ಇತ್ತೀಚಿನ ದಿನಗಳಲ್ಲಿ ಆರೋಗ್ಯವೇ ಭಾಗ್ಯ ಎಂಬ ಅರಿವು ಜನರಿಗಾಗಿದೆ. ಆರೋಗ್ಯ ವೃದ್ಧಿಗೆ ನಾನಾ ಕಸರತ್ತು ಮಾಡ್ತಿದ್ದಾರೆ. ಮಾತ್ರೆ ನುಂಗಿ ನುಂಗಿ ಸಾಕಾಯ್ತು,ಹಣ್ಣು ಖರೀದಿಗೆ ದುಡ್ಡು ಖರ್ಚಾಯ್ತು. ಏನೇ ಮಾಡಿದ್ರೂ ರೋಗ ಹೋಗಲ್ಲ ಎನ್ನುವವರು ಇದನ್ನು ಓದಿ.
ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ (Health) ಬಹಳ ಮುಖ್ಯ. ಕೈ ತುಂಬ ಹಣವಿದ್ದು ಆರೋಗ್ಯವಿಲ್ಲವೆಂದರೆ ಜೀವನದಲ್ಲಿ ಸುಖ ಸಿಗುವುದಿಲ್ಲ. ಆರೋಗ್ಯ,ದೇಹದಲ್ಲಿ ಶಕ್ತಿಯಿದ್ದ ವ್ಯಕ್ತಿ ಹೊತ್ತಿನ ಊಟವನ್ನು ದುಡಿದು ಪಡೆಯಬಲ್ಲ. ಆರೋಗ್ಯ ಕಾಪಾಡಿಕೊಳ್ಳಲು ಪ್ರತಿ ದಿನ ಪ್ರಯತ್ನ ನಡೆಯುತ್ತಿರುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ,ವ್ಯಾಯಾಮ,ಸೂಕ್ತ ಚಿಕಿತ್ಸೆ ಪಡೆದರೂ ಕೆಲವರಿಗೆ ಅನಾರೋಗ್ಯ ಬೆನ್ನು ಬಿಡುವುದಿಲ್ಲ. ಮನೆಯಲ್ಲಿ ಒಬ್ಬರಲ್ಲ ಒಬ್ಬರು ಹಾಸಿಗೆ ಹಿಡಿದಿರುತ್ತಾರೆ. ಆಸ್ಪತ್ರೆ ಸೇರುವಷ್ಟು ದೊಡ್ಡ ರೋಗ ಕಾಡದೆ ಹೋದ್ರೂ ಪ್ರತಿನಿತ್ಯ ಕಿರಿಕಿರಿ ಇದ್ದೇ ಇರುತ್ತದೆ. ವೈದ್ಯರ ಬಳಿ ಹೋದ್ರೂ ಇದಕ್ಕೆ ಪರಿಹಾರ ಸಿಕ್ಕಿರುವುದಿಲ್ಲ. ಅನೇಕ ಬಾರಿ ನಿಮ್ಮ ಅನಾರೋಗ್ಯಕ್ಕೆ ನಿಮ್ಮ ಮನೆಯೇ ಕಾರಣವಾಗಿರುತ್ತದೆ. ಮನೆಯ ವಾಸ್ತು (Vastu) ದೋಷದಿಂದ ಜನರು ಅನಾರೋಗ್ಯಕ್ಕೊಳಗಾಗುತ್ತಾರೆ. ಮನೆಯ ವಾಸ್ತು ಸರಿಪಡಿಸಿದ್ರೆ ಕುಟುಂಬಸ್ಥರಿಗೆ ಕಾಡ್ತಿರುವ ಮಾನಸಿಕ ಹಾಗೂ ದೈಹಿಕ ರೋಗದಿಂದ ಮುಕ್ತಿ ಸಿಗುತ್ತದೆ. ಇಂದು ವಾಸ್ತು ದೋಷದಿಂದ ಏನೆಲ್ಲ ಸಮಸ್ಯೆ ಕಾಡುತ್ತದೆ ಎಂಬುದನ್ನು ನೋಡೋಣ.
ನಿದ್ರಾಹೀನತೆ (Insomnia): ವಾಸ್ತು ಶಾಸ್ತ್ರದಲ್ಲಿ ನಿದ್ರಾಹೀನತೆಗೆ ಕಾರಣವನ್ನು ಹೇಳಲಾಗಿದೆ. ಮನೆಯ ದಿಕ್ಕು ಹಾಗೂ ದಿಕ್ಕಿನಲ್ಲಿರುವ ವಸ್ತುಗಳು ಕೂಡ ನಿದ್ರಾಹೀನತೆಗೆ ಕಾರಣವಾಗುತ್ತದೆ. ಪೂರ್ವ ಮತ್ತು ಉತ್ತರ ದಿಕ್ಕು ಹಗುರ ಹಾಗೂ ತಗ್ಗಿರಬೇಕು. ದಕ್ಷಿಣ ಮತ್ತು ಪಶ್ಚಿಮ ದಿಕ್ಕು ಭಾರ ಮತ್ತು ಎತ್ತರವಾಗಿರುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.ಪೂರ್ವ ದಿಕ್ಕು ಭಾರವಾಗಿದ್ದು, ಪಶ್ಚಿಮ ದಿಕ್ಕು ಖಾಲಿಯಾಗಿದ್ದರೆ ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ನಿದ್ರಾಹೀನತೆ ಅನೇಕ ರೋಗಗಳನ್ನು ಆಹ್ವಾನಿಸುತ್ತದೆ.
undefined
ತಲೆ ಸುತ್ತು,ತಲೆ ನೋವು (Headache) : ಮನೆಯ ಪಶ್ಚಿಮ ಕೋನದಲ್ಲಿ ಮಲಗಿದರೆ ಅಥವಾ ಉತ್ತರ ದಿಕ್ಕಿಗೆ ತಲೆಯಿಟ್ಟು, ದಕ್ಷಿಣ ದಿಕ್ಕಿಗೆ ಪಾದಗಳನ್ನು ಇಟ್ಟು ಮಲಗಿದರೂ, ಚಡಪಡಿಕೆ, ತಲೆನೋವು ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆಗಳು ಉಂಟಾಗಬಹುದು. ಇದ್ರರಿಂದ ಇಡೀ ದಿನ ಸುಸ್ತು ಕಾಡುತ್ತದೆ.
