ಒಣ ತುಳಸಿ ಎಲೆಗಳು ನಿಮ್ಮ ಹಣದ ಸಮಸ್ಯೆ ನೀಗಲಿವೆ!

By Suvarna NewsFirst Published Jun 14, 2022, 4:09 PM IST
Highlights

ತುಳಸಿಯನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವಾದ ಸಸ್ಯ ಎಂದು ಪರಿಗಣಿಸಲಾಗುತ್ತದೆ. ತುಳಸಿಯು ಒಣಗುವುದು ಅಮಂಗಳ ಎಂದು ಭಾವಿಸಲಾಗುತ್ತದೆ. ಆದರೆ, ತುಳಸಿಯ ಒಣ ಎಲೆಗಳು ನಿಮ್ಮ ಸಮಸ್ಯೆಗೆ ಪರಿಹಾರವಾಗಬಲ್ಲದು. 

ತುಳಸಿ ಗಿಡ(Tulsi plant)ಕ್ಕೆ ಹಿಂದೂ ಧರ್ಮದಲ್ಲಿ ಬಹಳ ಪ್ರಾಶಸ್ತ್ಯವಿದೆ. ಈ ಸಸ್ಯದ ಕುರಿತು ಅನೇಕ ದಂತಕತೆಗಳಿವೆ. ಶ್ರೀಕೃಷ್ಣ ಮತ್ತು ರಾಧಾರಾಣಿಯ ಪಾದಗಳು ಒಟ್ಟಿಗೆ ಮಲಗಿದಾಗ ತುಳಸಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ತುಳಸಿಯನ್ನು ವೃಂದಾ(Vrunda) ಎಂದೂ ಕರೆಯುತ್ತಾರೆ. ವೃಂದಾವನದ ಹೆಸರು ಕೂಡ ವೃಂದಾ ಹೆಸರಿನಿಂದ ಬಂದಿದೆ. ತುಳಸಿ ಗಿಡ ಶ್ರೀಕೃಷ್ಣನಿಗೆ ತುಂಬಾ ಪ್ರಿಯ. ದೇವರ ಭೋಗದಲ್ಲಿ ತುಳಸಿ ಎಲೆಗಳನ್ನು(Tulsi leaves) ಇಡದಿದ್ದರೆ ದೇವರ ಭೋಗ ಅಪೂರ್ಣವೆನಿಸುತ್ತದೆ. 

ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಅದು ತುಂಬಾ ಶ್ರೇಯಸ್ಕರವಾಗಿದ್ದು, ಬೆಳಿಗ್ಗೆ ಮತ್ತು ಸಂಜೆ ತುಳಸಿಯನ್ನು ಪೂಜಿಸಬೇಕು. ಈ ಸಸ್ಯದ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಸ್ವತಃ ತಾಯಿ ಲಕ್ಷ್ಮಿ(Goddess Lakshmi) ಅದರಲ್ಲಿ ನೆಲೆಸಿದ್ದಾಳೆ. ತುಳಸಿ ಗಿಡವನ್ನು ಒಣಗಿಸುವುದು ಅಶುಭ. ಆದರೆ ತುಳಸಿಯ ಒಣ ಎಲೆಗಳು ತುಂಬಾ ಉಪಯುಕ್ತ ಮತ್ತು ಅದ್ಭುತ ಎಂದರೆ ನೀವು ನಂಬಲೇಬೇಕು. ಅವನ್ನು ಸಮಸ್ಯೆಗಳಿಗೆ ಪರಿಹಾರಾತ್ಮಕವಾಗಿ ಬಳಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಒಣ ತುಳಸಿ ಎಲೆಗಳ ಉಪಯೋಗಗಳನ್ನು ನೋಡೋಣ. 

ಎಲ್ಲರಿಗೂ ಲಕ್ಷ್ಮಿ ದೇವಿಯ ಕೃಪೆ ಬೇಕು. ಲಕ್ಷ್ಮಿ ದೇವಿಯು ತಮಗೆ ಸದಾ ದಯೆ ತೋರಬೇಕು ಮತ್ತು ತಮ್ಮ ಮನೆಯಲ್ಲಿ ಸಂಪತ್ತಿನ ಕೊರತೆಯಾಗಬಾರದು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಇದಕ್ಕಾಗಿ, ಜನರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಜೀವನದಲ್ಲಿ ಹಣವನ್ನು ಗಳಿಸಲು ಶ್ರಮಿಸುತ್ತಾರೆ. ಆದರೂ ಕೆಲವೊಮ್ಮೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಅಂತ್ಯವಿಲ್ಲ ಎಂಬಂತಾಗುತ್ತದೆ. ಅಂಥ ಪರಿಸ್ಥಿತಿಯಲ್ಲಿ, ಒಣಗಿದ ತುಳಸಿ ಎಲೆಗಳು ನಿಮಗೆ ತುಂಬಾ ಉಪಯುಕ್ತವೆನಿಸಬಹುದು. ಹೌದು, ತುಳಸಿಯ ಒಣ ಎಲೆಗಳ ಪರಿಹಾರದಿಂದ(remedies) ನಿಮ್ಮ ಹಣದ ಕಷ್ಟಕ್ಕೆ ಮುಕ್ತಿ ದೊರೆಯಬಹುದು.

