ಕಾಲಭೈರವ ದೇವರನ್ನು ಪೂಜಿಸಿದರೆ ಈ ಪ್ರಾಣಿ ಕಚ್ಚುವ ಭಯವಿಲ್ಲ!

By Bhavani Bhat  |  First Published Aug 4, 2024, 10:25 AM IST

ಕಾಲಭೈರವ ದೇವರು ಅಪರೂಪವಾಗಿ ಆರಾಧನೆಗೆ ಒಳಗಾಗುವ ದೇವರು. ಕಾಶಿಯಲ್ಲಿ ವಿಶ್ವನಾಥನನ್ನು ದರ್ಶನ ಮಾಡುವ ಮೊದಲು ಕಾಲಭೈರವ ದೇವರನ್ನು ದರ್ಶಿಸಿ ಆರಾಧಿಸುವುದು ಸಂಪ್ರದಾಯ. ಕಾಲಭೈರವ ದೇವರ ಆರಾಧನೆಯಿಂದ ಏನು ಲಾಭ, ಯಾಕೆ ಪೂಜಿಸಬೇಕು, ಇಲ್ಲಿ ತಿಳಿಯೋಣ.


ಕಾಲಭೈರವನೆಂದರೆ ಶಿವನೇ ಹೊರತು ಬೇರೆಯಲ್ಲ. ಆತ ಶಿವನ ಒಂದು ರೂಪ- ಆದರೆ ಆತ ಪ್ರಳಯಭಯಂಕರನಾದ ರೂಪ. ಪ್ರಳಯಕಾರಕನಾಗಿ ಶಿವನನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದ್ದು ಶಿವನ ಅನೇಕ ರೌದ್ರ ರೂಪಗಳನ್ನು ಕೊಂಡಾಡಲಾಗಿದೆ. ಅಂತಹ ಒಂದು ಭಯಂಕರ ಅಥವಾ ರೌದ್ರ ರೂಪದಲ್ಲಿ ಪೂಜಿಸಲಾಗುವ ಶಿವನ ಸ್ವರೂಪ ಕಾಲಭೈರವ ಅಥವಾ ಕಾಳಭೈರವ.

ಕಾಲಭೈರವ ಅನ್ಯಾಯವನ್ನು ಸಹಿಸದವನೂ ಹಾಗೂ ದುಷ್ಟರನ್ನು ಎಂದಿಗೂ ಬಿಡದವನು ಎಂದು ವಿವರಿಸಲಾಗುತ್ತದೆ. ಕಾಲಭೈರವ ಎಂದರೆ ಅನೇಕರಿಗೆ ಒಂದಿಷ್ಟು ಭಯ ಆಗಬಹುದು. ಏಕೆಂದರೆ ಆ ಅವತಾರದ ಮಹತ್ವವೇ ಹಾಗಿದೆ. ಹಾಗೆಂದ ಮಾತ್ರಕ್ಕೆ ಜನರು ಭಯಪಡುವ ಅಗತ್ಯವಿಲ್ಲ. ಆದರೆ ಯಾರೂ ತಪ್ಪು ಮಾಡುವರೋ, ಅನ್ಯಾಯ ಎಸಗುವರೋ ಅವರನ್ನು ಖಂಡಿತ ಕಾಲಭೈರವ ಸುಮ್ಮನೆ ಬಿಡುವುದಿಲ್ಲ ಎಂದೇ ನಂಬಲಾಗಿದೆ.

