
ಮುಂಬಯಿಯ ಅಲ್ಟಾಮೌಂಟ್ ರಸ್ತೆಯಲ್ಲಿರುವ ಮುಕೇಶ್ ಅಂಬಾನಿಯವರ ವಿಲಾಸಿ ಭವ್ಯ ಮಹಲು ಆಂಟಿಲಿಯಾ ಇದೀಗ ನೂತನ ಮದುಮಕ್ಕಳಾದ ಅನಂತ್ ಅಂಬಾನಿ- ರಾಧಿಕಾ ಅವರ ಮದುವೆ ಕಾರಣದಿಂದ ಸೊಗಸಾಗಿ ಸಿಂಗರಿಸಲ್ಪಟ್ಟು ರಾರಾಜಿಸಿತು. ಆದರೆ ಈ ಮಹಲು ಬರುವುದಕ್ಕೆ ಮೊದಲು ಇಲ್ಲಿ ಏನಿತ್ತು? ಇದನ್ನು ತಿಳಿದರೆ ನಿಮಗೆ ಆಶ್ವರ್ಯ ಆಗದೇ ಇರದು.
ಇಲ್ಲಿ ಹಿಂದೆ ಒಂದು ಅನಾಥಾಶ್ರಮ ಇತ್ತು ಅಂದರೆ ನಂಬುತ್ತೀರಾ? ಹೌದು. ವಕ್ಫ್ ಬೋರ್ಡ್ ಅಡಿಯಲ್ಲಿ ಚಾರಿಟಿ ನಿರ್ವಹಿಸುವ ಅನಾಥಾಶ್ರಮವಾದ ಕುರಿಂಬೋಯ್ ಇಬ್ರಾಹಿಂ ಖೋಜಾ ಯತೀಂಖಾನಾಗೆ ಈ ಸೈಟ್ ನೆಲೆಯಾಗಿತ್ತು. 1895ರಲ್ಲಿ ಶ್ರೀಮಂತ ಹಡಗು ಮಾಲೀಕರಾದ ಕುರಿಂಬೋಯ್ ಇಬ್ರಾಹಿಂ ಎಂಬವರು ಇದನ್ನು ಸ್ಥಾಪಿಸಿದ್ದರು. ಇದು ಒಂದು ಶತಮಾನಕ್ಕೂ ಹೆಚ್ಚು ಕಾಲ ಹಿಂದುಳಿದ ಸಮುದಾಯದ ಖೋಜಾ ಮಕ್ಕಳಿಗೆ ಸೇವೆ ಸಲ್ಲಿಸಿತು.
2002ರಲ್ಲಿ, ಅನಾಥಾಶ್ರಮವನ್ನು ನಿರ್ವಹಿಸುವ ಟ್ರಸ್ಟ್ ಭೂಮಿಯನ್ನು ಮಾರಾಟ ಮಾಡಲು ಅನುಮತಿ ಕೇಳಿತು. ಮೂರು ತಿಂಗಳ ನಂತರ, ಚಾರಿಟಿ ಕಮಿಷನರ್ ಮಾರಾಟವನ್ನು ಅನುಮೋದಿಸಿದರು. ಆಗ ಸುಮಾರು 3 ಕೋಟಿ ರೂಪಾಯಿ ಮೌಲ್ಯ ಇರಬಹುದಾಗಿದ್ದ ಭೂಮಿಯನ್ನು ಮುಕೇಶ್ ಅಂಬಾನಿಯ ಆಂಟಿಲಿಯಾ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್‌ಗೆ ಕೇವಲ 25 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಯಿತು. ಈ ವ್ಯಾಪಾರ ವಿವಾದವನ್ನು ಹುಟ್ಟುಹಾಕಿತು. ವಹಿವಾಟು ನ್ಯಾಯಸಮ್ಮತವಾಗಿ ನಡೆದಿದೆಯಾ ಇಲ್ಲವಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತು.
ಇನ್ನು ಆಂಟಿಲಿಯಾ ಬಗ್ಗೆ ಹೇಳುವುದಾದರೆ ಅದು ಅಮೇರಿಕನ್ ಆರ್ಕಿಟೆಕ್ಚರಲ್ ಸಂಸ್ಥೆ ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ ಸಂಪತ್ತಿನ ಸಂಕೇತ. ಆಂಟಿಲಿಯಾ 27 ಮಹಡಿಗಳನ್ನು ಹೊಂದಿದೆ. 1.120 ಎಕರೆ ವಿಸ್ತೀರ್ಣದಲ್ಲಿದೆ. ಇದು ಜಿಮ್, ಸ್ಪಾ, ಥಿಯೇಟರ್, ಟೆರೇಸ್ ಗಾರ್ಡನ್, ಈಜುಕೊಳ, ದೇವಸ್ಥಾನ, ಆರೋಗ್ಯ ಸೌಲಭ್ಯಗಳು ಮತ್ತು 168 ಕಾರುಗಳಿಗೆ ಪಾರ್ಕಿಂಗ್‌ನಂತಹ ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ. ಗಮನಾರ್ಹ ವಿಚಾರ ಎಂದರೆ ಆಂಟಿಲಿಯಾ ರಿಕ್ಟರ್ ಮಾಪಕದಲ್ಲಿ 8ರವರೆಗಿನ ಭೂಕಂಪವನ್ನು ತಡೆದುಕೊಳ್ಳಬಲ್ಲದು.