ಹೀಗೆ ಮಾಡಿ..
ನೀವು ತುಳಸಿಯ ಒಣ ಎಲೆಗಳನ್ನು ಸಂಗ್ರಹಿಸಿ ಕೆಂಪು ಬಟ್ಟೆಯಲ್ಲಿ ಕಟ್ಟಬೇಕು ಮತ್ತು ಅದನ್ನು ನೀವು ಹಣ ಇಡುವ ಸ್ಥಳದಲ್ಲಿ ಇಡಬೇಕು. ಇದರೊಂದಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ ಮತ್ತು ಆರ್ಥಿಕ ಪ್ರಗತಿಯೂ ಇರುತ್ತದೆ. ಬದಲಾವಣೆಯನ್ನು ಸ್ವತಃ ಕಂಡುಕೊಳ್ಳುವಿರಿ.

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಒಳ್ಳೆಯದು, ಆದ್ರೆ ಈ ಮಿಸ್ಟೇಕ್ಸ್ ಮಾಡ್ಬೇಡಿ!

ನಕಾರಾತ್ಮಕ ಶಕ್ತಿ ಓಡುತ್ತದೆ..
ಅನೇಕ ಬಾರಿ ನಕಾರಾತ್ಮಕ ಶಕ್ತಿ(negative energy)ಯು ಮನೆಯನ್ನು ತುಂಬಿಕೊಳ್ಳುತ್ತದೆ. ಅಂಥ ಸಂದರ್ಭದಲ್ಲಿ ಮನೆಯ ಸದಸ್ಯರ ಯಾವೊಂದು ಕೆಲಸಗಳೂ ಸರಾಗವಾಗಿ ಕೈಗೂಡುವುದಿಲ್ಲ. ಆತಂಕ ಅಡ್ಡಿ ತಪ್ಪುವುದಿಲ್ಲ. ಹಾಗಾದಾಗ, ವ್ಯಕ್ತಿಯು ಕೆಲವು ಒಣ ತುಳಸಿ ಎಲೆಗಳನ್ನು ತೆಗೆದುಕೊಂಡು ಗಂಗೆಯ ನೀರಿನಲ್ಲಿ ಹಾಕಬೇಕು. ಆ ನಂತರ ಆ ನೀರನ್ನು ಮನೆಯೆಲ್ಲ ಚಿಮುಕಿಸಬೇಕು. ಹೀಗೆ ಮಾಡುವುದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ನೀವು ಬಯಸಿದರೆ, ನೀವು ಪ್ರತಿದಿನ ಈ ಕೆಲಸವನ್ನು ಮಾಡಬಹುದು, ಇದರಿಂದಾಗಿ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ ಮತ್ತು ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.

ವಂಚನೆಗೆ ಒಳಗಾದಾಗ ಯಾವ ರಾಶಿ ಹೇಗೆ ಪ್ರತಿಕ್ರಿಯಿಸುತ್ತೆ?

ಮಕ್ಕಳ ಸ್ನಾನಕ್ಕೆ
ಶ್ರೀ ಕೃಷ್ಣನ ಮಗುವಿನ ರೂಪವನ್ನು ಲಡ್ಡು ಗೋಪಾಲಜಿ ಎಂದು ಕರೆಯಲಾಗುತ್ತದೆ. ಲಡ್ಡು ಗೋಪಾಲಜಿ ಸ್ನಾನ ಮಾಡುವಾಗ, ನೀವು ಒಣ ತುಳಸಿ ಎಲೆಗಳನ್ನು ಅವರ ನೀರಿನಲ್ಲಿ ಹಾಕಬಹುದು, ಇದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂಜೆಯ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ಒಣತುಳಸಿಯ ನೀರಿನಿಂದ ಅಭಿಷೇಕ ಮಾಡಬಹುದು. ಇದಲ್ಲದೆ ಮನೆಯ ಮಕ್ಕಳ ಸ್ನಾನದ ನೀರಿಗೆ ಈ ಒಣ ತುಳಸಿ ಎಲೆಗಳನ್ನು ಹಾಕಿ. ಇದಲ್ಲದೆ, ನಿಮ್ಮ ಸ್ನಾನದ ನೀರಿನಲ್ಲಿ ಕೂಡಾ ಒಣಗಿದ ತುಳಸಿ ಎಲೆಗಳನ್ನು ಸೇರಿಸಬಹುದು. ಇದು ದೇಹದಲ್ಲಿರುವ ಎಲ್ಲ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.

ಕೃಷ್ಣನ ನೈವೇದ್ಯಕ್ಕೆ
ಶ್ರೀಕೃಷ್ಣನಿಗೆ ತುಳಸಿ ಎಷ್ಟು ಪ್ರಿಯ ಎಂಬುದು ಎಲ್ಲರಿಗೂ ಗೊತ್ತು. ಭಗವಾನ್ ಶ್ರೀ ಕೃಷ್ಣನ ಭೋಗ ತುಳಸಿ ಎಲೆಗಳಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗಿದೆ. ಶ್ರೀ ಕೃಷ್ಣನ ಆನಂದಕ್ಕಾಗಿ ನೀವು ತುಳಸಿ ಎಲೆಯನ್ನು 15 ದಿನಗಳವರೆಗೆ ನಿರಂತರ ನೈವೇದ್ಯವಾಗಿ ಬಳಸಬಹುದು.
 

click me!