ಗ್ರಹಣ ಕಾಲದಲ್ಲಿ ಭಾರತದ ಹಿಂದೂ ದೇವಾಲಯಗಳ ಬಾಗಿಲು ಮುಚ್ಚುವುದೇಕೆ? ಇದರ ಹಿಂದಿನ ಕತೆಯೇನು?
ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ತಲಾ 1ರಂತೆ ಒಟ್ಟು 2 ಗ್ರಹಣಗಳು ಸಂಭವಿಸಲಿವೆ. ಇವುಗಳಲ್ಲೊಂದು ಸೂರ್ಯ ಗ್ರಹಣವಾಗಿದ್ದರೆ, ಮತ್ತೊಂದು ಚಂದ್ರಗ್ರಹಣವಾಗಿದೆ. ಗ್ರಹಣ ಕಾಲಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದೆ.
2022ರ ಕೊನೆಯ ಸೂರ್ಯಗ್ರಹಣ(Solar Eclipse)ವು ಅಕ್ಟೋಬರ್ 25ರಂದು ಸಂಭವಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿದೆ.
ಚಂದ್ರನು ಭೂಮಿ ಮತ್ತು ಸೂರ್ಯರ ನಡುವೆ ಬಂದು ಸೂರ್ಯನನ್ನು ಆವರಿಸಿದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸಮಯದಲ್ಲಿ ಚಂದ್ರನು ಸೂರ್ಯನ ಒಂದು ಭಾಗವನ್ನು ಮಾತ್ರ ಆವರಿಸಿದಾಗ ಭಾಗಶಃ ಸೂರ್ಯಗ್ರಹಣ(Partial Solar Eclipse) ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ತಲುಪುವುದಿಲ್ಲ.
ಇನ್ನು ಈ ವರ್ಷದ ಕಡೆಯ ಗ್ರಹಣ ಚಂದ್ರಗ್ರಹಣವಾಗಿದ್ದು ಇದು ನವೆಂಬರ್ 8ರಂದು ಸಂಭವಿಸುತ್ತಿದೆ. ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇದು ಅಪರೂಪದ ಘಟನೆ ಮತ್ತು ಅತ್ಯಂತ ಅದ್ಭುತವಾದ ದೃಶ್ಯವಾಗಿದೆ. ಆದರೂ ಗ್ರಹಣ ಕಾಲದಲ್ಲಿ ಹೊರಗಡೆ ಅಡ್ಡಾಡುವುದನ್ನು, ಆಹಾರ ಸೇವಿಸುವುದನ್ನು, ಕಡೇ ಪಕ್ಷ ನೀರು ಕುಡಿಯುವುದನ್ನು ಕೂಡಾ ನಿಷೇಧಿಸಲಾಗಿದೆ. ಇದಕ್ಕೆ ವೈಜ್ಞಾನಿಕ ಹಿನ್ನೆಲೆಯ ಕಾರಣಗಳಿವೆ. ಅಂತೆಯೇ, ಗ್ರಹಣ ಕಾಲದಲ್ಲಿ ಹಿಂದೂ ದೇವಾಲಯಗಳ ಬಾಗಿಲನ್ನು ಮುಚ್ಚಲಾಗುತ್ತದೆ. ಅದಕ್ಕೇನು ಕಾರಣ ನೋಡೋಣ..
ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆಯ ಮಹೋತ್ಸವಕ್ಕೆ ಕ್ಷಣಗಣನೆ
ದೇವಾಲಯಗಳ ಪಾವಿತ್ರ್ಯತೆ
ದೇವಾಲಯವು ಶುದ್ಧ ಅರಿವಿನ ಆಳವಾದ ವ್ಯಕ್ತಿನಿಷ್ಠ ಶಾಂತಿಯನ್ನು ಅನುಭವಿಸುವ ಸ್ಥಳವಾಗಿದೆ. ಆಳವಾದ ಅವಲೋಕನದ ಮೂಲಕ ಜೀವನದ ದೈವಿಕ ಅಂಶವನ್ನು ಮೆಚ್ಚಬಹುದಾದ ಸ್ಥಳವಾಗಿದೆ. ಆಧ್ಯಾತ್ಮಿಕ ಚಿಕಿತ್ಸಾ ಸ್ಥಳಗಳ ಜ್ಯಾಮಿತಿಯನ್ನು ಯಂತ್ರವಾಗಿ ಬಳಸಲಾಗುತ್ತದೆ, ಇದು ಶಕ್ತಿಯ ಹರಿವನ್ನು ಸೃಷ್ಟಿಸುತ್ತದೆ. ಭಕ್ತರು ದೇವಾಲಯದ ಒಳಗಿರುವಾಗ ತಮ್ಮಲ್ಲಿರುವ ದೈವತ್ವವನ್ನು ಅನುಭವಿಸಲು ಸಾಧ್ಯವಾಗುವುದು ಈ ಶಕ್ತಿಯ ಹರಿವಿನಿಂದ. ದೇವಾಲಯದ ಒಳಗೆ ವಿಗ್ರಹಗಳನ್ನು ಎಲ್ಲ ಆಚರಣೆಗಳನ್ನು ಮಾಡುವ ಮೂಲಕ ಇರಿಸಲಾಗಿದೆ ಮತ್ತು ಅವು ನಿರಂತರವಾಗಿ ಸಕಾರಾತ್ಮಕ ಶಕ್ತಿಯನ್ನು ಹೊರ ಹೊಮ್ಮಿಸುತ್ತವೆ.
