Temple Special: ಇಲ್ಲಿನ ರಕ್ತ ಚಾಮುಂಡಿ ಬಳಿ ದೂರು ಹೇಳಿಕೊಂಡರೆ ಸಾಲ ವಾಪಸ್ ಬರೋದು ಗ್ಯಾರಂಟಿ!

Published : Feb 01, 2022, 03:15 PM IST
Temple Special: ಇಲ್ಲಿನ ರಕ್ತ ಚಾಮುಂಡಿ ಬಳಿ ದೂರು ಹೇಳಿಕೊಂಡರೆ ಸಾಲ ವಾಪಸ್ ಬರೋದು ಗ್ಯಾರಂಟಿ!

ಸಾರಾಂಶ

ಈ ದೇವಾಲಯದ ರಕ್ತ ಚಾಮುಂಡಿ ಬಳಿ ದೂರು ಹೇಳಿಕೊಂಡರೆ ಸಾಲ ಪಡೆದವರು ತಕ್ಷಣ ಸಾಲ ತೀರಿಸುತ್ತಾರೆ. ಇಲ್ಲದಿದ್ದಲ್ಲಿ ಅವರು ಬಹಳಷ್ಟು ಕಷ್ಟನಷ್ಟ ಅನುಭವಿಸಬೇಕಾಗುತ್ತದೆ. ಎಲ್ಲಿದೆ ಈ ದೇವಾಲಯ?

ಗೆಳೆಯ(friend) ಕಷ್ಟದಲ್ಲಿದ್ದಾಗ ಸಾಲ ಕೊಟ್ಟಿದ್ದು, ಈಗ ಕೊಟ್ಟ ಸಾಲ ಕೇಳಿದರೆ ನೆಪ ಹೇಳುತ್ತಾ ತಾನು ಬದುಕಿನಲ್ಲಿ ಆರಾಮಾಗಿ ಖರ್ಚು ಮಾಡಿಕೊಂಡು ಹಾಯಾಗಿದ್ದಾನಾ? ವ್ಯಾಪಾರದಲ್ಲಿ ಕೊಟ್ಟ ಸಾಲ, ಕೇಳಿದ್ರೆ ಬೆದರಿಸಿ ಬಾಯಿ ಮುಚ್ಚಿಸುತ್ತಿದ್ದಾರಾ? ಯಾರಿಗೋ ಸಹಾಯ ಮಾಡಲು ಕೊಟ್ಟ ಹಣ, ಕೈ ತುಂಬಾ ದುಡ್ಡು ಬಂದಾಗ ಮರೆತಂತೆ ನಟಿಸುತ್ತಾ ತಲೆ ಮರೆಸಿಕೊಂಡು ಓಡಾಡುತ್ತಾರಾ? ಪಾಲುದಾರಿಕೆಯಲ್ಲಿ ಮೋಸ ಮಾಡಿ ನಿಮಗೆ ಬರಬೇಕಾದ ಹಣ ಬಂದಿಲ್ಲವೇ? ಹಾಗಿದ್ದರೆ ನೀವೆಲ್ಲರೂ ಹೋಗಬೇಕಾದ್ದು ಒಂದೇ ಸ್ಥಳಕ್ಕೆ. ಅದೇ ಈ ರಕ್ತ ಚಾಮುಂಡಿ ದೇವಾಲಯ. 

ಎಲ್ಲಿದೆ ದೇವಾಲಯ(temple)?
ಈ ದೇವಾಲಯವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀರ್ಥ(Ambuteertha)ದಲ್ಲಿದೆ. ಇಲ್ಲಿ ಬಹಳ ಹಿಂದೆ ತಾಯಿಗೆ ರಕ್ತ ಬಲಿ ಕೊಡುತ್ತಿದ್ದ ಕಾರಣ ಆಕೆಗೆ ರಕ್ತ ಚಾಮುಂಡಿ ಎಂಬ ಹೆಸರು ಬಂದಿದೆ. 

