Astrology Tips : ದೇವಸ್ಥಾನದಿಂದ ಬಂದ ತಕ್ಷಣ ಸ್ನಾನ ಮಾಡ್ಬೇಡಿ

By Suvarna News  |  First Published Jun 20, 2023, 3:09 PM IST

ಹೊರಗೆ ಹೋಗಿ ಬಂದ್ಮೇಲೆ ಸ್ನಾನ ಮಾಡುವ ಅಭ್ಯಾಸ ಅನೇಕರಿಗಿರುತ್ತದೆ. ಆದ್ರೆ ದೇವಸ್ಥಾನಕ್ಕೆ ಹೋಗಿ ಬಂದಾಗ ನೀವು ಸ್ನಾನ ಮಾಡೋದು ಎಷ್ಟು ಸರಿ?. ಅದ್ರಿಂದ ಆಗುವ ನಷ್ಟವೇನು? ಇಲ್ಲಿದೆ ಉತ್ತರ.
 


ಹಿಂದೂ ಧರ್ಮದಲ್ಲಿ ದೇವರ ಪೂಜೆ, ದೇವಸ್ಥಾನ ಪ್ರವೇಶ, ಪೂಜೆ, ಹೋಮ- ಹವನಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಗಳಿವೆ. ಜ್ಯೋತಿಷ್ಯ, ವಾಸ್ತು ಶಾಸ್ತ್ರ, ವೈಜ್ಞಾನಿಕ ನಿಯಮ ಹಾಗೂ ಕಾರಣಗಳು ಕೂಡ ಬೇರೆ ಬೇರೆ ಇರುತ್ತವೆ. ದೇವಸ್ಥಾನಕ್ಕೆ ಹೋಗ್ಬೇಕು ಎಂದಾಗ ಜನರು ನಿತ್ಯ ಕರ್ಮ ಮುಗಿಸಿ, ಸ್ನಾನ ಮಾಡಿ, ಶುದ್ಧವಾದ ಬಟ್ಟೆ ಧರಿಸಿ ಹೋಗ್ತಾರೆ. ಸ್ನಾನ ಮಾಡದೆ ದೇವಸ್ಥಾನಕ್ಕೆ ಜನರು ಹೋಗೋದಿಲ್ಲ. ದೇವಸ್ಥಾನಕ್ಕೆ ನಾವು ಸ್ನಾನ ಮಾಡಿಯೇ ಹೋಗಲು ಕಾರಣವಿದೆ. ಸ್ನಾನ ಮಾಡಿದಾಗ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗುತ್ತದೆ. ಶುದ್ಧ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿದ್ರೆ ದೇವರ ಕೃಪೆ ನಮ್ಮ ಮೇಲಾಗುತ್ತದೆ.

ನಾವು ರಾತ್ರಿ (Night) ಮಲಗಿದಾಗ ಕೆಲ ನಕಾರಾತ್ಮಕ ಶಕ್ತಿ (Negative Energy) ಗಳ ಪ್ರವೇಶವಾಗಿರುತ್ತದೆ. ನಾವು ಸ್ನಾನ ಮಾಡದೆ ದೇವಸ್ಥಾನ (Temple) ಕ್ಕೆ ಹೋದಾಗ ನಕಾರಾತ್ಮಕ ಶಕ್ತಿ ಜೊತೆ ದೇವಸ್ಥಾನ ಪ್ರವೇಶ ಮಾಡ್ತೇವೆ. ಅದೇ ಸ್ನಾನ ಮಾಡಿದಾಗ, ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮನಸ್ಸು ಜಾಗೃತಗೊಳ್ಳುತ್ತದೆ. ದೇವಸ್ಥಾನಕ್ಕೆ ಹೋದ ನಂತ್ರ ನಾವು ದೇವರ ದರ್ಶನ ಮಾಡಿ, ದೇವರ ಪ್ರಾರ್ಥನೆ, ಧ್ಯಾನವನ್ನು ಮಾಡಿ, ಧನಾತ್ಮಕ ಶಕ್ತಿಯೊಂದಿಗೆ ಮನೆಗೆ ಬರ್ತೇವೆ. ದೇವಸ್ಥಾನದಿಂದ ಮನೆಗೆ ಬಂದ ತಕ್ಷಣ ನಾವು ಸ್ನಾನಕ್ಕೆ ಹೋಗಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದಕ್ಕೆ ಕಾರಣವೇನು ಎಂಬುದನ್ನು ನಾವಿಂದು ಹೇಳ್ತೇವೆ.

