Hindu Religion: ಮನೆಯಲ್ಲಿ ಪವಿತ್ರ ಗಂಗಾಜಲವಿದ್ರೆ ಈ ತಪ್ಪು ಮಾಡ್ಬೇಡಿ

By Suvarna News  |  First Published Feb 22, 2022, 12:55 PM IST

ಶುದ್ಧತೆಯ ಸಂಕೇತ ಗಂಗೆ. ದೇವರ ಮನೆಯಲ್ಲಿ ಸ್ಥಾನ ಪಡೆದಿರುವ ಈ ಗಂಗಾಜಲದ ಬಳಕೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರಬೇಕು. ಗಂಗೆಗೆ ಅವಮಾನ ಮಾಡಿದ್ರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ಗಂಗಾ (Ganga) ಭಾರತದ ಅತ್ಯಂತ ಪವಿತ್ರ ನದಿ (River). ಗಂಗೆಯ ನೀರು ಮಾನವ ಜೀವನಕ್ಕೆ ಶುದ್ಧತೆಯನ್ನು ತರುತ್ತದೆ ಎಂದು ನಂಬಲಾಗಿದೆ. ಅವಳ ಪವಿತ್ರ ನೀರಿ (Water)ನಲ್ಲಿ ಸ್ನಾನ ಮಾಡುವ ಮೂಲಕ ಅಂತರಂಗದ ಶುದ್ಧಿಯಾಗುತ್ತದೆ. ಪ್ರಾಚೀನ ಕಾಲದಿಂದಲೂ ಗಂಗಾಜಲವನ್ನು  ಧಾರ್ಮಿಕ ಮತ್ತು ಮಂಗಳಕರ ಕಾರ್ಯಗಳಿಗೆ ಬಳಸಲಾಗುತ್ತದೆ. ಮಗುವಿನ ಜನನವಾಗಲಿ ಅಥವಾ ವ್ಯಕ್ತಿಯ ಮರಣವಾಗಲಿ ಪ್ರತಿಯೊಬ್ಬರೂ ಗಂಗಾಜಲದಿಂದ ಶುದ್ಧರಾಗುತ್ತಾರೆ.

ಗಂಗಾಜಲದ ಇನ್ನೊಂದು ವಿಶೇಷವೆಂದ್ರೆ ಅದು ದೀರ್ಘಕಾಲದವರೆಗೆ ಹಾಳಾಗುವುದಿಲ್ಲ. ಗಂಗಾಜಲ ಪಾಪ ನಾಶಪಡಿಸುತ್ತದೆ ಮತ್ತು ಮೋಕ್ಷವನ್ನು ನೀಡುತ್ತದೆ ಎಂದು ನಂಬಲಾಗಿದೆ. ಗಂಗಾಜಲಕ್ಕೆ ಎಂದೂ ಅವಮಾನ ಮಾಡಬಾರದು ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಗಂಗೆಗೆ ಅವಮಾನ ಮಾಡಿದ್ರೆ ಎಲ್ಲ ದೇವಾನುದೇವತೆಗಳು ಕೋಪಗೊಳ್ಳುತ್ತಾರೆ ಎಂದು ನಂಬಲಾಗಿದೆ. ಮನೆಯ ಪಾವಿತ್ರ್ಯಕ್ಕೂ ಭಂಗ ಬರುತ್ತದೆ. 

ಇಂದು ಗಂಗಾಜಲದ ಬಳಕೆ, ಗಂಗಾ ಜಲ ಮನೆಯಲ್ಲಿದ್ದರೆ ಏನು ಮಾಡ್ಬೇಕು ಎಂಬೆಲ್ಲ ವಿಷ್ಯವನ್ನು ಹೇಳ್ತೇವೆ. 

