ಯಾವ ರಾಶಿಗೆ ಯಾವಾಗ ಆರೋಗ್ಯ ಸಮಸ್ಯೆ ಯಾವಾಗ ಬರುತ್ತೆ?

By Suvarna NewsFirst Published Jul 23, 2020, 6:33 PM IST
Highlights

ಸಾಮಾನ್ಯವಾಗಿ ನಿಮ್ಮ ರೋಗನಿರೋಧಕ ಶಕ್ತಿ ಕುಂದಿದಾಗಿ ನಿಮಗೆ ಕಾಯಿಲೆಗಳು ಉಂಟಾಗುತ್ತವೆ. ನಿಮ್ಮ ಜನ್ಮರಾಶಿಯಲ್ಲಿ ಅನುಗ್ರಹಕಾರಕ ಗ್ರಹಗಳು ದುರ್ಬಲವಾಗಿದ್ದಾಗ, ನಿಮ್ಮ ಜನ್ಮಲಗ್ನದಿಂಧ ಅವು ದೂರವಿದ್ದಾಗ ನಿಮಗೆ ರೋಗನಿರೋಧಕ ಶಕ್ತಿ ಕುಂದುತ್ತದೆ. ಹಾಗಿದ್ದರೆ ನಿಮಗೆ ಯಾವ ಗ್ರಹ ದೂರವಿದ್ದಾಗ, ಏನೇನು ಕಾಯಿಲೆ ಉಂಟಾಗಬಹುದು ಅಂತ ತಿಳಿಯೋಣ ಬನ್ನಿ.

ಸೂರ್ಯ
ಸೂರ್ಯನು ದುರ್ಬಲನಾಗಿರುವ ರಾಶಿಯವರಿಗೆ ತಲೆ, ಕಣ್ಣು, ಹೃದಯ, ಪಿತ್ತಕೋಶದ ಸಮಸ್ಯೆಗಳು ಹಾಗೂ ಪಿತ್ತರಸದ ಸಮಸ್ಯೆಗಳು ಎದುರಾಗಬಹುದು. ಇಂತಹ ಸಮಸ್ಯೆಗಳು ನಿಮಗೆ ಕಂಡುಬಂದಲ್ಲಿ ಹೀಗೆ ಮಾಡಬಹುದು- ಮನೆಯಿಂದ ಹೊರಗೆ, ಕೆಲಸಕ್ಕೆ ಹೊರಡುವ ಮುನ್ನ ಸೂರ್ಯಸ್ಮರಣೆ ಮಾಡಿ. ಸಕ್ಕರೆ ನೀರು ಕುಡಿಯಬೇಕು. ಮಾಂಸಾಹಾರ ಸೇವನೆ ತ್ಯಜಿಸಿ. ಮಂಗಗಳಿಗೆ ಹಾಗೂ ಕಪ್ಪು ಹಸುವಿಗೆ ಆಹಾರವನ್ನು ನೀಡಬೇಕು. ತಂದೆತಾಯಿಗಳನ್ನು ಹೊರತುಪಡಿಸಿ ಇತರರಿಂದ ಎಂದಿಗೂ ತುಪ್ಪವನ್ನು ಉಚಿತವಾಗಿ ಪಡೆಯಬಾರದು. ಗಾಢ ಬಣ್ಣದ ಅಥವಾ ಕೆಂಪು ಅಥವಾ ಗುಲಾಬಿ ಬಣ್ಣದ ವಸ್ತ್ರವನ್ನು ದಾನ ಮಾಡಬೇಕು.

