ನಿಮಗೂ ಇದೆಯಾ ಬಾಲಗ್ರಹ ಪೀಡೆ? ಚೆಕ್ ಮಾಡ್ಕೊಳಿ.
ಬಾಲಗ್ರಹ ಪೀಡೆ ಅಂತ ಬಳಸುವುದನ್ನು ಕೇಳಿದ್ದೇವೆ. ಯಾವುದಾದರೂ ಕೆಲಸ ಆರಂಭದಲ್ಲೇ ನಿಂತುಹೋದರೆ ಅದಕ್ಕೆ ಬಾಲಗ್ರಹ ಪೀಡೆ ಅಂತ ಹೇಳುವುದು ವಾಡಿಕೆ. ಅದಕ್ಕೂ ಬಾಲಗ್ರಹಕ್ಕೂ ಏನು ಸಂಬಂಧ? ಉತ್ತರ ಇಲ್ಲಿದೆ.
ಬಾಲಗ್ರಹ ಪೀಡೆ ಅಂತ ಬಳಸುವುದನ್ನು ಕೇಳಿದ್ದೇವೆ. ಯಾವುದಾದರೂ ಕೆಲಸ ಆರಂಭದಲ್ಲೇ ನಿಂತುಹೋದರೆ ಅದಕ್ಕೆ ಬಾಲಗ್ರಹ ಪೀಡೆ ಅಂತ ಹೇಳುವುದು ವಾಡಿಕೆ. ಅದಕ್ಕೂ ಬಾಲಗ್ರಹಕ್ಕೂ ಏನು ಸಂಬಂಧ? ಉತ್ತರ ಇಲ್ಲಿದೆ.
ಬಾಲಗ್ರಹ ಎಂಬುದು ಯಾವುದೇ ಒಂದು ಗ್ರಹ ಅಲ್ಲ. ಇದೊಂದು ದೋಷ; ಅಥವಾ ಜೀವನಪೂರ್ತಿ ಆವರಿಸಿಕೊಂಡು ಆಗಾಗ ತೊಂದರೆ ಕೊಡುವ ಒಂದು ಪೀಡೆ. ಇದು ಜಾತಕನಿಗೆ ಇದೆಯಾ ಇಲ್ಲವಾ ಅಂತ ಬಾಲ್ಯದಲ್ಲೇ ಗೊತ್ತಾಗುತ್ತದೆ. ಅಂದರೆ ಬಾಲ್ಯದಲ್ಲಿ, ಆತನ ಜಾತಕ ನೋಡಿದಾಗಲೇ ಗೊತ್ತಾಗುತ್ತದೆ. ಹಾಗಾಗಿಯೇ ಇದಕ್ಕೆ ಬಾಲಗ್ರಹ ಎಂದು ಹೆಸರು. ಇದೊಂದು ಹಲವು ಗ್ರಹಗಳ ಸಂಯೋಗದಿಂದ ಉಂಟಾಗುವ ತೊಂದರೆ. ಹಾಗಾಗಿ ಪೀಡೆ ಅಥವಾ ದೋಷ. ಜೀವನ ಪೂರ್ತಿ ಒಂದಲ್ಲ ಒಂದು ರೀತಿಯಲ್ಲಿ ಗ್ರಹಗಳ ಪ್ರಭಾವ ನಮ್ಮನ್ನು ಅನುಸರಿಸಿಕೊಂಡು ಬರುತ್ತಲೇ ಇರುತ್ತದೆ.
ಇದರ ಮಹತ್ವ ಏನು? ಯಾರಿಗೆ ದೋಷ ಬರುತ್ತದೆ? ಅದರಿಂದ ಅವರಿಗೆ ಏನಾಗುತ್ತದೆ? ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳೋಣ.
