ಜಗತ್ತಿನಲ್ಲಿ ಪ್ರತಿಯೊಬ್ಬರೂ ವಿಭಿನ್ನ. ಆದರೂ, ಕೆಲವರಲ್ಲಿ ಕೆಲ ಸ್ವಭಾವಗಳಲ್ಲಿ ಸಾಮ್ಯತೆಗಳಿರುತ್ತವೆ. ಇದಕ್ಕೆ ಅನೇಕ ವಿಷಯಗಳು ಕಾರಣವಾಗಬಹುದಾದರೂ, ಹುಟ್ಟಿದ ತಿಂಗಳಿಗನುಸಾರ, ಕೆಲ ಸ್ವಭಾವಗಳನ್ನು ಗುರುತಿಸಬಹುದು.
ರಾಶಿ(zodiac), ಜಾತಕದನ್ವಯ ಗುಣ ಸ್ವಭಾವಗಳನ್ನು ಹೇಳುವುದು ಒಂದೆಡೆಯಾದರೆ, ಹುಟ್ಟಿದ ತಿಂಗಳಿಗನುಗುಣವಾಗಿಯೂ ಕೆಲ ಸ್ವಭಾವಗಳಲ್ಲಿ ಜನರಲ್ಲಿ ಸಾಮ್ಯತೆ ಇರುತ್ತದೆ. ವಿಭಿನ್ನತೆಯ ನಡುವೆಯೇ ಕೆಲ ಗುಣಗಳು ಕಾಮನ್ ಆಗಿರುತ್ತವೆ. ಯಾವ ತಿಂಗಳು ಹುಟ್ಟಿದವರು ಹೇಗಿರುತ್ತಾರೆಂಬ ಸಣ್ಣ ಚಿತ್ರಣ ಇಲ್ಲಿದೆ.
ಜನವರಿ(January)
ಜನವರಿಯಲ್ಲಿ ಜನಿಸಿದವರು ತುಂಬಾ ಶಿಸ್ತುಬದ್ಧವಾಗಿ ಬದುಕುವವರು. ಬಹಳ ಉತ್ಪಾದಕ ಸಾಮರ್ಥ್ಯ ಹೊಂದಿರುವವರು. ಇದರಿಂದಾಗಿ ಅವರು ಉತ್ತಮ ನಾಯಕರಾಗಬಲ್ಲರು. ಮಹತ್ವಾಕಾಂಕ್ಷೆ(ambitious) ಇವರ ಹುಟ್ಟು ಗುಣ. ತಾಳ್ಮೆ ಚೆನ್ನಾಗಿರುತ್ತದೆ. ಸುತ್ತಣ ಜಗತ್ತನ್ನು ಸೂಕ್ಷ್ಮವಾಗಿ ಗಮನಿಸುವ ಜೊತೆಗೆ, ನಿರ್ಧಾರ(decision) ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದಿರುತ್ತಾರೆ. ಸಾಮಾನ್ಯವಾಗಿ ಗಂಭೀರವಾಗಿರುವ ಇವರು ಆಗಾಗ ಜನರನ್ನು ನಗಿಸಬಲ್ಲರು. ಮಾತು ಕಡಿಮೆ ಇರುವ ಇವರಿಗೆ ಭಾವನೆಗಳನ್ನು ವ್ಯಕ್ತಪಡಿಸುವುದು ಕಷ್ಟವೆನಿಸುತ್ತದೆ.