ಗಂಗಾಜಲವನ್ನು ಪ್ಲಾಸ್ಟಿಕ್‌ನಲ್ಲಿಡಬೇಡಿ : ಹಿಂದೂ ಧರ್ಮದಲ್ಲಿ ಗಂಗಾಜಲಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವ ಕಾರಣ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಗಂಗಾಜಲವಿರುತ್ತದೆ. ಪ್ರತಿಯೊಂದು ಪವಿತ್ರ ಕಾರ್ಯದಲ್ಲಿ ಗಂಗಾಜಲವನ್ನು ಬಳಸಲಾಗುತ್ತದೆ.  ಆದ್ರೆ ಗಂಗಾಜಲದ ಬಳಕೆ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಕೆಲವರು ಗಂಗಾಜಲವನ್ನು ಪ್ಲಾಸ್ಟಿಕ್ ಬಾಟಲಿ ಅಥವಾ ಇತರ ಯಾವುದೇ ರೀತಿಯ ಪಾತ್ರೆಯಲ್ಲಿ ಇಡುತ್ತಾರೆ. ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಗಂಗಾಜಲದ ಪವಿತ್ರತೆಗೆ ಧಕ್ಕೆಯಾಗುತ್ತದೆ. ಅಲ್ಲದೆ ಪ್ಲಾಸ್ಟಿಕ್ ಬಾಟಲಿಯಲ್ಲಿಟ್ಟಿರುವ ಗಂಗಾಜಲ ಯಾವುದೇ ಪವಿತ್ರ ಕಾರ್ಯಕ್ಕೆ ಬಳಸಲು ಬರುವುದಿಲ್ಲ. ಇದ್ರಿಂದ ನಿಮ್ಮ ಯಾವುದೇ ಆಸೆ ಈಡೇರುವುದಿಲ್ಲ.

Tap to resize

Latest Videos

undefined

ಗಂಗಾಜಲವನ್ನು ಯಾವಾಗಲೂ ತಾಮ್ರ, ಬೆಳ್ಳಿ ಅಥವಾ ಬೇರೆ ಲೋಹದಿಂದ ಮಾಡಿದ ಪಾತ್ರೆಯಲ್ಲಿ ಇಡಬೇಕು. ಲೋಹಗಳು ಪವಿತ್ರವೆಂದು ಪರಿಗಣಿಸಲಾಗಿದೆ. ಜೊತೆಗೆ ಅದ್ರಲ್ಲಿರುವ ನೀರಿನ ಪೋಷಕತತ್ವ ಹಾಳಾಗುವುದಿಲ್ಲ.

ಪವಿತ್ರ ಸ್ಥಳದಲ್ಲಿ ಗಂಗಾಜಲ : ಹಿಂದೂ ಧರ್ಮದಲ್ಲಿ ಗಂಗಾಲದ ಪೂಜೆ ಮಾಡಲಾಗುತ್ತದೆ. ಬಹುತೇಕರು ಗಂಗಾಜಲವನ್ನು ದೇವರ ಮನೆಯಲ್ಲಿ ಇಡುತ್ತಾರೆ. ಇದು ಸರಿಯಾದ ಮಾರ್ಗ.  ಮನೆಯಲ್ಲಿ ಅತ್ಯಂತ ಪವಿತ್ರವಾದ ಸ್ಥಳದಲ್ಲಿ ಗಂಗಾಜಲವನ್ನು ಇಡಬೇಕು. ಗಂಗಾಜಲವಿಟ್ಟ ಜಾಗವನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ನೀವು ಗಂಗಾಜಲವನ್ನು ಇರಿಸಿರುವ ಕೋಣೆಯಲ್ಲಿ ಎಂದಿಗೂ ಮಾಂಸ ಅಥವಾ ಮದ್ಯವನ್ನು ಸೇವಿಸಬಾರದು.

ಹುಟ್ಟು ಸಾವಿನ ಸರಪಳಿಗೆ ಮುಕ್ತಿ ನೀಡೋ MOKSHA YOGA ನಿಮ್ಮ ಜಾತಕದಲ್ಲಿದೆಯೇ?