Tap to resize

Latest Videos

ಒಂದೊಮ್ಮೆ ಬ್ರಹ್ಮದೇವರಿಗೆ ಪಾಠವೊಂದನ್ನು ಕಲಿಸಲು ಶಿವನು ಈ ಕಾಲಭೈರವನ ರುದ್ರ ಅವತಾರವನ್ನು ಧಾರಣ ಮಾಡಿದನೆಂಬ ದಂತಕಥೆಯಿದೆ. ಶಿವನು ತನ್ನ ಅತಿ ಭಯಂಕರವಾದ ಕಾಲಭೈರವನ ಅವತಾರ ತಾಳಿ ಬ್ರಹ್ಮನ ಐದನೇಯ ತಲೆಯನ್ನು ಕಡಿದು ಹಾಕಿದ ಎನ್ನಲಾಗುತ್ತದೆ. ತನ್ನ ಉಗುರಿನಿಂದಲೇ ಬ್ರಹ್ಮನ ಶಿರವನ್ನು ಛೇದಿಸಿದ್ದರಿಂದ ಮುಂದೆ ಅದು ಬ್ರಹ್ಮಕಪಾಲ ಎಂಬ ಹೆಸರು ಪಡೆಯಿತು. ಇಂದಿಗೂ ಭಾರತದಲ್ಲಿರುವ ಕೆಲವು ಕಾಲಭೈರವನ ದೇವಾಲಯಗಳಲ್ಲಿ ಬ್ರಹ್ಮಕಪಾಲ ಚಿತ್ರಿಸಿರುವುದನ್ನು ಕಾಣಬಹುದಾಗಿದೆ.

ಹಾಗಾಗಿ ಅಹಂಕಾರಿಗಳನ್ನು ಮಿತಿಯಲ್ಲಿರುವ ಹಾಗೆ ಹಾಗೂ ಅವರನ್ನು ಮಣ್ಣುಮುಕ್ಕಿಸುವ ಅವತಾರವಾಗಿ ಕಾಲಭೈರವನನ್ನು ನೋಡಲಾಗುತ್ತದೆ. ಆದಾಗ್ಯೂ ಶಿವನ ಈ ಅವತಾರವನ್ನು ಪೂಜಿಸಲು ಪ್ರಶಸ್ತ ಸಮಯ ಹಾಗೂ ಕೆಲ ಪ್ರಮುಖ ಮಂತ್ರಗಳಿವೆ. ಸಾಮಾನ್ಯವಾಗಿ ರಾಹುಕಾಲ ಕಾಲಭೈರವನ ಆರಾಧನೆಗೆ ಪ್ರಶಸ್ತ ಎನ್ನಲಾಗಿದೆ. ಪೂಜೆಯ ಭಾಗವಾಗಿ ಕಾಲಭೈರವನಿಗೆ ತೆಂಗಿನಕಾಯಿ, ಸಿಂಧೂರ, ಹೂವುಗಳು, ಸಾಸಿವೆ ಎಣ್ಣೆ ಹಾಗೂ ಕರಿಎಳ್ಳನ್ನು ಅರ್ಪಣ ಮಾಡಲಾಗುತ್ತದೆ.

ಪ್ರತಿ ಶಕ್ತಿಪೀಠಗಳನ್ನು ಕಾಯುವ ಹೊಣೆ ಹೊತ್ತಿರುವುದೇ ಕಾಲಭೈರವನಾಗಿದ್ದು ಈ ಸಂದರ್ಭದಲ್ಲಿ ಕಾಲಭೈರವನನ್ನು ಬಟುಕಭೈರವನೆಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಅಲ್ಲದೆ ಕಾಲಭೈರವನ ಮೂಲಶಕ್ತಿ ತಂತ್ರ-ಮಂತ್ರಾದಿಗಳಲ್ಲಿದ್ದು ತಾಂತ್ರಿಕರು, ವಾಮಪಂಥೀಯರ ಆರಾಧ್ಯ ದೈವನಾಗಿ ಕಾಲಭೈರವನನ್ನು ಗುರುತಿಸಲಾಗುತ್ತದೆ. "ಓಂ ಕಾಲಕಾಲಾಯ ವಿದ್ಮಹೆ, ಕಾಲ ತೀರ್ಥಾಯ ಧೀಮಹಿ, ತನ್ನೊ ಕಾಲಭೈರವ ಪ್ರಚೋದಯಾತ್" ಎಂಬುದು ಕಾಲಭೈರವ ಗಾಯತ್ರಿ ಮಂತ್ರ. 