undefined
ಫೆಬ್ರವರಿ(February)
ಫೆಬ್ರವರಿಯಲ್ಲಿ ಹುಟ್ಟಿದವರು ತುಂಬಾ ಪ್ರಾಮಾಣಿಕರು, ಸತ್ಯವಂತರು(truthful). ಮಾನವೀಯತೆ ಜಾಸ್ತಿ ಇರುವ ಇವರು ತಮ್ಮ ಗೆಳೆಯರು, ಪ್ರೀತಿ ಪಾತ್ರರ ಜೊತೆಗೆ ನಂಬಿಕೆಯನ್ನು ಉಳಿಸಿಕೊಂಡಿರುತ್ತಾರೆ. ಬಹಳ ಸ್ನೇಹಶೀಲರಾಗಿರುವ ಇವರಲ್ಲಿ ಬದಲಾಗುವ ಜಗತ್ತಿಗೆ ಸರಿಯಾಗಿ ಯೋಚನೆಗಳನ್ನು ಬದಲಾಯಿಸಿಕೊಳ್ಳುವ ಗುಣವಿದೆ. ಸ್ವಲ್ಪ ಕಲಾತ್ಮಕ(artistic) ಬುದ್ಧಿಯವರಾದ ಇವರು ಸಾಹಸಕ್ಕೂ ಹೆದರುವವರಲ್ಲ.
ಮಾರ್ಚ್(March)
ಮಾರ್ಚ್‌ನಲ್ಲಿ ಜನಿಸಿದವರು ಬಹಳ ವಿಶಿಷ್ಠ ವ್ಯಕ್ತಿತ್ವ(unique personality) ಹೊಂದಿರುತ್ತಾರೆ. ನಿಮ್ಮ ವಿಶಿಷ್ಠ ಗುಣಗಳು ನಿಮ್ಮನ್ನು ಹತ್ತು ಜನರ ನಡುವೆ ಎದ್ದು ಕಾಣಿಸುವಂತೆ ಮಾಡುತ್ತವೆ. ರೊಮ್ಯಾಂಟಿಕ್, ಕನಸುಗಾರರು, ಸೂಕ್ಷ್ಮ(sensitive) ಸ್ವಭಾವದವರು, ಭಾವಜೀವಿಗಳು. ಈ ಎಲ್ಲ ಕಾರಣಗಳಿಂದಾಗಿ ಅತ್ಯುತ್ತಮ ಪ್ರೇಮಿಯಾಗಬಲ್ಲಿರಿ. ಸಂಬಂಧಗಳಲ್ಲಿ ನಿಸ್ವಾರ್ಥಿಗಳಾಗಿರುತ್ತೀರಿ. ಚೆಂದದ ಸಂಗತಿಗಳಿಗೆ ಬೇಗ ಆಕರ್ಷಿತರಾಗುತ್ತೀರಿ.
ಏಪ್ರಿಲ್(April)
ಈ ತಿಂಗಳಲ್ಲಿ ಹುಟ್ಟಿದವರು ಅತಿರೇಖದ ಭಾವನೆಗಳು ಹಾಗೂ ಗುಣಗಳನ್ನು ಹೊಂದಿರುತ್ತಾರೆ. ಸಿಕ್ಕಾಪಟ್ಟೆ ಧೈರ್ಯ, ಸ್ವಾತಂತ್ರ್ಯ ಪ್ರಿಯರು. ಸದಾ ಎನರ್ಜೆಟಿಕ್ ಆಗಿದ್ದು, ಔಟ್‌ಗೋಯಿಂಗ್ ಆಗಿರುತ್ತಾರೆ. ಗೆಳೆತನ(friendship)ಕ್ಕೆ ತುಂಬಾ ಬೆಲೆ ಕೊಡುತ್ತಾರೆ. ಬಹಳ ಪ್ರೀತಿಪಾತ್ರರು, ತುಂಬಾ ಭಾವಜೀವಿಗಳು ಹಾಗೂ ಗೆಲ್ಲಬೇಕೆಂಬ ಹಟದವರು. ಒಂದು ವೇಳೆ ಸೋಮಾರಿಗಳಾದರೆ, ಅದೂ ಅತಿರೇಖವೇ ಆಗಿರುತ್ತದೆ. ಯಾರನ್ನಾದರೂ ದ್ವೇಷಿಸಿದರೂ ಅತಿಯಾಗಿ ದ್ವೇಷಿಸುತ್ತಾರೆ. ಯಾರನ್ನೇ, ಏನನ್ನೇ ಬಯಸಿದರೂ ಅದು ಅವರಿಗೆ ಸಿಗುತ್ತದೆ.
