ಜುಲೈನಲ್ಲಿ ಈಗಾಗಲೇ ಶನಿ ವಕ್ರಿಯಲ್ಲಿದ್ದಾನೆ. ಇನ್ನು ಗುರು ಕೂಡಾ ಹಿನ್ನಡೆಯಾಗುತ್ತಾನೆ. ಹಿಮ್ಮುಖ ಚಲನೆ ಸಂದರ್ಭದಲ್ಲಿ ಗುರುವಿನ ಕೃಪೆ ಈ ರಾಶಿಗಳ ಮೇಲೆ 119 ದಿನಗಳವರೆಗೆ ಇರುತ್ತದೆ. ಇವರು ಮಾಡುವ ಕೆಲಸಗಳಲ್ಲಿ ಯಶಸ್ಸು ಲಭಿಸುತ್ತದೆ.
ಜುಲೈನಲ್ಲಿ ಗುರು ಗ್ರಹವು ಹಿಮ್ಮುಖವಾಗಲಿದ್ದು, 119 ದಿನಗಳ ರಾಲ ಇದೇ ರೀತಿಯ ಚಲನೆಯಲ್ಲಿರಲಿದೆ. ಜುಲೈ 29ರಂದು ದೇವಗುರು ಬೃಹಸ್ಪತಿಯು ಸ್ವರಾಶಿ ಮೀನದಲ್ಲಿ ವಕ್ರಿಯಾಗಲಿದ್ದಾನೆ. ಅಕ್ಟೋಬರ್‌ನಲ್ಲಿ, ಗುರು ಮತ್ತೆ ಮೀನ ರಾಶಿಗೆ ಬರುತ್ತಾನೆ. ನಂತರ ನವೆಂಬರ್ 24, ಗುರುವಾರ, ಅದು ಮತ್ತೆ ಹಿಮ್ಮುಖವಾಗುತ್ತದೆ.
ಗುರುವು ಹಿಮ್ಮೆಟ್ಟಿದಾಗ, ಅದರ ವೇಗವು ಕಡಿಮೆಯಾಗುತ್ತದೆ.
ದೇವಗುರು ಬೃಹಸ್ಪತಿಗೆ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನವಿದೆ. ಗುರುವನ್ನು ಪುತ್ರ, ಜೀವನ ಸಂಗಾತಿ, ಸಂಪತ್ತು, ಶಿಕ್ಷಣ ಮತ್ತು ವೈಭವದ ಅಂಶವೆಂದು ಪರಿಗಣಿಸಲಾಗಿದೆ. ಯಾರ ಜಾತಕದಲ್ಲಿ ಗುರು ಬಲವಿದೆಯೋ ಅವರಿಗೆ ವಿವಾಹ ಯೋಗ, ಐಶ್ವರ್ಯ, ಸಮೃದ್ಧಿ, ಮಕ್ಕಳ ಸುಖ, ವಿದ್ಯಾಭ್ಯಾಸ ದೊರೆಯುತ್ತದೆ. ಯಾವುದೇ ಗ್ರಹ ಹಿಮ್ಮೆಟ್ಟಿದಾಗ ಸಮಸ್ಯೆಗಳೇ ಹೆಚ್ಚು. ಹಾಗಿದ್ದೂ ಗುರುವು ಹಿಮ್ಮುಖವಾಗಿದ್ದರೂ ಸಹ, ಮುಂದಿನ 119 ದಿನಗಳ ಕಾಲ ಕೆಲವು ರಾಶಿಚಕ್ರದ ಜನರಿಗೆ ಬಹಳಷ್ಟು ನೀಡುತ್ತಾನೆ. ಗುರುಗ್ರಹದ ಹಿಮ್ಮೆಟ್ಟುವಿಕೆಯಿಂದ ಯಾವ ರಾಶಿಗಳಿಗೆ ಲಾಭವಾಗಲಿದೆ, ಯಾವ ರಾಶಿಗಳು ಗುರುವಿನ ಕೃಪೆ ಪಡೆದುಕೊಳ್ಳಲಿವೆ, ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಗಳಿಸಲಿವೆ ನೋಡೋಣ.
ಯಾವ ರಾಶಿಚಕ್ರಗಳಿಗೆ ಲಾಭದಾಯಕ?