ಈ ಮಂತ್ರಗಳನ್ನು ಯಾರು ವಿಶ್ವಾಸ, ನಂಬಿಕೆ ಹಾಗೂ ಭಕ್ತಿಯಿಂದ ಜಪಿಸುತ್ತ ಕಾಲಭೈರವನನ್ನು ಆರಾಧಿಸುವವರೋ ಅವರಿಗೆ ಅಹಂ ಎಂದಿಗೂ ಬರಲಾರದು ಹಾಗೂ ಅವರಿಗೆ ಯಾರಿಂದಲೂ ಭಯ ಆಗಲಾರದು ಹಾಗೂ ಯಾರೂ ಅವರಿಗೆ ಯಾವುದೇ ರೀತಿಯ ಕೆಡುಕನ್ನು ಉಂಟುಮಾಡಲಾರರು.

ಭಗವಾನ್ ಕಾಲಭೈರವನ ನಿಷ್ಠಾವಂತ ಭಕ್ತರೆಂದು ಪರಿಗಣಿಸಲ್ಪಟ್ಟವರಿಗೆ ನಾಯಿಗಳು ಎಂದಿಗೂ ಹಾನಿ ಮಾಡುವುದಿಲ್ಲ. ನಾಯಿಗಳು ತಮ್ಮ ಯಜಮಾನರಿಗೆ ಪ್ರಾಮಾಣಿಕ ಮತ್ತು ನಿಷ್ಠಾವಂತ ಎಂದು ಪರಿಗಣಿಸಲ್ಪಟ್ಟಿದ್ದರೂ, ಬೀದಿ ನಾಯಿಗಳ ಉಪದ್ರವವನ್ನು ಎದುರಿಸುವುದು ತುಂಬಾ ಕಷ್ಟ. ನಾವು ಬೀದಿಗಳಲ್ಲಿ ನಿಧಾನವಾಗಿ ಮತ್ತು ಮೌನವಾಗಿ ನಡೆಯುತ್ತಿದ್ದರೂ, ಕೆಲವೊಮ್ಮೆ ಕೆಲವು ಬೀದಿ ನಾಯಿಗಳು ನಮ್ಮ ಹಿಂದೆ ಬೀಳಬಹುದು ಅಥವಾ ಕಚ್ಚಬಹುದು. ಕಾಲಭೈರವನ ಆರಾಧನೆ ಅಂಥ ಭಯವನ್ನು ನಮ್ಮಿಂದ ದೂರ ಮಾಡುತ್ತದೆ. ಯಾಕೆಂದರೆ ಕಾಲಬೈರವೇಶ್ವರನ ವಾಹನಗಳೇ ಈ ಶ್ವಾನಗಳು. ಕಾಲಭೈರವವೇಶ್ವರನ್ನು ಇವುಗಳನ್ನು ನಿಯಂತ್ರಿಸುತ್ತಾನೆ. 

ಅಗಲಿದ ಆತ್ಮಗಳು ಭಗವಾನ್ ಕಾಲಭೈರವನ ಪಾದಗಳನ್ನು ತಲುಪುತ್ತವೆ ಎಂದು ನಂಬಲಾಗಿದೆ. ಕೆಲವು ಹಿಂದೂ ಸ್ಮಶಾನ ಸ್ಥಳಗಳಲ್ಲಿ, ಅಗಲಿದ ಆತ್ಮಗಳಿಗೆ ಆಶೀರ್ವಾದ ನೀಡುವ ಭಗವಾನ್ ಕಾಲಭೈರವನ ಪ್ರತಿಮೆಯನ್ನು ನಾವು ಕಾಣಬಹುದು. ಒಬ್ಬ ವ್ಯಕ್ತಿಯು ಮಕ್ಕಳಿಲ್ಲದೆ ಮರಣಹೊಂದಿದರೆ ಮತ್ತು ಅವನು ಕಾಲಭೈರವನ ಭಕ್ತನಾಗಿದ್ದರೆ, ಸ್ವತಃ ಕಾಲಭೈರವನೇ ಅವನ ಮಗನಂತೆ ವರ್ತಿಸುತ್ತಾನೆ ಮತ್ತು ಅವನು ಸತ್ತ ತನ್ನ ಭಕ್ತನಿಗೆ ಪಿತೃ ತರ್ಪಣವನ್ನು ತನ್ನ ತಂದೆ ಎಂದು ಪರಿಗಣಿಸಿ ಮಾಡುತ್ತಾನೆ. 