ಗ್ರಹಣದ ಸಮಯದಲ್ಲಿ ದೇವಾಲಯಗಳನ್ನು ಏಕೆ ಮುಚ್ಚಲಾಗುತ್ತದೆ?
ಗ್ರಹಣ ಕಾಲದಲ್ಲಿ, ಗರ್ಭಗುಡಿಯಲ್ಲಿರುವ ದೇವರ ವಿಗ್ರಹದ ಸುತ್ತಲಿನ ಸೆಳವು ಸ್ವಲ್ಪಮಟ್ಟಿಗೆ ತೊಂದರೆಗೊಳಗಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಗ್ರಹಣ ಕಾಲದಲ್ಲಿ ಸೂರ್ಯ ಮತ್ತು ಚಂದ್ರ ಅಸಹಜ ನಕಾರಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಅದು ದೇವರಿಂದ ಹೊರ ಹೊಮ್ಮುವ ಸಕಾರಾತ್ಮಕ ಶಕ್ತಿ(negative energy)ಗೆ ಅಡಚಣೆ ತರದಿರಲಿ ಎಂಬ ಕಾರಣಕ್ಕೆ ದೇವಾಲಯದಲ್ಲಿ ವಿಗ್ರಹಗಳ ಮೇಲೆ ತುಳಸಿ ಎಲೆಗಳನ್ನಿಟ್ಟು ಬಾಗಿಲನ್ನು ಗ್ರಹಣ ಕಾಲದಲ್ಲಿ ಮುಚ್ಚಲಾಗುತ್ತದೆ. ಗ್ರಹಣ ಮುಗಿದ ಬಳಿಕ ದೇವಾಲಯದಲ್ಲಿ ಶುದ್ಧಿ ಕಾರ್ಯ ನಡೆಸಲಾಗುತ್ತದೆ.
2022ರಲ್ಲಿ ಈ ಎರಡು ದಿನ ಬಾಗಿಲು ಮುಚ್ಚಿರುತ್ತೆ ತಿರುಪತಿ ದೇವಸ್ಥಾನ!
ಇದೊಂದು ದೇವಾಲಯದ ಬಾಗಿಲು ಮುಚ್ಚುವುದಿಲ್ಲ!
ದಕ್ಷಿಣ ಭಾರತದ ಕೈಲಾಸ ಎಂದೇ ಖ್ಯಾತಿ ಪಡೆದಿರುವ ಶ್ರೀ ಕಾಳಹಸ್ತಿಯಲ್ಲಿರುವ ಕಾಳಹಸ್ತೀಶ್ವರ ದೇವಸ್ಥಾನವನ್ನು ಹೊರತುಪಡಿಸಿ ಎಲ್ಲಾ ಪವಿತ್ರ ಸ್ಥಳಗಳನ್ನು ಗ್ರಹಣದ ಸಮಯದಲ್ಲಿ ಮುಚ್ಚಲಾಗುತ್ತದೆ. ರಾಹು ಮತ್ತು ಕೇತುಗಳಿಗೆ ಪೂಜೆ ಮತ್ತು ಪ್ರಾರ್ಥನೆಗಳನ್ನು ನೀಡುವ ಭಾರತದ ಏಕೈಕ ದೇವಾಲಯ ಇದಾಗಿದೆ. ಪಾರಂಪರಿಕ ನಂಬಿಕೆಯಂತೆ ರಾಹು ಕೇತುಗಳೇ ಗ್ರಹಣಕ್ಕೆ ಕಾರಣ. ಹಾಗಾಗಿ ಗ್ರಹಣದ ಪ್ರಭಾವ ಈ ದೇವಾಲಯದ ಮೇಲೆ ಇರುವುದಿಲ್ಲ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.