Aksharabhyasam: ನಿಮ್ಮ ಪುಟ್ಟ ಕಂದನಿಗೆ ಅಕ್ಷರಾಭ್ಯಾಸ ಮಾಡಿಸಿದ್ರಾ?
ಮೇ(May)
ಮೇ ತಿಂಗಳಲ್ಲಿ ಜನಿಸಿದವರು ಹಟಮಾರಿಗಳು(stubborn) ಹಾಗೂ ಸ್ವಾವಲಂಬಿಗಳು. ಮಹತ್ವಾಕಾಂಕ್ಷೆಯ ಜೊತೆ ಸಾಧಿಸಬೇಕಾದ ಛಲವೂ ಹೆಚ್ಚಿರುತ್ತದೆ. ಅವರು ಪ್ರೀತಿ ಹಾಗೂ ಗಮನಕ್ಕಾಗಿ ಹಂಬಲಿಸುತ್ತಾರೆ. ದೈಹಿಕವಾಗಿಯೂ ಆಕರ್ಷಕವಾಗಿರುವ ಇವರ ಮನೋಬಲವೂ ಜೋರಾಗಿಯೇ ಇರುತ್ತದೆ. ಕಲೆಯನ್ನು ಪ್ರೀತಿಸುವ ಇವರು ಏನೇ ಮಾಡಿದರೂ ಪೂರ್ತಿ ಮನಸ್ಸಿಂದ ಮಾಡುತ್ತಾರೆ. ದೊಡ್ಡ ಕನಸುಗಾರರಾದರೂ ರಿಯಾಲಿಟಿ ಬಿಟ್ಟು ಹೊರಗೆ ಹೋಗುವುದಿಲ್ಲ.
ಜೂನ್(June)
ಜೂನ್‌ನಲ್ಲಿ ಜನಿಸಿದವರು ಸಿಕ್ಕಾಪಟ್ಟೆ ಸೋಷ್ಯಲ್. ತುಂಬಾ ಮಾತುಗಾರ(talkative)ರಾದ ಇವರು ಎಲ್ಲಿಯೇ ಬಿಟ್ಟರೂ ಜಯಿಸಿ ಬರಬಲ್ಲರು. ಬಹಳ ಆಕರ್ಷಕರಾದ ಇವರು ತಮ್ಮ ರೂಪ, ಹಾಗೂ ಸ್ಥಾನಮಾನದ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ಫ್ಯಾಶನ್, ಮೂವಿ, ಸಂಗೀತದಲ್ಲಿ ಉತ್ತಮ ಅಭಿರುಚಿ ಹೊಂದಿರುತ್ತಾರೆ. ದೂರದೃಷ್ಟಿಯೂ ವಿಭಿನ್ನವಾಗಿರುತ್ತದೆ, ಹಾಸ್ಯಪ್ರಜ್ಞೆ(sense of humour)ಯೂ ವಿಶೇಷವಾಗಿರುತ್ತದೆ. ಯಾವ ವಾದದಲ್ಲೂ ಸೋಲುವವರಲ್ಲ.
Parenting Challenge: ರಾಶಿಯ ಅನುಸಾರ, ತಾಯಿಯಾಗಿ ನೀವು ಹೇಗಿರಲಿದ್ದೀರಿ?
