
ದ್ರೌಪದಿ ಮಹಾಭಾರತದ ಅತ್ಯಂತ ಶಕ್ತಿಶಾಲಿ ಮಹಿಳಾ ಪಾತ್ರಗಳಲ್ಲಿ ಒಬ್ಬಳು.ಈಕೆ ಐವರು ಪಾಂಡವರ ಪತ್ನಿ. ಇವರಿಗೆ ಒಟ್ಟಾಗಿ ಐದು ಗಂಡು ಮಕ್ಕಳಿದ್ದರು. ಒಬ್ಬೊಬ್ಬ ಪಾಂಡವನಿಂದ ಒಬ್ಬೊಬ್ಬ ಮಗ. ಇವರನ್ನು ಉಪಪಾಂಡವರು ಎಂದೇ ಕರೆಯುತ್ತಿದ್ದರು. ಆದರೆ, ದ್ರೌಪದಿಗೆ ಒಬ್ಬಳು ಮಗಳಿದ್ದಳು ಎಂಬುದು ಹಲವರಿಗೆ ತಿಳಿದಿಲ್ಲ.
ದ್ರೌಪದಿ ಮತ್ತು ಶ್ರೀ ಕೃಷ್ಣನ ನಡುವಿನ ಬಾಂಧವ್ಯವನ್ನು ಸಾಹೋದರ್ಯದ, ಆಳವಾದ ಸ್ನೇಹ ಮತ್ತು ದೈವಿಕ ಮಾರ್ಗದರ್ಶನದ ಬಾಂಧವ್ಯವೆಂದು ಚಿತ್ರಿಸಲಾಗುತ್ತದೆ. ದ್ರೌಪದಿಯ ಸೀರೆಯನ್ನು ಸಭೆಯಲ್ಲಿ ದುಶ್ಯಾಸನ ಸೆಳೆದಾಗ ಅದನ್ನು ಅಕ್ಷಯಗೊಳಿಸಿ ರಕ್ಷಿಸಿದವನು ಶ್ರೀಕೃಷ್ಣನೇ. ಜಾನಪದದ ಕತೆಯ ಪ್ರಕಾರ, ದ್ರೌಪದಿ ಮತ್ತು ಯುಧಿಷ್ಠಿರರಿಗೆ ಒಬ್ಬ ಮಗಳಿದ್ದಳು. ಆಕೆಯ ಮದುವೆಯು ಶ್ರೀಕೃಷ್ಣನೊಂದಿಗಿನ ಪಾಂಡವರ ಸಂಬಂಧದಲ್ಲಿ ಒಂದು ಮಹತ್ವದ ತಿರುವು ನೀಡಿತು.
ಪಾಂಚಾಲ ರಾಜ ದ್ರುಪದನ ಮಗಳು ಮತ್ತು ಧೃಷ್ಟದ್ಯುಮ್ನನ ಅವಳಿ ಸಹೋದರಿಯಾದ ದ್ರೌಪದಿ, ಐದು ಪಾಂಡವರ ಪತ್ನಿಯಾದಳು. ಅವಳು ಪ್ರತಿಯೊಬ್ಬ ಪಾಂಡವರಿಗೂ ಒಬ್ಬ ಮಗನನ್ನು ಹೆತ್ತಳು. : ಯುಧಿಷ್ಠಿರನಿಂದ ಪ್ರತಿವಿಂಧ್ಯಾ, ಭೀಮನಿಂದ ಸುತಸೋಮ, ಅರ್ಜುನನಿಂದ ಶ್ರುತಕೀರ್ತಿ, ನಕುಲನಿಂದ ಶತಾನಿಕ ಮತ್ತು ಸಹದೇವನಿಂದ ಶ್ರುತಕರ್ಮ.