ಚಂದ್ರ
ಚಂದ್ರನು ಒಂದು ರಾಶಿಯಲ್ಲಿ ದುರ್ಬಲವಾಗಿದ್ದರೆ ಆ ರಾಶಿಯವರಿಗೆ ಮನಸ್ಸು ಅಥವಾ ಮುಖಕ್ಕೆ ಸಂಬಂಧಿಸಿದ ಅಲರ್ಜಿಯಿಂದ ಬಳಲುತ್ತೀರಿ. ಅಂತಹ ಸಂದರ್ಭದಲ್ಲಿ ನಿಮ್ಮ ತಂದೆ ತಾಯಿ ಮೆಚ್ಚುವಂತಹ ಕಾರ್ಯಗಳನ್ನು ಮಾಡಿ, ಅವರಿಂದ ಆಶೀರ್ವಾದವನ್ನು ಪಡೆಯಿರಿ. ಹಾಲಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳದಿರಿ. ಚಿಕ್ಕ ಹೆಣ್ಣು ಮಕ್ಕಳಿಗೆ ಸಿಹಿಯನ್ನು ನೀಡಬೇಕು. ಹಕ್ಕಿಗಳಿಗೆ ಆಹಾರವನ್ನು ನೀಡಿ, ಆದರೆ ಹಕ್ಕಿಗಳನ್ನು ಪಂಜರದಲ್ಲಿಟ್ಟು ಬಂಧಿಸಬೇಡಿ.

ಮಂಗಳ
ನಿಮ್ಮ ರಾಶಿಯಲ್ಲಿ ಮಂಗಳ ಅಥವಾ ಕುಜನು ದೋಷಪೂರಿತವಾಗಿದ್ದರೆ ಮುಖಕ್ಕೆ ಗಾಯ ಅಥವಾ ಸರ್ಜರಿ ಮಾಡಬೇಕಾದ ಸಂದರ್ಭ ಬರಬಹುದು. ಮುಖದ ಸಮಸ್ಯೆಯೊಂದಿಗೆ ರಕ್ತಸ್ರಾವ, ತಲೆಗೆ ಗಾಯ, ಗ್ಯಾಸ್ಟ್ರಿಕ್, ಗರ್ಭಪಾತ, ಮೂಲವ್ಯಾಧಿ, ಗಾಯ, ಸುಟ್ಟ ಗಾಯ ಹಾಗೂ ಅಜೀರ್ಣದ ಸಮಸ್ಯೆ ಕಂಡುಬರುತ್ತದೆ. ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದಲ್ಲಿ ದೇವಾಲಯದಲ್ಲಿ ಸಿಹಿಯನ್ನು ಹಂಚಿ. ಮನೆಯಲ್ಲಿ ಬೇವಿನ ಮರವನ್ನು ಬೆಳೆಸಿ. ಹಸುವಿಗೆ ಆಗಾಗ ಆಹಾರವನ್ನು ನೀಡಿ. ಕೆಂಪು ಬಣ್ಣದ ಕರವಸ್ತ್ರವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಆನೆಯ ದಂತದ ಆಭರಣ ಧರಿಸಬಹುದು. ರಕ್ತದ ಅವಶ್ಯಕತೆ ಇದ್ದವರಿಗೆ ರಕ್ತದಾನವನ್ನು ಮಾಡಿ. 

ಬುಧ
ರಾಶಿಯಲ್ಲಿ ಬುಧನು ದುರ್ಬಲವಿದ್ದಾಗ ಬುದ್ಧಿಶಕ್ತಿಯ ಕೊರತೆ ಉಂಟಾಗುತ್ತದೆ. ಜೊತೆಗೆ ಕತ್ತು, ಧ್ವನಿ ಹಾಗೂ ಚರ್ಮದ ಸಮಸ್ಯೆಗಳು ಕಂಡುಬರುತ್ತದೆ. ಇಂತಹ ಸಮಸ್ಯೆಗಳು ಕಂಡುಬಂದಾಗ ಹೊಸ ಬಟ್ಟೆಯನ್ನು ಧರಿಸುವ ಮುನ್ನ ಅದನ್ನು ತೊಳೆದು ನಂತರ ಬಳಸಿ. 
ದೇವಾಲಯಕ್ಕೆ ಹಾಲು ಮತ್ತು ಅಕ್ಕಿಯನ್ನು ದಾನ ಮಾಡಿ. ಮದ್ಯಪಾನ ಹಾಗೂ ಮಾಂಸಾಹಾರವನ್ನು ತ್ಯಜಿಸಿ. ನೀವು ಆಹಾರ ಸೇವಿಸುವ ಮುನ್ನ ಹಸುವಿಗೆ ಆಹಾರವನ್ನು ನೀಡಿ. ನೀರು ಕುಡಿಯಲು ಬೆಳ್ಳಿಯ ಲೋಟವನ್ನು ಬಳಸಿ.

