ಜನವರಿ ತಿಂಗಳು ಶುರುವಾದ್ರೆ ಹೊಸ ಸಂಭ್ರಮ, ಖುಷಿ. ಹೊಸ ವರ್ಷಕ್ಕೆ ಕಾಲಿಟ್ಟ ಸಡಗರ ಎಲ್ಲರಲ್ಲೂ ಮನೆ ಮಾಡಿರುತ್ತದೆ. ಆತ್ಮೀಯರಿಗೆ ಮಾತ್ರವಲ್ಲ ಅಪರಿಚಿತರನ್ನು ಮಾತನಾಡಿಸುವಾಗ ಕೂಡ ಹೊಸ ವರ್ಷದ ಶುಭ ಕೋರಿ ನಂತ್ರ ಮಾತು ಮುಂದುವರೆಸುತ್ತೇವೆ. ಹೊಸ ವರ್ಷದ ಆರಂಭದ ಇತಿಹಾಸದ ಬಗ್ಗೆ ಅನೇಕರಿಗೆ ತಿಳಿದಿಲ್ಲ.
ವರ್ಷದ ಕೊನೆ ತಿಂಗಳು ಮುಗಿಯುತ್ತಿದ್ದು, ಹೊಸ ವರ್ಷದ (New Year) ಸ್ವಾಗತ (Welcome)ಕ್ಕೆ ಇಡೀ ವಿಶ್ವವೇ ಸಜ್ಜಾಗಿದೆ. ಡಿಸೆಂಬರ್ 2021 ಮುಗಿಯುತ್ತಿದ್ದಂತೆ ಮನೆಗೆ ಹೊಸ ಕ್ಯಾಲೆಂಡರ್ (calendar) ಬರಲಿದೆ. ಹೊಸ ವರ್ಷದ ಮೊದಲ ತಿಂಗಳು ಶುರುವಾಗಲಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಹೊಸ ವರ್ಷ ಜನವರಿ (January) ಮೊದಲ ತಾರೀಕಿನಿಂದ ಪ್ರಾರಂಭವಾಗುತ್ತದೆ. ಎಲ್ಲಾ ದೇಶಗಳ ಸಂಸ್ಕೃತಿ ವಿಭಿನ್ನವಾಗಿದ್ದರೂ, ಆಚಾರ-ವಿಚಾರಗಳು ವಿಭಿನ್ನವಾಗಿದ್ದರೂ, ಎಲ್ಲಾ ದೇಶಗಳು ಒಟ್ಟಾಗಿ ಹೊಸ ವರ್ಷವನ್ನು ಒಂದೇ ದಿನ ಆಚರಿಸುತ್ತವೆ. ಪರಸ್ಪರ ಶುಭಕೋರಿ,ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.
ಹೊಸ ವರ್ಷವನ್ನು ಜನವರಿ 1ರಂದು ಮಾತ್ರ ಏಕೆ ಆಚರಿಸಲಾಗುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಹೊಸ ವರ್ಷವನ್ನು ಆಚರಿಸುವ ಸಂಪ್ರದಾಯ ಯಾವಾಗ ಪ್ರಾರಂಭವಾಯಿತು? ಮತ್ತು ಇತರ ದೇಶಗಳಂತೆ ಭಾರತವೂ ಜನವರಿ 1ರಂದು ಹೊಸ ವರ್ಷವನ್ನು ಯಾವಾಗಿಂದ ಆಚರಿಸಲು ಶುರು ಮಾಡ್ತು? ಹೊಸ ವರ್ಷವನ್ನು ಆಚರಿಸಲು ಕಾರಣವೇನು ಎಂಬುದರ ವಿವರ ಇಲ್ಲಿದೆ.
undefined
ಜನವರಿ ಒಂದು ಹೊಸ ವರ್ಷದ ಮೊದಲ ತಿಂಗಳಾಗಿದ್ದು ಹೇಗೆ?
ಜನವರಿ ಶುರುವಾಗ್ತಿದ್ದಂತೆ ಹೊಸ ವರ್ಷ ಆರಂಭವಾಗಿ ಎನ್ನುತ್ತೇವೆ. ಶತಮಾನಗಳ ಹಿಂದೆ, ಹೊಸ ವರ್ಷ ಜನವರಿ ಒಂದಾಗಿರಲಿಲ್ಲ.ವಿವಿಧ ದೇಶಗಳಲ್ಲಿ ವಿವಿಧ ದಿನಗಳಲ್ಲಿ ಹೊಸ ವರ್ಷವನ್ನು ಆಚರಿಸಲಾಗ್ತಿತ್ತು. ಕೆಲವರು ಮಾರ್ಚ್ 25 ರಂದು ಆಚರಿಸಿದ್ರೆ ಮತ್ತೆ ಕೆಲವರು ಡಿಸೆಂಬರ್ 25 ರಂದು ಆಚರಿಸುತ್ತಿದ್ದರು.ನಂತರ ಜನವರಿ ಒಂದರಂದು ಹೊಸ ವರ್ಷಾರಚಣೆ ಶುರುವಾಯ್ತು. ಮೊದಲ ಬಾರಿ ರೋಮ್ ನಲ್ಲಿ ಇದು ಶುರುವಾಯ್ತು. ಅಲ್ಲಿ ರಾಜ ನುಮಾ ಪೊಂಪಿಲಸ್ ರೋಮನ್ ಕ್ಯಾಲೆಂಡರ್ ಬದಲಾಯಿಸಿದ. ಈ ಕ್ಯಾಲೆಂಡರ್ ಬಂದ ನಂತರ, ಹೊಸ ವರ್ಷವನ್ನು ಜನವರಿ ಮೊದಲ ದಿನದಂದು ಆಚರಿಸಲಾಗ್ತಿದೆ.
