ಹುಟ್ಟು ಸಾವಿನ ಸರಪಳಿಗೆ ಮುಕ್ತಿ ನೀಡೋ Moksha Yoga ನಿಮ್ಮ ಜಾತಕದಲ್ಲಿದೆಯೇ?

By Suvarna News  |  First Published Feb 22, 2022, 10:42 AM IST

ಜಾತಕದಲ್ಲಿ ಮೋಕ್ಷ ಯೋಗವಿದ್ದರೆ ವ್ಯಕ್ತಿಯು ಜಪತಪಗಳ ಹಂಗಿಲ್ಲದೆಯೂ ಭಗವಂತನಲ್ಲಿ ಐಕ್ಯರಾಗಬಹುದು. 


ನಮ್ಮ ನಂಬಿಕೆಗಳಂತೆ, ಅನಾದಿ ಕಾಲದ ಜ್ಞಾನಿಗಳ ಮಾತಿನಂತೆ ಮನುಷ್ಯರು ಹುಟ್ಟುತ್ತಾರೆ. ಬೆಳೆಯುತ್ತಾ ಶಿಕ್ಷಣ ಪಡೆಯುತ್ತಾರೆ. ನಂತರ ಉದ್ಯೋಗ ಮಾಡುತ್ತಾ ಹಣ ಸಂಪಾದಿಸುತ್ತಾರೆ. ಅದಾದ ಮೇಲೆ ಮದುವೆ ಮಕ್ಕಳು.. ಅವರ ಲಾಲನೆ ಪಾಲನೆ, ಬಳಿಕ ಮೊಮ್ಮಕ್ಕಳನ್ನಾಡಿಸುತ್ತಾ ಕಡೆಯ ದಿನಗಳನ್ನು ಕಳೆದು ಜೀವ ಬಿಡುತ್ತಾರೆ. ಅಲ್ಲಿಗೆ ಅವರ ಕತೆ ಮುಗಿಯಿತು ಎಂದುಕೊಳ್ಳುತ್ತೇವೆ. ಆದರೆ, ಆ ಆತ್ಮ ತನ್ನ ಪಯಣ ಮುಂದುವರಿಸುತ್ತದೆ. ಇನ್ನೊಂದು ದೇಹಕ್ಕೆ ಸೇರಿ ತನ್ನ ಬದುಕು ಬವಣೆಗಳನ್ನು ಮುಂದುವರಿಸುತ್ತದೆ. ಒಟ್ಟಿನಲ್ಲಿ ಈ ಹುಟ್ಟು ಸಾವಿನ ಲೆಕ್ಕಾಚಾರ ಮುಗಿಯುವಂಥದ್ದಲ್ಲ. ಆದರೆ, ಜೀವನದ ಜಂಜಾಟ ಅನುಭವಿಸಿದ ಹಲವರಿಗೆ ಈ ಲೋಕದ ಪಯಣ ಸಾಕೋ ಸಾಕೆನಿಸುತ್ತದೆ. ಈ ಹುಟ್ಟು ಸಾವಿನ ಸರಪಳಿಯಿಂದ ಕಳಚಿಕೊಂಡು ಮೋಕ್ಷ ಪಡೆದು ಭಗವಂತನಲ್ಲಿ ಐಕ್ಯರಾಗುವ ಕನಸು ಕಾಣುತ್ತಾರೆ. ಆದರೆ, ಮೋಕ್ಷ(Salvation)ದ ಹಾದಿ ಸುಲಭವಲ್ಲ. ಪ್ರತಿಯೊಂದು ಜನ್ಮದ ಪಾಪ ಪುಣ್ಯಗಳ ಜಮೆಯನ್ನು ಸಂಪೂರ್ಣ ತೀರಿಸಿ ಈ ಲೋಕ ತ್ಯಜಿಸುವುದು ಸುಲಭ ಹಾದಿಯಲ್ಲ. 

