ಹೆಣ್ಣಿಗೆ ನಾಚಿಕೆ ಹೆಚ್ಚು.. ಆಕೆ ನಾಚಿಕೊಂಡರೇ ಚೆನ್ನ ಎನ್ನುವವರೂ ಇದ್ದಾರೆ. ಹಾಗಂಥ ಯಾವಾಗಲೂ ನಾಚಿಕೊಳ್ಳುತ್ತಿದ್ದರೆ ಸರಿಯಲ್ಲ. ಗಂಡ ಹೆಂಡತಿಯ ಬಳಿ ಈ ವಿಷಯ ಕೇಳಿದಾಗ ಆಕೆ ನಾಚಿಕೊಳ್ಳುತ್ತಾ ಕೂತರೆ ಸಂಸಾರ ಸಾಗದು ಎನ್ನುತ್ತಾರೆ ಆಚಾರ್ಯ ಚಾಣಕ್ಯ.
ಸಂಬಂಧದಲ್ಲಿ ಪತಿ ಪತ್ನಿ ಇಬ್ಬರೂ ಜೋಡೆತ್ತಿನ ಹಾಗೆ ಸಾಗಿದಾಗ ಮಾತ್ರ ಸಂಸಾರದ ಬಂಡಿ ಸರಿಯಾಗಿ ಮುನ್ನಡೆಯುತ್ತದೆ. ಒಬ್ಬರು ಏರಿಗೆಳೆದು, ಮತ್ತೊಬ್ಬರು ನೀರಿಗೆಳೆದರೆ ಅಲ್ಲಿ ಸುಖ, ಸಂತೋಷ ಸಾಧ್ಯವಿಲ್ಲ. ಪತಿ ಅತೃಪ್ತರಾಗಿದ್ದರೆ, ತೊಂದರೆ ಏನು ಎಂದು ತಿಳಿದುಕೊಳ್ಳುವ ಹಕ್ಕು ಹೆಂಡತಿಗೆ ಇದೆ. ಹಾಗೆಯೇ ಪತ್ನಿ ಅತೃಪ್ತಳಾಗದಂತೆ ನೋಡಿಕೊಳ್ಳುವ ಕರ್ತವ್ಯ ಕೂಡಾ ಪತಿಯದು. ಹೆಂಡತಿಯ ನೋವು ಗಂಡನಿಗೆ ಅರ್ಥವಾಗಬೇಕು, ಗಂಡನ ನೋವು ಹೆಂಡತಿಗೂ ಅರ್ಥವಾಗಬೇಕು. ಆಗಲೇ ಅದು ಸುಖೀ ಸಂಸಾರ ಎನ್ನುತ್ತಾರೆ ಆಚಾರ್ಯ ಚಾಣಕ್ಯ.
ತನ್ನ ಕಾಲದ ಪ್ರಸಿದ್ಧ ಅರ್ಥಶಾಸ್ತ್ರಜ್ಞರಾಗಿ ಸಾಮಾನ್ಯ ಹುಡುಗ ಚಂದ್ರಗುಪ್ತನನ್ನು ಪ್ರಸಿದ್ಧ ಮೌರ್ಯ ಚಕ್ರವರ್ತಿಯಾಗಿ ಪರಿವರ್ತಿಸಿದ ಕೀರ್ತಿ ಚಾಣಕ್ಯರದು. ತಮ್ಮ ಸಮಯದ ಪರೀಕ್ಷಿತ ಮತ್ತು ಪ್ರಬುದ್ಧ ತಂತ್ರಗಳ ಬಳಕೆಯಿಂದ, ಅವರು ಜೀವನವನ್ನು ಸರಳವಾಗಿಯೂ, ಸುಗಮವಾಗಿಯೂ ನಡೆಸಲು ಏನು ಮಾಡಬೇಕೆಂದು ಎಲ್ಲ ಕ್ಷೇತ್ರಗಳಲ್ಲಿಯೂ ಸಲಹೆ ಸೂಚನೆಯನ್ನು ತಮ್ಮ ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ. ಅಮೂಲ್ಯವಾದ ಮಾನವ ಜೀವನವನ್ನು ಅರ್ಥಪೂರ್ಣವಾಗಿ ನಡೆಸಬೇಕು ಮತ್ತು ಆದ್ದರಿಂದ ಮಾನವ ಜೀವನದ ಗುಣಮಟ್ಟವನ್ನು ಸುಧಾರಿಸಲು ಈ ಅಂಶಗಳನ್ನು ಅನುಸರಿಸಬೇಕು.