ಮುಖೇಶ್ ಅಂಬಾನಿ ತಿಂಗಳೊಂದಕ್ಕೆ ಕಟ್ಟುವ ಮನೆಯ ವಿದ್ಯುತ್ ಬಿಲ್‌ನಲ್ಲಿ ನಾವೊಂದು ದೊಡ್ಡ ಮನೆಯೇ ಕಟ್ಟಿಸ್ಬೋದು!
ಆಂಟಿಲಿಯಾ ನಿರ್ಮಾಣ 2006ರಲ್ಲಿ ಪ್ರಾರಂಭವಾಯಿತು. 2003 ರಲ್ಲಿ ಬೃಹನ್ ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ (BMC) ನಿಂದ ಅನುಮೋದನೆ ಪಡೆಯಿತು. 2010ರಲ್ಲಿ ಪೂರ್ಣಗೊಂಡಿತು. ನವೆಂಬರ್ 2010ರಲ್ಲಿ ಅಂಬಾನಿ ಕುಟುಂಬ ಆಂಟಿಲಿಯಾದಲ್ಲಿ ಗೃಹ ಪ್ರವೇಶ ಸಮಾರಂಭವನ್ನು ಆಯೋಜಿಸಿತು. ಆದರೆ ತಕ್ಷಣವೇ ಅಲ್ಲಿಗೆ ಸ್ಥಳಾಂತರಗೊಳ್ಳಲಿಲ್ಲ. ಇಲ್ಲಿ ವಾಸ್ತು ದೋಷ ಹಾಗೂ ದುರದೃಷ್ಟ ಇದೆ ಎಂದು ವಾಸ್ತು ತಜ್ಞರು ಹೇಳಿದರು.
ಜೂನ್ 2011ರಲ್ಲಿ, ಸುಮಾರು 50 ಪುರೋಹಿತರು ವಾಸ್ತು ದೋಷವನ್ನು ತೊಡೆದುಹಾಕಲು ಕೆಲವು ಹೋಮ ಮತ್ತಿತರ ಆಚರಣೆಗಳನ್ನು ಮಾಡಿದರು. ಅಂಬಾನಿ ಕುಟುಂಬ ಅಂತಿಮವಾಗಿ ಸೆಪ್ಟೆಂಬರ್ 2011ರಲ್ಲಿ ಇಲ್ಲಿ ನೆಲೆಸಿತು. ವಿಶ್ವದ ಅತ್ಯಂತ ದುಬಾರಿ ಮನೆ ಎನಿಸಿತು. ಒಂದು ಕಾಲದಲ್ಲಿ ದತ್ತಿ ತಾಣವಾಗಿದ್ದ ಇದು ಇಂದು ಅಪಾರ ಸಂಪತ್ತು ಮತ್ತು ವಾಸ್ತುಶಿಲ್ಪದ ಪರಾಕ್ರಮದ ಸಂಕೇತವಾಗಿದೆ. ಈ ಬದಲಾವಣೆಯು ಮುಂಬಯಿಯ ನಗರ ಭೂದೃಶ್ಯದಲ್ಲಿ ಹೊಸ ಅಧ್ಯಾಯವನ್ನು ಪ್ರತಿಬಿಂಬಿಸಿತು.
2014ರಲ್ಲಿ ಇದು ವಿಶ್ವದ ಅತ್ಯಂತ ದುಬಾರಿ ಮನೆ ಎಂದು ಘೋಷಿಸಲಾಯಿತು. ಆಂಟಿಲಿಯಾ ನಿರ್ಮಿಸಲು ಸುಮಾರು 200 ಕೋಟಿ ವೆಚ್ಚವಾಗಿದೆ. ಇಂದು ಅದರ ಬೆಲೆ ಸುಮಾರು 460 ಕೋಟಿ ರೂಪಾಯಿ. ಇಲ್ಲಿ ಸುಮಾರು 600 ಸಿಬ್ಬಂದಿಗಳಿದ್ದಾರೆ. ಇವರಿಗೆ ಲಕ್ಷಗಳಲ್ಲಿ ಸಂಬಳವಿದೆ. ಒಳಾಂಗಣ ವಿನ್ಯಾಸವು ಕಮಲದ ಮತ್ತು ಸೂರ್ಯನ ಆಕಾರಗಳ ಲಕ್ಷಣಗಳನ್ನು ಒಳಗೊಂಡಿದೆ. ಪ್ರತಿ ಮಹಡಿಯೂ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ.
ಕಟ್ಟಡದಲ್ಲಿ ಮೂರು ಹೆಲಿಪ್ಯಾಡ್‌ಗಳಿವೆ. ಆದರೆ ನಿಯಂತ್ರಕ ಸಮಸ್ಯೆಗಳಿಂದಾಗಿ ಅವು ಕಾರ್ಯನಿರ್ವಹಿಸದೇ ಉಳಿದಿವೆ. ಅಂದ ಹಾಗೆ ಆಂಟಿಲಿಯಾ ಎಂಬುದು ಸ್ಪೇನ್‌ನಲ್ಲಿನ ಪೌರಾಣಿಕ ದ್ವೀಪವೊಂದರ ಹೆಸರು.
ವಿಶ್ವದ ಅತಿ ದೊಡ್ಡ ನಿವಾಸದ ಯಜಮಾನಿ ರಾಧಿಕಾ; ಇಲ್ಲ, ಆ್ಯಂಟಿಲಿಯಾ ಬಗ್ಗೆ ಹೇಳ್ತಿಲ್ಲ...