ಇಲ್ಲೊಂದು ಭ್ರಾಮಕ ಚಿತ್ರವಿದೆ. ಅದನ್ನು ನೋಡಿದ ಕೂಡಲೇ ನಿಮಗೇನು ಕಾಣಿಸುತ್ತದೆಯೋ ಅದು ನಿಮ್ಮ ವ್ಯಕ್ತಿತ್ವದ ಕೆಲ ಲಕ್ಷಣಗಳನ್ನು ಹೇಳುತ್ತದೆ. ಹಾಗಿದ್ದರೆ, ಈ ಚಿತ್ರದಲ್ಲಿ ನೀವು ಮೊದಲು ನೋಡಿದ್ದು ಏನನ್ನು ಹೇಳಿ ನೋಡೋಣ..
ಇದೊಂದು ಮನಃಶಾಸ್ತ್ರದ ಆಟ ಅಂತಲೇ ಅಂದುಕೊಳ್ಳಿ ಅಥವಾ ಪರೀಕ್ಷೆ ಎಂದರೂ ಸರಿ. ನೀವು ಚಿತ್ರ ನೋಡಿ ಏನು ಕಂಡಿರಿ ಎಂದು ಹೇಳಿದರೆ, ನಿಮ್ಮ ವ್ಯಕ್ತಿತ್ವವೇನು ಎಂಬುದನ್ನು ನಾವು ಹೇಳುತ್ತೇವೆ. ಹೌದು, ಇಲ್ಲೊಂದು ದೃಷ್ಟಿ ಭ್ರಮೆ(optical illusion)ಯ ಚಿತ್ರವಿದೆ. ಇದನ್ನು ಸ್ವಲ್ಪ ಹೆಚ್ಚು ಸಮಯ ನೋಡಿದಾಗ ನಿಮಗೆ ಸಾಕಷ್ಟು ವಿಷಯಗಳು ಗೋಚರಿಸುತ್ತವೆ. ಆದರೆ, ಮೊದಲ ನೋಟಕ್ಕೆ ಕಾಣೋದಕ್ಕೂ ನಿಮ್ಮ ವ್ಯಕ್ತಿತ್ವಕ್ಕೂ ಸಂಬಂಧವಿರುತ್ತದೆ. ಕಲಾವಿದರ ರಚನೆಯ ಇಂಥ ಚಿತ್ರಗಳು ವಾವ್ ಎನಿಸುವ ಜೊತೆಗೆ, ತಲೆಗೂ ಕೆಲಸ ಕೊಡುತ್ತವೆ, ಎರಡನೇ ಬಾರಿ ಅವುಗಳ ಕಡೆ ನೋಡುವಂತೆ ಮಾಡುತ್ತವೆ.
ಹೌದು, ದೃಷ್ಟಿ ವಿಷಯದಲ್ಲಿ ಭ್ರಮೆ ಸೃಷ್ಟಿಸುವ ಫೋಟೋಗಳು ನಮ್ಮ ವ್ಯಕ್ತಿತ್ವವನ್ನು ಕೆಣಕುತ್ತವೆ. ಗೊಂದಲ ಹುಟ್ಟಿಸುವ ಇಂಥ ಫೋಟೋಗಳನ್ನು ನಮ್ಮ ಯೋಚನೆಗಳು, ಚಿಂತನೆಗಳು, ಅನುಭವಗಳಿಗೆ ತಕ್ಕಂತೆ ಅಂದಾಜಿಸುತ್ತೇವೆ, ಅರ್ಥೈಸುತ್ತೇವೆ. ಒಂದೇ ಚಿತ್ರದಲ್ಲಿ ಒಬ್ಬೊಬ್ಬರಿಗೆ ಒಂದು ವಿಷಯ ಪ್ರಮುಖವಾಗಿ ಕಾಣಬಹುದು. ಈಗ ಸಧ್ಯ ಈ ಕೆಳಗೆ ನೀಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದ ಕೂಡಲೇ ನಿಮಗೇನು ಕಾಣುತ್ತದೋ ನೋಡಿ. ಇದರಲ್ಲಿ ಒಬ್ಬ ಪುಸ್ತಕ ಓದುತ್ತಿರುವ ವ್ಯಕ್ತಿ ಇದ್ದಾನೆ, ಮರವಿದೆ, ಮತ್ತೊಂದು ಮುಖವಿದೆ. ಈ ಚಿತ್ರಗಳಲ್ಲಿ ನಿಮಗೆ ಮೊದಲು ಯಾವುದು ಕಾಣಿಸುತ್ತದೆಯೋ ಪ್ರಾಮಾಣಿಕವಾಗಿ ಅದನ್ನೇ ಹೇಳಿದರೆ ಅದು ನಿಮ್ಮ ಬಗ್ಗೆ ಏನು ಹೇಳುತ್ತದೆ ಹೇಳಬಹುದು.
