ಕುಂಭ ರಾಶಿ ಪ್ರವೇಶಿಸಿದ ಬುಧಗ್ರಹ –ಹನ್ನೆರಡು ರಾಶಿಗಳ ಫಲಾಫಲಗಳು...!

By Suvarna News  |  First Published Jan 26, 2021, 7:17 PM IST

ಗ್ರಹಗಳ ರಾಶಿ ಪರಿವರ್ತನೆಯು ವ್ಯಕ್ತಿಯ ಜೀವನದ ಮೇಲೆ ಹಲವಾರು ರೀತಿಯ ಪ್ರಭಾವಗಳನ್ನು ಬೀರುತ್ತವೆ. ಕೆಲವು ಶುಭವಾದರೆ, ಇನ್ನು ಕೆಲವು ಅಶುಭವಾಗಿರುತ್ತದೆ. ಬುಧ ಗ್ರಹವು ಇದೇ ಜನವರಿ 25ರಂದು ಕುಂಭ ರಾಶಿಯನ್ನು ಪ್ರವೇಶಿಸಿದೆ. ಈ ರಾಶಿ ಪರಿವರ್ತನೆಯು ಹಲವು ರಾಶಿಗೆ ಅಶುಭ ಪ್ರಭಾವವನ್ನು ಬೀರಿದರೆ, ಕೆಲವು ರಾಶಿಗೆ ಒಳಿತನ್ನು ಮಾಡಲಿದೆ. ಹಾಗಾದರೆ ಯಾವ್ಯಾವ ರಾಶಿಯವರಿಗೆ ಯಾವ ರೀತಿಯ ಫಲ ತಿಳಿಯೋಣ...
 


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ಮತ್ತು ನಕ್ಷತ್ರಗಳ ಸ್ಥಿತಿ, ಸ್ಥಾನ ಮತ್ತು ಚಲನೆಯು ಜೀವ-ಜಗತ್ತಿನ ಸ್ಥಿತಿಗೆ ಕಾರಣವಾಗಿರುತ್ತದೆ. ಒಂಭತ್ತು ಗ್ರಹಗಳ ಚಲನೆ ಮತ್ತು ಸ್ವಭಾವವು ಪ್ರತಿ ವ್ಯಕ್ತಿಯ ಜೀವನದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಒಂಭತ್ತು ಗ್ರಹಗಳಲ್ಲಿ ಬುಧಗ್ರಹವನ್ನು ತಟಸ್ಥ ಗ್ರಹವೆಂದು ಕರೆಯಲಾಗುತ್ತದೆ. ಇದೇ ಜನವರಿ 25ರಂದು ಬುಧಗ್ರಹವು ಕುಂಭರಾಶಿಗೆ ಪ್ರವೇಶಿಸಿದೆ. ಹಾಗಾಗಿ ಈ ರಾಶಿ ಪರಿವರ್ತನೆಯು ಎಲ್ಲ ರಾಶಿಗಳ ಮೇಲಾಗಲಿದೆ.

ಬುಧಗ್ರಹದ ವಿಚಾರ
ಬುಧಗ್ರಹವು ವಾಣಿ ಕಾರಕ ಗ್ರಹವೆಂದು ಕರೆಯುತ್ತಾರೆ. ಅಂದರೆ ವಾಕ್ಚಾತುರ್ಯಕ್ಕೆ ಹೆಸರಾದ ಗ್ರಹವಾಗಿದೆ. ಜಾತಕದಲ್ಲಿ ಬುಧಗ್ರಹವು ನೀಚ ಸ್ಥಾನದಲ್ಲಿದ್ದರೆ, ಅಂಥವರು ಸಂಕೋಚ ಸ್ವಭಾವವನ್ನು ಹೊಂದಿರುತ್ತಾರೆ. ಎಲ್ಲರೆದುರಿಗೆ ತಮ್ಮ ಅನಿಸಿಕೆಯನ್ನು ಹೇಳಿಕೊಳ್ಳಲು ಹಿಂಜರಿಯುವ ಸ್ವಭಾವ ಇವರದ್ದಾಗಿರುತ್ತದೆ. ಬುಧಗ್ರಹದ ಸ್ಥಿತಿ ಸರಿಯಿಲ್ಲವಾದರೆ ಮಾತಿನ ಮೇಲೆ ಹಿಡಿತವಿಲ್ಲದೆ, ಕಟುವಾಗಿ ಮಾತನಾಡಿ ಆಗುವ ಕೆಲಸವನ್ನು ಹಾಳುಮಾಡಿಕೊಳ್ಳುವಂತಾಗುತ್ತದೆ. ಜಾತಕದಲ್ಲಿ ಲಗ್ನಭಾವದಲ್ಲಿ  ಬುಧಗ್ರಹವಿದ್ದಾಗ ವ್ಯಕ್ತಿಯು ನೋಡಲು ಆಕರ್ಷಕವಾಗಿರುವುದಲ್ಲದೆ, ಸ್ವಭಾವದಲ್ಲಿ ತರ್ಕಬದ್ಧ ಮತ್ತು ವಿನಯವಾಗಿ ಮಾತನಾಡುವ ಕಲೆಯುಳ್ಳವನಾಗಿರುತ್ತಾನೆ.