ಇದು ಗೊತ್ತಾಗಲು ಕಾರಣವಿಷ್ಟೆ- ದ್ರೌಪದಿ ಪ್ರತೀ ಪಾಂಡವನೊಂದಿಗೂ ಒಂದು ವರ್ಷ ಇರಬೇಕು ಎಂದು ನಿಯಮವನ್ನು ದೇವರ್ಷಿ ನಾರದರು ಮಾಡಿದ್ದರು. ಅದನ್ನು ಮೀರುವಂತಿರಲಿಲ್ಲ. ಆಕೆ ಒಬ್ಬ ಪಾಂಡವನ ಜೊತೆ ಇದ್ದಾಗ ಅವರ ಏಕಾಂತವನ್ನು ಉಲ್ಲಂಘಿಸಿ ಮತ್ತೊಬ್ಬ ಅಲ್ಲಿಗೆ ಬರುವಂತಿರಲಿಲ್ಲ. ಹೀಗೆ ಒಂದು ವರ್ಷವಿಡೀ ಒಬ್ಬನ ಜೊತೆಗಿದ್ದು ದ್ರೌಪದಿ ಒಬ್ಬ ಮಗನನ್ನು ಅವನಿಗೆ ಹೆತ್ತುಕೊಡುತ್ತಿದ್ದಳು ಎಂದು ಭಾವಿಸಬಹುದು. ಹೀಗಾಗಿ ಯಾರ ಮಗ ಯಾರು ಎಂದು ಪತ್ತೆ ಹಚ್ಚುವುದು ಸುಲಭವಾಯಿತು.
ಐದು ಪಾಂಡವರಿಗೆ ದ್ರೌಪದಿಯಲ್ಲದೆ ಬೇರೆ ಹೆಂಡತಿಯರಿದ್ದರು. ಯುಧಿಷ್ಠಿರನು ಶೈಬ್ಯ ರಾಜ ಗೋವಾಸನ ಮಗಳು ದೇವಿಕಾಳನ್ನು ಮದುವೆಯಾದನು ಮತ್ತು ಯೌಧೇಯ ಎಂಬ ಮಗನನ್ನು ಪಡೆದನು. ಭೀಮನಿಗೆ ಇನ್ನಿಬ್ಬರು ಪತ್ನಿಯರಿದ್ದರು: ರಾಕ್ಷಸ ಬುಡಕಟ್ಟಿನ ಹಿಡಿಂಬಿ ಮತ್ತು ಕಾಶಿಯ ರಾಜಕುಮಾರಿ ವಲಂಧರ. ಅವನಿಗೆ ಹಿಡಿಂಬಿಯಿಂದ ಘಟೋತ್ಕಚ ಮತ್ತು ವಲಂಧರನಿಂದ ಸರ್ವಾಗ ಎಂಬ ಪುತ್ರರಿದ್ದರು.
ನಾಗಾ ರಾಜಕುಮಾರಿಯಾದ ಉಲೂಪಿಯನ್ನು ಮದುವೆಯಾಗುವ ಮೂಲಕ ಅರ್ಜುನ ಕುರು ವಂಶವನ್ನು ಮತ್ತಷ್ಟು ವಿಸ್ತರಿಸಿದನು. ಜೊತೆಗೆ ಮಣಿಪುರದ ರಾಜಕುಮಾರಿ ಚಿತ್ರಾಂಗದಾ ಮತ್ತು ಶ್ರೀ ಕೃಷ್ಣನ ಸಹೋದರಿ ಸುಭದ್ರ ಕೂಡ ಇವನ ಪತ್ನಿಯರು. ಈ ಮದುವೆಗಳಿಂದ ಅರ್ಜುನನಿಗೆ ಮೂರು ಗಂಡು ಮಕ್ಕಳಿದ್ದರು: ಕ್ರಮವಾಗಿ ಐರಾವಣ, ಬಬ್ರುವಾಹನ ಮತ್ತು ಅಭಿಮನ್ಯು.