ಜುಲೈ(July)
ಜುಲೈನಲ್ಲಿ ಜನಿಸಿದವರು ಪರ್ಫೆಕ್ಷನಿಸ್ಟ್‌ಗಳು. ತಮ್ಮ ಸುತ್ತಲಿರುವವರಿಗೆ ಪ್ರೇರಣೆಯಾಗಬಲ್ಲ ಸಾಮರ್ಥ್ಯದವರು. ತಮ್ಮ ಕುಟುಂಬವನ್ನು ಅತಿಯಾಗಿ ಪ್ರೀತಿಸುವ ಇವರು, ಪ್ರೀತಿಪಾತ್ರರ ವಿಷಯದಲ್ಲಿ ಸಿಕ್ಕಾಪಟ್ಟೆ ರಕ್ಷಣಾತ್ಮಕವಾಗಿ ವರ್ತಿಸುತ್ತಾರೆ. ಶ್ರಮಜೀವಿಗಳು ಹಾಗೂ ಆರ್ಥಿಕ ಭದ್ರತೆ(financial security)ಗೆ ಪ್ರಾಮುಖ್ಯತೆ ಕೊಡುವವರು. ಬಹಳ ಸೂಕ್ಷ್ಮ ಸ್ವಭಾವದವರಾದ ಇವರು ಹುಟ್ಟಾ ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರುತ್ತಾರೆ. ಮೂಡಿ ಗುಣಕ್ಕಾಗಿ ಆಪ್ತವಲಯದಲ್ಲಿ ಹೆಸರಾಗಿರುತ್ತಾರೆ.
ಆಗಸ್ಟ್(August)
ತಮ್ಮನ್ನು ಅತಿಯಾಗಿ ಪ್ರೀತಿಸಿಕೊಳ್ಳುವ ಇವರು, ಇತರರಿಗಿಂತ ತಾನು ಹೆಚ್ಚು ಎಂಬಂತೆ ವರ್ತಿಸುತ್ತಾರೆ. ಆತ್ಮವಿಶ್ವಾಸ(confident) ಹಾಗೂ ಮನೋಬಲ ಹೆಚ್ಚಿರುವುದರಿಂದ ಯಶಸ್ಸು ಇವರ ಹಾದಿಯಲ್ಲಿರುತ್ತದೆ. ಧೈರ್ಯ ಜಾಸ್ತಿ ಇರುವ ಇವರು ಸಂಬಂಧಗಳಲ್ಲಿ ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಡಾಮಿನೇಟಿಂಗ್ ಆಗಿರುವ ಇವರು ನೇರಾನೇರ ಮಾತನಾಡುತ್ತಾರೆ.
ಪ್ರೇಮ ಸಂಬಂಧ ಸದಾ ಸೌಖ್ಯವಾಗಿರಲು ಇಲ್ಲಿವೆ vastu Tips
ಸೆಪ್ಟೆಂಬರ್(September)
ಈ ತಿಂಗಳಲ್ಲಿ ಜನಿಸಿದವರ ಜೊತೆಗಿರುವುದೇ ಮೋಜು. ಸದಾ ಸಂತೋಷದಿಂದ ಇರುವ ಇವರು ಒಳ್ಳೆಯ ಯೋಚನೆಯನ್ನೇ ಮಾಡುತ್ತಾರೆ, ಒಳ್ಳೆಯ ಮಾತುಗಳನ್ನಾಡುತ್ತಾರೆ. ಬುದ್ಧಿವಂತರು, ಸೂಕ್ಷ್ಮಮತಿಗಳು ಹಾಗೂ ಮಾತಿನಿಂದ ಯಾರನ್ನು ಬೇಕಾದರೂ ಗೆಲ್ಲಬಲ್ಲವರು. ಇವರ ನಿಸ್ವಾರ್ಥ ಗುಣ ಹಾಗೂ ಜೀವನದ ಬಹುತೇಕ ಸಂಗತಿಗಳನ್ನು ಮೆಚ್ಚುವ ಗುಣದಿಂದಾಗಿ ಕಿರಿಯರಿಂದ ಹಿರಿಯರವರೆಗೆ ಎಲ್ಲರಿಗೂ ಇಷ್ಟವಾಗುತ್ತಾರೆ.