ಗುರು
ಗುರು ರಾಶಿಯಲ್ಲಿ ದುರ್ಬಲವಾಗಿದ್ದಾಗ ಯಕೃತ್ತು, ಜಾಂಡಿಸ್‌, ಸ್ಥೂಲಕಾಯ, ಕ್ಯಾನ್ಸರ್‌, ಮಧುಮೇಹದಂತಹ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಅಂತಹ ಸಂದರ್ಭದಲ್ಲಿ ತಲೆಗೆ ಹಳದಿ ಬಣ್ಣದ ಟೋಪಿ ಅಥವಾ ಸ್ಕಾರ್ಫ್‌ ಕಟ್ಟಿ. ಹಣೆಗೆ ಹಳದಿ ಬಣ್ಣದ ಗಂಧವನ್ನು ಹಚ್ಚಬೇಕು. ಹಳದಿ ಬಣ್ಣದ ಸಿಹಿ ಅಥವಾ ಬಾಳೆಹಣ್ಣನ್ನು ವೃದ್ಧರಿಗೆ ಅಥವಾ ಅನಾಥರಿಗೆ ನೀಡಿ. ಸಹೋದರರಿಗೆ ಅತ್ಯವಿದ್ದಾಗ ನಿಮ್ಮಿಂದಾದಷ್ಟು ಸಹಾಯವನ್ನು ಮಾಡಿ. ಚಿನ್ನವನ್ನು ಧರಿಸುವುದು ಒಳ್ಳೆಯದು. 

ವೀರ್ಯ ನುಂಗಿದ್ರೆ ಮಕ್ಕಳು ಹುಟ್ತಾವಾ? ಈ ಕತೆ ಓದಿ! 

ಶುಕ್ರ:
ಶುಕ್ರನು ದುರ್ಬಲನಾಗಿದ್ದಾಗ ಮುಖ, ದೃಷ್ಟಿಗೆ ಸಂಬಂಧಿಸಿದ ಸಮಸ್ಯೆ, ಕಿಡ್ನಿಯ ತೊಂದರೆ, ಗರ್ಭಕೋಶದ ಸಮಸ್ಯೆ ಹಾಗೂ ಅಪೆಂಡಿಕ್ಸ್‌ ಸಮಸ್ಯೆ ಕಂಡುಬರಬಹುದು. ಆಗ ಒಗೆಯದೇ ಇರುವ ಬಟ್ಟೆಯನ್ನು ಧರಿಸಬೇಡಿ. ಬೆಳ್ಳಿಯ ಸಣ್ಣ ತುಂಡನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ. ವಿಧವೆಯರಿಗೆ ಹಾಗೂ ಹಿರಿಯರಿಗೆ ಸಿಹಿಯನ್ನು ನೀಡಿ. ಮನೆಯಲ್ಲಿ ಹಸುವಿನ ತುಪ್ಪವನ್ನು ಬಳಸಿ ಹಾಗೂ ದೇವಾಲಯಕ್ಕೆ ತುಪ್ಪವನ್ನು ನೀಡಿ. 

