
ಪ್ರಾಚೀನ ಹಿಂದೂ ಪುರಾಣಗಳಲ್ಲೆಲ್ಲಾ ಮಹಾವಿಷ್ಣು ಆಯುಧವಾಗಿ ಹಿಡಿದಿರುವ ಸುದರ್ಶನ ಚಕ್ರದ ಉಲ್ಲೇಖವನ್ನು ನೋಡಬಹುದು. ಭೂಮಿಯಲ್ಲಿ ಇದುವರೆಗೆ ಬಳಸಿದ ಅತ್ಯಂತ ಶಕ್ತಿಶಾಲಿ ಆಯುಧಗಳಲ್ಲಿ ಸುದರ್ಶನ ಚಕ್ರ ಒಂದು ಎಂದು ಪರಿಗಣಿಸಲಾಗುತ್ತದೆ. ಸುದರ್ಶನ ಚಕ್ರಕ್ಕೆ ಪ್ರತಿಸ್ಪರ್ಧಿಯಾದ ಬೇರೆ ಯಾವುದೇ ಆಯುಧವಿದ್ದರೆ, ಅದು ಶಿವನ ತ್ರಿಶೂಲ ಮಾತ್ರ. ಇದು ಶತ್ರುಗಳನ್ನು ನಾಶಮಾಡುವ ಅಂತಿಮ ಅಸ್ತ್ರ. ರಾಕ್ಷಸರು ಮತ್ತು ವಿಕೃತರನ್ನು ಇದು ನಾಶ ಮಾಡುತ್ತದೆ. ದ್ವಾಪರ ಯುಗದಲ್ಲಿ ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನು ಅಗ್ನಿ ದೇವರಿಂದ ಸುದರ್ಶನ ಚಕ್ರವನ್ನು ಪಡೆದ. ಸುದರ್ಶನದ ಬಗ್ಗೆ ವೈಶಿಷ್ಟ್ಯಗಳು, ಅದ್ಭುತ ಲಕ್ಷಣಗಳು ಹಲವು. ಅವುಗಳಲ್ಲಿ ಒಂದು, ಅದು ಸದಾ ತಿರುಗುತ್ತಲೇ ಇರುವುದು. ಅದ್ಯಾಕೆ?
ಚಕ್ರವು ತನ್ನ ನಿರಂತರ ತಿರುಗುವಿಕೆಯ ಮೂಲಕ ಕಾಲ ಚಕ್ರದ ನಿರಂತರ ಉರುಳುವಿಕೆಯನ್ನು ಪ್ರತಿನಿಧಿಸುತ್ತದೆ. ನಮ್ಮ ಸುತ್ತಲಿನ ಪ್ರಪಂಚ - ಅದರ ಋತುಗಳು, ಅದರ ಲಯ, ಅದರ ಅಂಚುಗಳು- ನಿರಂತರ ಚಲನೆಯಲ್ಲಿರುತ್ತದೆ. ನಮಗೆ ಮುಂದಿನ ಹಾದಿ ಅರ್ಥವಾಗದಿದ್ದರೂ, ಎಲ್ಲವೂ ನಿಯಂತ್ರಣ ತಪ್ಪಿದಂತೆ ತೋರುತ್ತಿದ್ದರೂ ಸಹ, ಸುದರ್ಶನ ಚಕ್ರವು ಎಲ್ಲವೂ ದೊಡ್ಡ ಬ್ರಹ್ಮಾಂಡದ ಭಾಗ ಎಂದು ನಮಗೆ ತೋರಿಸುತ್ತದೆ. ಸುದರ್ಶನ ಚಕ್ರದ ಅತ್ಯಂತ ಮುಖ್ಯವಾದ ಅಂಶವೆಂದರೆ ಅದು ಎಂದಿಗೂ ತಿರುಗುವುದನ್ನು ನಿಲ್ಲಿಸುವುದಿಲ್ಲ. ಅದೇ ಮುಖ್ಯ ವಿಷಯ. ಯಾಕೆಂದರೆ ಸಮಯ ನಿಲ್ಲುವುದಿಲ್ಲ. ಬದಲಾವಣೆ ಅನಿವಾರ್ಯ, ಅದು ಉದ್ದೇಶಪೂರ್ವಕವೂ ಆಗಿದೆ. ಬ್ರಹ್ಮಾಂಡ ಕೆಲವೊಮ್ಮೆ ಅಸ್ತವ್ಯಸ್ತವಾಗಿ ಕಾಣಿಸಬಹುದು, ಆದರೆ ಅದು ಒಂದು ಲಯವನ್ನು ಹೊಂದಿದೆ. ಸಮಯ ಮತ್ತು ಅಸ್ತಿತ್ವದ ಚಕ್ರವನ್ನು ನಿಯಂತ್ರಿಸಬಾರದು. ಅದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸ್ವೀಕರಿಸಬೇಕು.
