ನಾರದ ಮಹರ್ಷಿಗಳೇಕೆ ಎಲ್ಲೂ ನಿಲ್ಲದೆ ತ್ರಿಲೋಕ ಸಂಚಾರ ಮಾಡುತ್ತಾರೆ?

By Suvarna News  |  First Published Jun 14, 2022, 5:09 PM IST

ನಾರದ ಮಹರ್ಷಿಗಳಿಗೆ ಮನೆಯಿಲ್ಲ, ಆಶ್ರಮವಿಲ್ಲ. ಅವರು ಸದಾ ದೇವರ ನಾಮ ಜಪಿಸುತ್ತಾ ತ್ರಿಲೋಕ ಸಂಚಾರ ಮಾಡುತ್ತಾರೆ. ಅವರು ಹೀಗೆ ಮನೆಯಿಲ್ಲದೆ ಉಳಿಯಲು ಶಾಪವೊಂದು ಕಾರಣ. ಇದು ಯಾರ ಶಾಪ, ಏನಿದು ಕತೆ ತಿಳಿಯೋಣ. 


ನಾರದ(Narada)ರು ಸೃಷ್ಟಿಕರ್ತ ಬ್ರಹ್ಮನ ಮಾನಸ ಪುತ್ರ. ಆದರೂ ಅವರನ್ನು ಜಗಳ ತಂದಿಡುವವ ಎಂದು ಕರೆಯುತ್ತಾರೆ. ಆದರೆ, ನಾರದರು ಯಾರ ನಡುವೆ ಜಗಳ ತಂದಿಡುತ್ತಾರೋ ಅವರ ನಡುವಿನ ಜಗಳವು ಕಡೆಗೆ ಅಹಂಕಾರವನ್ನು ಹತ್ತಿಕ್ಕಿ ಲೋಕಕಲ್ಯಾಣಕ್ಕೆ ಕಾರಣವಾಗುತ್ತವೆ. ಅದು ಬಿಡಿ, ನಾರದರು ಒಂದೇ ಕಡೆ ಇರಲು ಸಾಧ್ಯವೇ ಇಲ್ಲ. ಸದಾ ವಿಹರಿಸುತ್ತಲೇ ಇರುತ್ತಾರೆ. ಜಗತ್ತನ್ನು ಸುತ್ತುವುದು ಅವರ ಕಾಯಕ. ನಾರದನು ತ್ರಿಲೋಕ ಸಂಚಾರಿಯಾಗಿದ್ದು ಏಕೆ? ಅವರೇಕೆ ಎಂದೂ ಎಲ್ಲೂ ಉಳಿಯುವುದಿಲ್ಲ ಎಂದು ಎಂದಾದರೂ ಯೋಚಿಸಿದ್ದೀರಾ?

ನಾರದರು ವೀಣೆಯ ಮಾಸ್ತರರಾಗಿದ್ದರು, ಸಂಗೀತ ಮತ್ತು ಗಾಯನವನ್ನು ಸ್ವತಃ ಸರಸ್ವತಿ(Goddess Saraswati)ಯಿಂದ ಕಲಿತು ತಜ್ಞರಾಗಿದ್ದರು. ಎಲ್ಲಾ ವೇದಗಳು ಮತ್ತು ಧಾರ್ಮಿಕ ಕಾನೂನುಗಳನ್ನು ತಿಳಿದಿದ್ದರು. ಅವರು ಬಹಳ ಬುದ್ಧಿವಂತರಾಗಿದ್ದರು, ತೀಕ್ಷ್ಣವಾದ ಮನಸ್ಸು ಮತ್ತು ಬೌದ್ಧಿಕ ವ್ಯಕ್ತಿತ್ವವನ್ನು ಹೊಂದಿದ್ದರು. ಮಾಹಿತಿಯನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ವರ್ಗಾಯಿಸುವ ಅಭ್ಯಾಸದಿಂದಾಗಿ ಅವರನ್ನು ಕೆಲವೊಮ್ಮೆ ವಿಶ್ವದ ಮೊದಲ ಪತ್ರಕರ್ತ ಎಂದೂ ಕರೆಯಲಾಗುತ್ತದೆ. ನಮ್ಮ ಧರ್ಮಗ್ರಂಥಗಳಲ್ಲಿ ಅವರ ಚೇಷ್ಟೆಯ ಸ್ವಭಾವವನ್ನು ತಿಳಿಸುವ ಅನೇಕ ಕಥೆಗಳಿವೆ. 