ಭೂತ ಪ್ರೇತಗಳು ಯಾರನ್ನ ತುಂಬಾ ಕಾಡುತ್ತೆ? ಇಲ್ಲಿದೆ ಪ್ರೇತಾತ್ಮಗಳ ಕುರಿತು ಇಂಟ್ರೆಸ್ಟಿಂಗ್ ವಿಷ್ಯ

ಕನ್ಯಾ ದೋಷ, ಕಾಳಸರ್ಪ ದೋಷ, ಪಿತೃ ದೋಷ, ಬ್ರಹ್ಮಹತಿ ದೋಷ ಮತ್ತು ನವಗ್ರಹ ದೋಷದಿಂದ ಬಳಲುತ್ತಿರುವವರು ತಮ್ಮ ದೋಷಗಳಿಂದ ಮುಕ್ತಿ ಹೊಂದಲು ಭಗವಾನ್ ಕಾಲಭೈರವನ ಆರಾಧನೆ ಮಾಡಬೇಕೆಂದು ಸಲಹೆ ನೀಡಲಾಗುತ್ತದೆ. ಅವಿವಾಹಿತರು ಮತ್ತು ಸಮಸ್ಯೆಯಿಲ್ಲದ ದಂಪತಿಗಳು ತಮ್ಮ ಇಷ್ಟಾರ್ಥಗಳನ್ನು ಶೀಘ್ರದಲ್ಲೇ ಪೂರೈಸಲು ಕಾಲಭೈರವನನ್ನು ಪೂಜಿಸಬಹುದು.

ಮನುಷ್ಯರ ಮನಸ್ಸಿನಿಂದ ಭಯವನ್ನು ಹೋಗಲಾಡಿಸಿ ಧೈರ್ಯ, ಬುದ್ಧಿವಂತಿಕೆ, ಜ್ಞಾನ ಮತ್ತು ಧೈರ್ಯವನ್ನು ನೀಡುವವನು. ಆತನನ್ನು ಪೂಜಿಸುವುದರಿಂದ ಯಾವುದೇ ಕಷ್ಟದ ಸಂದರ್ಭಗಳನ್ನು ನಾವು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ. ಭೈರವ ಮುಖ್ಯವಾಗಿ ತನ್ನ ಪ್ರಾಮಾಣಿಕ ಭಕ್ತರನ್ನು ಶತ್ರುಗಳಿಂದ ರಕ್ಷಿಸುತ್ತಾನೆ. ಅವನು ಇಡೀ ಬ್ರಹ್ಮಾಂಡದ ಸರ್ವೋಚ್ಚ ರಕ್ಷಕನೆಂದು ಪರಿಗಣಿಸಲ್ಪಟ್ಟಿದ್ದಾನೆ.

ಆತ ನಮ್ಮೆಲ್ಲ ಪಾಪಗಳ ನಿವಾರಕ. ನಮ್ಮೆಲ್ಲ ಕರ್ಮಗಳ ನಿಯಂತ್ರಕ. ನವಗ್ರಹ ದೋಷಗಳಿಗೆ ಈತನಿಂದ ನಿವಾರಣೆ. ಕಾಶಿ ವಿಶ್ವನಾಥನನ್ನು ಪೂಜಿಸುವವರು ಈತನನ್ನು ಪೂಜಿಸಿಯೇ ಮುಂದೆ ಹೋಗುತ್ತಾರೆ. ಉಜ್ಜಯಿನಿಯಲ್ಲಿ ಕಾಲಭೈರವನ ಮಹಾ ದೇವಸ್ಥಾನವಿದೆ. ಈತ ಶನಿದೇವರನ್ನೂ ನಿಯಂತ್ರಿಸುವವನು. ಹೀಗಾಗಿ ಶನಿದೋಷ ಇದ್ದವರು ಈತನನ್ನು ಪೂಜಿಸಬೇಕು.

ಅನ್ಯಾಯದಿಂದ ಹಣ ಸಂಪಾದಿಸಿದ್ರೆ ಅದು ನಿಮ್ ಹತ್ರ ಉಳಿಯೋದು ಎಷ್ಟು ವರ್ಷ ಗೊತ್ತಾ?
 

click me!