ಶನಿ
ಶನಿಯು ಕೆಲವೊಂದು ರಾಶಿಯಲ್ಲಿ ದುರ್ಬಲನಾಗಿದ್ದಾಗ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಾದ ಹಲ್ಲುನೋವು, ಸಂಧಿವಾತ, ಕಾಲುಗಳಲ್ಲಿ ನೋವು, ಕಾಲುಗಳಲ್ಲಿ ಊತ, ಪಾರ್ಶ್ವವಾಯು, ಚರ್ಮದ ಸಮಸ್ಯೆ ಹಾಗೂ ಶಸ್ತ್ರಚಿಕಿತ್ಸೆಗೊಳಗಾಗಬಹುದು. ಈ ಸಮಸ್ಯೆಯನ್ನು ನಿವಾರಿಸಲು ಅಗತ್ಯವಿರುವವರಿಗೆ ಪಾದರಕ್ಷೆಗಳನ್ನು ದಾನ ಮಾಡಿ. ರಾತ್ರಿ ಹಾಲನ್ನು ಕುಡಿಯಬೇಡಿ. ಎಮ್ಮೆಯ ಹಾಲನ್ನು ಯಾವುದೇ ಕಾರಣಕ್ಕೂ ಕುಡಿಯಬೇಡಿ. ಬೆಳ್ಳಿಯ ವಸ್ತುವನ್ನು ಸದಾ ನಿಮ್ಮೊಂದಿಗೆ ಇಟ್ಟುಕೊಳ್ಳಿ. ಅಂಧರಿಗೆ ನಿಮ್ಮಿಂದ ಆದಷ್ಟು ಸಹಾಯವನ್ನು ಮಾಡಿ. ಜೇನುತುಪ್ಪವನ್ನು ಒಂದು ಮಡಿಕೆಯಲ್ಲಿ ಮುಚ್ಚಿ ಅದನ್ನು ಹರಿವ ನೀರಿನಲ್ಲಿ ಬಿಡಬೇಕು. 

ಕೋರ್ಟ್‌ಗಳಿಲ್ಲ, ಧರ್ಮಸ್ಥಳದ ಶ್ರೀ ಮಂಜುನಾಥನೇ ಎಲ್ಲ! 

ರಾಹು
ರಾಹುವು ದುರ್ಬವಾಗಿದ್ದರೆ ಆ ರಾಶಿಯವರಿಗೆ ಭಯ, ಗೊಂದಲ, ವಿಷ ಸೇವನೆ ಅಥವಾ ವಾಸಿಯಾಗದ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಪಕ್ಷಿಗಳಿಗೆ ಆಹಾರವನ್ನು ನೀಡಿ. ತಲೆಗೆ ನೀಲಿ ಬಣ್ಣದ ಟೋಪಿ ಅಥವಾ ಸ್ಕಾರ್ಫ್ ಧರಿಸಿ. ನೈಋತ್ಯ ದಿಕ್ಕಿನಲ್ಲಿ ನೀರನ್ನು ಶೇಖರಿಸಿ ಇಡಿ

ಕೈಯಲ್ಲೇ ದುಡ್ಡೇ ನಿಲ್ಲೋಲ್ವಾ? ಹೀಗ್ ಮಾಡಿ ನೋಡಿ... 

ಕೇತು
ಕೇತು ಒಂದು ರಾಶಿಯಲ್ಲಿ ದುರ್ಬಲನಾಗಿದ್ದಾಗ ದಿಗ್ಭ್ರಮೆ, ಚಿಕನ್‌ ಪಾಕ್ಸ್‌ ಅಥವಾ ಶಸ್ತ್ರ ಚಿಕಿತ್ಸೆಗೊಳಗಾಗಬಹುದು. ಈ ಸಮಸ್ಯೆಗಳನ್ನು ನಿವಾರಿಸಲು ಅನಾಥರಿಗೆ ಸಿಹಿಯನ್ನು ಹಂಚಿ. ಕೆಂಪು ಬಣ್ಣದ ಹರಳುಗಳಿರುವ ಆಭರಣಗಳನ್ನು ಧರಿಸಬೇಡಿ. ಕೆಂಪು ಬಣ್ಣದ ಬಟ್ಟೆ ಧರಿಸಬೇಡಿ. ಬೆಳ್ಳಿಯ ಪುಟ್ಟ ಚೆಂಡನ್ನು ನಿಮ್ಮ ಹತ್ತಿರ ಸದಾ ಇಟ್ಟುಕೊಳ್ಳಿ. ಮನೆಯಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ಜೇನುತುಪ್ಪವನ್ನು ಇರಿಸಿ. ಅಗತ್ಯವಿರುವವರಿಗೆ ಕಪ್ಪು ಅಥವಾ ಬಿಳಿ ಬಣ್ಣದ ಬ್ಲಾಂಕೆಟ್ ನೀಡಿ.

click me!