ಚಾಣಕ್ಯರ ಒಂದು ನೀತಿಯಲ್ಲಿ ಅವರು ಪತಿ ಪತ್ನಿಯ ಸಂಬಂಧದ ಬಗ್ಗೆ ಮಾತನಾಡುತ್ತಾ, ಗಂಡ ಹೆಂಡತಿಯ ಬಳಿ ಈ ಒಂದು ವಿಷಯ ಕೇಳಿದರೆ ಹೆಂಡತಿ ನಾಚಿಕೆ ಪಡಬಾರದು, ಪತಿಗೆ ನಿರಾಕರಣೆ ಸಲ್ಲದು ಎಂದು ಹೇಳುತ್ತಾರೆ. ಇದು ಯಾವ ವಿಷಯದ ಬಗ್ಗೆ ಎಂದು ವಿವರವಾಗಿ ನೋಡೋಣ. ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಚಾಣಕ್ಯ ಕೆಲವು ವಿಶೇಷ ವಿಷಯಗಳನ್ನು ಹೇಳಿದ್ದಾರೆ.
Shukra Gochar 2023: ಹೋಳಿ ಬಳಿಕ ಶುರುವಾಗುತ್ತೆ 5 ರಾಶಿಗಳಿಗೆ ಶುಕ್ರ ದೆಸೆ
ಆಚಾರ್ಯ ಚಾಣಕ್ಯ ಹೇಳುತ್ತಾರೆ, ಪತಿ-ಪತ್ನಿಯರ ನಡುವೆ ಪ್ರೀತಿ ಇಲ್ಲದಿದ್ದರೆ ಆ ಕುಟುಂಬವು ಒಣಗಿದ ಎಲೆಗಳಂತೆ ವಿಭಜನೆಯಾಗುತ್ತದೆ ಮತ್ತು ಪತಿ-ಪತ್ನಿಯರ ನಡುವೆ ಪ್ರೀತಿ ಇದ್ದರೆ ಆ ಮನೆ ಸ್ವರ್ಗವಾಗುತ್ತದೆ. ಗಂಡ ದುಃಖಿತನಾಗಿದ್ದರೆ, ಹೇಗೆ ಸಮಾಧಾನ ಪಡಿಸಬೇಕು ಎಂಬುದು ಹೆಂಡತಿಗೆ ತಿಳಿದಿರಬೇಕು.
ಗಂಡ ಹೆಂಡತಿ ಪರಸ್ಪರ ಆಸರೆಯಾಗಿರುತ್ತಾರೆ. ಹೇಗೆ ಹೆಂಡತಿಯನ್ನು ರಕ್ಷಿಸುವುದು ಗಂಡನ ಕರ್ತವ್ಯವೋ ಅದೇ ರೀತಿ ಪತಿಗೆ ಬೇಸರವಾದಾಗ ಅವನ ಪ್ರತಿಯೊಂದು ಅಗತ್ಯವನ್ನು ನೋಡಿಕೊಳ್ಳುವುದು ಹೆಂಡತಿಯ ಜವಾಬ್ದಾರಿ ಎಂದು ಚಾಣಕ್ಯ ಹೇಳುತ್ತಾರೆ. ಇದು ಸುಖೀ ದಾಂಪತ್ಯ ಜೀವನಕ್ಕೆ ಸೂತ್ರ.