ಬುಧಗ್ರಹವು ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ ಗ್ರಹವಾಗಿದೆ. ಬುಧಗ್ರಹವು ಮೀನರಾಶಿಯಲ್ಲಿ ನೀಚ ಸ್ಥಿತಿಯಲ್ಲಿರುತ್ತದೆ. ಅದೇ ಕನ್ಯಾ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿರುವ ಗ್ರಹವಾಗಿದೆ. ಸೂರ್ಯದೇವನ ಜೊತೆ ಬುಧಗ್ರಹದ ಯುತಿಯಾದರೆ ಅದನ್ನು ಬುಧಾದಿತ್ಯ ಯೋಗವೆಂದು ಕರೆಯಲಾಗುತ್ತದೆ.

ಇದನ್ನು ಓದಿ: ಲಕ್ಷ್ಮೀ ದೇವಿಯ ಈ ಕೆಲವು ಫೋಟೊ ಮನೆಗೆ ಶುಭವಲ್ಲ..! 

ಬುಧಗ್ರಹದ ರಾಶಿ ಪರಿವರ್ತನೆ
ಇದೇ ಜನವರಿ 25ರಂದು ಬುಧಗ್ರಹವು ಕುಂಭರಾಶಿಗೆ ಪ್ರವೇಶಿಸಿದೆ. ಬುಧಗ್ರಹದ ಈ ರಾಶಿ ಪರಿವರ್ತನೆಯು ಎಲ್ಲ ರಾಶಿಗಳ ಮೇಲಾಗಲಿದೆ. ಈ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಶುಭಾಶುಭ ಫಲಗಳ ಬಗ್ಗೆ ತಿಳಿಯೋಣ...

ಮೇಷ ರಾಶಿ
ಬುಧಗ್ರಹದ ರಾಶಿ ಪರಿವರ್ತನೆಯು ಮೇಷರಾಶಿಗೆ ಅನುಕೂಲಕರವಾಗಿದ್ದು, ಶುಭಫಲವನ್ನು ನೀಡುವುದು ಖಚಿತವಾಗಿದೆ.



ವೃಷಭ ರಾಶಿ
ಬುಧಗ್ರಹವು ವೃಷಭ ರಾಶಿಯವರ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತಾನೆ. ಕಾರ್ಯ ಮತ್ತು ವ್ಯಾಪಾರದಲ್ಲಿ ಉನ್ನತಿ ಲಭಿಸಲಿದೆ.

ಮಿಥುನ ರಾಶಿ
ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಶಕ್ತಿಯು ವೃದ್ಧಿಸಲಿದೆ.

ಕರ್ಕಾಟಕ ರಾಶಿ
ಈ ರಾಶಿಯವರು ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭ ಬರುವ ಸಾಧ್ಯತೆ ಇದೆ.

ಇದನ್ನು ಓದಿ: ಈ ಶಂಖಗಳ ಮನೆಯಲ್ಲಿಡಿ, ಸಖತ್ ಲಾಭ, ಸಮೃದ್ಧಿ ಪಡೆಯಿರಿ!...