ಅಕ್ಟೋಬರ್(October)
ಈ ತಿಂಗಳಲ್ಲಿ ಹುಟ್ಟಿದವರು ಹೆಚ್ಚು ಉತ್ಸಾಹಿಗಳು ಹಾಗೂ ಆಕರ್ಷಕರು. ತಮ್ಮನ್ನು ಭೇಟಿಯಾದವರಲ್ಲೆಲ್ಲ ಪಾಸಿಟಿವ್ ಆಗಿ ಪ್ರೇರೇಪಿಸಬಲ್ಲ ಗುಣದವರು. ಶಾಂತಿ ಬಯಸುವ ಇವರು ಸಾಧ್ಯವಾದಷ್ಟು ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ. ಹಗಲುಗನಸು ಕಾಣುವವರು, ಬಹಳ ರೊಮ್ಯಾಂಟಿಕ್ ಹಾಗೂ ಪ್ರಾಮಾಣಿಕ ಪ್ರೇಮಿಗಳು(loyal lovers). ನ್ಯಾಯದಲ್ಲಿ ನಂಬಿಕೆ ಉಳ್ಳ ಇವರು ಬಹಳ ಸೃಜನಶೀಲರು. ಸವಾಲುಗಳನ್ನು ಪ್ರೀತಿಯಿಂದಲೇ ಎದುರಿಸಬಲ್ಲ ಇವರು ಹುಟ್ಟಾ ಸ್ಪರ್ಧಿಗಳು.
ನವೆಂಬರ್(November)
ನವೆಂಬರ್‌ನಲ್ಲಿ ಜನಿಸಿದವರು ಹೊಸ ರೀತಿಯಲ್ಲಿ ಯೋಚಿಸಬಲ್ಲವರು. ಸಿಕ್ಕಾಪಟ್ಟೆ ಪ್ರತಿಭಾನ್ವಿತರು ಹಾಗೂ ಶ್ರಮಜೀವಿಗಳು. ಹಟ ಹೆಚ್ಚಿರುವ ಇವರನ್ನು ಬಹುತೇಕರು ಅಪಾರ್ಥ ಮಾಡಿಕೊಳ್ಳುವುದು ಹೆಚ್ಚು. ನಾಚಿಕೆ ಸ್ವಭಾವದವರಾದ ಇವರು ಗುಟ್ಟು ಮಾಡುತ್ತಾರೆ. ನೋಡಲು ಚೆನ್ನಾಗಿರುವ ಇವರು ಆಕರ್ಷಕರಾಗಿರುತ್ತಾರೆ. ಸದಾ ಕಾಮ್ ಆಗಿರುತ್ತಾರೆ.
ಡಿಸೆಂಬರ್(December)
ಈ ತಿಂಗಳಲ್ಲಿ ಜನಿಸಿದವರಿಗೆ ತಮ್ಮ ಬಗ್ಗೆ ಹೆಮ್ಮೆ ಇರುತ್ತದೆ. ಸೆಕ್ಸೀ, ಮಹತ್ವಾಕಾಂಕ್ಷಿಗಳು ಹಾಗೂ ಉತ್ತಮ ಹಾಸ್ಯ ಪ್ರಜ್ಞೆ ಹೊಂದಿದವರು. ತೋರಿಕೆ ಗುಣ ಇವರಲ್ಲಿಲ್ಲ. ನಂಬಿಕಸ್ಥರು, ಪ್ರಾಮಾಣಿಕರು ಹಾಗೂ ಕೊಡುವ ಸ್ವಭಾವದವರು. ಸುತ್ತಲಿದ್ದವರನ್ನು ರಂಜಿಸಬಲ್ಲರು. ತಾಳ್ಮೆ ಸ್ವಲ್ಪ ಕಡಿಮೆ ಇರುವುದರಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುವವರು. ಗಮನ ಪಡೆದುಕೊಳ್ಳುವುದನ್ನು ಎಂಜಾಯ್ ಮಾಡುತ್ತಾ ಲಾಜಿಕಲ್ ಆಗಿರುತ್ತಾರೆ.