Tap to resize

Latest Videos

ತ್ರಿಲೋಕದ ಯಾವುದೇ ಸ್ಥಳದಲ್ಲಿ 'ನಾರಾಯಣ ನಾರಾಯಣ' ಎನ್ನುತ್ತಲೇ ಪ್ರತ್ಯಕ್ಷವಾಗುವ ನಾರದರು, ತಾವು ಹೋದಲ್ಲಿ ಹೇಳಬೇಕಾದ್ದನ್ನು ಹೇಳಿ(ಅದು ಛಾಡಿಯಾದರೂ ಸರಿ) ಮತ್ತೆ ನಾರಾಯಣ ನಾರಾಯಣ ಎನ್ನುತ್ತಾ ಮಾಯವಾಗುತ್ತಾರೆ. ಆದರೆ, ಎಲ್ಲಿಯೂ ನಾರದರ ಮನೆಯಿಲ್ಲ. ಅವರು ಒಂದೆಡೆ ಉಳಿದ ಬಗ್ಗೆ ಪುರಾಣದ ಎಲ್ಲೂ ಉಲ್ಲೇಖವಿಲ್ಲ. ಅವರ ಆಶ್ರಮದ ಬಗ್ಗೆ ಹೇಳಲಾಗಿಲ್ಲ. ಇದರ ಹಿಂದಿನ ಕಾರಣಗಳೇನು ನೋಡೋಣ. 

ಒಣ ತುಳಸಿ ಎಲೆಗಳು ನಿಮ್ಮ ಹಣದ ಸಮಸ್ಯೆ ನೀಗಲಿವೆ!

ನಾರದ ಮುನಿಯು ಅಲೆದಾಡುವ ಹಿಂದಿನ ಕಾರಣಗಳನ್ನು ಸತ್ಯ ಯುಗ(Satyayug)ದಲ್ಲಿ ಗುರುತಿಸಬಹುದು. ಆಗ ಬ್ರಹ್ಮ ದೇವರು ಬ್ರಹ್ಮಾಂಡವನ್ನು ರಚಿಸಲು ನಿರ್ಧರಿಸಿದರು. ದೇವಋಷಿ ನಾರದ ಮತ್ತು ದಕ್ಷ(King Daksha Prajapati) ಪ್ರಜಾಪತಿ ಸಹೋದರರು. ಅವರಿಬ್ಬರೂ ಭಗವಾನ್ ಬ್ರಹ್ಮನ ಪುತ್ರರು. 

ನಾರದ ಮುನಿಯು ಋಷಿಯಾದಾಗ, ಅವನ ಸಹೋದರ ರಾಜ ದಕ್ಷ ಪ್ರಜಾಪತಿಯು ತನ್ನ ತಂದೆಗೆ ವಿಶ್ವವನ್ನು ಸೃಷ್ಟಿಸಲು ಸಹಾಯ ಮಾಡಲು ನಿರ್ಧರಿಸಿದರು. ಪುಣ್ಯವೆಂಬಂತೆ ಅವರಿಗೆ ಸಾವಿರಾರು ಗಂಡುಮಕ್ಕಳು. ಅವರೆಲ್ಲರನ್ನೂ ಮದುವೆಯಾಗಿ ಗೃಹಸ್ಥರಾಗಲು ದಕ್ಷ ಹೇಳುತ್ತಾರೆ. ಇದರಿಂದ ತನ್ನ ತಂದೆ ಸೃಷ್ಟಿಸಿದ ಜಗತ್ತಿನಲ್ಲಿ ಸಾಕಷ್ಟು ಜನರು ಇರುತ್ತಾರೆ ಎಂಬುದು ಅವರ ಯೋಚನೆ. 

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಒಳ್ಳೆಯದು, ಆದ್ರೆ ಈ ಮಿಸ್ಟೇಕ್ಸ್ ಮಾಡ್ಬೇಡಿ!