ಸಿಂಹ ರಾಶಿ
ಈ ರಾಶಿಯವರು ಶುಭ ಕಾರ್ಯಗಳನ್ನು ಆರಂಭಿಸಲು ಸಮಯ ಅನುಕೂಲವಾಗಿದೆ. ಯಾವುದೇ ಅಡ-ತಡೆಗಳ ಬಗ್ಗೆ ಭಯಪಡುವ ಅಗತ್ಯವಿರುವುದಿಲ್ಲ.

ಕನ್ಯಾ ರಾಶಿ
ಈ ರಾಶಿಯವರಿಗೆ ಕೆಲಸ-ಕಾರ್ಯದಲ್ಲಿ ತೊಂದರೆಗಳು ಎದುರಾಗುತ್ತವೆ. ಸರಿಯಾದ ಸಮಯಕ್ಕೆ ಕೆಲಸಗಳು ಪೂರ್ತಿಗೊಳ್ಳದೆ ಸಮಸ್ಯೆ ಉಂಟಾಗುತ್ತದೆ.

ತುಲಾ ರಾಶಿ
ಈ ರಾಶಿಯವರಿಗೆ ಬುಧ ಗ್ರಹದ ರಾಶಿ ಪರಿವರ್ತನೆಯು ಅತ್ಯಂತ ಯಶಸ್ಸನ್ನು ತಂದುಕೊಡಲಿದೆ. ಪ್ರೇಮ ಸಂಬಂಧಿ ವಿಚಾರಗಳು ಸಫಲತೆಯನ್ನು ಕಾಣುತ್ತವೆ.

ವೃಶ್ಚಿಕ ರಾಶಿ
ಈ ರಾಶಿಯವರಿಗೆ ಜಮೀನು ಮತ್ತು ಆಸ್ತಿಗೆ ಸಂಬಂಧಿಸಿದ ವಿಚಾರಗಳ ಇತ್ಯರ್ಥವಾಗಲಿದೆ. ಮನೆ ಅಥವಾ ವಾಹನ ಖರೀದಿಸಬೇಕೆನ್ನುವ ಸಂಕಲ್ಪ ಪೂರ್ಣಗೊಳ್ಳುತ್ತದೆ.

ಧನು ರಾಶಿ
ಈ ರಾಶಿಯವರಿಗೆ ಬುಧಗ್ರಹದ ಈ ಪರಿವರ್ತನೆಯು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರಿಗೆ ಈ ಪರಿವರ್ತನೆ ಉತ್ತಮ ಲಾಭವನ್ನುಂಟುಮಾಡುತ್ತದೆ.

ಮಕರ ರಾಶಿ
ಈ ರಾಶಿಯವರಿಗೆ ಬುಧಗ್ರಹವು ಧನಭಾವದಲ್ಲಿರುವ ಕಾರಣ ಉದ್ಯೋಗದಲ್ಲಿ ಪದೋನ್ನತ್ತಿಯಾಗಲಿದ್ದು, ಗೌರವಾದರಗಳು ಹೆಚ್ಚಲಿವೆ. ಶಿಕ್ಷಣ ಮತ್ತು ಸ್ಪರ್ಧೆಗಳಲ್ಲಿ ಸಹ ಸಫಲತೆ ದೊರಕಲಿದೆ.

ಕುಂಭ ರಾಶಿ
ಈ ರಾಶಿಯ ವ್ಯಾಪಾರಿಗಳಿಗೆ ಬುಧಗ್ರಹದ ಗೋಚಾರ ಅತ್ಯಂತ ಅನುಕೂಲಕರವಾಗಿದೆ. ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಲಿದ್ದು, ಲಾಭವುಂಟಾಗಲಿದೆ.

ಇದನ್ನು ಓದಿ:

ಮೀನ ರಾಶಿ
ಈ ರಾಶಿಯವರಿಗೆ ಬುಧಗ್ರಹದ ರಾಶಿ ಪರಿವರ್ತನೆಯು ಸಾಧಾರಣ ಫಲವನ್ನು ನೀಡಲಿದೆ. ಇದರಿಂದ ಮೀನ ರಾಶಿಯವರ ಖರ್ಚು ಹೆಚ್ಚಾಗಲಿದೆ.

Tap to resize

Latest Videos

click me!