Weird Wedding Ritual: ಇಲ್ಲಿ ವಧುವಿಗೆ ಬಿಳಿ ಸೀರೆ ಉಡಿಸಿ ಗಂಡನ ಮನೆಗೆ ಕಳಿಸಲಾಗುತ್ತೆ!

By Suvarna News  |  First Published Jun 20, 2023, 1:37 PM IST

ಈ ಗ್ರಾಮದಲ್ಲಿ ನಡೆವ ಮದುವೆ ಸಮಾರಂಭ ನೋಡಿದರೆ ನೀವು ಮದುವೆ ಕಾರ್ಯಕ್ರಮಕ್ಕೆ ಬಂದಿದ್ದೀರೋ, ದುಃಖದ ಸಮಾರಂಭಕ್ಕೋ ಎಂದು ಗೊಂದಲಕ್ಕೆ ಬೀಳುವುದು ಖಚಿತ. ಏಕೆಂದರೆ ಇಲ್ಲಿ ಮಧುವಣಗಿತ್ತಿಗೆ ವಿಧವೆಯಂತೆ ಬಿಳಿ ಸೀರೆ ಉಡಿಸಲಾಗುತ್ತದೆ. 


ಈ ಗ್ರಾಮದಲ್ಲಿ ನಡೆವ ವಿವಾಹಕ್ಕೆ ನೀವು ಬಂದರೆ, ಅಲ್ಲಿ ನಡೆವುದು ಶುಭ ಸಮಾರಂಭವೋ, ದುಃಖದ ಸಮಾರಂಭವೋ ಎಂದು ಗೊಂದಲಕ್ಕೆ ಬೀಳುವಿರಿ. ಏಕೆಂದರೆ, ಇಲ್ಲಿ ಮಧುಮಗಳು ಹಾಗೂ ಜೊತೆಗಿರುವ ಆಕೆಯ ಕಡೆಯ ಮಹಿಳೆಯರೆಲ್ಲರೂ ಬಿಳಿ ಸೀರೆ ಉಟ್ಟು ನಿಂತಿರುತ್ತಾರೆ!

ಸಾಮಾನ್ಯವಾಗಿ ವಿವಾಹ ಸೇರಿದಂತೆ ಯಾವುದೇ ಶುಭ ಸಮಾರಂಭಕ್ಕೆ ಬಿಳಿ ಸೀರೆಗಳನ್ನು ಯಾರೂ ಧರಿಸುವುದಿಲ್ಲ. ಮದುವೆಯ ದಿನದಂದು ಹೆಚ್ಚಿನ ಸ್ಥಳಗಳಲ್ಲಿ ಬಿಳಿ ಬಟ್ಟೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ವಿವಾಹಕ್ಕೆ ಕೆಂಪು ಬಣ್ಣವನ್ನು ಮದುವೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದರ ಹೊರತಾಗಿ ಹಳದಿ, ನೀಲಿ, ಹಸಿರು ಎಲ್ಲವೂ ಉತ್ತಮವೇ. ಆದರೆ, ಬಿಳಿ ಬಣ್ಣದ ಸೀರೆ ಮಾತ್ರ ಉಡುವಂತಿಲ್ಲ. ಏಕೆಂದರೆ ಭಾರತದಲ್ಲಿ ವಿಧವೆಯರು ಸಾಮಾನ್ಯವಾಗಿ ಬಿಳಿ ಸೀರೆ ಉಡುತ್ತಾರೆ. ಬಿಳಿ ಬಣ್ಣವು ಮದುವೆಯ ಅಂತ್ಯವನ್ನು ಸಂಕೇತಿಸುತ್ತದೆ. ವಿವಾಹಿತ ಮಹಿಳೆಯರು ಬಿಳಿ ಪ್ಲೇನ್ ಸೀರೆ ಉಡುವುದಿಲ್ಲ. ಇದಲ್ಲದೆ, ದುಃಖದ ಸಮಾರಂಭದಲ್ಲಿ ಭಾಗವಹಿಸಲು ಹೋಗುವವರು ಬಿಳಿ ಬಟ್ಟೆ ಹಾಕಿಕೊಳ್ಳುವ ಅಭ್ಯಾಸ ಇದೆ. ಅಂಥದರಲ್ಲಿ ಇಲ್ಲೊಂದು ಹಳ್ಳಿಯಲ್ಲಿ ವಧುವಿಗೆ ಬಿಳಿ ಸೀರೆ ಉಡಿಸಿ ಗಂಡನ ಮನೆಗೆ ಕಳುಹಿಸುವ ಸಂಪ್ರದಾಯ ಆಚರಿಸಲಾಗುತ್ತದೆ. ಏಕೆ ಹೀಗೆ?