ಜನವರಿ ಹೆಸರು ಬಂದಿದ್ದು ಹೀಗೆ
ವರ್ಷದ ಜನವರಿ ತಿಂಗಳನ್ನು ಮೊದಲು ಜಾನಸ್ ಎಂದು ಕರೆಯಲಾಗುತ್ತಿತ್ತು. ರೋಮನ್ ದೇವರ ಹೆಸರು ಜಾನಸ್ (Janus). ಆದ್ರೆ ಕೆಲ ಸಮಯದ ನಂತ್ರ ಜಾನಸ್ ಹೆಸರು ಜನವರಿಯಾಗಿ ಬದಲಾಯ್ತು.
ವರ್ಷದ ತಿಂಗಳು 12ರ ಬದಲು 10
ಶತಮಾನಗಳ ಹಿಂದೆ ಇಜಾದ್ ಕ್ಯಾಲೆಂಡರ್‌ನಲ್ಲಿ ಕೇವಲ 10 ತಿಂಗಳುಗಳಿದ್ದವು. ನಂತ್ರ 12 ತಿಂಗಳಾಯ್ತು. ಜಾನಸ್ ಹೊರತುಪಡಿಸಿ, ಮಂಗಳ ಎಂಬ ಹೆಸರಿನ ತಿಂಗಳಿತ್ತು. ಮಂಗಳವು ಯುದ್ಧದ ದೇವರ ಹೆಸರು. ನಂತರ ಮಂಗಳವನ್ನು ಮಾರ್ಚ್ ಎಂದು ಕರೆಯಲಾಯಿತು.
Vaastu And Aquarium : ಮೀನಿನಿಂದ ಮನೆಗೆ ಸುಖ ಸಮೃದ್ಧಿ..
ಒಂದು ವರ್ಷದಲ್ಲಿತ್ತು ಇಷ್ಟು ದಿನ : ಇಹಿಂದೆ ಡೀ ವರ್ಷದಲ್ಲಿ ಕೇವಲ 310 ದಿನಗಳು ಇದ್ದವು. ರೋಮ್‌ನ ಆಡಳಿತಗಾರ ಜೂಲಿಯಸ್ ಸೀಸರ್ ರೋಮನ್ ಕ್ಯಾಲೆಂಡರ್ ಬದಲಾವಣೆ ಮಾಡಿದಾಗ ತಿಂಗಳು 12 ಆಯ್ತು. ಒಂದು ವರ್ಷವನ್ನು 365 ದಿನಗಳಿಗೆ ನಿಗದಿಪಡಿಸಲಾಯಿತು. ಭೂಮಿಯು ಸೂರ್ಯನ ಸುತ್ತ 365 ದಿನಗಳು ಮತ್ತು ಆರು ಗಂಟೆಗಳಲ್ಲಿ ಸುತ್ತುತ್ತದೆ ಎಂದು ಖಗೋಳಶಾಸ್ತ್ರಜ್ಞರಿಂದ ಸೀಸರ್ ಕಲಿತರು. ನಂತ್ರ ಅವರು ಕ್ಯಾಲೆಂಡರ್ ಬದಲಿಸಿದರು.
Vastu Tips : ಆಸ್ಪತ್ರೆ ಸುತ್ತಿ ಸುತ್ತಿ ಸುಸ್ತಾಗಿದ್ಯಾ? ಹೀಗೆ ಮಾಡಿದ್ರೆ ಎಲ್ಲ ರೋಗ ಮಾಯ
ಭಾರತ (India)ದಲ್ಲಿ ಹೊಸ ವರ್ಷಾಚರಣೆ ಶುರುವಾಗಿದ್ದು ಯಾವಾಗ?:
ಪ್ರಪಂಚದಾದ್ಯಂತ ಡಿಸೆಂಬರ್ 31 ರ ಮಧ್ಯರಾತ್ರಿಯಿಂದ ಕ್ಯಾಲೆಂಡರ್ ಬದಲಾಗುತ್ತದೆ. ಹೊಸ ವರ್ಷವು ಜನವರಿಯಿಂದ ಪ್ರಾರಂಭವಾಗುತ್ತದೆ. ಆದರೆ ಭಾರತದಲ್ಲಿ ಇದನ್ನು ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ವರ್ಷ ಪ್ರಾರಂಭ ಎಂದು ಪರಿಗಣಿಸುತ್ತಾರೆ. ಹೊಸ ವರ್ಷವನ್ನು ಭಾರತದ ಬೇರೆ ಬೇರೆ ಪ್ರಾಂತ್ಯದ ಜನರು ಬೇರೆ ಬೇರೆ ದಿನ ಆಚರಿಸುತ್ತಾರೆ. ಕರ್ನಾಟಕದಲ್ಲಿ ಯುಗಾದಿಯಿಂದ ಹೊಸ ವರ್ಷ ಶುರುವಾಗುತ್ತದೆ. ಪಂಜಾಬ್‌ನಲ್ಲಿ ಹೊಸ ವರ್ಷವು ಬೈಸಾಖಿಯಿಂದ ಶುರುವಾಗುತ್ತದೆ. ಹೀಗೆ ಬೇರೆ ಬೇರೆ ರಾಜ್ಯಗಳಲ್ಲಿ ಹೊಸ ವರ್ಷ ಬೇರೆ ಬೇರೆ ದಿನ ಶುರುವಾಗುತ್ತದೆ.