ಯಾವ ರಾಶಿಗೆ ಏನ್ ಸೇವಿಸಿದ್ರೆ ಒಳ್ಳೇದು..? ಸಿಕ್ಕಿದ್ದೆಲ್ಲಾ ತಿಂದ್ರೆ ಸಂಕಷ್ಟ

By Suvarna NewsFirst Published Jan 27, 2021, 4:06 PM IST
Highlights

ನಿಮ್ಮ ದೇಹಪ್ರಕೃತಿ ಕೆಲವು ಆಹಾರವನ್ನು ಬೇಡುತ್ತದೆ. ಕೆಲವನ್ನು ತಿರಸ್ಕರಿಸುತ್ತದೆ. ಯಾವ ರಾಶಿಯವರು ಏನು ಸೇವಿಸಿದರೆ ಉತ್ತಮ, ಏನು ಸೇವಿಸಿದರೆ ಹಾನಿ?

ಮೇಷ
ಸ್ವಲ್ಪ ಉಷ್ಣ ಪ್ರಕೃತಿಯವರು ಇವರು. ಹೀಗಾಗಿ ತಂಪಾಗಿಸುವ ಮಜ್ಜಿಗೆ, ಎಳನೀರು, ಬಾರ್ಲಿ ಮುಂತಾದವನ್ನು ಕುಡಿಯಬೇಕು. ಪಪ್ಪಾಯಿ ಬಿಟ್ಟು ಉಳಿದ ಹಣ್ಣು ಸೇವಿಸಬಹುದು. ಚಪಾತಿ, ಅನ್ನ ಸಮಪ್ರಮಾಣದಲ್ಲಿರಲಿ. ಗೋಧಿ ಸೇವನೆಗಿಂತಲೂ ಜೋಳ ನಿಮಗೆ ಉತ್ತಮ. ರಾಗಿ ಮುದ್ದೆ ಪೌಷ್ಟಿಕ. 

ವೃಷಭ
ಇವರ ದೇಹಪ್ರಕೃತಿಗೆ ಬೇಳೆಕಾಳುಗಳು ಸೂಕ್ತ ಆಹಾರ. ಬೇಳೆಕಾಳುಗಳು ಹಸಿಯಾಗಿ ಅಲ್ಲದೆ ಬೇಯಿಸಿ ಸೇವಿಸಬೇಕು. ಬಿಸಿಬೇಳೆಬಾತ್, ಪೊಂಗಲ್ ಮುಂತಾದ ಆಹಾರ ಸೂಕ್ತ. ಸಂಸ್ಕರಿಸಿದ ಆಹಾರ ತೈಲದ ಸೇವನೆ ಎಂದಿದ್ದರೂ ಅಪಾಯವೇ. ಶುದ್ಧ ತೆಂಗಿನ ಎಣ್ಣೆಯಲ್ಲಿ ಮಾಡಿದ ಪದಾರ್ಥ ಸೇವಿಸಿ. 

ಮಿಥುನ
ದ್ರವಾಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಮೂತ್ರಾಂಗಕೋಶದ ಆರೋಗ್ಯ ಕಾಪಾಡಿಕೊಳ್ಳದಿದ್ದರೆ ಕಿಡ್ನಿ ಸ್ಟೋನ್ ಉಂಟಾಗಬಹುದು. ಗಂಟೆಗೊಮ್ಮೆ ಬಿಸಿನೀರು ಕುಡಿಯಿರಿ. ಊಟದ ಜೊತೆಗೆ ತರಕಾರಿ ಸೂಪ್ ಬೆಸ್ಟ್. ಜಿಡ್ಡು ಪದಾರ್ಥಗಳನ್ನು ಮಿತಿಮೀರಿ ಸೇವಿಸುವುದು ಅಪಾಯ ಎಂಬುದು ಗೊತ್ತಿರಲಿ.

ನಿಮ್ಮ ಕಲೀಗ್ ಯಾವ ರಾಶಿಯವರು? ಥಟ್ ಅಂತ ಹೇಳಿ! ...