ನಕುಲನು ಚೇದಿಯ ಕರೇನ್ಮತಿಯನ್ನು ವಿವಾಹವಾದನು ಮತ್ತು ಅವನಿಗೆ ನಿರಾಮಿತ್ರ ಎಂಬ ಮಗನಿದ್ದನು. ಸಹದೇವನು ಮದ್ರದೇಶದ ವಿಜಯಳನ್ನು ವಿವಾಹವಾದನು, ಅವನಿಗೆ ಸುಹೋತ್ರ ಎಂಬ ಮಗನಿದ್ದನು. ದುರಂತದ ವಿಪರ್ಯಾಸವೆಂದರೆ ಈ ಎಲ್ಲಾ ಪುತ್ರರು ಮಹಾಭಾರತ ಯುದ್ಧದಲ್ಲಿ ಯಾವುದೇ ಉತ್ತರಾಧಿಕಾರಿಗಳಿಲ್ಲದೆ ನಿಧನರಾದರು. ಅಭಿಮನ್ಯು ಹೊರತುಪಡಿಸಿ. ಅಭಿಮನ್ಯುವು ಮತ್ಸ್ಯದೇಶದ ರಾಜ ವಿರಾಟ ಮತ್ತು ಸುದೇಷ್ಣೆಯ ಮಗಳು ಉತ್ತರೆಯನ್ನು ವಿವಾಹವಾದ. ಅವರಿಗೆ ಪರೀಕ್ಷಿತ ಎಂಬ ಮಗನಾದ. ಈವನೇ ಕುರು ವಂಶಾವಳಿಯನ್ನು ಮುಂದುವರೆಸಿದ.
Mahabharata Story: ಹೆಣ್ಣೂ ಗಂಡೂ ಎರಡೂ ಆಗಿದ್ದ ರಾಜನಿಂದಲೇ ಮಹಾಭಾರತ ಶುರುವಾಯ್ತು!
ಜಾನಪದ ಕಥೆಗಳ ಪ್ರಕಾರ, ದ್ರೌಪದಿ ಮತ್ತು ಯುಧಿಷ್ಠಿರರಿಗೆ ಸುತನು ಎಂಬ ಮಗಳಿದ್ದಳು. ಯುದ್ಧದ ನಂತರ ಸುತನು ಶ್ರೀ ಕೃಷ್ಣ ಮತ್ತು ಸತ್ಯಭಾಮೆಯ ಮಗನಾದ ಭಾನುವನ್ನು ಮದುವೆಯಾದಳು. ಈ ಸಂಬಂಧವು ಶ್ರೀ ಕೃಷ್ಣನನ್ನು ದ್ರೌಪದಿ ಮತ್ತು ಯುಧಿಷ್ಠಿರನ ಮಗಳ ಮಾವನನ್ನಾಗಿ ಮಾಡಿತು. ಮಹರ್ಷಿ ವೇದವ್ಯಾಸರ ಮಹಾಭಾರತವು ದ್ರೌಪದಿಯ ಮಗಳ ಬಗ್ಗೆ ಉಲ್ಲೇಖಿಸುವುದಿಲ್ಲ. ಅದು ದುರ್ಯೋಧನನ ಮಗ ಲಕ್ಷ್ಮಣನನ್ನು ಮಾತ್ರ ಉಲ್ಲೇಖಿಸುತ್ತದೆ. ಶ್ರೀಮದ್ ಭಾಗವತ ಪುರಾಣವು ದುರ್ಯೋಧನನ ಮಗಳು ಲಕ್ಷ್ಮಣಳನ್ನು ಉಲ್ಲೇಖಿಸುತ್ತದೆ. ಅವಳು ಶ್ರೀ ಕೃಷ್ಣನ ಮಗ ಸಾಂಬನನ್ನು ಮದುವೆಯಾದಳು.
ಶಿವ ದೇವಸ್ಥಾನದಲ್ಲಿ ನಂದಿಗೆ ಕೈ ಮುಗಿಯದೇ ಹೆಜ್ಜೆ ಮುಂದಿಡಬೇಡಿ!