ಯಾವುದೇ ವ್ಯಕ್ತಿಯ ಜನ್ಮ ಜಾತಕ ನೋಡಿದರೆ ಗೊತ್ತಾಗುತ್ತದೆ: ಆ ಜಾತಕಕ್ಕೆ ಹನ್ನೆರಡು ವರ್ಷಕ್ಕೆ ಮೊದಲು ರಾಹು ದಶೆ ಬಂದರೆ (ಬಾಲ್ಯದಲ್ಲಿ ರಾಹು ದಶೆ, ವೃದ್ಧರಾದ ಮೇಲೆ ಕೇತು ದಶೆ ಬರಬಾರದು ಎಂಬ ಮಾತಿದೆ), ಲಗ್ನಾತ್ ಚತುರ್ಥದಲ್ಲಿ ರಾಹು ಅಥವಾ ಕೇತು ಇದ್ದರೆ ಅಥವಾ ಚಂದ್ರಾತ್ ಚತುರ್ಥದಲ್ಲಿ ರಾಹು ಅಥವಾ ಕೇತು ಇದ್ದರೆ, ಚಂದ್ರನ ಜತೆಗೆ ರಾಹು ಅಥವಾ ಕೇತು ಇದ್ದರೆ, ಶುಕ್ರನ ಜತೆಗೆ ರಾಹು ಅಥವಾ ಕೇತು ಇದ್ದರೆ, ಲಗ್ನದಲ್ಲಿ ರಾಹು ಅಥವಾ ಕೇತು ಇದ್ದರೆ, ಲಗ್ನಾಧಿಪತಿಯೇ ರಾಹು ಅಥವಾ ಕೇತು ಜತೆ ಇದ್ದರೆ, ಚಂದ್ರ ರಾಶ್ಯಾಧಿಪತಿ ಜತೆಗೆ ರಾಹು ಅಥವಾ ಕೇತು ಇದ್ದರೆ ಈ ದೋಷ ಬರುತ್ತದೆ.
ಈ ಮೂರು ವಿಷಯಗಳ ಬಗ್ಗೆ ನಾಚಿಕೆ ಬೇಡವೆನ್ನುತ್ತೆ ಚಾಣಕ್ಯ ನೀತಿ ...
ಯಾರಿಗೆ ಈ ರೀತಿ ಬಾಲ ಗ್ರಹ ಪೀಡೆಯು ಇರುತ್ತದೋ ಅಂಥವರಿಗೆ ಪ್ರಬುದ್ಧತೆ ಬರುವುದು ಬಹಳ ಕಷ್ಟ. ಈ ಜಾತಕರು ವಿಪರಿತ ಎನಿಸುವಷ್ಟು ಸುಖವನ್ನು ಬಯಸುತ್ತಾರೆ. ಒಂದೇ ಸಮಯಕ್ಕೆ ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿಸುತ್ತಾರೆ. ಒಂದೇ ಸಮಯಕ್ಕೆ ಒಂದಕ್ಕಿಂತ ಹೆಚ್ಚು ವಿಷಯವನ್ನು ಚಿಂತಿಸುತ್ತಾರೆ. ವಿದ್ಯಾರ್ಥಿನಾಂ ನ ಸುಖಾ ನ ನಿದ್ರಾ ಎಂಬ ಮಾತಿದೆ. ಸುಖ, ನಿದ್ರೆ ಎರಡೂ ಈ ಜಾತಕರನ್ನು ವಿಪರೀತವಾಗಿ ಕಾಡುತ್ತದೆ. ಯಾವಾಗ ಅದು ಸಿಗುವುದಿಲ್ಲವೋ ಖಿನ್ನತೆ ಕಾಡುತ್ತದೆ. ವಿದ್ಯೆಯಲ್ಲಿ ಅಡಚಣೆ ಆಗುತ್ತದೆ. ಶರೀರ ಪೀಡೆ ಕಾಡುತ್ತದೆ. ಇವರಿಗೆ ಆತ್ಮ ತೃಪ್ತಿ ಕಡಿಮೆ ಪಡುತ್ತದೆ.