ಸುದರ್ಶನ ಚಕ್ರವನ್ನು ಈ ಜಗತ್ತಿನಲ್ಲಿ ಬಳಸಿದ ಅತ್ಯಂತ ಶಕ್ತಿಶಾಲಿ ಅಸ್ತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ದೈವಿಕ ಚಕ್ರವು 108 ಅಂಚುಗಳನ್ನು ಹೊಂದಿದೆ ಮತ್ತು ನಂಬಲಾಗದ ವೇಗದಲ್ಲಿ ತಿರುಗುತ್ತದೆ. ನಾವು ಒಮ್ಮೆ ಕಣ್ಣು ಮಿಟುಕಿಸುವ ಹೊತ್ತಿಗೆ ಚಕ್ರವು ಲಕ್ಷಾಂತರ ಯೋಜನಗಳನ್ನು (1 ಯೋಜನ = 8 ಕಿಲೋಮೀಟರ್) ಪ್ರಯಾಣಿಸುತ್ತದಂತೆ.
ಸುದರ್ಶನ ಚಕ್ರವು ವಿಷ್ಣುವಿನ ಬಲ ತೋರು ಬೆರಳಿನಲ್ಲಿ ಇರುತ್ತದೆ. ಚಕ್ರವು ಸಂಪೂರ್ಣ ವಿಷ್ಣುವಿನ ಇಚ್ಛಾಶಕ್ತಿಯ ಮೂಲಕ ಚಲಿಸುತ್ತದೆ. ಸುದರ್ಶನ ಚಕ್ರವು ಅಪಾರವಾದ ಆಧ್ಯಾತ್ಮಿಕ ಮತ್ತು ಅತೀಂದ್ರಿಯ ಶಕ್ತಿಯನ್ನು ಹೊಂದಿದೆ. ಮತ್ತು ಇದನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಶಿವನ ಸಂಯೋಜಿತ ಶಕ್ತಿಗಳಿಂದ ರಚಿಸಲಾಗಿದೆ. ಅದು ಬೆರಳನ್ನು ಬಿಟ್ಟ ನಂತರ, ಹಿಂತಿರುಗಿ ನೋಡುವುದಿಲ್ಲ. ಚಕ್ರವು ಶತ್ರುಗಳನ್ನು ಬೆನ್ನಟ್ಟುತ್ತದೆ. ಅದು ತನ್ನ ಕಾರ್ಯ ಪೂರ್ಣಗೊಳಿಸದ ಹೊರತು ಒಡೆಯನಲ್ಲಿಗೆ ಹಿಂತಿರುಗಿ ಬರುವುದಿಲ್ಲ. ಸುದರ್ಶನ ಚಕ್ರವು ಒಮ್ಮೆ ಬೆರಳನ್ನು ಬಿಟ್ಟ ನಂತರ ಶತ್ರುಗಳನ್ನು ಪಟ್ಟುಬಿಡದೆ ಬೆನ್ನಟ್ಟುತ್ತಾ ಹೋಗಿ ನಾಶಮಾಡುತ್ತದೆ. ಅದರ ಕೋಪದಿಂದ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ. ಓಡುವುದನ್ನು ನಿಲ್ಲಿಸಿ ಚಕ್ರಕ್ಕೆ ಶರಣಾಗುವುದು ಒಂದೇ ಆಯ್ಕೆ.