ಗುರುಗ್ರಹದ ಹಿಮ್ಮೆಟ್ಟುವಿಕೆಯು ವೃಷಭ, ಮಿಥುನ, ಕರ್ಕಾಟಕ, ಕುಂಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಜನರು ತಾವು ಕೈ ಹಾಕುವ ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಹೊಸ ಯೋಜನೆಗಳು ಫಲ ಕೊಡುತ್ತವೆ. ವಿವಾಹ ಭಾಗ್ಯ, ಮಗುವಿನ ಭಾಗ್ಯವಿರಲಿದೆ. ಇದಲ್ಲದೇ ತುಲಾ, ಮೇಷ, ಮಕರ, ಕನ್ಯಾ, ಧನು ರಾಶಿ ಮತ್ತು ಮೀನ ರಾಶಿಯವರಿಗೆ ಕೂಡಾ ಸಮಯವು ಬಹಳಷ್ಟು ಒಳ್ಳೆಯದನ್ನು ನೀಡುತ್ತದೆ. ಈ ರಾಶಿಚಕ್ರದ ಜನರು ಬಹಳ ಕಡಿಮೆ ಪರಿಣಾಮವನ್ನು ಹೊಂದಿರುತ್ತಾರೆ, ಆದರೆ ಅವರ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ. ಸಿಂಹ, ವೃಶ್ಚಿಕ ರಾಶಿಯವರಿಗೆ ಸ್ವಲ್ಪ ಸಮಯ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಅವರು ಪರಿಹಾರ ಮಾರ್ಗಗಳನ್ನು ಅುಸರಿಸಬೇಕು. ಒಟ್ಟಾರೆಯಾಗಿ 119 ದಿನಗಳು ಈ ರಾಶಿಯ ಜನರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ಈ ಮೂರು ರಾಶಿಗಳಿಗೆ ಲಾಭ ಹೆಚ್ಚು..
ಮಳೆಗಾಲದಲ್ಲಿ ಹುಟ್ಟಿದವರಾ ನೀವು? ಸೀಸನ್‌ಗೆ ತಕ್ಕಂತೆ ಬದಲಾಗುತ್ತೆ ವ್ಯಕ್ತಿತ್ವ
ವೃಷಭ(Taurus)
ಗುರುವು ನಿಮ್ಮ ರಾಶಿಚಕ್ರದ 11ನೇ ಮನೆಯಲ್ಲಿ ಹಿಮ್ಮುಖವಾಗುತ್ತಾನೆ. ಈ ಸಮಯದಲ್ಲಿ ಉದ್ಯೋಗದಲ್ಲಿದ್ದು ಕೆಲಸ ಬದಲಿಸಲು ಪ್ರಯತ್ನಿಸುತ್ತಿರುವವರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಕಾರ್ಯಶೈಲಿ ಸುಧಾರಿಸುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ.
ಮಿಥುನ(Gemini)
ಮಿಥುನ ರಾಶಿಯ 10ನೇ ಮನೆಯಲ್ಲಿ, ಗುರು ಹಿಮ್ಮುಖವಾಗುವುದು. ಈ ಚಲನೆಯು ನಿಮ್ಮ ಕೆಲಸದ ಶೈಲಿಯನ್ನು ಸುಧಾರಿಸುತ್ತದೆ. ಭವಿಷ್ಯದಲ್ಲಿ ಹೂಡಿಕೆಯ ಲಾಭವನ್ನು ಪಡೆಯಬಹುದು. ಕೆಲಸ ಮಾಡುವವರಿಗೆ ಬಡ್ತಿ ಸಿಗಬಹುದು.
ಕರ್ಕಾಟಕ(Cancer)
ದೇವಗುರು ಗುರುವು ನಿಮ್ಮ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಹಿಮ್ಮುಖವಾಗುತ್ತಾನೆ. ಈ ಸಮಯದಲ್ಲಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ವ್ಯಾಪಾರಿಗಳು ಲಾಭ ಗಳಿಸುವರು. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ಆಧ್ಯಾತ್ಮಿಕತೆಯತ್ತ ಆಸಕ್ತಿ ಹೆಚ್ಚಾಗುತ್ತದೆ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಸಂಬಂಧ ಕೂಡಿ ಬರಲಿದೆ.
ಗುರು ಪೂರ್ಣಿಮೆ: ಅಜ್ಞಾನ ಕಳೆದು ಜ್ಞಾನದ ಬೆಳಕು ಒದಗಿಸುವವನೇ ಗುರು
ಕುಂಭ(Aquarius)
ಗುರುವು ಕುಂಭ ರಾಶಿಯ ಎರಡನೇ ಮನೆಯಲ್ಲಿ ಹಿಮ್ಮುಖವಾಗುತ್ತದೆ. ಉದ್ಯೋಗಸ್ಥರಿಗೆ ಉನ್ನತ ಅಧಿಕಾರಿಗಳ ಬೆಂಬಲ ದೊರೆಯಲಿದೆ. ಸಂಗಾತಿಯ ಸಹಾಯದಿಂದ ಧನಲಾಭವನ್ನು ಪಡೆಯಬಹುದು. ಹಣವನ್ನು ಸಂಗ್ರಹಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.