ಬಗ್ಗೆ ತಿಳಿದುಕೊಂಡರೆ ಉತ್ತಮ. ಶನಿ ದೇವಾಲಯಕ್ಕೆ ಹೋದಾಗ ಶನಿ ದೇವರ ಕಾಲುಗಳನ್ನು ನೋಡಬಾರದು, ಶನಿದೇವರ ಕಣ್ಣಿನಲ್ಲಿ ಕಣ್ಣಿಟ್ಟು ನೋಡಬೇಕು. ಈ ರೀತಿ ದರ್ಶನ ಮಾಡಬೇಕು. 

ಮನೆಯಲ್ಲಿಯೇ ಪೂಜೆ ಸಲ್ಲಿಸುವ ಬಯಕೆ ಹೊಂದಿದಲ್ಲಿ, ಆಗ ಮನಸ್ಸಿನಲ್ಲಿಯೇ ಶನಿದೇವರ ಸ್ಮರಣೆ ಮಾಡಿಕೊಳ್ಳಬೇಕು, ಜೊತೆಗೆ ಶನಿವಾರದಂದು ಹನುಮಂತನಿಗೆ (Hanuman) ಪೂಜೆಯನ್ನು ಸಲ್ಲಿಸಬೇಕು. ಇದೇ ಸಮಯದಲ್ಲಿ ಶನಿದೇವರನ್ನೂ ಸ್ಮರಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಶನಿ ದೇವರ ಕೃಪೆ ಸಿಗುತ್ತದೆ.

ಇದನ್ನು ಓದಿ: ಸೋಮವಾರದಂದು ಈ ವಸ್ತುಗಳನ್ನು ಖರೀದಿಸಬೇಡಿ

ದೇವರ ಕೋಣೆಯಲ್ಲಿ ಇಡಬೇಡಿ (Home temple)
ಕೆಲವು ದೇವರ ಮೂರ್ತಿಗಳನ್ನು ದೇವರ ಮನೆಯಲ್ಲಿ ಅಥವಾ ಮನೆಯ ಉಳಿದ ಕಡೆಗಳಲ್ಲಿ ಇಟ್ಟುಕೊಳ್ಳ ಬಾರದು. ಇದರಿಂದ ಶನಿ ದೇವರಷ್ಟೇ ಅಲ್ಲದೆ, ರಾಹು-ಕೇತು, ಭೈರವ ಮತ್ತು ನಟರಾಜನ ಮೂರ್ತಿಗಳನ್ನು ಸಹ ಮನೆಯಲ್ಲಿ ಇಡಬಾರದು. ಈ ಎಲ್ಲ ದೇವರ ಆರಾಧನೆಯನ್ನು ಮನೆಯ ಹೊರಗಡೆಗೆ ಮಾಡಬೇಕು. ಈ ದೇವತೆಗಳ ಆರಾಧನೆಯನ್ನು ಮನೆಯೊಳಗೆ ಮಾಡಿದರೆ ಕಷ್ಟ –ನಷ್ಟಗಳು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ವಿಷಯಗಳನ್ನು ಗಮನದಲ್ಲಿಡುವುದು ಉತ್ತಮ.

click me!