Tap to resize

Latest Videos

Personality Test: ಕೈ ಬೆರಳ ಉದ್ದವು ನಿಮ್ಮ ಬಗೆಗೆ ಈ ಗುಟ್ಟುಗಳನ್ನು ಬಿಟ್ಟುಕೊಡುತ್ತದೆ!

ಸ್ನಾನದಿಂದ ಕಡಿಮೆಯಾಗ್ಬಹುದು ಸಕಾರಾತ್ಮಕ ಶಕ್ತಿ : ದೇವಸ್ಥಾನಕ್ಕೆ ಪ್ರವೇಶ ಮಾಡ್ತಿದ್ದಂತೆ ದೇಹದಲ್ಲೊಂದು ಸಂಚಲನವುಂಟಾಗುತ್ತದೆ. ಸಕಾರಾತ್ಮಕ ಶಕ್ತಿ ನಮ್ಮ ದೇಹ ಸೇರುತ್ತದೆ. ನಮ್ಮ ದೇಹ, ಮನಸ್ಸಿಗೆ ಅಂಟಿಕೊಂಡಿದ್ದ ನಕಾರಾತ್ಮಕತೆ ದೂರವಾಗುತ್ತೆ ಎಂದು ನಂಬಲಾಗಿದೆ. ಧನಾತ್ಮಕ ಶಕ್ತಿ ಹೊತ್ತು ಮನೆಗೆ ಬರುವ ನೀವು ತಕ್ಷಣ ಸ್ನಾನ ಮಾಡಿದ್ರೆ ಇದು ಕಡಿಮೆಯಾಗುತ್ತದೆ. ದೇವರ ದರ್ಶನದ ಪುಣ್ಯ ಕೂಡ ನಿಮಗೆ ಸಂಪೂರ್ಣವಾಗಿ ಪ್ರಾಪ್ತಿಯಾಗೋದಿಲ್ಲ.

ದೇವಸ್ಥಾನದ ಭೇಟಿ ಅಶುಭವಲ್ಲ : ದೇವಸ್ಥಾನಕ್ಕೆ ಹೋಗಿ ನೀವು ಪೂಜೆ ಮಾಡಿದಾಗ ದೇವರ ಕೃಪೆಗೆ ಪಾತ್ರರಾಗಿರ್ತೀರಿ. ತಕ್ಷಣ ಸ್ನಾನ ಮಾಡಿದ್ರೆ ಈ ಆಶೀರ್ವಾದ ನಿಮಗೆ ಸರಿಯಾಗಿ ಸಿಗೋದಿಲ್ಲ. ಅಷ್ಟೇ ಅಲ್ಲ, ಸಾಮಾನ್ಯವಾಗಿ ಯಾವುದೇ ಅಶುಭ ಕಾರ್ಯದ ನಂತ್ರ ಸ್ನಾನ ಮಾಡಲಾಗುತ್ತದೆ. ಸಾವಿನ ಮನೆಗೆ ಹೋಗಿ ಬಂದಾಗ ಅಥವಾ ಅಶುಭ ಸ್ಥಳಕ್ಕೆ ಹೋಗಿ ಬಂದಾಗ ಸ್ನಾನ ಮಾಡ್ಬೇಕು. ಅಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಲು ಸ್ನಾನ ಮಾಡಬೇಕು. ಆದ್ರೆ ದೇವಸ್ಥಾನ ಪವಿತ್ರ ಸ್ಥಳವಾಗಿದೆ. ದೇವಸ್ಥಾನಕ್ಕೆ ಹೋಗಿ ಬಂದ ತಕ್ಷಣ ನೀವು ಸ್ನಾನ ಮಾಡಿದ್ರೆ ದೇವರಿಗೆ ಅಪಮಾನ ಮಾಡಿದಂತಾಗುತ್ತದೆ. ನೀವು ನಷ್ಟ ಅನುಭವಿಸಬೇಕಾಗುತ್ತದೆ.

