ಪಂಚಾಮೃತಕ್ಕೂ ಚರಣಾಮೃತಕ್ಕೂ ಏನು ವ್ಯತ್ಯಾಸ?

Published : Jun 20, 2023, 06:00 PM IST
ಪಂಚಾಮೃತಕ್ಕೂ ಚರಣಾಮೃತಕ್ಕೂ ಏನು ವ್ಯತ್ಯಾಸ?

ಸಾರಾಂಶ

ನೀವು ಪವಿತ್ರವಾದ ತೀರ್ಥವನ್ನು ಸೇವಿಸಿದಾಗ, ನಿಮ್ಮಲ್ಲಿ ಸಕಾರಾತ್ಮಕ ಭಾವನೆಗಳು ಹೊರಹೊಮ್ಮುತ್ತವೆ ಮತ್ತು ನಿಮ್ಮ ಜೀವನಕ್ಕೆ ಅದ್ಭುತವಾದ ಅರ್ಹತೆಯನ್ನು ತರುತ್ತವೆ. ಆದರೆ, ಹೆಚ್ಚಿನವರಿಗೆ ಪಂಚಾಮೃತ ಮತ್ತು ಚರಣಾಮೃತ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. 

ನೀವು ಯಾವುದೇ ದೇವಸ್ಥಾನಕ್ಕೆ ಹೋದಾಗ, ಅರ್ಚಕರು ನಿಮಗೆ ಪವಿತ್ರವಾದ ಪಂಚಾಮೃತ ಮತ್ತು ಚರಣಾಮೃತವನ್ನು ಪ್ರಸಾದವಾಗಿ ನೀಡುತ್ತಾರೆ. ಈ ತೀರ್ಥಗಳೆರಡೂ ಅದೆಂಥ ಅಗಣಿತ ರುಚಿ ಹೊಂದಿರುತ್ತವೆ ಎಂಬುದು ಗೊತ್ತೇ ಇದೆ.  ಆದರೆ, ಹೆಚ್ಚಿನವರಿಗೆ ಪಂಚಾಮೃತ ಮತ್ತು ಚರಣಾಮೃತ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. ನೀವು ಪವಿತ್ರವಾದ ತೀರ್ಥವನ್ನು ಹೊಂದಿದಾಗ, ನಿಮ್ಮಲ್ಲಿ ಸಕಾರಾತ್ಮಕ ಭಾವನೆಗಳು ಹೊರಹೊಮ್ಮುತ್ತವೆ ಮತ್ತು ನಿಮ್ಮ ಜೀವನಕ್ಕೆ ಅದ್ಭುತವಾದ ಅರ್ಹತೆಯನ್ನು ತರುತ್ತವೆ.

ಚರಣಾಮೃತ ಎಂದರೇನು?
ಚರಣಾಮೃತದ ಹೆಸರಿನಂತೆ ಅದು ದೇವರ ಪಾದದ ಅಮೃತ. ಚರಣಾಮೃತವನ್ನು ತೆಗೆದುಕೊಳ್ಳುವ ಕೆಲವು ನಿಯಮಗಳನ್ನು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಚರಣಾಮೃತವನ್ನು ಯಾವಾಗಲೂ ಎಡಗೈಯಿಂದ ಮತ್ತು ಶಾಂತ ಮನಸ್ಸಿನಿಂದ ತೆಗೆದುಕೊಳ್ಳಬೇಕು. ಚರಣಾಮೃತಕ್ಕೆ ಬಳಸುವ ಕೈಯನ್ನು ತಲೆಯಿಂದ ತೆಗೆದ ನಂತರ ಅದನ್ನು ಕದಲಿಸಬಾರದು. ಒರೆಸಬಾರದು. ಇದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಚರಣಾಮೃತವನ್ನು ತೆಗೆದುಕೊಳ್ಳಲು ಗ್ರಂಥಗಳಲ್ಲಿ ಮಂತ್ರವನ್ನೂ ನೀಡಲಾಗಿದೆ.

ಮಂತ್ರ: ಅಕಾಲಮೃತ್ಯುಹರಣಂ ಸರ್ವವ್ಯಾಧಿ ವಿನಾಶನಮ್. ವಿಷ್ಣು ಪಾದೋದಕ ಪೀಠ್ವ ಪುನರ್ಜನ್ಮ ನ ವಿಧಾತೇ.

ಅರ್ಥ: ವಿಷ್ಣುವಿನ ಪಾದದ ಅಮೃತವಾದ ನೀರು ಪಾಪಗಳ ನಾಶಕ ಮತ್ತು ಎಲ್ಲ ಕಾಯಿಲೆಗಳನ್ನು ಗುಣಪಡಿಸಬಲ್ಲ ಔಷಧಿ. ಚರಣಾಮೃತವನ್ನು ಸೇವಿಸುವವನಿಗೆ ಪುನರ್ಜನ್ಮವಿಲ್ಲ.

ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ಚರಣಾಮೃತವು ಹೆಚ್ಚು ಪ್ರಯೋಜನಕಾರಿಯಾಗಿದೆ. ಅಲ್ಲದೆ, ಎಳ್ಳು, ತುಳಸಿ ಎಲೆಗಳನ್ನು ಹಾಕುವುದು ಔಷಧೀಯ ಮೌಲ್ಯವನ್ನು ಹೆಚ್ಚಿಸುತ್ತದೆ. ಇದು ವ್ಯಕ್ತಿಯ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲದೆ ಅನೇಕ ರೋಗಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ.

ಪಂಚಾಮೃತದ ಅರ್ಥ
ಪಂಚಾಮೃತ ಎಂದರೆ ಐದು ಪವಿತ್ರ ವಸ್ತುಗಳಿಂದ ಮಾಡಿದ ಪ್ರಸಾದ. ಐದು ಅಮೃತ ತತ್ವ - ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯನ್ನು ತಯಾರಿಸಲು ಬಳಸಲಾಗುತ್ತದೆ. ದೇವರನ್ನು ಅಭಿಷೇಕಿಸಲು ಇದನ್ನು ಬಳಸಲಾಗುತ್ತದೆ. ಪಂಚಾಮೃತವು ಕೆಲವು ಭೌತಿಕ ಪ್ರಯೋಜನಗಳನ್ನು ಹೊಂದಿದೆ. ಕೆಲವು ರೋಗಗಳಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದಕ್ಕೂ ಕೆಲವು ನಿಯಮಗಳಿವೆ.

Vastu Tips: ಈ ದಿಕ್ಕಲ್ಲಿ ತಲೆ ಇಟ್ಟು ಮಲಗಿದ್ರೆ ಹೆಚ್ಚುತ್ತವೆ ಕಾಯಿಲ ...

ಹಾಲು: ಪಂಚಾಮೃತದಲ್ಲಿ ಹಾಲನ್ನು ಬಳಸುವುದರಿಂದ ನಿಮ್ಮ ಜೀವನವು ಹಾಲಿನಂತೆ ಬಿಳಿ ಮತ್ತು ನಿರ್ಮಲವಾಗಿರಬೇಕು.
ದಹಿ: ಮೊದಸರು ನಾವು ನಿರ್ಮಲರಾಗಿರಬೇಕು ಮತ್ತು ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಹಾಗೆಯೇ ಮಾಡಲು ಇತರರಿಗೆ ಸಲಹೆ ನೀಡಬೇಕು ಎಂದು ತಿಳಿಸುತ್ತದೆ.
ತುಪ್ಪ: ತುಪ್ಪವನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇದರರ್ಥ ಪ್ರತಿಯೊಬ್ಬರೊಂದಿಗೂ ಪ್ರೀತಿಯ ಸಂಬಂಧವನ್ನು ಹೊಂದಿರಬೇಕು.
ಜೇನು: ಜೇನು ಸಿಹಿಯಾಗಿದೆ. ಇದನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಜೀವನದಲ್ಲಿ ನಾವು ದುರ್ಬಲರಾಗುವ ಬದಲು ಬಲಶಾಲಿಯಾಗಬೇಕು ಎಂದರ್ಥ.
ಸಕ್ಕರೆ: ಪಂಚಾಮೃತದಲ್ಲಿ ಸಕ್ಕರೆಯ ಸೇರ್ಪಡೆ ಎಂದರೆ ನಮ್ಮೆಲ್ಲರ ಜೀವನದಲ್ಲಿ ಸಿಹಿ ಸದಾ ಉಳಿಯಬೇಕು.

ತೀರ್ಥವನ್ನು ಹೇಗೆ ಸೇವಿಸಬೇಕು?
ನೀವು ತೀರ್ಥವನ್ನು ನಿಮ್ಮ ಬಲಗೈಯಿಂದ ಮತ್ತು ಮನಸ್ಸಿನಲ್ಲಿ ಶುದ್ಧೀಕರಿಸುವ ಆಲೋಚನೆಗಳು ಮತ್ತು ಆತ್ಮದಲ್ಲಿ ಶಾಂತತೆಯಿಂದ ಸ್ವೀಕರಿಸಬೇಕು. ಇದೆಲ್ಲವೂ ಪವಿತ್ರ ಅಮೃತವಾದ ಪಂಚಾಮೃತ ಮತ್ತು ಚರನಾಮೃತವನ್ನು ಹೆಚ್ಚು ಪ್ರಭಾವಶಾಲಿಯಾಗಿಸುತ್ತದೆ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