ಮೋಕ್ಷ ಯೋಗ(moksha yoga)
ಆತ್ಮವು ಭಗವಂತನಲ್ಲಿ ಐಕ್ಯವಾಗಿ ಮೋಕ್ಷ ಪಡೆಯಲು ಮಹಾನ್ ಋಷಿಮುನಿಗಳೇ ನೂರಾರು ವರ್ಷ ತಪಸ್ಸು ಮಾಡಿಯೂ ಸೋತಿದ್ದಾರೆ. ಬುದ್ಧ ತನ್ನಿಡೀ ಜನ್ಮವನ್ನು ನಿರ್ವಾಣಕ್ಕೆ ತಲುಪಲು ಕಳೆದಿದ್ದಾನೆ. ಅಂಥದರಲ್ಲಿ ತೃಣ ಮಾತ್ರರಾದ ನಾವುಗಳು ಮೋಕ್ಷ ಪಡೆಯುವುದೆಂದರೆ ಸುಲಭ ಸಾಧನೆಯಲ್ಲ. ಆದರೆ, ಜಾತಕ(horoscope)ದಲ್ಲಿ ಮೋಕ್ಷ ಯೋಗ ಇದ್ದವರಿಗೆ ಮಾತ್ರ ಇಂಥದೊಂದು ಅವಕಾಶ ಲಭಿಸುತ್ತದೆ. ಇದು ಬಹಳ ಅಪರೂಪದ ಯೋಗವಾಗಿದೆ. ಜಾತಕದಲ್ಲಿ ಮೋಕ್ಷ ಯೋಗವಿದ್ದರೆ ಅದೊಂದು ಅತ್ಯಂತ ಶುಭಕರ ಜಾತಕವೆಂದೇ ಪರಿಗಣಿಸಬೇಕು. ಏಕೆಂದರೆ ಯಾವುದೇ ತಪಸ್ಸು(penance), ಜಪ, ಹೋಮಹವನಗಳನ್ನು ನಡೆಸದೆಯೇ ವ್ಯಕ್ತಿಯು ಮೋಕ್ಷ ಹೊಂದಲು ಈ ಯೋಗ ಅವಕಾಶ ಮಾಡಿಕೊಡುತ್ತದೆ. 

Tap to resize

Latest Videos

undefined

ಮೋಕ್ಷ ಯೋಗದ ಪರಿಣಾಮ
ಈ ಯೋಗ ಜಾತಕದಲ್ಲಿದ್ದವರು ದೇವರ ಭಕ್ತರಾಗಿರುತ್ತಾರೆ. ಸದಾ ದೇವರಿಗೆ ಹತ್ತಿರದಲ್ಲಿರುವ ಭಾವನೆ ಅವರನ್ನು ಆವರಿಸಿರುತ್ತದೆ. ಸದಾ ಧನಾತ್ಮಕ ಯೋಚನೆಗಳು ಅವರಲ್ಲಿ ತುಂಬಿರುತ್ತವೆ. ತಮ್ಮೆಲ್ಲ ಕಾರ್ಯಗಳಿಗೆ ದೇವರು ದಾರಿ ತೋರಿಸುತ್ತಿದ್ದಾನೆ ಎಂದು ನಂಬಿ ಮುನ್ನಡೆಯುತ್ತಿರುತ್ತಾರೆ. ಎಷ್ಟೇ ಸೋಲುಗಳು ಬಂದರೂ ಕಂಗೆಡದೆ ಅದರಲ್ಲೂ ಒಳ್ಳೆಯ ವಿಷಯಗಳನ್ನೇ ಹುಡುಕುತ್ತಿರುತ್ತಾರೆ. ಮೋಕ್ಷ ಯೋಗದ ಪರಿಣಾಮವಾಗಿ ದೇವರು ಈ ವ್ಯಕ್ತಿಯ ಮೇಲೆ ಅಪರಿಮಿತ ಪ್ರೀತಿ ಚೆಲ್ಲುತ್ತಿರುತ್ತಾನೆ. ದುಃಖ ಎದುರಾದರೂ ಅವರು ಸಮರ್ಥವಾಗಿ ಅದನ್ನು ಗೆದ್ದು ನಿಲ್ಲುತ್ತಾರೆ. ಸಂತೋಷವಾಗಿ ಜೀವನ ಕಳೆಯುತ್ತಾರೆ. ಮತ್ತೊಬ್ಬರ ಸಂತೋಷ(happiness) ಬಯಸುತ್ತಾರೆ. ಸರಿಯಾದ ಹಾದಿ ಆಯ್ದುಕೊಳ್ಳಲು ಜನರನ್ನು ಪ್ರೇರೇಪಿಸುತ್ತಾರೆ. 