ಕೇರಿಂಗ್, ಲವಿಂಗ್ ರಿಲೇಶನ್‌ಶಿಪ್‌ಗೆ ಈ 4 ರಾಶಿಯವರು ಬೆಸ್ಟ್!
ಈಗ ಈ ಚಿತ್ರದಲ್ಲಿ ಯಾವ ಚಿತ್ರ ಮೊದಲು ಕಂಡರೆ ವ್ಯಕ್ತಿತ್ವವನ್ನು ಯಾವ ರೀತಿ ಅರ್ಥೈಸಲಾಗುತ್ತದೆ ಹೇಳುತ್ತೇವೆ.
ಮೊದಲು ಮುಖ(face) ಕಂಡರೆ..
ಈ ಚಿತ್ರದಲ್ಲಿ ನಿಮಗೆ ಮೊದಲು ಮುಖವೇ ಕಂಡರೆ, ನೀವು ಮಾತಾಡುವ ಮೊದಲು ಯೋಚಿಸುವ ಸ್ವಭಾವದವರಲ್ಲ. ಹೆಚ್ಚು ಯೋಚಿಸದೆಯೇ ನಿಮ್ಮ ದೃಷ್ಟಿಕೋನದ ಬಗ್ಗೆ ಹೇಳಿ ಬಿಡುತ್ತೀರಿ. ನಿಮ್ಮ ಗೆಳೆಯರ ಬಗ್ಗೆ ಚೆನ್ನಾಗಿ ತಿಳಿದಿರುತ್ತೀರಿ. ನಿಮ್ಮದೇ ಸ್ವಭಾವದ ಗೆಳೆಯರು ನಿಮಗೆ ಹೆಚ್ಚು ಇಷ್ಟ. ಇತರರ ಬಗ್ಗೆ ಬೇಗ ಜಡ್ಜ್‌ಮೆಂಟ್ ನೀಡುತ್ತೀರಿ. ಆದರೆ, ಅವು ಹೆಚ್ಚಿನ ಬಾರಿ ನಿಜವಾಗಿರುವುದಿಲ್ಲ. ಇವರು ಹೇಳುವ ಮಾತುಗಳು ಹೇಳದಿದ್ದರೆ ಒಳ್ಳೆಯದಿತ್ತು ಎನಿಸುತ್ತವೆ. ಆರನೇ ಇಂದ್ರಿಯ ಜಾಗೃತವಾಗಿದ್ದರೂ, ಮಾತಾಡುವ ಕಲೆ ಗೊತ್ತಿಲ್ಲದೆ ಎಡವುವವರು ಇವರು. ನೀವು ಕೂಡಾ ಮೊದಲು ಮುಖವನ್ನೇ ನೋಡಿದ್ದರೆ, ಯಾವುದನ್ನು ಮಾತಾಡಬೇಕು, ಯಾವುದನ್ನು ಮಾತಾಡದೇ ಉಳಿಯುವುದು ಒಳ್ಳೆಯದು ಎಂಬ ಸಾಮಾಜಿಕ ಕೌಶಲ್ಯವನ್ನು ಕಲಿಯುವತ್ತ ಗಮನ ಹರಿಸಬೇಕು.