ಸಾಲ(debt) ಮರುಪಾವತಿ ಹೇಗಾಗುತ್ತದೆ?
ಕೊಟ್ಟ ಸಾಲವು ಹಿಂತಿರುಗಿ ಬರುತ್ತಿಲ್ಲ ಎಂದಾದಾಗ ವ್ಯಕ್ತಿಯು ಇಲ್ಲಿ ಬಂದು ರಕ್ತ ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ ನಿಂತು, ತಮಗೆ ಇಂಥವರಿಂದ ಹೀಗೆ ಅನ್ಯಾಯವಾಗಿದೆ ಎಂದು ದೂರು ಹೇಳಿಕೊಂಡು ಅವರ ಮನೆಯ ವಿಳಾಸ ಕೊಡಬೇಕು. ಆಗ ದೇವಾಲಯದಿಂದ ಸಾಲ ತೆಗೆದುಕೊಂಡವರ ಮನೆಗೆ ಕೂಡಲೇ ಹಣ(money) ಹಿಂದಿರುಗಿಸುವಂತೆ ನೋಟಿಸ್ ಪತ್ರ ಹೋಗುತ್ತದೆ. ಹೆಚ್ಚಿನವರು ಕೂಡಲೇ ಹಣ ಹಿಂದಿರುಗಿಸುತ್ತಾರೆ. ಒಂದು ವೇಳೆ ಈ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಕೊಡದಿದ್ದರೆ ಮತ್ತೂ ಎರಡು ಬಾರಿ ದೇವಾಲಯದಿಂದ ನೋಟಿಸ್ ಹೋಗುತ್ತದೆ. ಅದಕ್ಕೂ ಪ್ರತಿಕ್ರಿಯಿಸದಿದ್ದಾಗ ದೇವಾಲಯದಲ್ಲಿ ಹುಯಿಲು ಕಾಯಿ ಎಂದು ಕಾಯಿಯನ್ನು ಮಂತ್ರಿಸಿ ಒಡೆಯಲಾಗುತ್ತದೆ. ಇದಾದ ವರ್ಷದೊಳಗೆ ಆಪಾದಿತರು ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸುವಂತೆ ಮಾಡುತ್ತಾಳೆ ಚಾಮುಂಡಿ(Chamundi). ಅಪಘಾತ, ಅನಾರೋಗ್ಯ, ಮನೆಯ ವಸ್ತುಗಳ ನಷ್ಟ, ಕುಟುಂಬದಲ್ಲಿ ಕಲಹ.. ಹೀಗೆ ಯಾವುದೇ ರೂಪದಲ್ಲಿ ಅವರಿಗೆ ಬೆದರಿಸುತ್ತಾಳೆ. ಪೆಟ್ಟು ತಿಂದ ಮೇಲೆ ಬುದ್ಧಿ ಕಲಿವ ಹಲವರು ನಂತರದಲ್ಲಿ ಬಂದು ತಪ್ಪಾಯ್ತು ಎಂದು ಕೋರಿಕೊಂಡು ಹಣ ಹಿಂದಿರುಗಿಸುತ್ತಾರೆ. ಇಂಥ ಅದೆಷ್ಟೋ ಪ್ರಕರಣಗಳಿಗೆ ಈ ದೇವಾಲಯ ಸಾಕ್ಷಿಯಾಗಿದೆ. 

Signs Interpretation: ಅಚಾನಕ್ ಜೇಬಿನಿಂದ ನಾಣ್ಯ ಬಿದ್ರೆ ಅದು ಶುಭವೋ ಅಶುಭವೋ?

ಕೋರ್ಟ್‌ನಲ್ಲಿಯೂ ಬಗೆಹರಿಯದ ಹಣಕಾಸಿನ ವಿಷಯಗಳು(money matters), 25 ವರ್ಷಕ್ಕೂ ಹಳೆಯ ಕೇಸ್‌ಗಳೆಲ್ಲ ಈ ದೇವಾಲಯದಲ್ಲಿ ಲೀಲಾಜಾಲವಾಗಿ ಇತ್ಯರ್ಥವಾದ ಉದಾಹರಣೆಗಳಿವೆ. 

ಸಂತಾನ ಭಾಗ್ಯ
ಕೇವಲ ಸಾಲ ಮರು ಪಾವತಿ ಮಾತ್ರವಲ್ಲ. ಮಕ್ಕಳಾಗದ ದಂಪತಿ ಇಲ್ಲಿ ಬಂದು ಕೋರಿಕೊಂಡ ನಂತರದಲ್ಲಿ ಸಂತಾನ ಭಾಗ್ಯದಿಂದ ಸಂತುಷ್ಟರಾಗಿದ್ದಾರೆ. ಮಗುವಾದ ಬಳಿಕ ಇಲ್ಲಿಗೆ ಬಂದು ತಾಯಿಗೆ ಸೀರೆ, ರವಿಕೆ, ಬಾಗೀನವನ್ನು ಒಪ್ಪಿಸಿ ಹೋಗುತ್ತಾರೆ. 