ಈ ಐದು ರಾಶಿಯ ಮಕ್ಕಳ Leadership Skills ಅದ್ಭುತ!

ಮೋಕ್ಷ ಯೋಗ ಗುರುತಿಸುವುದು ಹೇಗೆ?
ಗುರು(Jupiter) ಗ್ರಹವು ಮೀನ ರಾಶಿಯಲ್ಲಿ ಕುಳಿತಿದ್ದು, 10ನೇ ಮನೆಯಲ್ಲಿದ್ದರೆ, ಯಾವುದೇ ಕೆಟ್ಟ ಗ್ರಹದ ದೋಷ ಇಲ್ಲದಿದ್ದರೆ ಆಗ ಜಾತಕದಲ್ಲಿ ಮೋಕ್ಷ ಯೋಗ ಇದೆ ಎನ್ನಲಾಗುತ್ತದೆ. ಗುರುವು ಕಟಕ ರಾಶಿಯ 1, 4, 6, 7, 8 ಅಥವಾ 10ನೇ ಮನೆಯಲ್ಲಿದ್ದು, ಉಳಿದೆಲ್ಲ ಗ್ರಹಗಳು ಕಾರಕ ಸ್ಥಾನದಲ್ಲಿದ್ದರೆ ಆಗ ಮೋಕ್ಷ ಸಾಧ್ಯವಾಗುತ್ತದೆ. 

ಹಣ, ಹೆಸರು, ಸಂತೋಷದ ಹೊಳೆಯನ್ನೇ ಹರಿಸುವ Gaja Kesari Yoga, ನಿಮ್ಮ ಜಾತಕದಲ್ಲಿದೆಯೇ?

ಮೋಕ್ಷ ಯೋಗ ಪಡೆಯಲು ಏನು ಮಾಡಬೇಕು?
ಒಂದು ವೇಳೆ ಜಾತಕದಲ್ಲಿ ಮೋಕ್ಷ ಯೋಗ ಇಲ್ಲವೆಂದಾದಲ್ಲಿ ಜನ್ಮ ಜನ್ಮ ಕಳೆದಂತೆಲ್ಲ ಮೋಕ್ಷಕ್ಕೆ ಹತ್ತಿರವಾಗಲು ನಾವು ಮಾಡಬಹುದಾದ ಕೆಲ ಕೆಲಸಗಳಿವೆ. ಅವೆಂದರೆ, 

  • ಸದಾ ಉತ್ತಮ ಉದ್ದೇಶದಿಂದ ಉತ್ತಮ ಕರ್ಮಗಳನ್ನೇ ಮಾಡುವುದು. 
  • ಕಾಮ, ದುರಾಸೆ(greed), ಲೋಭ, ಮೋಹ, ಮದ, ಮತ್ಸರ, ನಾನು, ನಂದು ಮುಂತಾದ ಗುಣಗಳಿಂದ ಕಳಚಿಕೊಳ್ಳುವುದು. 
  • ಯೋಚನೆಗಳನ್ನು ಧನಾತ್ಮಕವಾಗಿಸಿಕೊಳ್ಳುವುದು.
  • ಎಲ್ಲ ಇಂದ್ರಿಯ(senses)ಗಳನ್ನು ನಿಗ್ರಹಿಸಿಕೊಳ್ಳುವುದು. 
  • ಸ್ತ್ರೀಯರನ್ನು ಗೌರವಿಸುವುದು.
  • ಅಗತ್ಯವಿರುವವರಿಗೆ ಕೈಲಾಗುವ ಸೇವೆ, ದಾನ(charity) ಮಾಡುವುದು. 
  • ಜೊತೆಯಲ್ಲಿರುವ ಎಲ್ಲ ಜೀವಿಗಳ ಜೊತೆ ಬಹಳ ಉತ್ತಮವಾದ ವರ್ತನೆ ತೋರುವುದು. 
     
click me!