ಯಾವ ಸ್ಪರ್ಧೆ ಇದ್ದರೂ ಈ ರಾಶಿಯವರೇ ವಿನ್ನರ್ಸ್ !
ಪುಸ್ತಕ(book) ಓದುತ್ತಿರುವ ವ್ಯಕ್ತಿ ಮೊದಲು ಕಂಡರೆ..
ನಿಮಗೆ ಪುಸ್ತಕ ಓದುತ್ತಿರುವ ವ್ಯಕ್ತಿ ಮೊದಲು ಕಣ್ಣಿಗೆ ಬಿದ್ದರೆ, ನೀವು ಕನಸಿನ ಲೋಕದಲ್ಲಿ(dreamland) ಬದುಕುತ್ತಿದ್ದೀರಿ ಎಂದರ್ಥ. ನೀವು ಕೆಲವೊಮ್ಮೆ ನಿಮ್ಮದೇ ಯೋಚನೆಗಳು ವ್ಯತಿರಿಕ್ತವಾಗಿ ಕಂಡಾಗ, ಅವು ನಿಮಗೆ ಅನುಕೂಲಕರ ರೀತಿಯಲ್ಲಿ ಇಲ್ಲದಾಗ ಅವುಗಳಿಂದಲೇ ದೂರ ಓಡುವ ಸ್ವಭಾವದವರು. ಇದೇನಂಥ ಕೆಟ್ಟ ವಿಷಯವಲ್ಲದಿದ್ದರೂ ಪಲಾಯನವಾದ ಜಾಸ್ತಿ. ನಿಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಾ ಕಾಲ ಕಳೆಯುವ ಗುಣ ನಿಮ್ಮದು. ನಿಮ್ಮದೇ ಯೋಚನೆಗಳಲ್ಲಿ ಎಷ್ಟು ಮುಳುಗಿ ಹೋಗಿರುತ್ತೀರಿ ಎಂದರೆ, ನೀವು ಮತ್ತೊಬ್ಬರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳುವುದೇ ಇಲ್ಲ.
ನೀವೇನಾದರೂ ಮೊದಲು ಮರಗಳನ್ನು(trees) ನೋಡಿದರೆ..
ನಿಮ್ಮ ಕಣ್ಗಳು ಮೊದಲು ಈ ಚಿತ್ರದಲ್ಲಿರುವ ಮರಗಳನ್ನು ಗುರುತಿಸಿದರೆ, ನೀವು ಪ್ರತಿಯೊಂದು ವಿಷಯವನ್ನೂ ಗಂಭೀರವಾಗಿ ಪರಿಗಣಿಸುವ ಸ್ವಭಾವದವರು. ಕಡಿಮೆ ಸಂಬಳ ಬರುವಲ್ಲಿ ಕೆಲಸ ಮಾಡುತ್ತಾ ಅಸಂತೋಷವಾಗಿರಬಲ್ಲಿರಿ ಹೊರತು ಕೆಲಸ ಬದಲಿಸುವ ಧೈರ್ಯ ಮಾಡುವ ಸ್ವಭಾವ ನಿಮ್ಮದಲ್ಲ. ಸಂಬಂಧದಲ್ಲಿ ಸಮಾಧಾನ ಇಲ್ಲದಿದ್ದರೂ ಹೇಗೋ ಅಲ್ಲಿಯೇ ಸಂಭಾಳಿಸಿಕೊಂಡು ಹೋಗುವಿರಿ ಹೊರತು ಅದಕ್ಕಿಂತ ಹೆಚ್ಚಿನದು ಯೋಚಿಸುವ ಧೈರ್ಯ ತೋರಲಾರಿರಿ. ಬದಲಾವಣೆ ಎಂದರೇ ಹೆದರುವ ಗುಣ ನಿಮ್ಮದು.