ಕಟಕ
ಅಕ್ಕಿಯ ಐಟಂಗಳ ಹಾಗೇ ಗೋಧಿ, ಜೋಳದ ಐಟಂಗಳೂ ನಿಮ್ಮ ಮೆನುವಿನಲ್ಲಿ ಇರಲಿ. ಆದರೆ ಸಕ್ಕರೆ ಮತ್ತು ಉಪ್ಪು ಕಡಿಮೆ ಮಾಡಿ. ಪನೀರ್ ಮತ್ತು ಉತ್ತರ ಭಾರತದ ಕಡಾಯ್ ಆಹಾರ ಸೇವನೆ ಮಿತಗೊಳಿಸಿ. ಹಾಲು ಕಡಿಮೆ ಮಾಡಿ ಮೊಸರು ಸೇವಿಸುವುದು ಉತ್ತಮ. ತುಪ್ಪವೂ ಜೊತೆಗಿರಲಿ.

ಸಿಂಹ
ಸಿಂಹರಾಶಿಯವರಿಗೆ ಸಿಂಹಪಾಲು ಅಂತಾರಲ್ಲ, ಹಾಗೆ ಸೇವಿಸಲು ಬಯಸುತ್ತಾರೆ. ಆದರೆ ಅದನ್ನು ಖರ್ಚು ಮಾಡಲು ತಕ್ಕ ವ್ಯಾಯಾಮ, ಯೋಗ ಇದ್ದರೆ ಪರವಾ ಇಲ್ಲ. ಮೊಸರು ಕಡಿಮೆ ಮಾಡಿ, ಹಸಿಕಾಳು ಹೆಚ್ಚು ಸೇವಿಸಿ. ಮೊಳಕೆ ಬರಿಸಿದ ಕಾಳುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದು ಉತ್ತಮ.

ಕನ್ಯಾ
ಕಡಲೆಬೀಜ, ಒಣಹಣ್ಣುಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಾಮಾನ್ಯವಾಗಿ ತೆಳ್ಳಗಿರುವುದು ನಿಮ್ಮ ಆರೋಗ್ಯ ಪ್ರಕೃತಿ. ಹೆಚ್ಚು ತೂಕ ಗಳಿಸಿಕೊಳ್ಳಬೇಕಾದರೆ ಮೊಟ್ಟೆಯ ಹಳದಿ ಭಾಗವನ್ನು ಬೆಳಗ್ಗೆ ಸೇವಿಸಿ. ಆಲ್ಕೋಹಾಲ್ ದೂರವಿಡಿ. 

ದ್ರೌಪದಿಯನ್ನು ಐವರು ಪಾಂಡವರು ಹಂಚಿಕೊಂಡದ್ದು ಏಕೆ? ...

ತುಲಾ
ರಾಗಿ ಮುದ್ದೆ ಸೇರಿದಂತೆ ಕಿರು ಧಾನ್ಯದ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ. ಅಕ್ಕಿಯ ಆಹಾರ ಸೇವನೆಯನ್ನು ಮಿತಗೊಳಿಸಿ. ಎರಡು ಹೊತ್ತು ಅನ್ನ ಸೇವಿಸುತ್ತಿದ್ದರೆ ಒಂದು ಹೊತ್ತಿಗೆ ಕಿರುಧಾನ್ಯ ಸೇವಿಸುವುದು ಒಳಿತು. ದಿನಕ್ಕೊಂದು ದಾಳಿಂಬೆ ಹಣ್ಣು ಸೇವಿಸುವುದು ನಿಮಗೆ ರಕ್ತವರ್ಧನೆಗೆ ಸಹಾಯಕ.