ಯಾವುದೇ ದಶೆಯ ರಾಹು ಅಥವಾ ಕೇತು ಭುಕ್ತಿ ಅಥವಾ ರಾಹು ಅಥವಾ ಕೇತು ದಶೆಯಲ್ಲಿ ದೋಷದ ಪ್ರಭಾವ ಗೊತ್ತಾಗುತ್ತದೆ. ಇಂಥ ಜಾತಕದವರು ಆಹಾರ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಅಮಲು ಬರುವ ಆಹಾರ ಪದಾರ್ಥ ಅಥವಾ ಪಾನೀಯದಿಂದ ದೂರ ಇರಬೇಕು. ಉದಾಹರಣೆಗೆ ಉದ್ದು, ಗಸಗಸೆ ಇತ್ಯಾದಿ ಆಹಾರ ಪದಾರ್ಥಗಳ ವಿಪರೀತ ಸೇವನೆ ಮಾಡಬಾರದು. ಈ ರೀತಿಯ ದೋಷ ಇರುವ ಜಾತಕದ ಶರೀರದೊಳಗೆ ವಿಪರೀತ ವಿಷ ಉತ್ಪತ್ತಿ ಆಗುತ್ತದೆ. ಆದ್ದರಿಂದ ಸೂಕ್ತ ಪರಿಹಾರೋಪಾಯಗಳನ್ನು ಪಾಲಿಸಲೇಬೇಕು.
ಏನನ್ನೂ ಬೇಕಾದರೂ ಸಾಧಿಸಬಹುದು ಅನ್ನುತ್ತವೆ ಈ ಜೆನ್ ಕತೆಗಳು ...
ಪರಿಹಾರ ಹೇಗೆ?
ಯಾವಾಗ ಜಾತಕದಲ್ಲಿ ಬಾಲಗ್ರಹ ಪೀಡೆ ಇದೆ ಎಂಬ ಸಂಗತಿ ಗೊತ್ತಾಗುತ್ತದೋ ಆಗ ಕಡ್ಡಾಯವಾಗಿ ರಾಹು-ಕೇತು ಶಾಂತಿಯನ್ನು ಮಾಡಿಸಿಕೊಳ್ಳಲೇ ಬೇಕು. ಇನ್ನು ನಾಗಾರಾಧನೆ, ದುರ್ಗಾರಾಧನೆ, ಸುಬ್ರಹ್ಮಣ್ಯಾರಾಧನೆ ಮಾಡುವುದರಿಂದಲೂ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಈ ಶಾಂತಿಯಿಂದ ಏನು ಪ್ರಯೋಜನ ಅಂದರೆ, ಜಾತಕರಿಂದ ತಪ್ಪು ಆಗುವ ಸನ್ನಿವೇಶದಲ್ಲಿ ಎಚ್ಚರಿಕೆ ಮೂಡುತ್ತದೆ. ಮಾತು ಆಡುವ ವೇಳೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿ ಆಗುತ್ತಾರೆ. ವಿದ್ಯಾಭ್ಯಾಸದ ಸಂದರ್ಭದಲ್ಲಿ ಏಕಾಗ್ರತೆ ಸಾಧಿಸಲು ನೆರವಾಗುತ್ತದೆ. ನೆನಪಿಡಿ, ಯಾವುದೇ ದೋಷವನ್ನು ಸಂಪೂರ್ಣ ನಿವಾರಣೆ ಮಾಡಿಕೊಳ್ಳಲು ದೈವದ ಆಶೀರ್ವಾದ ಕೇಳುವುದಲ್ಲ. ಅದೆಂಥ ದೋಷ-ಸಮಸ್ಯೆಗೆ ಎದುರಾಗಿಯೂ ನಮ್ಮ ಶ್ರಮ ಹಾಕಲು ಪ್ರೇರಣೆ ದೊರೆಯುವಂತೆ ಆ ದೇವರನ್ನು ಬೇಡಿಕೊಳ್ಳಬೇಕು. ಆ ಶ್ರಮ ಸಾರ್ಥಕ ಆಗುವಂತೆ ಕೇಳಿಕೊಳ್ಳಬೇಕು. ಶಿವಪಂಚಾಕ್ಷರಿ ಮಂತ್ರವನ್ನು ನಿತ್ಯ ನೂರೆಂಟು ಬಾರಿ ಜಪಿಸುವುದರಿಂದ ಬಾಲಗ್ರಹ ಪೀಡೆಯ ತೊಂದರೆಗಳಿಂದ ಉಪಶಮನ ಹೊಂದಬಹುದು.
ಈ ಶಂಖಗಳ ಮನೆಯಲ್ಲಿಡಿ, ಸಖತ್ ಲಾಭ, ಸಮೃದ್ಧಿ ಪಡೆಯಿರಿ!