Latest Videos

undefined

ಮದುವೆಯ ವಿಚಿತ್ರ ಆಚರಣೆಗಳು(Weird marriage traditions)
ಭಾರತದಲ್ಲಿ ಅನೇಕ ಸಮುದಾಯಗಳ ಜನರು ವಾಸಿಸುತ್ತಿದ್ದಾರೆ. ಈ ಸಮುದಾಯಗಳು ತಮ್ಮದೇ ಆದ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿವೆ. ಪ್ರತಿಯೊಂದು ಧರ್ಮದಲ್ಲಿ ಮದುವೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ, ಅದರ ಪ್ರಕಾರ ಜನರು ಮದುವೆಯಲ್ಲಿ ವಿಭಿನ್ನ ಆಚರಣೆಗಳನ್ನು ಮಾಡುತ್ತಾರೆ. ಆದರೂ ವಿವಾಹದಲ್ಲಿ ಬಿಳಿ ಸೀರೆ ಉಡುವ ಈ ಸಂಪ್ರದಾಯ ಕೊಂಚ ವಿಚಿತ್ರವಾಗಿಯೇ ಇದೆ.  

ಇದೆಂಥಾ ದಾರ್ಷ್ಟ್ಯ? ಕೇದಾರನಾಥನ ಮೇಲೆ ಹಣ ಊದಿದ ಮಹಿಳೆ; ಎಫ್ಐಆರ್ ದಾಖಲು

ಈ ವಿಶಿಷ್ಟ ಗ್ರಾಮ ಎಲ್ಲಿದೆ?
ವಧುವು ಗಂಡನ ಮನೆಗೆ ಬಿಳಿ ಸೀರೆಯಲ್ಲಿ ಹೊರಡುವ ಈ ಪದ್ಧತಿ ಮಧ್ಯಪ್ರದೇಶ(Madhya Pradesh) ರಾಜ್ಯದ ಭೀಮಡೋಂಗ್ರಿ ಗ್ರಾಮದ್ದು. ಇಲ್ಲಿ, ಬೀಳ್ಕೊಡುವ ಸಮಯದಲ್ಲಿ, ವಧು ಬಿಳಿ ಸೀರೆಯನ್ನು ವಿಧವೆಯಂತೆ ಧರಿಸುತ್ತಾರೆ. ವಧುವಿನ ಹೊರತಾಗಿ ಮದುವೆಗೆ ಬಂದಿದ್ದ ಉಳಿದವರೂ ಬಿಳಿ ಬಟ್ಟೆಯಲ್ಲಿ ಭಾಗವಹಿಸುತ್ತಾರೆ.

ಬಿಳಿ ಬಟ್ಟೆಯ ಹಿಂದಿನ ನಂಬಿಕೆ ಏನು?
ವಧುವಿನ ಬಿಳಿ ಸೀರೆಯ (White saree) ಹಿಂದೆ ಒಂದು ವಿಶೇಷ ನಂಬಿಕೆ ಇದೆ. ವಾಸ್ತವವಾಗಿ ಗೊಂಡಿ/ಗೌಡಿ ಬುಡಕಟ್ಟಿನ ಜನರು ಈ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಈ ಧರ್ಮದ ಜನರಿಗೆ ಬಿಳಿ ಬಣ್ಣ ಅತ್ಯಂತ ಪವಿತ್ರದ್ದು. ಇದರಿಂದಾಗಿ ಈ ಜನರು ಮದುವೆಯ ಸಂದರ್ಭದಲ್ಲಿ ಈ ಬಣ್ಣದ ಉಡುಗೆಯನ್ನು ತುಂಬಾ ಮಂಗಳಕರವೆಂದು ಪರಿಗಣಿಸುತ್ತಾರೆ. ಹೊಸ ಬದುಕನ್ನು ಶಾಂತಿಯುತವಾಗಿ ಪ್ರಾರಂಭಿಸುವ ಉದ್ದೇಶ ಬಳಿ ಬಣ್ಣದ್ದು. 

ಗೊಂಡಿ ಧರ್ಮದ ಜನರ ನಂಬಿಕೆಗಳು (Special beliefs and traditions)
ಗೊಂಡಿ ಜನಾಂಗದವರು ಬಹಳ ಹಿಂದಿನಿಂದಲೂ ಭಾರತದಲ್ಲಿ ಅನೇಕ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ.  ಇಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಲ್ಲದೆ, ಇತರ ಸಮುದಾಯಗಳಲ್ಲಿ, ವಧುವಿನ ಮನೆಯಲ್ಲಿ ಸಪ್ತಪದಿಯ ಆಚರಣೆ ನಡೆಯುತ್ತದೆ. ಆದರೆ ಈ ಸಮುದಾಯದಲ್ಲಿ ನಾಲ್ಕು ಸುತ್ತುಗಳನ್ನು ವಧುವಿನ ಮನೆಯಲ್ಲಿ ನಡೆಸಲಾಗುತ್ತದೆ ಮತ್ತು ಉಳಿದ ಮೂರು ಸುತ್ತುಗಳನ್ನು ವರನ ಮನೆಯಲ್ಲಿ ನಡೆಸಲಾಗುತ್ತದೆ. 

ಅಬ್ಬಾ! ಅಂತೂ Guru Chandal Dosh ವಿಸರ್ಜನೆ; 5 ರಾಶಿಗಳಿಗೆ ಜೂ.21ರಿಂದ ಅದೃಷ್ಟದ ದಿನಗಳು..

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!