ವೃಶ್ಚಿಕ
ಕಿತ್ತಳೆ, ಮೂಸಂಬಿ ಮುಂತಾದ ಹಣ್ಣುಗಳನ್ನು ದೂರವಿಡಿ. ಆದರೆ ಸೇಬು, ದಾಳಿಂಬೆ, ಚಿಕ್ಕು ಸೇವಿಸುವುದು ಉತ್ತಮ. ಆಲೂಗಡ್ಡೆ, ಬಾಳೆಕಾಯಿ ಸೇವನೆ ಕಡಿಮೆ ಮಾಡಿ ಸೊಪ್ಪು ತರಕಾರಿ ಸೇವನೆ ಹೆಚ್ಚು ಮಾಡಬೇಕು. ಎಷ್ಟು ತಿನ್ನುವಿರೋ ಅಷ್ಟೇ ಪ್ರಮಾಣದ ತರಕಾರಿಯೂ ಇರಬೇಕು ಎಂಬುದು ಆರೋಗ್ಯದ ಸೂತ್ರ. 

ಮಕರ
ನೀವು ಈ ವರ್ಷ ಮಾಂಸ ಸೇವನೆ ಕಡಿಮೆ ಮಾಡಲೇಬೇಕು. ಇಲ್ಲದಿದ್ದರೆ ಅಪಾಯವಿದೆ. ಮೀನು ಸೇರಿದಂತೆ ಸಮುದ್ರ ಆಹಾರ ಸೇವಿಸಬಹುದು. ಆದರೆ ರೆಡ್ ಮೀಟ್ ಸೇವಿಸುವುದು ಆರೋಗ್ಯಕ್ಕೆ ಕಷ್ಟ ತಂದೀತು. ನಿಮ್ಮ ಡಯಟ್ ಚಾರ್ಟ್ ಅನ್ನು ವ್ಯಾಯಾಮದ ಜೊತೆಗೆ ಹೊಂದಿಸಿ ಮರು ರೂಪಿಸಿಕೊಳ್ಳಿ.

ನಿಮಗೂ ಇದೆಯಾ ಬಾಲಗ್ರಹ ಪೀಡೆ? ಚೆಕ್ ಮಾಡ್ಕೊಳಿ. ...

ಕುಂಭ
ಡಯಟ್ ಮಾಡುವುದು ನಿಮಗೆ ಆಗಿಬರೋಲ್ಲ. ಡಯಟ್ ಹೆಸರಿನಲ್ಲಿ ನೀವು ಮಾಡುವುದೆಲ್ಲಾ ನಿಮ್ಮ ದೇಹಕ್ಕೆ ಪೌಷ್ಟಿಕತೆ ಸೇರದಂತೆ ತಡೆಯುತ್ತಿವೆ. ಹಾಗಾಗಿ ಈ ವರ್ಷ ಡಯಟ್ ಪ್ಲಾನ್ ಆಚೆಗಿಟ್ಟು, ಆರೋಗ್ಯಕರ ಹಣ್ಣೂ ಹಾಗೂ ತರಕಾರಿ ಹೆಚ್ಚು ಸೇವಿಸಿ. ಹೊಟ್ಟೆಯಲ್ಲಿ ಇನ್ನೂ ಸ್ವಲ್ಪ ಜಾಗ ಇರುವಾಗಲೇ  ಸೇವನೆ ನಿಲ್ಲಿಸಿ.

ಮೀನ
ಹಸಿರಿಗೆ ಹೆಚ್ಚಿನ ಆದ್ಯತೆ ಇರಲಿ. ಅಂದರೆ ಹಸಿರು ತರಕಾರಿ ಹೆಚ್ಚು ಸೇವಿಸಿ. ಕೆಂಪು ಕಡಿಮೆ ಮಾಡಿ. ಅಂದರೆ ಮಾಂಸ ಕಡಿಮೆ ಮಾಡಿ. ಗಡ್ಡೆ ಗೆಣಸಿ ಜಾಸ್ತಿ ಸೇವಿಸಬೇಡಿ. ಆಲ್ಕೋಹಾಲ್ ಜೊತೆಗೆ ಕರಿದ ಪದಾರ್ಥ ಹೆಚ್ಚಾಗಿ ಸೇವಿಸುತ್ತಿದ್ದರೆ ಅದು ಮುಂದಿನ ನರಕಕ್ಕೇ ದಾರಿ ಎಂಬುದನ್ನು ತಿಳಿಯಿರಿ. 

click me!