ಗಂಡನಿಗೆ ಮನೆಯಲ್ಲಿ ಸಂತೋಷ ಸಿಗದಿದ್ದರೆ ಹೊರಗೆ ಆ ಸಂತೋಷವನ್ನು ಹುಡುಕುತ್ತಾನೆ. ಆದರೆ ಅಂತಹ ಪರಿಸ್ಥಿತಿ ನಿಮಗೆ ಎಂದಿಗೂ ಬರಬಾರದು ಎಂದು ನೀವು ಬಯಸಿದರೆ, ನಿಮ್ಮ ಸಂಬಂಧದಲ್ಲಿ ಎಂದಿಗೂ ಬಿರುಕು ಉಂಟಾಗದಂತೆ ನೋಡಿಕೊಳ್ಳಬೇಕು. ಹೆಂಡತಿ ತನ್ನ ಪತಿಗೆ ಪ್ರೀತಿಯನ್ನು ನೀಡಲು ಸ್ವಲ್ಪವೂ ನಾಚಿಕೆ ಪಡಕೂಡದು. ಪತ್ನಿ ಎಂದರೆ ಬೆಳಗ್ಗೆ ತಾಯಿಯಂತೆ ಗಂಡನನ್ನು ಸಂತೈಸಬೇಕು, ದಿನದಲ್ಲಿ ತಂಗಿಯಂತೆ ಪ್ರೀತಿಸಬೇಕು, ರಾತ್ರಿ ವೇಶ್ಯೆಯಂತೆ ಆತನನ್ನು ಸಂತೋಷ ಪಡಿಸಬೇಕು ಎನ್ನುತ್ತಾರೆ ಚಾಣಕ್ಯ.
ಹೌದು, ಪತಿ ನಿಮ್ಮಿಂದ ಪ್ರೀತಿಯನ್ನು ಕೇಳಿದರೆ, ಅದನ್ನು ನೀಡಲು ಎಂದಿಗೂ ನಿರಾಕರಿಸಬೇಡಿ. ಏಕೆಂದರೆ ವೈವಾಹಿಕ ಜೀವನದಲ್ಲಿ, ಗಂಡ ಮತ್ತು ಹೆಂಡತಿ ಪರಸ್ಪರರ ಮೇಲೆ ಅಧಿಕಾರ ಹೊಂದಿರುತ್ತಾರೆ. ಪ್ರಾಮಾಣಿಕ ವ್ಯಕ್ತಿ ತನ್ನ ಜೀವನ ಸಂಗಾತಿಯನ್ನು ಬಿಟ್ಟು ಬೇರೆ ಯಾರಿಂದಲೂ ಪ್ರೀತಿಗಾಗಿ ಹಂಬಲಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಹೆಂಡತಿ ತನ್ನ ಪ್ರೀತಿಯಲ್ಲಿ ಎಂದಿಗೂ ಕೊರತೆ ತೋರಬಾರದು.
Hindu Rituals: ಮಹಿಳೆಯರೇಕೆ ಸ್ಮಶಾನಕ್ಕೆ ಹೋಗಬಾರದು?
ಪತಿ-ಪತ್ನಿಯರ ನಡುವೆ ಪ್ರೀತಿ ಇರುವ ಆ ಮನೆ ಸ್ವರ್ಗವಾಗುತ್ತದೆ ಮತ್ತು ಕ್ರಮೇಣ ಮನೆಯಲ್ಲಿ ಸಂತೋಷ ತುಂಬುತ್ತದೆ. ಅದಕ್ಕಾಗಿಯೇ ಪತಿಯು ಹೆಂಡತಿಯಿಂದ ಪ್ರೀತಿಯನ್ನು ಕೇಳಿದರೆ, ಅವನ ಆಸೆಯನ್ನು ಪೂರೈಸುವುದು ಹೆಂಡತಿಯ ಹಕ್ಕು ಮತ್ತು ಕರ್ತವ್ಯ. ಇದರ ನಂತರ ನಿಮ್ಮ ಮನೆಯಲ್ಲಿ ಬಹಳಷ್ಟು ಸಂತೋಷ ತುಂಬುವುದನ್ನು ನೀವು ನೋಡುತ್ತೀರಿ. ಜೊತೆಗೆ, ನಿಮ್ಮಿಬ್ಬರ ನಡುವೆ ಹೆಚ್ಚು ಪ್ರೀತಿ ಬೆಳೆಯುತ್ತಲೇ ಇರುತ್ತದೆ.
ಪತಿ-ಪತ್ನಿಯರು ಪರಸ್ಪರ ಪ್ರೀತಿ, ತ್ಯಾಗ ಮತ್ತು ಸಮರ್ಪಣಾ ಭಾವದಿಂದ ಒಬ್ಬರಿಗೊಬ್ಬರು ಬದುಕಲು ಎಂದಿಗೂ ನಾಚಿಕೆಪಡಬಾರದು ಎಂದು ಚಾಣಕ್ಯ ನೀತಿ ಹೇಳುತ್ತದೆ.