ದುಡ್ಡು ಅಶಾಶ್ವತ, ಯಾವಾಗ ಬೇಕಿದ್ರೂ ದುಡೀಬಹ್ದು ಅನ್ನೋ ರಾಶಿಯವರು ಇವ್ರು!

ದೇವಸ್ಥಾನದಿಂದ ಮನೆಗೆ ಬಂದ ಮೇಲೆ ಏನು ಮಾಡಬೇಕು? : ದೇವಸ್ಥಾನದಿಂದ ಮನೆಗೆ ಮರಳಿದ ನಂತರ ಪಾದಗಳನ್ನು ತೊಳೆದುಕೊಳ್ಳುವುದು ವಾಡಿಕೆ. ಆದ್ರೆ ದೇವಸ್ಥಾನದಿಂದ ಮನೆಗೆ ಬಂದ ತಕ್ಷಣ ನೀವು ಕಾಲುಗಳನ್ನು ತೊಳೆಯಬಾರದು. ಮನೆಯೊಳಗೆ ಕುಳಿತು ಒಂದು ನಿಮಿಷ ಪ್ರಾರ್ಥನೆ ಮಾಡಬೇಕು. ನಂತ್ರ ಮನೆಯ ಎಲ್ಲ ಕೋಣೆಗಳನ್ನು ಪ್ರವೇಶ ಮಾಡ್ಬೇಕು. ದೇವಸ್ಥಾನದ ಶುದ್ಧತೆಯನ್ನು ಮನೆಯ ಎಲ್ಲ ಪ್ರದೇಶಕ್ಕೆ ಹರಡಿದ ನಂತ್ರ ಕಾಲುಗಳನ್ನು ಸ್ವಚ್ಛಗೊಳಿಸಬೇಕು. ಒಂದ್ವೇಳೆ ನಿಮಗೆ ಆರೋಗ್ಯ ಸಮಸ್ಯೆಯಿದ್ದು, ಸ್ನಾನ ಮಾಡುವುದು ಅನಿವಾರ್ಯ ಎನ್ನುವವರು ಕೂಡ ಸ್ವಲ್ಪ ಸಮಯ ಮನೆಯಲ್ಲಿ ಕುಳಿತು, ನಂತ್ರ ಸ್ನಾನ ಮಾಡಬೇಕು.

ದೇವಸ್ಥಾನಕ್ಕೆ ಹೋಗುವ ಮೊದಲು ಏನು ಮಾಡ್ಬೇಕು? : ದೇವಸ್ಥಾನಕ್ಕೆ ನೀವು ಅಶುದ್ಧರಾಗಿ ಹೋಗ್ಬೇಡಿ. ಶೌಚಾಲಯಗಳನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡದೆ ದೇವಸ್ಥಾನಕ್ಕೆ ಹೋಗಬಾರದು. ಸ್ನಾನ ಮಾಡಿ, ಶುದ್ಧವಾದ ಬಟ್ಟೆಯನ್ನು ಧರಿಸಿ ದೇವರ ದರ್ಶನ ಮಾಡಬೇಕು. ಮನಸ್ಸು ಶುದ್ಧವಾಗಿರುವುದು ಕೂಡ ಮುಖ್ಯವಾಗಿರುತ್ತದೆ. ದೇವಸ್ಥಾನ ಪ್ರವೇಶ ಮಾಡ್ತಿದ್ದಂತೆ ಶಾಂತಿಯನ್ನು ಕಾಪಾಡಿಕೊಳ್ಳಬೇಕು. 
 

click me!