Rahu Kaal: ಈ ಕೆಲಸಗಳನ್ನು ರಾಹು ಕಾಲದಲ್ಲಿಯೇ ಮಾಡಿ!

By Suvarna News  |  First Published Feb 23, 2022, 9:31 AM IST

ರಾಹು ಕಾಲವೆಂದರೆ ಶುಭ ಕಾರ್ಯಗಳಿಗೆ, ಪ್ರಯಾಣಗಳಿಗೆ ನಿಷಿದ್ಧವಾದ ಸಮಯವೆಂದು ಎಲ್ಲರೂ ತಿಳಿದಿರುತ್ತಾರೆ. ಹಾಗಾಗಿ ರಾಹು ಕಾಲದಲ್ಲಿ ಯಾವ ಕೆಲಸಗಳನ್ನು ಮಾಡುವುದು ನಿಷಿದ್ಧ ಮತ್ತು ಯಾವ ಕೆಲಸಗಳನ್ನು ಮಾಡಿದರೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿಯೋಣ ..


ರಾಹುಕಾಲದಲ್ಲಿ (Rahukala) ಅದನ್ನು ಮಾಡಬಾರದು ಇದನ್ನು ಮಾಡಬಾರದು (Dont) ಎಂಬಿತ್ಯಾದಿ ಅನೇಕ ಮಾತುಗಳನ್ನು ಕೇಳಿರುತ್ತೇವೆ. ಅಷ್ಟೇ ಅಲ್ಲದೆ  ಶುಭಕಾರ್ಯಗಳಿಗೆ (Auspicious),  ದೂರ ಪ್ರಯಾಣಗಳಿಗೆ (Journey), ನೂತನವಾಗಿ ಆರಂಭಿಸುವ ಎಲ್ಲ ಕಾರ್ಯಗಳಿಗೆ ರಾಹುಕಾಲ ನಿಷಿದ್ಧ ಎಂದು ಹೇಳಲಾಗುತ್ತದೆ. ರಾಹು ಕಾಲದಲ್ಲಿ ಶುಭವಾಗಿರುವ ಏನನ್ನೂ ಮಾಡಬಾರದು ಎಂಬುದನ್ನು ತಿಳಿದಿರುತ್ತೇವೆ.  ಆದರೆ ರಾಹು ಕಾಲದ ಬಗ್ಗೆ ಸರಿಯಾಗಿ ಯಾರಿಗೂ ತಿಳಿದಿರುವುದಿಲ್ಲ. ರಾಹುಕಾಲ ಎಂದರೇನು? ಈ ಸಮಯದಲ್ಲಿ (Time) ಯಾವ ಕಾರ್ಯಗಳನ್ನು ಮಾಡಬಹುದು ಮತ್ತು ಯಾವ ಕಾರ್ಯಗಳನ್ನು ಮಾಡಬಾರದು ಎಂಬ ಗೊಂದಲಗಳು ಕಾಡುವುದು ಸಹಜ. ಹಾಗಾಗಿ ಈ ಎಲ್ಲ ವಿಷಯಗಳ ಬಗ್ಗೆ ಈಗ ತಿಳಿಯೋಣ.

ರಾಹು ಕಾಲದಲ್ಲಿ ರಾಹುವಿನ ಪ್ರಭಾವ (Effect) ಪೂರ್ಣ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧವೆಂದು ಶಾಸ್ತ್ರ ಹೇಳುತ್ತದೆ. ಈ ಸಮಯದಲ್ಲಿ ಮಾಡಿದ ಶುಭ ಕಾರ್ಯಗಳು ಸಫಲವಾಗುವುದಿಲ್ಲ (Success) ಎಂದು ಹೇಳಲಾಗುತ್ತದೆ. ರಾಹು ಗ್ರಹವು ಪಾಪಗ್ರಹ (Malefic planet) ವಾಗಿರುವ ಕಾರಣ ಈ ಗ್ರಹದ ಪ್ರಭಾವಕ್ಕೆ ಒಳಗಾಗುವುದರಿಂದ ನಕಾರಾತ್ಮಕ ಶಕ್ತಿ (Negative energy) ಹೆಚ್ಚುತ್ತದೆ. ಹಾಗಾಗಿ ಯಾವುದೇ ಉತ್ತಮ ಕಾರ್ಯಗಳನ್ನು ಮಾಡುವಾಗ ರಾಹುಕಾಲವನ್ನು ಹೊರತುಪಡಿಸಿ ಶುಭ ಮುಹೂರ್ತದಲ್ಲಿ ಮಾಡಲಾಗುತ್ತದೆ. 