ಶುದ್ಧತೆ ಕಾಪಾಡಿ : ಮನೆಯಲ್ಲಿರುವ ಗಂಗಾಜಲವನ್ನು ಕೊಳಕು ಕೈಗಳಿಂದ ಹಾಗೂ ಸ್ನಾನ ಮಾಡದೆ ಮುಟ್ಟಬೇಡಿ. ಅನೇಕರು ಗಂಗಾಜಲದಲ್ಲಿ ಕೈ ತೊಳೆದು ನಂತ್ರ ದೇವರ ಪೂಜೆ ಮಾಡ್ತಾರೆ. ಇದ್ರಲ್ಲಿ ತಪ್ಪಿಲ್ಲ. ಆದ್ರೆ ಗಂಗಾಜಲದಲ್ಲಿ ಕೈ ತೊಳೆಯುವ ಮೊದಲು ಶುದ್ಧ ನೀರಿನಲ್ಲಿ ಒಮ್ಮೆ ಕೈ ತೊಳೆಯಬೇಕು.

ಗಂಗಾಜಲವನ್ನು ಬೆಳಕಿನಲ್ಲಿಡಿ : ಯಾವಾಗಲೂ ಗಂಗಾಜಲವನ್ನು ಬೆಳಕಿರುವ ಜಾಗದಲ್ಲಿ ಇಡಿ. ಅನೇಕ ಜನರು ಗಂಗಾಜಲವನ್ನು ಮನೆಯ ಬಚ್ಚಲಿನಲ್ಲಿಡುತ್ತಾರೆ. ಇಲ್ಲವೆ ಕತ್ತಲಿನಲ್ಲಿಡುತ್ತಾರೆ. ನಾವು ದೇವರನ್ನು ಕತ್ತಲಿನಲ್ಲಿಡುವುದಿಲ್ಲ. ಹಾಗೆ ಗಂಗಾಜಲವನ್ನೂ ಕತ್ತಲಿನಲ್ಲಿ ಇಡಬಾರದು.  

ಗಂಗಾಜಲದ ಬಳಕೆ 

ಮನೆಯ ಶುದ್ಧತೆ : ಪ್ರತಿದಿನ ಮನೆಯ ಮೂಲೆ ಮೂಲೆಗೆ ಗಂಗಾಜಲವನ್ನು ಸಿಂಪಡಿಸಿ. ಅದು ಮನೆಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಧನಾತ್ಮಕತೆಯನ್ನು ಕಾಪಾಡಿಕೊಳ್ಳುತ್ತದೆ.

ಜಾತಕ ದೋಷ : ಶನಿವಾರದಂದು ಅಶ್ವತ್ಥ ಮರಕ್ಕೆ ಗಂಗಾಜಲವನ್ನು ಅರ್ಪಿಸುವುದರಿಂದ ಜಾತಕದ ಎಲ್ಲ ದೋಷಗಳು ದೂರವಾಗುತ್ತವೆ. ಶನಿವಾರ ಸಂಜೆ ಅಶ್ವತ್ಥ ಮರದ ಕೆಳಗೆ ಮಣ್ಣಿನ ದೀಪದಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ದೀಪ ಹಚ್ಚಬೇಕು. ನಂತ್ರ ಗಂಗಾಜಲ ಪೂಜೆ ಮಾಡಿ, ಶುದ್ಧ ನೀರಿಗೆ ಕೆಲವು ಹನಿ ಗಂಗಾಜಲವನ್ನು ಹಾಕಿ ಅಶ್ವತ್ಥ ಮರದ  ಬೇರುಗಳಿಗೆ ಅರ್ಪಿಸಬೇಕು. ಹೀಗೆ ಮಾಡಿದ್ರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ.  

ಈ ಐದು ರಾಶಿಯ ಮಕ್ಕಳ Leadership Skills ಅದ್ಭುತ!

ಸುಖ ನಿದ್ರೆ : ರಾತ್ರಿ ನಿದ್ರೆಯಲ್ಲಿ ಭಯಾನಕ ಕನಸುಗಳು ಬಿದ್ದರೆ ಗಂಗಾಜಲವನ್ನು ಎರಚಿಕೊಂಡು ಮಲಗಬೇಕು. ಆಗ ಯಾವುದೇ ಕೆಟ್ಟ ಕನಸು ಬೀಳುವುದಿಲ್ಲ. 

click me!