ಶಿವ ದೇವಸ್ಥಾನದಲ್ಲಿ ನಂದಿಗೆ ಕೈ ಮುಗಿಯದೇ ಹೆಜ್ಜೆ ಮುಂದಿಡಬೇಡಿ!
ದೇವತೆಗಳಿಗೆ ರಾಕ್ಷಸರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ದೇವತೆಗಳು ಸಹಾಯಕ್ಕಾಗಿ ವಿಷ್ಣುವನ್ನು ಸಂಪರ್ಕಿಸಿದರು. ಅಸುರರನ್ನು ಸೋಲಿಸಲು ಅವನಿಗೆ ಸಂಪೂರ್ಣ ಶಕ್ತಿ ಇದೆ ಎಂದು ಖಚಿತವಾಗಿರದ ಕಾರಣ ಅವನು ಶಿವನನ್ನು ಸಂಪರ್ಕಿಸಿದನು. ಸಾವಿರಾರು ವರ್ಷ ಶಿವನನ್ನು ಪ್ರಾರ್ಥಿಸಿದನು. ಅಂತಿಮವಾಗಿ ವಿಷ್ಣುವಿನ ಭಕ್ತಿಯಿಂದ ಸಂತಸಗೊಂಡ ಶಿವನು ಅಸುರರನ್ನು ಸೋಲಿಸುವ ವರವನ್ನು ಕೊಟ್ಟ ಮತ್ತು ಅವನಿಗೆ ಸುದರ್ಶನ ಚಕ್ರವನ್ನು ಅರ್ಪಿಸಿದ. ವಿಷ್ಣು ತನ್ನ ಎಲ್ಲಾ ಅವತಾರಗಳಲ್ಲಿ ಸುದರ್ಶನ ಚಕ್ರವನ್ನು ಒಂದಲ್ಲ ಒಂದು ಸ್ವರೂಪದಲ್ಲಿ ಧರಿಸಿರುತ್ತಾನೆ.
ಸುದರ್ಶನ ಚಕ್ರವು ಶಕ್ತಿಯ ಸಂಕೇತ. ದುಃಖಕ್ಕೆ ಕಾರಣವಾಗುವ ಯಾವುದೇ ನಕಾರಾತ್ಮಕ ಅಥವಾ ದುಷ್ಟ ಶಕ್ತಿಗಳನ್ನು ನಾಶಮಾಡುತ್ತದೆ. ಅದು ಪಾಪನಾಶನ. ಸುದರ್ಶನ ಎಂದರೆ ಬೇರೆ ಯಾರೂ ಅಲ್ಲ, ಸ್ವತಃ ಭಗವಾನ್ ವಿಷ್ಣುವೇ. ಆತನೇ ಪ್ರಬಲ ಮತ್ತು ಅವಿನಾಶಿಯಾದ ಸುದರ್ಶನ ಚಕ್ರವನ್ನು ಚಲಾಯಿಸುವುದರಿಂದ ಅವನನ್ನೇ ಸುದರ್ಶನ ಎಂದೂ ಕರೆಯಲಾಗುತ್ತದೆ. ವಿಷ್ಣುವು ನಿರಂತರವಾದ ಕಾಲದ ಸ್ಥಿತಿಕರ್ತನೂ ಆಗಿರುವುದರಿಂದ ಚಕ್ರ ತಿರುಗುತ್ತಲೇ ಇರುತ್ತದೆ.
ಶಿವನಿಗೆ ಈ 5 ರಾಶಿ ಮೇಲೆ ತುಂಬಾ ಪ್ರೀತಿ, ಸಂಪತ್ತು, ಅದೃಷ್ಟ ಹುಡುಕಿಕೊಂಡು ಬರುತ್ತೆ