ಇಂದು Purandara Dasa ಪುಣ್ಯತಿಥಿ, ಕರ್ನಾಟಕ ಸಂಗೀತ ಪಿತಾಮಹನ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು

ಬಹಳ ಹಿಂದೆಲ್ಲ ಈ ಭಾಗದಲ್ಲಿ ಸುತ್ತಮುತ್ತ ಕಳ್ಳತನಗಳಾದಾಗ ಈ ಚಾಮುಂಡಿಗೆ ಹೇಳಿಕೊಂಡರೆ ಸಾಕು, ಕಳ್ಳತನದ ಮಾಲನ್ನು ದೇವಾಲಯದ ಬಳಿಯೋ, ಮನೆಯ ಬಳಿಯೋ ಇಟ್ಟು ಹಿಂದಿರುಗಿಸುತ್ತಿದ್ದರು. ಈಗ ಆಸ್ತಿ ಪಾಸ್ತಿ ಕಾಪಾಡಿಕೊಳ್ಳಲು ರಕ್ತ ಚಾಮುಂಡಿಯಲ್ಲಿ ಬೇಡಿಕೊಂಡು ಇಲ್ಲಿಂದ ಬೋರ್ಡ್ ಬರೆಸಿಕೊಂಡು ಹೋಗಿ ತಮ್ಮ ಆಸ್ತಿ ಜಾಗದಲ್ಲಿ ಹಾಕಿಕೊಳ್ಳುತ್ತಾರೆ. ಅಂದರೆ, ಈ ಸ್ಥಳಕ್ಕೆ ರಕ್ತ ಚಾಮುಂಡಿಯ ರಕ್ಷೆ ಇದೆ ಎಂದು ಬೋರ್ಡ್ ಬರೆಸಿ ಹಾಕಿದರೆ ಮತ್ತೆ ಆ ನಿವೇಶನ, ತೋಟ ಗದ್ದೆಗೆ ಯಾವ ಕಳ್ಳರ ಭಯವೂ ಇರುವುದಿಲ್ಲ. ತಾಯಿಯೇ ಅದಕ್ಕೆ ರಕ್ಷೆ ಒದಗಿಸುತ್ತಾಳೆ. 

ಪ್ರತಿ ಹುಣ್ಣಿಮೆ ಹಾಗೂ ಅಮಾವಾಸ್ಯೆಗೆ ಈ ದೇವಾಲಯದಲ್ಲಿ ಗಣ ಬರುತ್ತದೆ. ಈ ಸಂದರ್ಭದಲ್ಲಿ ಕಷ್ಟ ಕಂಡವರು ಪ್ರಶ್ನೆ ಕೇಳಲು ದೇವಾಲಯಕ್ಕೆ ಬರುತ್ತಾರೆ. ಜಾನುವಾರು ಮನೆಗೆ ಹಿಂದಿರುಗದಿದ್ದರೆ, ಮನೆಯಲ್ಲಿ ಕಳ್ಳತನವಾಗಿದ್ದರೆ, ಇತರೆ ಯಾವುದೇ ಸಮಸ್ಯೆ ಇದ್ದರೂ ಇಲ್ಲಿ ಗಣದ ಬಳಿ ಪ್ರಶ್ನೆ ಕೇಳಬಹುದು. ಪ್ರಸಾದ ಮಂತ್ರಿಸಿ ಕೊಡಲಾಗುತ್ತದೆ. ತಮ್ಮ ವಸ್ತು, ಜಾನುವಾರು ಸಿಕ್ಕ ನಂತರ ಇಲ್ಲಿಗೆ ಬಂದು ಹರಕೆ ಒಪ್ಪಿಸುವವರ ಸಂಖ್ಯೆ ಸಾಕಷ್ಟಿದೆ. 
 

PREV
Read more Articles on
click me!

Recommended Stories

ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ
ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