ಒಂದು ದಿನ, ದಕ್ಷ ಪ್ರಜಾಪತಿಯ ಮಕ್ಕಳೆಲ್ಲರೂ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನಾರದ ಮುನಿಯು ಹಾದು ಹೋದರು. ಹುಡುಗರು ತಮ್ಮ ಚಿಕ್ಕಪ್ಪ ನಾರದ ಋಷಿಗಳಿಗೆ ಕೆಲವು ಬುದ್ಧಿವಂತ ಜ್ಞಾನದ ಕಥೆಗಳನ್ನು ಹೇಳಲು ಕೇಳಿದರು. ಆಗ ನಾರದರು ಹುಡುಗರಿಗೆ ಋಷಿಯಾಗುವುದರ ಮಹತ್ವವನ್ನು ಮತ್ತು ದೇವರ ಪೂಜೆಗಾಗಿ ಜೀವನವನ್ನು ಅರ್ಪಿಸುವ ಮೌಲ್ಯವನ್ನು ತಿಳಿಸಿದರು. ಈ ಭೌತಿಕ ಪ್ರಪಂಚವು ವಾಸ್ತವವಾಗಿ ಒಂದು ಪುರಾಣವಾಗಿದೆ ಎಂದು ಅವರು ವಿವರಿಸಿದರು. ಇದು ವೃದ್ಧಾಪ್ಯವು ಹತ್ತಿರವಾಗುತ್ತಿದ್ದಂತೆ ಮರೆಯಾಗುತ್ತದೆ. ದೇವರ ಹೆಸರಿನ ಸ್ಮರಣೆಯಿಂದ ಸಿಗುವ ಆನಂದವೇ ಜೀವನದಲ್ಲಿ ಶಾಶ್ವತ ಆನಂದ ಎಂದು ತಿಳಿಸಿದರು. 
ಅವರ ಎಲ್ಲ ಉಪದೇಶಗಳನ್ನು ಕೇಳಿದ ಹುಡುಗರು ಎಷ್ಟು ಪ್ರೇರಿತರಾದರು ಎಂದರೆ ಅವರೆಲ್ಲರೂ ಭೌತಿಕ ಪ್ರಪಂಚವನ್ನು ತ್ಯಜಿಸಿದರು ಮತ್ತು ಬ್ರಹ್ಮಚಾರಿಗಳಾದರು. ಜಗತ್ತನ್ನು ನಿರ್ಮಿಸುವ ಗುರಿಯನ್ನು ತೊರೆದರು. 

ಈ ನಾಲ್ಕು ರಾಶಿಗಳನ್ನು ವಂಚಿಸೋದು ಬಹಳ ಸುಲಭ!

ಇದು ದಕ್ಷ ಪ್ರಜಾಪತಿ ಅವರು ಏನು ಮಾಡಬೇಕೆಂದು ಬಯಸಿದ್ದರೋ ಅದಕ್ಕೆ ವಿರುದ್ಧವಾಗಿತ್ತು. ತನ್ನ ಪುತ್ರರು ಗೃಹಸ್ಥರಾಗಬೇಕೆಂದು ಅವರು ಬಯಸಿದ್ದರು, ಆದರೆ ಅವರು ಬ್ರಹ್ಮಚಾರಿಗಳಾಗಿದ್ದರು. ಇದರಿಂದ ಅವರು ಎಷ್ಟು ಸಿಟ್ಟಾದರೆಂದರೆ, ತಮ್ಮ ಸ್ವಂತ ಸಹೋದರನಾದ ನಾರದ ಮುನಿಯನ್ನು ಎಂದಿಗೂ ಮನೆ ಹೊಂದದೆ, ದೇವರ ನಾಮ ಹೇಳಿಕೊಂಡು ಸದಾ ತಿರುಗುತ್ತಲೇ ಇರಬೇಕು ಎಂದು ಶಪಿಸಿದರು. 

ಅಂದಿನಿಂದ ನಾರದರು ವಿಷ್ಣುವಿನ ಸ್ಮರಣೆ ಮಾಡುತ್ತಾ ತ್ರಿಲೋಕ ಸಂಚಾರಿಯಾಗಿ ಇರುತ್ತಾರೆ. 

click me!