ಹೃದಯಾಘಾತ (Heart attack) ಪಾರ್ಶ್ವವಾಯು, ಮೂಳೆ ಮತ್ತು ನರಗಳ ಕಾಯಿಲೆ : ವಾಸ್ತುಶಾಸ್ತ್ರದ ಪ್ರಕಾರ ನೈರುತ್ಯ ದಿಕ್ಕಿಗೆ ಮನೆಯ ಮುಖ್ಯ ಬಾಗಿಲು ಅಥವಾ ಖಾಲಿ ಜಾಗವಿರುವುದು ಒಳ್ಳೆಯದಲ್ಲ. ಇದರಿಂದ ಹೃದಯಾಘಾತ,ಸ್ಟ್ರೋಕ್ ನಂತಹ ಸಮಸ್ಯೆ ಕಾಡುವ ಅಪಾಯವಿರುತ್ತದೆ. ಹಾಗಾಗಿ ಎಂದೂ ನೈರುತ್ಯ ದಿಕ್ಕಿಗೆ ಪ್ರವೇಶ ದ್ವಾರ ಮಾಡಬೇಡಿ. ಆ ಜಾಗವನ್ನು ಖಾಲಿಯೂ ಬಿಡಬೇಡಿ.
ಗೃಹಿಣಿಗೆ ಅನಾರೋಗ್ಯ : ಅಡುಗೆ ಮನೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ದಕ್ಷಿಣ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಶುಭವಲ್ಲ. ಚರ್ಮ ಹಾಗೂ ಮೂಳೆಗೆ ಸಂಬಂಧಿಸಿದ ಖಾಯಿಲೆ ಕಾಡುತ್ತದೆ. ಹಾಗೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದರಿಂದ ಕಣ್ಣು,ಕಿವಿ,ಮೂಗು ಮತ್ತು ಗಂಟಲಿನ ಸಮಸ್ಯೆ ಕಾಡುತ್ತದೆ. ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಬಹಳ ಒಳ್ಳೆಯದು.
Zodiacs And Relationship: ಈ ಎರ್ಡು ರಾಶಿಯವ್ರು ಒಂದಾದ್ರೆ ಬ್ರೇಕಪ್ ಮಾತೇ ಇಲ್ಲ..
ಗ್ಯಾಸ್,ಹೊಟ್ಟೆ ಸಮಸ್ಯೆ : ಗೋಡೆಯ ಬಣ್ಣ ಕೂಡ ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ. ಗೋಡೆ ಬಣ್ಣದ ಬಗ್ಗೆ ಗಮನ ನೀಡಬೇಕಾಗುತ್ತದೆ. ಗೋಡೆ ಬಣ್ಣ ಕಪ್ಪು ಅಥವಾ ಗಾಢ ನೀಲಿಯಿದ್ದರೆ ಗ್ಯಾಸ್,ಹೊಟ್ಟೆ ಸಮಸ್ಯೆ,ಕಾಲುಗಳಲ್ಲಿ ನೋವು ಕಾಡುತ್ತದೆ. ಕಿತ್ತಳೆ ಅಥವಾ ಹಳದಿ ಬಣ್ಣ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಗಾಢ ಕೆಂಪು ಬಣ್ಣ ಅಪಘಾತಕ್ಕೆ ಕಾರಣವಾಗುತ್ತದೆ. ಒಳ್ಳೆಯ ಆರೋಗ್ಯ ಬಯಸುವವರು ಮನೆಯ ಗೋಡೆಗೆ ದಿಕ್ಕಿಗೆ ಅನುಸಾರವಾಗಿ ತಿಳಿ ಬಣ್ಣವನ್ನು ಬಳಿಯಬೇಕು.
Dream Interpretation: ಕನಸಲ್ಲಿ ಮಲ ಕಂಡ್ರೆ ಕೈ ತುಂಬಾ ಹಣ ಬರುತ್ತಾ?
ಕೀಲು ನೋವು ಮತ್ತು ಸಂಧಿವಾತ : ಮನೆಯ ಗೋಡೆ ಬಣ್ಣ ಮಾತ್ರವಲ್ಲ ಗೋಡೆಯ ಬಗ್ಗೆಯೂ ಗಮನ ನೀಡಬೇಕು. ಗೋಡೆ ಬಿರುಕು ಬಿಟ್ಟಿದ್ದರೆ ಬಣ್ಣ ಮಾಸಿದ್ದರೆ ಕೀಲು ನೋವು ಕಾಡುವ ಸಾಧ್ಯತೆಯಿದೆ. ಹಾಗೆ ಗೋಡೆ ಮೇಲೆ ಕಲೆಗಳು ಇರದಂತೆ ನೋಡಿಕೊಳ್ಳಿ. ಇದರಿಂದ ಮನೆ ಮಂದಿಗೆ ಸಂಧಿವಾತ ಕಾಡಬಹುದು.