ಇದನ್ನು ಓದಿ : Saturday Born Personality: ಶನಿವಾರ ಜನಿಸಿದವರಿಗಿರುತ್ತಾ ಶನಿ ಕೃಪೆ?

ರಾಹುವಿನ ಪ್ರಭಾವವೇನು ?
ರಾಹು ಗ್ರಹವನ್ನು  ಪಾಪ ಗ್ರಹವೆಂದು ಕರೆಯಲಾಗುತ್ತದೆ. ಶುಭ ಕಾರ್ಯಗಳಿಗೆ ಅಡ್ಡಿ (Difficulties) ಪಡಿಸುವ ಗ್ರಹ ಇದಾಗಿದೆ ಎಂದು ಸಹ ಹೇಳಲಾಗುತ್ತದೆ.  ಹಿಂದೂ ಧರ್ಮದಲ್ಲಿ ರಾಹು ಗ್ರಹವು ಅತ್ಯಂತ ಕೆಟ್ಟ ಶಕ್ತಿಯುಳ್ಳ ಗ್ರಹವೆಂದು ಸಹ ಹೇಳಲಾಗುತ್ತದೆ. ಹಾಗಾಗಿ ಈ ಗ್ರಹದ ಪ್ರಭಾವ ಹೆಚ್ಚಿರುವ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳಿಗೆ ಪ್ರಯಾಣಿಸುವುದು ಉತ್ತಮವಲ್ಲ ಎಂದು ಶಾಸ್ತ್ರ ಹೇಳುತ್ತಾ ಬಂದಿದೆ. ಗ್ರಹಗಳ ಗೋಚಾರದಲ್ಲಿ ಪ್ರತಿ ನಿತ್ಯ ಎಲ್ಲ ಗ್ರಹಗಳ ಗೋಚಾರದ ನಿಶ್ಚಿತ (Fixed)  ಸಮಯವಿರುತ್ತದೆ. ಹಾಗೆಯೇ ರಾಹು ಗ್ರಹಕ್ಕೂ ಒಂದು ನಿಶ್ಚಿತ ಸಮಯವಿರುತ್ತದೆ. ಹಾಗಾಗಿ ನಿತ್ಯವೂ ರಾಹು ಕಾಲವಿರುತ್ತದೆ. ಬೇರೆ ಬೇರೆ ಪ್ರದೇಶಗಳಿಗೆ (region) ಅನುಸಾರವಾಗಿ ಸೂರ್ಯೋದಯ (Sunrisr) ಮತ್ತು ಸೂರ್ಯಾಸ್ತದ (Sunset) ಸಮಯವನ್ನು ಆಧರಿಸಿ   ರಾಹುಕಾಲದ ಸಮಯ ಭಿನ್ನವಾಗಿರುತ್ತದೆ (Differs).

ರಾಹುಕಾಲದಲ್ಲಿ ಯಾವ ಕೆಲಸಗಳನ್ನು (Work) ಮಾಡಬಾರದು ...

  • ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು, ನೂತನ (New) ಕಾರ್ಯಗಳನ್ನು ಆರಂಭಿಸಬಾರದು.
  • ರಾಹುಕಾಲದಲ್ಲಿ ಯಾವುದೇ ವಸ್ತುಗಳನ್ನು ಖರೀದಿಸುವುದು (Purchase) ಅಥವಾ ಮಾರುವುದು ನಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ.
  • ರಾಹುಕಾಲದ ಸಮಯದಲ್ಲಿ ಶುಭ ಗ್ರಹಗಳ ಸಲುವಾಗಿ ಯಜ್ಞ ಯಾಗಾದಿಗಳನ್ನು ಇಟ್ಟುಕೊಂಡರೆ ಅದಕ್ಕೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಅಂದುಕೊಂಡ ಕಾರ್ಯ ಸಫಲವಾಗುವ ಸಂಭವ (Possiblities) ಕಡಿಮೆ ಇರುತ್ತದೆ.
  • ಯಾವುದಾದರೂ ಶುಭ ಕಾರ್ಯಗಳಿಗೆ ರಾಹುಕಾಲಕ್ಕಿಂತ ಮುಂಚೆಯೇ ಹೊರಟಿದ್ದರೆ, ನಂತರ ಬರುವ ರಾಹುಕಾಲದಲ್ಲಿ ಆ ಪ್ರಯಾಣವನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ. 
  • ರಾಹು ಕಾಲದಲ್ಲಿ ಅಪ್ಪಿತಪ್ಪಿಯೂ ಮನೆ, ವಾಹನ, ಕಂಪ್ಯೂಟರ್, ಮೊಬೈಲ್, ಟೆಲಿವಿಷನ್, ಆಭರಣಗಳು ಸೇರಿದಂತೆ ಇತ್ಯಾದಿ ಹೆಚ್ಚು ಮೌಲ್ಯದ ವಸ್ತುಗಳನ್ನು ಖರೀದಿಸುವುದು ಒಳ್ಳೆಯದಲ್ಲ. 
  • ರಾಹುಕಾಲದಲ್ಲಿ ವಿವಾಹ (Marriage), ನಿಶ್ಚಿತಾರ್ಥ, ಧಾರ್ಮಿಕ ಕಾರ್ಯಗಳು ಮತ್ತು ಗೃಹಪ್ರವೇಶಗಳನ್ನು ಮಾಡಬಾರದು. 


ಇದನ್ನು ಓದಿ: Personality Traits: ಮಾರ್ಚ್‌ನಲ್ಲಿ ಜನಿಸಿದವರ ಕ್ಯೂರಿಯಸ್ ಕಹಾನಿ!

ರಾಹುಕಾಲದಲ್ಲಿ ಯಾವ ಕಾರ್ಯಗಳನ್ನು ಮಾಡಬಹುದು?
ರಾಹು ಕಾಲದಲ್ಲಿ ಯಾವುದೇ ಕಾರ್ಯಗಳನ್ನು ಮಾಡುವುದು ಉತ್ತಮವಲ್ಲ ಎಂದು ಎಲ್ಲರೂ ತಿಳಿದಿರುತ್ತಾರೆ. ಆದರೆ ರಾಹು ಕಾಲದಲ್ಲಿ ಈ ಕೆಲವು ಕಾರ್ಯಗಳನ್ನು ಮಾಡಬಹುದು ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹಾಗಾಗಿ ಅವು ಯಾವುವು ಎಂಬುದನ್ನು ತಿಳಿಯೋಣ....

  • ರಾಹುಕಾಲದಲ್ಲಿ ರಾಹುವಿಗೆ ಸಂಬಂಧಿಸಿದ ಕಾರ್ಯಗಳನ್ನು ಮಾಡಿದರೆ ಸಕಾರಾತ್ಮಕ ಪರಿಣಾಮ (Pisitive effect) ಉಂಟಾಗುತ್ತದೆ.
  • ರಾಹುಕಾಲದಲ್ಲಿ ರಾಹು ಗ್ರಹದ ಶಾಂತಿಗಾಗಿ ಯಜ್ಞಯಾಗಾದಿಗಳನ್ನು ಮಾಡುವುದರಿಂದ ಉತ್ತಮ ಪರಿಣಾಮ ಬೀರುತ್ತದೆ.
  • ಜಾತಕದಲ್ಲಿ ಕಾಳಸರ್ಪ (Kala sarpa) ದೋಷವಿದ್ದು  ಅದರ ಪರಿಹಾರಕ್ಕಾಗಿ  ಅನುಷ್ಠಾನ ಮಾಡ ಬಯಸಿದರೆ, ಅದಕ್ಕೆ ರಾಹುಕಾಲವು ಅತ್ಯಂತ ಸೂಕ್ತ ಸಮಯವಾಗಿರುತ್ತದೆ. ಇದರಿಂದ ಅಂದುಕೊಂಡ ಕಾರ್ಯ ಸಫಲವಾಗುತ್ತದೆ. 
  • ರಾಹು ಗ್ರಹದ ಶಾಂತಿಗಾಗಿ ಪಶು ಪಕ್ಷಿಗಳಿಗೆ  ಆಹಾರ ತಿನ್ನಿಸುವುದುದಾದರೆ ಅದಕ್ಕೆ ರಾಹುಕಾಲ ಸೂಕ್ತವಾಗಿರುತ್ತದೆ.

Latest Videos

click me!